ಮೂಡಬಿದ್ರೆ ಕೋಟೆ ಬಾಗಿಲು ಶಿಕ್ಷಕಿ ಮೇಬಲ್ ಫೆರ್ನಾಂಡಿಸ್ ರಿಗೆ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡಲ್ಪಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ಕೋಟೆ ಬಾಗಿಲು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಮೇಬಲ್ ಫೆರ್ನಾಂಡಿಸ್ ಭಾಜನರಾಗಿದ್ದಾರೆ. ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆಯಲ್ಲಿ ತೊಡಗಿಕೊಂಡಿರುವ ಮೇಬಲ್ ಫೆರ್ನಾಂಡಿಸ್ ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಜನಾನುರಾಯಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಅರ್ಹವಾಗಿಯೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಪ್ರಸ್ತುತ ಕಳೆದ ಎರಡು ವರ್ಷಗಳಿಂದ ಕೋಟೆ ಬಾಗಿಲಿನ ಉರ್ದು ಶಾಲೆಯಲ್ಲಿ ಸಹಶಿಕ್ಷಕಿಯಾಗಿ […]

Continue Reading

ಬೆಂಗಳೂರು: ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದ ಬೆಳ್ತಂಗಡಿಯ ಟೆಕ್ಕಿಯ ನಿಶ್ಚಿತಾರ್ಥಕ್ಕೆ ಬ್ರೇಕ್.!

ಮದುವೆ ನಿಶ್ಚಿತಾರ್ಥವಾಗಬೇಕಿದ್ದ ಟೆಕ್ಕಿಯೊಬ್ಬ ಸೋಮವಾರ ದಿನ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದ, ಈತ ದ.ಕ ಜಿಲ್ಲೆಯ ಬೆಳ್ತಂಗಡಿ ಪರಿಸರದ. ಇದೀಗ ಆತನ ನಿಶ್ಚಿತಾರ್ಥವೇ ರದ್ದಾಗಿದೆ. ಪ್ರಕರಣದ ಸಂಬಂಧ ಟೆಕ್ಕಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಹೊಂಗಸಂದ್ರದ ಮನೆಯಲ್ಲಿ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್, ಶಾಂತಿಪುರದ ಸೂರಜ್ ಶಾಹಜೀ ಹಾಗೂ ಬೆಳ್ತಂಗಡಿ ಮೂಲದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಶಾಸ್ತ್ರಿ ಬಂಧಿತರು. ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು […]

Continue Reading

ಬಹುಮಹಡಿ ಕಟ್ಟಡದಲ್ಲಿ ಏಕರೂಪದ ಮಾಸಿಕ ನಿರ್ವಹಣಾ ವೆಚ್ಚ ವಸೂಲಿ ವಿರುದ್ಧ ನ್ಯಾಯಾಲಯ ಮಹತ್ವದ ಆದೇಶ

ಫ್ಯಾಟ್‌ನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕುಗಳಿಗೆ ಅನುಗುಣವಾಗಿ ಮಾಸಿಕ ನಿರ್ವಹಣಾ ವೆಚ್ಚ ಪಾವತಿಸಲು ಬದ್ದರು. ಮಂಗಳೂರು: ಬಹುಮಹಡಿ ಕಟ್ಟಡಗಳಿಗೆ ಏಕರೂಪದ ಮಾಸಿಕ ನಿರ್ವಹಣಾ ವೆಚ್ಚ ವಸೂಲಿ ಮಾಡುವುದರ ವಿರುದ್ಧ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಮಹತ್ವದ ಆದೇಶ ನೀಡಿ ಅಸೋಸಿಯೇಷನ್ ಮಾಡಿರುವ ನಿರ್ಣಯವನ್ನು ವಜಾ ಗೊಳಿಸಿದೆ. ಮಂಗಳೂರಿನ ಕೊಟ್ಟಾರದ ಬಳಿ ಇರುವ ಇವನ್ನಾ ಹೋಮ್ಸ್ ಬಹುಮಹಡಿ ಕಟ್ಟಡದಲ್ಲಿ 2018 – 2021ರವರೆಗೆ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಕಟ್ಟಡ ಮಾಲಕರು ತಮ್ಮ ಫ್ಯಾಟ್‌ನ […]

Continue Reading

ಕುಂತೂರು ಆಯ್ತು, ಇದೀಗ ಕಾಶಿಪಟ್ನ ಸರಕಾರಿ ಶಾಲೆ ಕುಸಿತ..ತಪ್ಪಿದ ಭಾರೀ ಅನಾಹುತ

ಆ ಭಾಗ್ಯ, ಈ ಭಾಗ್ಯ ಮೊದಲು ಕಟ್ಟಡ ಭಾಗ್ಯ ಕೊಡಲಿ..ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡದಿರಿ.. ವೇದಿಕೆ ಸಿಕ್ಕರೆ ಸಾಕು; ರಾಜಕಾರಣಿಗಳು ಸರಕಾರಿ ಶಾಲೆಯ ಬಗ್ಗೆ ಉದ್ದುದ್ದದ ಭಾಷಣ ಬಿಗಿಯುತ್ತಾರೆ. ನಾವು ಕೂಡ ಸರಕಾರಿ ಶಾಲೆಯಲ್ಲಿ ಕಲಿತದ್ದು ಎಂದು ಪುಂಗಿ ಊದುತ್ತಾರೆ. ಆದರೆ ಅದೇ ರಾಜಕಾರಣಿಗಳು ಶಾಸಕ, ಮಂತ್ರಿಯಾದರೂ ಅವರು ಕಲಿತ ಶಾಲೆಗೆ ಮಾಡಿದ್ದು ಯಾವುದೇ ಮಣ್ಣಾಂಗಟ್ಟಿ ಇಲ್ಲ. ಪ್ರತಿ ಚುನಾವಣೆ ಸಂದರ್ಭ ದೊಡ್ಡ ದೊಡ್ಡ ರಾಜಕಾರಣಿಗಳು ತಮ್ಮ ಬೂತಿಗೆ ಓಟು ಹಾಕಲು ಬಂದಾಗ ಅಲ್ಲಿನ ಸರಕಾರಿ […]

Continue Reading

ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ; ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ, ಸೊತ್ತುಗಳ ವಶ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಆಗಸ್ಟ್ 30ರಂದು ನಡೆದ ಮನೆ ಕಳ್ಳತನ ಪ್ರಕರಣದ ಖದೀಮನ ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಳ ನಿವಾಸಿ ಸಂತೋಷ್ ಟಿ.( 32)ಬಂಧಿತ ಆರೋಪಿ. ಮನೆಯವರೆಲ್ಲ ನಿದ್ರಿಸುತ್ತಿದ್ಜ ಕೋಣೆಯ ಒಳಗೆ ನುಗ್ಗಿದ್ದ ಕಳ್ಳ ಕಪಾಟಿನ ಬೀಗ ಮುರಿದು ಸುಮಾರು 10.05 ಲಕ್ಷ ಮೌಲ್ಯದ 33 ಪವನ್ ತೂಕದ ಚಿನ್ನಾಭರಣ ಲಪಟಾಯಿಸಿದ್ಜನು. ಈ ಬಗ್ಗೆ ಮನೆ ಮಾಲಿಕರು ನೀಡಿದ ದೂರಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ […]

Continue Reading

ಜಮ್ಮು ಮತ್ತು ಕಾಶ್ಮೀರದ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಲಿದೆ. ಇಂಡಿಯಾ ಮೈತ್ರಿಕೂಟ ಭರ್ಜರಿ ಗೆಲುವು ಸಾದಿಸಲಿದೆ. ಸಮೀಕ್ಷೆಯಲ್ಲಿ ಬಹಿರಂಗ

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆಗೆ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತ, 25ರಂದು ಎರಡನೇ ಹಂತ ಮತ್ತು Oct ಒಂದರಂದು ಮೂರನೇ ಹಂತದ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ […]

Continue Reading

ಅತ್ಯಾಚಾರ ಆರೋಪ ಪ್ರಕರಣ: ಆರೋಪಿ ಖುಲಾಸೆ, ವಾದ ಮಂಡಿಸಿದ ನ್ಯಾಯವಾದಿ ಅರುಣ್ ಬಂಗೇರ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ರವರನ್ನು ಖುಲಾಸೆಗೊಳಿಸಿ, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ಎಂಬುವರು ಬಸ್ಸಿನಲ್ಲಿ ಚಾಲಕ ಮಾಡಿಕೊಂಡಿರುವಾಗ ಪಿರ್ಯಾದಿದಾರರನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದಿದ್ದು, ನಂತರದ ದಿನಗಳಲ್ಲಿ ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು ಒಂದು ಲಕ್ಷ ಹಣವನ್ನು ಪಿರ್ಯಾಧಿದಾರರಿಂದ ಪಡೆದುಕೊಂಡು, ಸದ್ರಿ ಹಣವನ್ನು 2 ತಿಂಗಳಲ್ಲಿ ಕೊಡುತ್ತೇನೆಂದು ಹೇಳಿ, ನಂತರ ಪಿದ್ಯಾಧಿದಾರರು ಆರೋಪಿಯಲ್ಲಿ ಹಣ ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, […]

Continue Reading

ಬೆಂಗಳೂರು: ಬಾಂಗ್ಲಾ ಮೂಲದ ಅಪ್ರಾಪ್ತ ಬಾಲಕಿಯರನ್ನು ಕರೆತಂದು ಹೊಂಗಸಂದ್ರದ ಮನೆಯಲ್ಲಿಟ್ಟು ವೇಶ್ಯಾವಾಟಿಕೆ ದಂಧೆ

ಸಾಫ್ಟ್‌ವೇರ್‌ ಎಂಜಿನಿಯರ್‌ ಸುಬ್ರಹ್ಮಣ್ಯ ಶಾಸ್ತ್ರಿ ಅಪ್ರಾಪ್ತ ಹುಡುಗಿಯರನ್ನೇ ಬುಕ್‌ ಮಾಡುತ್ತಿದ್ದನಂತೆ. ಬಾಂಗ್ಲಾದೇಶದಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೊಂಗಸಂದ್ರ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಬಾಂಗ್ಲಾದೇಶದ ಇಬ್ಬರು ಅಪ್ರಾಪ್ತ ಬಾಲಕಿಯರು ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವುದು ತಿಳಿದುಬಂದಿದೆ. ಕೂಡಲೇ ಸಿಸಿಬಿ ಪೊಲೀಸರು ಇಬ್ಬರೂ ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಈ ದಾಳಿ ನಡೆಸಿದೆ. ಬಂಧಿತರಲ್ಲಿ […]

Continue Reading

ಬಿಜೆಪಿ ನಾಯಕ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್ ಮತ್ತು ಇತರರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸುವ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ

ಹೊಸದಿಲ್ಲಿ: ಇಲ್ಲಿನ ಮತದಾರರ ಪಟ್ಟಿಯಿಂದ ಕೆಲವು ಸಮುದಾಯಗಳಿಗೆ ಸೇರಿದ 30 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದೆ ಎಂಬ ಆರೋಪದ ಕುರಿತು ಹೇಳಿಕೆ ನೀಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಎಎಪಿ ನಾಯಕರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಮೇಲ್ನೋಟಕ್ಕೆ ಆರೋಪಗಳು ಬಿಜೆಪಿಯ ಪ್ರತಿಷ್ಠೆಯನ್ನು ತಗ್ಗಿಸಿದವು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನಿಂದಿಸುವ ಮತ್ತು ಅನಗತ್ಯ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಆರೋಪಗಳು ಪ್ರಾಥಮಿಕವಾಗಿ “ಮಾನಹಾನಿಕರ” ಎಂದು ಹೈಕೋರ್ಟ್ ಹೇಳಿದೆ. […]

Continue Reading

ಬೀದಿ ವ್ಯಾಪಾರ ವಲಯ ಗುರುತಿಸುವಿಕೆ ಅವೈಜ್ಞಾನಿಕ, ಬೀದಿ ವ್ಯಾಪಾರಿಗಳನ್ನು ಅತಂತ್ರಗೊಳಿಸುವ ಹುನ್ನಾರ: ಸಿಐಟಿಯು ಆರೋಪ

ಮಂಗಳೂರು: ಟೈಗರ್ ಕಾರ್ಯಾಚರಣೆ ನಡೆಸಿ ಬಡ ಬೀದಿ ವ್ಯಾಪಾರಿಗಳ ಬದುಕನ್ನೇ ನಾಶ ಮಾಡಿರುವ ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ವ್ಯಾಪಾರ ವಲಯಗಳನ್ನು ಗುರುತು ಮಾಡಿ ಬೀದಿ ವ್ಯಾಪಾರಿಗಳನ್ನು ಬಾಣಲೆಯಿಂದ ಬೆಂಕಿಗೆ ದೂಡಿದೆ ಎಂದು ದಕ್ಷಿಣಕನ್ನಡ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಆರೋಪಿಸಿದೆ. ಪರ್ಯಾಯ ವ್ಯವಸ್ಥೆಗಳಿಲ್ಲದೇ, ಪೂರ್ವ ಯೋಜನೆಗಳಿಲ್ಲದೆ ಏಕಾಏಕಿ ಟೈಗರ್ ಕಾರ್ಯಾಚರಣೆ ನಡೆಸಿ, ಕೈ ಸುಟ್ಟುಕೊಂಡಿರುವ ನಗರಪಾಲಿಕೆ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಅವೈಜ್ಞಾನಿಕವಾಗಿ ವ್ಯಾಪಾರ ವಲಯ ಗುರುತು ಮಾಡಿ ಪ್ರಚಾರ ಪಡೆಯುತ್ತಿದೆ ಹೊರತು ಸಮಸ್ಯೆ […]

Continue Reading