ಮುಂಬೈ : ರಾಜಕೀಯ ರಕ್ತಪಾತದ ಭೀಕರ ಇತಿಹಾಸ.. ಛೋಟಾ ಶಕೀಲ್ ಟು ಲಾರೆನ್ಸ್ ಬಿಷ್ಣೋಯಿ.!

ಅಂಡರ್ ವರ್ಲ್ಡ್ ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ್ರು ಡಜನ್ ಗಟ್ಟಲೆ ಶಾಸಕರು..27 ವರ್ಷಗಳ ನಂತರ ನಡೆಯಿತು ಮೊದಲ ಮರ್ಡರ್.! ಮುಂಬೈ ರಾಜಕಾರಣಕ್ಕೂ ಅಂಡರ್ ವರ್ಲ್ಡ್ ಗೂ ಗಳಸ್ಯ ಕಂಠಸ್ಯ ಸಂಬಂಧ. ಇಲ್ಲಿ ಪಾತಕ ಲೋಕಕ್ಕೆ ಬಿದ್ದ ಹೆಣಗಳಿಗೆ ಲೆಕ್ಕ ಇಲ್ಲ. ಅದರಲ್ಲೂ ಹೈ ಪ್ರೊಫೈಲ್ ರಾಜಕಾರಣಿಗಳು ಪಾತಕಿಗಳ ಟ್ರಿಗ್ಗರ್ ಗೆ ಬಲಿಯಾದ ರಕ್ತಸಿಕ್ತ ಇತಿಹಾಸವನ್ನೇ ಹೊಂದಿದೆ. ಡಜನ್ ಗಟ್ಟಲೆ ದೊಡ್ಡ ದೊಡ್ಡ ಜನ ನಾಯಕರು ಭೂಗತ ಪಾತಕಿಗಳ ಗುಂಡಿಗೆ ಬಲಿಯಾದ ಭೀಕರ ಇತಿಹಾಸವೇ ಇದೆ. 1960 ರ […]

Continue Reading

ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ. ಪತ್ನಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲು.

ನವರಾತ್ರಿ ವೇಷಧಾರಿ ವಿಟ್ಲ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ನಿವಾಸಿ ಸುಂದರ ನಾಯ್ಕ(55) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರತೀ ವರ್ಷ ವೇಷ ಹಾಕುತ್ತಿದ್ದ ಸುಂದರ ನಾಯ್ಕ ಈ ಬಾರಿಯೂ ವೇಷ ಹಾಕಲು ತಯಾರಿ ನಡೆಸಿದ್ದರು. ಇದೇ ತಿಂಗಳ ಒಂದರಂದು ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಪತ್ನಿಯಲ್ಲಿ ಹೇಳಿ ಮನೆಯಿಂದ ಹೊರಟಿದ್ದ ಸುಂದರ ನಾಯ್ಕ ನವರಾತ್ರಿ ಹಬ್ಬ ಮುಗಿದರೂ ಮರಳಿ ಬಂದಿಲ್ಲ. ಆತಂಕಗೊಂಡ ಪತ್ನಿ ತನ್ನ ಸಂಬಂಧಿಕರಲ್ಲೆಲ್ಲಾ ವಿಚಾರಿಸಿದ್ದಾರೂ ಯಾವುದೇ ಮಾಹಿತಿ ಇಲ್ಲಿದ ಕಾರಣ […]

Continue Reading

ಪ್ರಹ್ಲಾದ್ ಜೋಷಿ ಪೂರ್ವಜರು ಸ್ವಾತಂತ್ರ್ಯ ಪೂರ್ವದಲ್ಲಿ ಯಾರೊಂದಿಗಿದ್ದರೆಂದು ನೆನಪು ಮಾಡಿಕೊಳ್ಳಲಿ: ವೈ.ಬಿ.ಚಂದ್ರಕಾಂತ್

    ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಪೂರ್ವಜರು ಮುಸ್ಲೀಮರ ಮತ್ತು ಬ್ರಿಟೀಷರ ಆಡಳಿತದ ಅವಧಿಯಲ್ಲಿ ಯಾರ ಕೈ ಕೆಳಗೆ ದಾಸ್ಯ ಮಾಡುತ್ತಿದ್ದರು ಎನ್ನುವುದನ್ನು ಮೊದಲು ನೆನಪು ಮಾಡಿಕೊಂಡು ನಂತರ ಕಾಂಗ್ರೇಸ್ ಪಕ್ಷ ಮತ್ತು ಕಾಂಗ್ರೇಸ್ ಪಕ್ಷದ ನಾಯಕರ ಬಗ್ಗೆ ಮಾತನಾಡಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ. ಪ್ರಹ್ಲಾದ್ ಜೋಷಿಯವರು ಒಬ್ಬ ಹಿರಿಯ ಮತ್ತು ಅನುಭವಿ ರಾಜಕಾರಣಿ ಮತ್ತು ಕೇಂದ್ರದ ಸಚಿವರಾಗಿ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಕಲಿ ಗಾಂಧಿ ಕುಟುಂಬವೆಂದು ಹೇಳಿರುವುದು, […]

Continue Reading

ಲಘು ವಾಹನಗಳಿಗೆ ಟೋಲ್ ಪ್ರೀ; ಇಂದು ಮಧ್ಯರಾತ್ರಿಯಿಂದಲೇ ಜಾರಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಏಕನಾಥ್ ಶಿಂಧೆ ಸರ್ಕಾರ ಸೋಮವಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಬೂತ್‌ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಟೋಲ್ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರ ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಚಿವ ದಾದಾಜಿ ದಗ್ದು ಭೂಸೆ, ಮಧ್ಯರಾತ್ರಿಯ ನಂತರ ಲಘು ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ. […]

Continue Reading

ಅಕ್ರಮದಲ್ಲಿ ಭಾಗಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜಗದೀಶ್, ಜಲ ಸಂಪನ್ಮೂಲ ಇಲಾಖೆಯ ಮನ್ಮಥಯ್ಯ ಸ್ವಾಮಿ ಅಮಾನತು

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಗಳಾದ ಜಗದೀಶ್ ಮತ್ತು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಜಲ ಸಂಪನ್ಮೂಲ ಇಲಾಖೆಯ ಮನ್ಮಥಯ್ಯ ಸ್ವಾಮಿ ಎಂಬವರನ್ನು ಅಮಾನತುಗೊಳಿಸಲಾಗಿದೆ. ಜಗದೀಶ್‌ ಅವರು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಬೆಂಗಳೂರು ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಅಡಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಪ್ರಕರಣ […]

Continue Reading

ಯಹೂದಿಯರ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳ: 15.8 ಮಿಲಿಯನ್ ದಾಟಿದ ಜನಸಂಖ್ಯೆ

ಯಹೂದಿಯರ ಹೊಸ ವರ್ಷ 5785 ರ ಸಮಯದಲ್ಲಿ ಇಡೀ ಪ್ರಪಂಚದ ಯಹೂದಿಗಳ ಜನಸಂಖ್ಯೆಯು ಕಳೆದ ವರ್ಷಕ್ಕಿಂತ 100,000 ರಷ್ಟು ಹೆಚ್ಚಾಗಿದೆ ಎಂದು ಯಹೂದಿ ಏಜೆನ್ಸಿ ಘೋಷಿಸಿದೆ. ವಿಶ್ವಾದ್ಯಂತ ಯಹೂದಿ ಜನಸಂಖ್ಯೆಯು ಪ್ರಸ್ತುತ 15.8 ಮಿಲಿಯನ್‌ನಷ್ಟಿದೆ. 5784 ರಲ್ಲಿ 15.7 ಮಿಲಿಯನ್‌ಗೆ ಹೋಲಿಸಿದರೆ ಸುಮಾರು 100,000 ಹೆಚ್ಚಳವಾಗಿದೆ ಎಂದು ಏಜೆನ್ಸಿ ವರದಿ ಮಾಡಿದೆ. ಅಮೆರಿಕನ್ ಯಹೂದಿ ವಾರ್ಷಿಕ ಪುಸ್ತಕಕ್ಕಾಗಿ (2024 AJYB) ಹೀಬ್ರೂ ವಿಶ್ವವಿದ್ಯಾನಿಲಯದಿಂದ ಜನಸಂಖ್ಯಾಶಾಸ್ತ್ರಜ್ಞ ಪ್ರೊ. ಸೆರ್ಗಿಯೋ ಡೆಲ್ಲಾ ಪರ್ಗೋಲಾ ನಡೆಸಿದ ಸಂಶೋಧನೆಯಲ್ಲಿ ಜನಸಂಖ್ಯಾ ಹೆಚ್ಚಳದ ಮಾಹಿತಿ […]

Continue Reading

ಪೊಲೀಸ್ ಮಗ, ಲಾಯರ್, ಬಲಪಂಥೀಯರ ಭಾಯಿಜಾನ್; ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್..?

ಜೈಲಿನಲ್ಲೇ ಅಡ್ಡೆ.. ದೇಶಾದ್ಯಂತ 700 ಶಾರ್ಪ್ ಶೂಟರ್ ಗಳು..ಬೆಚ್ಚಿಬೀಳಿಸುತ್ತಿದೆ ನಟೋರಿಯಸ್ ಡಾನ್ ಅಸಲಿ ರೂಪ.! ಸಿದ್ದೀಕಿ ಹತ್ಯೆಯ ಹಿಂದೆ ಖ್ಯಾತ ಬಿಲ್ಡರ್ ಸುಪಾರಿ.? ಯಾವ ಸಿನೇಮಾ ಸ್ಟಾರ್ ಗೂ ಕಮ್ಮಿಯಿಲ್ಲದ ಲುಕ್! ಮೈ ನವಿರೇಳಿಸುವ, ಕುಣಿಯಬೇಕು ಎಂದು ಪ್ರೇರೇಪಿಸುವ ಪಂಜಾಬಿ ಹಾಡುಗಳ ಅಬ್ಬರ ಮಧ್ಯೆ ಹೂಡಿ ಧರಿಸಿ ಬಾಲಿವುಡ್ ಹೀರೋ ರೀತಿ ಎಂಟ್ರಿ ಕೊಡ್ತಾನೆ ಲಾರೆನ್ಸ್ ಬಿಷ್ಣೋಯಿ. ಇದು ಈತನ ಟ್ರೇಡ್ ಮಾರ್ಕ್. ನೋಡಲು ಸ್ಪುರದ್ರೂಪಿ ಯುವಕ. ಆದರೆ ಈತನದ್ದು ಖತರ್ನಾಕ್ ಕಾಯಕ! ಸುಪಾರಿ ಕಿಲ್ಲಿಂಗ್, ಮಾದಕ […]

Continue Reading

ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ

ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿರವರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಯಲ್ಲಿ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮುಂಬೈನ ಬಾಂದ್ರಾದ ಪೂರ್ವ ವಲಯದ ನಿರ್ಮಲ್ ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 […]

Continue Reading

ಮಂಗಳೂರಿನ ಕೆಲವು ಸ್ವಯಂಘೋಷಿತ ಕಾಕಾ.. ಗಳ ರಂಗೀನ್ ಕಹಾನಿಗಳು..!

ಇವರದ್ದೇ ಸಂಘಟನೆಗಳು, ಇವರೇ ಪದಾಧಿಕಾರಿಗಳು, ಇವರಿಗೇನೇ ಸನ್ಮಾನ; ಚರಂಡಿ, ಮೋರಿ, ಗಟಾರಕ್ಕೂ ಸೈ, ಒಟ್ಟಾರೆ ಅಧ್ಯಕ್ಷ. ಇದು ಮಂಗಳೂರಿನ ಕೆಲವು ಶ್ರೀಮಂತ ಕಾ..ಕಗಳ ರಂಗೀನ್ ಕಹಾನಿ. ಹೊರಗಡೆ ತಾವು ಸುಬಗರು, ಸಾತ್ವಿಕರಂತೆ ಕಂಡರೂ ಒಳಗಡೆಯ ಇವರ ಮುಖವಾಡವೇ ಬೇರೆ. ಮಂಗಳೂರಿನಲ್ಲಿ ಕನಿಷ್ಠ ಎಂದರೂ ಕೆಲವು ಸ್ವಯಂಘೋಷಿತ ಅಗರ್ಭ ಶ್ರೀಮಂತರ ಸರ್ಕಲ್ ಇದೆ. ರಾಜಕೀಯ, ಧಾರ್ಮಿಕ ಎಲ್ಲಾ ರಂಗದವರನ್ನು ತನ್ನ ಕೈಯಾರೆ ಕುಣಿಸುವ ಇವರು ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ವಕ್ಫ್, ಹಜ್ಜ್ ,ಅಲ್ಪಸಂಖ್ಯಾತ ಇನ್ನಿತರ ಸರಕಾರದ ಅಧೀನದಲ್ಲಿರುವ […]

Continue Reading

ರಾಜ್ಯದಲ್ಲಿ ಎಚ್ ಐ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ

ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಅಧಿಕ; ಪಿ.ಜಿಗಳಲ್ಲಿ ಎಚ್‌ಐವಿ, ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ ಪಿ.ಜಿಗಳಲ್ಲಿ ಎಚ್‌ಐವಿ ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಚ್‌ಐವಿ ಹೆಚ್ಚಾಗಿದೆ. ಆಘಾತಕಾರಿಯೆಂದರೆ ಹಾಸ್ಟೆಲ್, ಪಿ.ಜಿ ಹಾಗೂ ಗೆಸ್ಟ್‌ ಹೌಸ್‌ನಲ್ಲಿ ಇರುವವರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ರೋಗ ಕಾಣಿಸಿಕೊಳ್ಳುತ್ತಿದ್ದು. ಈ ರೋಗ ಗಂಭೀರ ಹಂತಕ್ಕೆ ತಲುಪಿದ ಮೇಲೆ ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟಲ್‌ […]

Continue Reading