ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಲಿಪ್ಟಿ ಸಪ್ಪಾನ್ ಕೊಲೆ ಪ್ರಕರಣದ ಆರೋಪಿ; ಕುಖ್ಯಾತ ರೌಡಿಶೀಟರ್ ಸಪ್ಪಾನ್ ಹುಸೇನ್‌ನ ಸಹಚರ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ಇಸವಿಯಲ್ಲಿ ಲಿಪ್ಟಿ ಸಪ್ಪಾನ್ ಎಂಬಾತನನ್ನು ಅಪಹರಿಸಿ, ಕೊಲೆ ಮಾಡಿದ ಪ್ರಕರಣದಲ್ಲಿ ಸುಮಾರು 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೂಫಿಯಾನ್ @ ಕೊಟ್ರೇಶಿ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ.ಹಳ್ಳಿ ಶ್ಯಾಂಪುರ ರೈಲ್ವೇ ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂಫಿಯಾನ್ @ ಕೊಟ್ರೇಶಿ, ಸಭಾಪತಿ ಬೀದಿ, […]

Continue Reading

ಎಂಟು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ, ಹಣ ದ್ವಿಗುಣಗೊಳಿಸುವುದಾಗಿ ಸಾವಿರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ ಮೈತ್ರಿ ವಂಚಕ ಖಾಕಿ ಬಲೆಗೆ

‘ಮೈತ್ರಿ ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಸಾರ್ವಜನಿಕರಿಂದ ಹಣವನ್ನು ಡೆಪಾಸಿಟ್ ಮಾಡಿಸಿ ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ಲಕ್ಕು ಕೊಂಡಾ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಎಂಟು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಲಕ್ಕು ಕೊಂಡಾ ರೆಡ್ಡಿ ಮೇಲೆ ನ್ಯಾಯಾಲಯ ವಾರಂಟ್ ಕೂಡ ಜಾರಿ ಮಾಡಿತ್ತು. ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ […]

Continue Reading

ರಿಸರ್ವ್ ಬ್ಯಾಂಕ್ 2026 ರ ಕರಡು ತಿದ್ದುಪಡಿ; ಸೈಬರ್ ವಂಚಕರಿಗೆ ಇನ್ನು ಸುಲಭವಲ್ಲ. RBI ಹೊಸ ರೂಲ್ಸ್

ರಿಸರ್ವ್ ಬ್ಯಾಂಕ್ 2026 ರ ಕರಡು ಮೂರನೇ ಹೊಸ ತಿದ್ದುಪಡಿ ನಿರ್ದೇಶನಗಳನ್ನು ಬಿಡುಗಡೆ ಮಾಡಿದೆ, ಇದು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ವಂಚನೆಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ಬಲವಾದ ಸುರಕ್ಷತಾ ಕ್ರಮಗಳನ್ನು ಪ್ರಸ್ತಾಪಿಸುತ್ತದೆ. ಇದು ಪ್ರಾಥಮಿಕವಾಗಿ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ವಹಿವಾಟುಗಳು ಮತ್ತು ATM ವಹಿವಾಟುಗಳು ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ವಹಿವಾಟುಗಳಲ್ಲಿನ ವಂಚನೆಯಿಂದ ಬ್ಯಾಂಕ್ ಗ್ರಾಹಕರನ್ನು ರಕ್ಷಿಸುತ್ತದೆ. ಕರಡು ನಿರ್ದೇಶನಗಳು ಜುಲೈ ಒಂದು 2026 ಅಥವಾ ನಂತರ ನಡೆಸಿದ ವಹಿವಾಟುಗಳಿಗೆ ಅನ್ವಯಿಸುತ್ತವೆ. ಸಣ್ಣ ಮಟ್ಟದ […]

Continue Reading

ರಂಗಭೂಮಿ ಉಡುಪಿ 46ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ

ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಂಗಶಿಕ್ಷಣ 25 ಶಾಲೆಗಳಿಗೆ ವಿಸ್ತರಣೆ : ಡಾ. ತಲ್ಲೂರು ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ರಂಗ ಶಿಕ್ಷಣ ತರಬೇತಿಯನ್ನು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 25 ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಯೋಜನೆಗೆ ಸಂಘಸoಸ್ಥೆಗಳು ಹಾಗೂ ದಾನಿಗಳು ಕೈ ಜೋಡಿಸಬೇಕು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಗುರುವಾರ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ರಂಗೋತ್ಸವ […]

Continue Reading

ಬೈಂದೂರು: ಮನೆಯ ಬೀಗ ಮುರಿದು ಕಳ್ಳರ ಕೈ ಚಳಕ; 20 ಪವನ್‌ ಚಿನ್ನ, 2 ಲಕ್ಷ ರೂಪಾಯಿ ಕಳವು

ಹಾಡಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ದೋಚಿದ ಘಟನೆ ಬೈಂದೂರಿನ ನಡೆದಿದೆ. ಇಲ್ಲಿನ ಪಟವಾಲ್‌ ಹೌಸ್‌ ರವರ ಮನೆಯಿಂದ ಅಂದಾಜು 20 ಪವನ್‌ ಚಿನ್ನ ಹಾಗೂ 2 ಲಕ್ಷ ರೂಪಾಯಿ ಕಳವಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಕಳ್ಳರು ಸ್ಪಷ್ಟ ಮಾಹಿತಿ ಪಡೆದು ಹೊಂಚು ಹಾಕಿದ್ದಾರೆ. ಕಳವಾದ ಮನೆಯ ಸುತ್ತ ಮನೆಗಳಿದ್ದು, ಜನನಿಬಿಡ ಪ್ರದೇಶವಾಗಿದೆ. ಹಂಚಿನ ಮನೆಯಾಗಿರುವ ಕಾರಣ ಕಳ್ಳರಿಗೆ ಬೀಗ ಮುರಿದು ಒಳನುಗ್ಗಲು ಸುಲಭವಾಗಿದೆ. ಈ ಮನೆಯಲ್ಲಿ ಪರಮೇಶ್ವರ ಪಟವಾಲ್‌ […]

Continue Reading

ಮಂಗಳೂರು: ನಗರದಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ರಸ್ತೆಯ ಲಾಡ್ಜ್ ನಲ್ಲಿ ರೂಂ ಮಾಡಿ ಕುಳಿತು ನಿಷೇದಿತ ಮಾದಕ ದ್ರವ್ಯ MDMA ಮತ್ತು ಹೈಡ್ರೋ ವೀಡ್ ಗಾಂಜಾ ವನ್ನು ಮಂಗಳೂರು ನಗರದ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ಪಾರ್ಕ್ ಮೈದಾನ ಬಂದರ್ ಬಳಿಯಲ್ಲಿ […]

Continue Reading

ಸೈಬರ್ ಅಪರಾಧಿಗಳು ಬಳಸುತ್ತಿರುವ ‘ಮ್ಯೂಲ್‌ ಖಾತೆ’ ಗಳ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಇಲಾಖೆ ಕಾರ್ಯಾಚರಣೆ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅತ್ಯಾಧುನಿಕ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ಸ್ಥಾಪನೆ ಡಿಜಿಟಲ್ ವಂಚನೆಯಿಂದ ಸಿಕ್ಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಸೈಬರ್ ಅಪರಾಧಿಗಳು ಬಳಸುತ್ತಿರುವ ‘ಮ್ಯೂಲ್‌ ಖಾತೆ’ಗಳ ವಿರುದ್ಧ ಬಳ್ಳಾರಿಯ ಸೈಬರ್‌ ಕ್ರೈಂ ಪೊಲೀಸ್‌ ಇಲಾಖೆ ಕಾರ್ಯಾಚರಣೆಯನ್ನು ಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅತ್ಯಾಧುನಿಕ ‘ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ)’ ಅನ್ನು ಸ್ಥಾಪಿಸಿದೆ. ಈ ಘಟಕವು ರಾಜ್ಯದಲ್ಲಿರಬಹುದಾದ ‘ಮ್ಯೂಲ್ ಖಾತೆ’ಗಳನ್ನು ಪತ್ತೆ ಮಾಡುವಲ್ಲಿ ನಿರತವಾಗಿದೆ. ರಾಜ್ಯದಾದ್ಯಂತ ಭಾರಿ ಸಂಖ್ಯೆಯ […]

Continue Reading

ಡ್ರಗ್ಸ್‌ ದಂಧೆಕೋರರ ವಿರುದ್ಧ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಪ್ರೇಮಿಗಳ ಬಂಧನ, 18 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಕೇರಳ ಮೂಲದ ಅಶ್ವಿನ್‌ ಹಾಗೂ ಮುಬೀನಾ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ, ಇವರ ನಂಟು ಡ್ರಗ್ಸ್‌ ಮಾರಾಟ ಜಾಲಕ್ಕೂ ಕರೆತಂದಿತ್ತು. ಈ ಡ್ರಗ್ಸ್‌ ದಂಧೆಕೋರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಅಶ್ವಿನ್‌ ಮತ್ತು ಮುಬೀನಾ, ಸುಲಭವಾಗಿ ಹಣ ಸಂಪಾದಿಸಲು ಡ್ರಗ್ಸ್‌ […]

Continue Reading

ಪುತ್ತೂರು: ಪಿಸ್ತೂಲು ತೋರಿಸಿ ಗುಂಡು ಹೊಡೆಯಲು ಯತ್ನ; ಆರೋಪಿ ಪೊಲೀಸರ ವಶ

ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಎಂಬವರು, ದಿನಾಂಕ 02-03-2026 ರಂದು ಮಧ್ಯಾಹ್ನ, ಪುತ್ತೂರಿನಿಂದ ಕೂರ್ನಡ್ಕಕ್ಕೆ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಅಬ್ದುಲ್ ಹಕೀಂ ಎಂಬವರಿಗೆ ಪಿಸ್ತೂಲು ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿ ಬೆದರಿಸಿರುತ್ತಾನೆ. ಈ ವೇಳೆ ಅಬ್ದುಲ್ ಹಕೀಂ ಹಾಗೂ ಇತರರು ಸೇರಿ ಆತನು ಹಿಡಿಯಲು ಹೋದಾಗ ಆತನು ಮೋಟಾರು ಸೈಕಲ್ ನೊಂದಿಗೆ ಪರಾರಿಯಾಗಿರುತ್ತಾನೆ ಎಂಬುದಾಗಿ, […]

Continue Reading

ದೆಹಲಿ ಟು ಬೆಂಗಳೂರು ವಿಮಾನದ ಮೂಲಕ ಬಂದು, ಮೊಬೈಲ್‌ ಕಳ್ಳತನ: ಐಷಾರಾಮಿ ಕಳ್ಳರ ಬಂಧನ

ಐಷಾರಾಮಿ ಕಳ್ಳರು. ವಿಮಾನದ ಮೂಲಕ ಬೆಂಗಳೂರು ನಗರಕ್ಕೆ ಬಂದು, ಮೊಬೈಲ್‌ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಪ್ರಕರಣವೊಂದನ್ನು ಬೆಂಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ದೆಹಲಿ ಮೂಲದ ಜಯಚಂದ ಮತ್ತು ತರುಣ್ ಎಂಬವರನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ದೆಹಲಿಯಲ್ಲಿ ಕಾರು ಚಾಲಕರು. ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಯ 14 ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಮೊಬೈಲ್​​ ಕಳವು ಮಾಡಲೆಂದೇ ದೆಹಲಿಯಿಂದ ವಿಮಾನದಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕ್ಯಾಬ್‌ ಪಡೆದುಕೊಂಡು ಬೆಂಗಳೂರು ನಗರದಲ್ಲಿ […]

Continue Reading