ಪೋಕ್ಸೋ ಪ್ರಕರಣದ ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..

ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವಿನಲ್ಲಿ ದುಷ್ಕೃತ್ಯ.. ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕ ಕುದ್ದುಪದವು ಜಂಕ್ಷನಲ್ಲಿರುವ ಮಹಮ್ಮದ್ ಅಶ್ರಫ್ ಮಾಲಿಕತ್ವದ ಎಂ.ಎಮ್.ಸ್ಟೋರ್ಸ್ ಅಂಗಡಿಗೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದಲ್ಲಿ ಮಹಮ್ಮದ್ ಅಶ್ರಫ್ ನನ್ನು ವಿಟ್ಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಕೇವಲ ಐದು ದಿನದಲ್ಲೇ ಆರೋಪಿ ಅಶ್ರಫ್ ಜಾಮೀನು ಪಡೆದು ಹೊರ ಬಂದಿದ್ದ. ಈ ವಿಚಾರ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. […]

Continue Reading

ನಾಲ್ಕು ರಾಜ್ಯಗಳ ಚುನಾವಣೆಯ ಸ್ಟಾರ್ ಕ್ಯಾಂಪೈನ್ ಪಟ್ಟಿಯಿಂದ ಸಿದ್ದರಾಮಯ್ಯ ಔಟ್..?

ಸಿದ್ದರಾಮಯ್ಯ ರಿಂದ ಹೈಕಮಾಂಡ್ ಅಂತರ ಕಾಯ್ದುಕೊಳ್ಳಲು ಆರಂಭಿಸಿದೆಯಾ.? ಅಹಿಂದ ನಾಯಕ, ತನ್ನದೇ ಆದ ವರ್ಚಸ್ಸಿನಿಂದ ರಾಜಕಾರಣದಲ್ಲಿ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ರಿಗೆ ಮುಡಾ ಹಗರಣ ಸಂಕಷ್ಟ ತಂದುಕೊಡುತ್ತಿದೆಯಾ ಅನ್ನುವ ಚರ್ಚೆಗಳು ಇದೀಗ ಆರಂಭವಾಗಿದೆ. ಹರ್ಯಾಣ, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ 4 ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಸ್ಟಾರ್ ಕ್ಯಾಂಪೈನರ್ ಆಗಿ ಈ ಹಿಂದೆ ಸಿದ್ದರಾಮಯ್ಯ ರನ್ನು ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿತ್ತು. ಕರ್ನಾಟಕದ ಐದು ಗ್ಯಾರಂಟಿಗಳ ಮೋಡೆಲ್ ಗಳನ್ನು ಚುನಾವಣೆಗಳಲ್ಲಿ ಅಸ್ತ್ರವನ್ನಾಗಿ ಬಳಸಿ ಕಾಂಗ್ರೆಸ್ […]

Continue Reading

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿ, ತಿಲಕ್ ನಗರ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶದ ಸ್ವರೂಪದಲ್ಲೇ ಕೋರ್ಟ್ ಸೀತಾರಾಮನ್ ಅವರ ವಿಚಾರದಲ್ಲೂ ಆದೇಶ ಕೊಟ್ಟಿದೆ. ಚುನಾವಣಾ ಬಾಂಡ್​​​ ಗಳ ಮೂಲಕ ಬೆದರಿಸಿ ಹಣವನ್ನು ಸುಲಿಗೆ ಮಾಡಲಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ವಿರುದ್ಧ ಸೂಕ್ತ […]

Continue Reading

ಮಲೆನಾಡಿಗೆ ಯಾರ ಶಾಪ ತಟ್ಟಿದೆಯೋ ಗೊತ್ತಿಲ್ಲ.. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ ಕಮಲ್ ಬಿಲ್ಡರ್ಸ್ ಅವೈಜ್ಞಾನಿಕ ಕಾಮಗಾರಿಗೆ ಜನ ಸುಸ್ತೋ ಸುಸ್ತು.!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರೀತಿಯ ತೀರ್ಮಾನಗಳು ಹಾಗೂ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ವಲ್ಪವೂ ಲೋಕ ಜ್ಞಾನ ಇಲ್ಲ ಎಂಬುದಾಗಿ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬರುವಾಗಲೇ ಇದ್ದ ಡಾಂಬರ್ ರಸ್ತೆಯನ್ನು ಅಗೆದು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾದ ಪರಿಣಾಮ ಆನೇಮಹಲ್ ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್ ನಿಂದ ದೋಣಿಗಾಲ್ ಕಡೆಗಿನ 5-6 ಕಿ.ಮೀ ಉದ್ದದ ರಸ್ತೆಗಳು […]

Continue Reading

ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಹೊಸ ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ

ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೃಹತ್ ಗಾತ್ರದ ಗುಂಡಿಗಳು ದೊಡ್ಡ ಸಂಖ್ಯೆಯಲ್ಲಿ ಬಿದ್ದಿದ್ದು ವಾಹನ ಸಂಚಾರ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ಅಪಘಾತಗಳು ನಡೆದು, ಪ್ರಾಣಹಾನಿಗಳು ಉಂಟಾಗಿವೆ. ಕೆಲವೆಡೆ ರಸ್ತೆ ಪೂರ್ತಿ ಆಳವಾದ ಗುಂಡಿಗಳೇ ತುಂಬಿದ್ದು, ವಾಹನಗಳು ಸರಾಗವಾಗಿ ಚಲಿಸಲಾಗದೆ ಮೈಲುಗಳಷ್ಟು ಉದ್ದಕ್ಕೆ ಟ್ರಾಫಿಕ್ ಜಾಮ್ ಪ್ರತಿದಿನ ಸಂಭವಿಸುತ್ತಿದೆ. ಮಳೆಗಾಲಕ್ಕೂ ಮುನ್ನ ಈ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿರುವುದು, ವರ್ಷಗಳಿಂದ ಸರಿಯಾಗಿ ಮೈಂಟನೆನ್ಸ್ ಮಾಡದಿರುವುದು ರಸ್ತೆ ಈ […]

Continue Reading

ಬಿಲ್ಕಿಸ್‌ ಬಾನು ಪ್ರಕರಣ; ಗುಜರಾತ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ; ಗುಜರಾತ್ ಸರ್ಕಾರ ಮಾಡಿದ ಮನವಿ ಆಧಾರರಹಿತವಾಗಿದೆ: ಸುಪ್ರೀಂ ಕೋರ್ಟ್

ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಗುಜರಾತ್ ಸರ್ಕಾರದ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹನ್ನೊಂದು ಆರೋಪಿಗಳನ್ನು ಬಿಡುಗಡೆ ಮಾಡಿರುವ ವಿಷಯವೂ ಅರ್ಜಿಯಲ್ಲಿ ಒಳಗೊಂಡಿತ್ತು. ಇದರೊಂದಿಗೆ ಗುಜರಾತ್ ಸರ್ಕಾರಕ್ಕೆ ಮತ್ತೊಂದು ಬಾರಿ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ ಈ ಪ್ರಕರಣ ಕುರಿತು ನೀಡಿರುವ ತೀರ್ಪಿನಲ್ಲಿ ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಗುಜರಾತ್ ಸರ್ಕಾರ ಮಾಡಿದ ಮನವಿ ಆಧಾರರಹಿತವಾಗಿದೆ ಎಂದು ಕೋರ್ಟ್ […]

Continue Reading

ಪುತ್ತೂರು: ಬ್ಯಾಂಕ್ ಸಿಬ್ಬಂದಿಗಳನ್ನು ಮನೆಯೊಳಗೆ ಕೂಡಿ ಹಾಕಿ, ಪಿಸ್ತೂಲ್ ತೋರಿಸಿ ಹತ್ಯೆಗೈಯುವ ಬೆದರಿಕೆಯೊಡ್ಡಿದ ಪುತ್ತೂರು ತಿರುಮಲ ಹೋಂಡಾ ಶೋ ರೂಂ ಮಾಲಿಕರು.

ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್‌ ಎಂಬವರು ಪುತ್ತೂರು ಕೋರ್ಟ್ ರಸ್ತೆಯ SBI ಶಾಖೆಯಿಂದ ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ ಬ್ರಾಂಚ್ ಮ್ಯಾನೇಜರ್ ಚೈತನ್ಯ ಹೆಚ್.ಸಿ ತನ್ನ […]

Continue Reading

ರಾಜ್ಯದಲ್ಲಿ ಸಿಬಿಐ ಗೆ ಕಡಿವಾಣ.!ಇನ್ನು ಮುಂದೆ ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಅಗತ್ಯ.

ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ಅನುಮತಿಯನ್ನು ಹಿಂತೆಗೆದುಕೊಂಡು ಮಹತ್ವದ ತೀರ್ಮಾನ ಮಾಡಲಾಗಿದೆ. ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್ ಅಡಿಯಲ್ಲಿ ಕರ್ನಾಟಕದಲ್ಲಿ ಸಿಬಿಐಗೆ ಮುಕ್ತ ತನಿಖೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ಈ ಹಿಂದೆ ಹೊರಡಿಸಲಾಗಿದ್ದ ಸಿಬಿಐ ಮುಕ್ತ ತನಿಖೆಯ ಅಧಿಸೂಚನೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇನ್ನು ಮುಂದೆ ಸಿಬಿಐ ಅಧಿಕಾರಿಗಳು ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ […]

Continue Reading

ಮಂಜೇಶ್ವರ, ಉಪ್ಪಳ ; ಡ್ರಗ್ಸ್ ದಂಧಾ ಹೈ ದಂಧಾ..! ಉಪ್ಪಿನಕಾಯಿ ಡಬ್ಬದಲ್ಲೂ ಎಂಡಿಎಂಎ

ವಂಚಕರ ಟಾರ್ಗೆಟ್ ಗೆ ಸಿಲುಕಿ ಜೈಲುಪಾಲಾದ ಅಮಾಯಕರು.! ಕೇರಳ -ಕರ್ನಾಟಕ ಡ್ರಗ್ಸ್ ದಂಧೆಕೋರರ ಪಾಲಿನ ಹಬ್ ಎಂದೇ ಕುಖ್ಯಾತಿ ಪಡೆದಿರುವಂತದ್ದು. ಅದರಲ್ಲೂ ಮಂಜೇಶ್ವರ ಡ್ರಗ್ಸ್ ದಂಧೆಯಲ್ಲಿ ಹವಾ ಎಬ್ಬಿಸುತ್ತಿದೆ. ಡ್ರಗ್ಸ್ ದಂಧೆಕೋರರ ಕರಾಳ ಛಾಯೆಗೆ ಸಿಲುಕಿ ಕೊಲ್ಲಿ ರಾಷ್ಟ್ರದಲ್ಲಿ ಜೈಲುಪಾಲಾದ ಉಧಾಹರಣೆಯೂ ಇದೆ. ಒಟ್ಟಾರೆ ದಂಧಾ ಹೈ ದಂಧೆಗೆ ಅಮಾಯಕರು ಬಲಿಪಶುವಾಗುತ್ತಿರುವುದು ದು:ಖಕರ ಸಂಗತಿ. ಇತ್ತೀಚೆಗಷ್ಟೇ ಉಪ್ಪಳ ಸಮೀಪದ ಮುಳಿಯ ಪತ್ವಾಡಿಯ ಮನೆಯೊಂದರಿಂದ 3 ಕೆಜಿ 407 ಕಿಲೋ ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಇದರ ಮುಖ್ಯ ರೂವಾರಿ […]

Continue Reading

ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮೋಸದ ವಿಧಾನಗಳನ್ನು ಅನುಸರಿಸಿ, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ: ಕಪಿಲ್ ಸಿಬಲ್

ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದ ಕ್ರಮವನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಬೀಳಿಸಲು ಮೋಸದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಉರುಳಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಒಕ್ಕೂಟ ರಚನೆಗೆ ವಿರುದ್ಧವಾಗಿರುವುದರಿಂದ ಎಲ್ಲ ವಿರೋಧ ಪಕ್ಷಗಳು ಇದರ ವಿರುದ್ಧ ದನಿ ಎತ್ತಬೇಕು. ಈ ರೀತಿಯ ರಾಜ್ಯಪಾಲರನ್ನು ತೆಗೆದುಹಾಕಬೇಕು ಮತ್ತು ಅದರ ವಿರುದ್ಧ ರಾಷ್ಟ್ರೀಯ ಚಳವಳಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. […]

Continue Reading