ಮಂಗಳೂರಿನ ಕೆ.ಪಿ.ಟಿ.ಬಳಿ ನಡೆದ ಅಪಘಾತ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಮೃತ್ಯು.

ಮಂಗಳೂರಿನ ಕೆ.ಪಿ.ಟಿ.ಬಳಿ ಗುರುವಾರದಂದು ಬೈಕ್-ನ್ಯಾನೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ (49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಣಿ ಸಮೀಪದ ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿ ಭಾಸ್ಕರ್ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಭಾಸ್ಕರ್ ಅವರು ಚಲಾಯಿಸುತ್ತಿದ್ದ ಬೈಕಿಗೆ ನ್ಯಾನೋ ಕಾರು ಕೆ.ಪಿ.ಟಿ.ಬಳಿ ಡಿಕ್ಕಿ ಹೊಡೆದು ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

Continue Reading

ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌

ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ಗುರುವಾರ ಬಹುಮತದ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಸಿಜೆಐ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್‌ ಮಿಶ್ರಾ ಅವರು ‘ಸೆಕ್ಷನ್‌ 6ಎ’ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, […]

Continue Reading

ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ನೀಡದ ಯುನಿಟಿ ಆಸ್ಫತ್ರೆಗೆ ಬಿಸಿ ಮುಟ್ಟಿಸಿದ ಗ್ರಾಹಕರ ನ್ಯಾಯಾಲಯ

ಗ್ರಾಹಕ ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾದರೆ, ಕ್ರಿಮಿನಲ್ ಮೊಕದ್ದಮೆ ಮಂಗಳೂರು: ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಪಳ್ನೀರ್ ಬಳಿ ಇರುವ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ರಾಹಿಂ ಯು.ಎಚ್ ರವರ ವೈದ್ಯಕೀಯ ದಾಖಲೆಗಳನ್ನು ನೀಡದ ಕಾರಣ ಮಂಗಳೂರಿನ ವಕೀಲರಾದ ಪಿ.ಬಿ ಭಟ್ ರವರು ಗ್ರಾಹಕರ ಆಯೋಗದ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ದೂರು ದಾಖಲಿಸಿ, ಯುನಿಟಿ ಅಸ್ಫತ್ರೆಯವರು ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ತಕ್ಕ ಸಮಯಕ್ಕೆ ನೀಡದಿರುವ ಬಗ್ಗೆ ವಾದ ಮಂಡಿಸಿದ್ದರು. ಇದೀಗ ಗ್ರಾಹಕರ ನ್ಯಾಯಾಲಯವು ಮಂಗಳೂರಿನ ಯುನಿಟಿ ಆಸ್ಪತ್ರೆಗೆ […]

Continue Reading

ರಿಯಲ್ ಎಸ್ಟೇಟ್ ಉದ್ಯಮಿ ಅನುಮಾನಾಸ್ಪದ ಸಾವು; ಮಂಗಳೂರು ಲಿಂಕ್?

ಪತ್ನಿಯೇ ಹಂತಕಿ.! ಗೌಡನಿಗೆ ಪೊಲೀಸ್ ಡ್ರಿಲ್ ಹದಿನೆಂಟರ ಮಗಳು ಕೊಟ್ಟಳು ‘ಕಹಾನಿ’ ಗೆ ಟ್ವಿಸ್ಟ್.! ರಿಯಲ್ ಎಸ್ಟೇಟ್ ಉದ್ಯಮಿ ಕಂ ಸಾಮಾಜಿಕ ಕಾರ್ಯಕರ್ತ ಸಂತೋಷ್ ದುಂಡಪ್ಪ ಪದ್ಮಣ್ಣನರ ಅನುಮಾನಾಸ್ಪದ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಟೋಬರ್ 9 ರಂದು ಬೆಳಗಾವಿ ಮೂಲದ ಉದ್ಯಮಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ಉಮಾ ಹೇಳಿಕೆ ನೀಡಿದ್ದರು. ಆದರೆ ಮಗಳು ಇದೊಂದು ಸಹಜ ಸಾವಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ […]

Continue Reading

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ; ಮಗುವಿನ ಡಿಎನ್ಎ ರಿಪೋರ್ಟ್ ನಲ್ಲಿ ಬಂತು ಅಸಲಿಯತ್ತು.!

ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡಿದ್ದು, ಮಗುವಿನ ಡಿಎನ್ಎ ರಿಪೋರ್ಟ್ ಸಲ್ಲಿಕೆಯಾಗಿದ್ದು, ಸಂತ್ರಸ್ತೆಯ ಮಗು ಅದೇ ಅನ್ನುವುದು ಇದೀಗ ಡಿಎನ್ಎ ವರದಿಯಲ್ಲಿ ಬಹಿರಂಗವಾಗಲಿದೆ. ಅಕ್ಟೋಬರ್ 18 ರಂದು ಪಾಣೆಮಂಗಳೂರು ನಿವಾಸಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ ಎರಡನೇ ಹೆರಿಗೆಗಾಗಿ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ಹೇಳಿದ್ದರು. […]

Continue Reading

ಆಟೋದಲ್ಲಿ ಅಕ್ರಮ ಗೋಸಾಗಾಟ. ಮಹಿಳೆ ಸಹಿತ ಆಟೋ ತಡೆದು ಪೊಲೀಸರಿಗೆ ಒಪ್ಪಿಸಿದ ಬಜರಂಗಿಗಳು.

ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಗೋವು ಜೊತೆ ಇಬ್ಬರು ಮಹಿಳೆಯರು ಕೂಡಾ ಪ್ರಯಾಣಿಸುತ್ತಿದ್ದು, ಚಾಲಕನ ಸಹಿತ ಎಲ್ಲರನ್ನೂ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Continue Reading

ತೆರೆಮರೆಯಲ್ಲೊಬ್ಬ ಹಿರಿಯ ನಾದಸ್ವರ ವಾದಕ.

ಜಿಲ್ಲಾಡಳಿತ, ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಹೊರಜಗತ್ತಿಗೆ ಕಾಣದ ಅಸಾಧಾರಣ ಪ್ರತಿಭೆ ಕಾಪುಮಜಲು ಗೋಪಾಲ ಜೋಗಿ ಹೌದು. ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ಬಡಕುಟುಂಬದ ವೆಂಕಟಜೋಗಿ-ಲೀಲಾವತಿ ದಂಪತಿಗಳ ಇಬ್ಬರು ಪುತ್ರರು, ಓರ್ವ ಪುತ್ರಿಯ ಪೈಕಿ ಕಿರಿಯ ಪುತ್ರ ಗೋಪಾಲ ಜೋಗಿ(60). ಬಡತನದಿಂದಾಗಿ ಓದಿದ್ದು ಕೇವಲ ಐದನೇ ಕ್ಲಾಸು. ಬಳಿಕ ಹಿರಿಯ ನಾದಸ್ವರ ವಾದಕ ಸಜಿಪ ತನಿಯಪ್ಪ ಜೋಗಿ ಮತ್ತು ಅವರ ಪುತ್ರ ಚಂದ್ರನಾಥ ಜೋಗಿಯವರ ಗರಡಿಯಲ್ಲಿ ನಾದಸ್ವರ ಕಲಿತು ಪಳಗಿದ ಗೋಪಾಲ ಜೋಗಿ […]

Continue Reading

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮುನಿಸು

ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಹಗ್ಗಜಗ್ಗಾಟ ಮುಂದುವರಿದಿರುವ ನಡುವೆಯೇ ಚನ್ನಪಟ್ಟಣ ತಾಲೂಕು ಬಿಜೆಪಿ ಕಚೇರಿಯಲ್ಲಿ ಆರೇಳು ತಿಂಗಳುಗಳಿಂದ ರಾರಾಜಿಸುತ್ತಿದ್ದ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿದ್ದ ಬ್ಯಾನರ್‌ನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೇಳು ತಿಂಗಳೊಳಗಾಗಿಯೇ ಮೈತ್ರಿಯಲ್ಲಿ ಮುನಿಸು ಮನೆ ಮಾಡಿದೆ. ಎನ್‌ಡಿಎ ಅಭ್ಯರ್ಥಿ ಸಂಬಂಧ ಪೈಪೋಟಿ ಮುಂದುವರಿದಿದ್ದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಜೆಡಿಎಸ್‌ ನಾಯಕರ ವಿರುದ್ಧ ಆಕ್ರೋಶಗೊಂಡು, ಬಂಡಾಯ ಸ್ಫರ್ಧೆಯ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ತಾಲೂಕು ಬಿಜೆಪಿ […]

Continue Reading

ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಬಳಿ ಖಾಸಗಿ ಬಸ್ ಕಂಡಕ್ಟರ್ ಶವ ಪತ್ತೆ.

ಕಲ್ಲು ಎತ್ತಿ ಹಾಕಿ ಕೊಲೆಗೈದ ಪಾತಕಿಗಳು. ಮಂಗಳೂರು ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಖಾಸಗಿ ಬಸ್ ನಿರ್ವಾಹಕನೊಬ್ಬನ ಶವ ಪತ್ತೆಯಾಗಿದೆ. ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30)ಎಂಬಾತ ಮೃತ ದುರ್ದೈವಿ. ಪ್ರತಿ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆ ಧರಿಸಿ ಹೋಗುತ್ತಿದ್ದ ರಾಜೇಶ್ ಸರಳ ಸ್ವಭಾವದವನಾಗಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದನೆಂದು ಸಹೋದ್ಯೋಗಿ ಮಿತ್ರರು ತಿಳಿಸಿದ್ದಾರೆ. ಆದರೆ ಈವರೆಗೂ ರಾಜೇಶ್ ಎಲ್ಲಿಯವನೆಂಬ ಬಗ್ಗೆಯಾಗಲೀ, ಆತನ ಪೋಷಕರು, ಸಂಬಂಧಿಕರು ಯಾರೆಂಬ ಬಗ್ಗೆ […]

Continue Reading

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ

ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಿ, ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ: ಸಚಿವಾಲಯ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ಹೊರಡಿಸಿದೆ. ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. […]

Continue Reading