ವಿಟ್ಲ ರಕ್ಷಾ ಕ್ಲಿನಿಕ್ ಗೋಲ್ಮಾಲ್ ರಿಪೋರ್ಟ್; ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುವ ಬೇಜವಾಬ್ದಾರಿ ಕ್ಲಿನಿಕ್.!

ವೈದ್ಯ ಡಾ..ಶರತ್ ಶೆಟ್ಟಿ ಅವರಿಂದ ಕ್ಲಿನಿಕ್ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ಅನಾರೋಗ್ಯ ಪೀಡಿತ ವೈದ್ಯರೊಬ್ಬರು ರಕ್ತ ಪರೀಕ್ಷೆ ಮಾಡಿಸಿದಾಗ ಪ್ಲೇಟ್ಲೆಟ್ ಸಂಖ್ಯೆ ತೀರಾ ಕೆಳಮಟ್ಟ ತಲುಪಿದ ಬಗ್ಗೆ ವಿಟ್ಲದ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ನೀಡಿದ ಸುಳ್ಳು ವರದಿಯಲ್ಲಿ ಸಿಬ್ಬಂದಿ ಸಹಿ ಮಾಡದೇ ಏಮಾರಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ವೈದ್ಯರು ದೂರು ನೀಡಿದ್ದಾರೆ. ಇಲ್ಲಿನ ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ […]

Continue Reading

ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದೆ. ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ನಿರಾಕರಿಸಿ, ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ದ.ಕ ಜಿಲ್ಲಾಧ್ಯಕ್ಷ

ಜಿಲ್ಲೆಯಾದ್ಯಂತ ಪಟ್ಟಣ, ನಗರ, ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದ್ದು, ಸಂವಿಧಾನಬದ್ಧ ಹಕ್ಕುಗಳನ್ನು, ಕಾನೂನುಬದ್ಧವಾದ ಸವಲತ್ತುಗಳನ್ನು ನಿರಾಕರಿಸಿ, ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಪೌರ ಕಾರ್ಮಿಕರ ಸಂಘದ ದ.ಕ ಜಿಲ್ಲಾಧ್ಯಕ್ಷ ಅನಿಲ್ ಕಂಕನಾಡಿ ಕರೆ ನೀಡಿದರು. ಅವರು ಆದಿತ್ಯವಾರ ಬೆಳ್ತಂಗಡಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪಟ್ಟಣ, ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ದ.ಕ ಜಿಲ್ಲಾ ಮಟ್ಟದ […]

Continue Reading

400 ಕೋಟಿ ರೂಪಾಯಿ ದರೋಡೆ ಪ್ರಕರಣವೇ ಕಟ್ಟುಕಥೆ. ಮಹಾರಾಷ್ಟ್ರ ವಿಶೇಷ ತನಿಖಾ ತಂಡ (SIT) ವರದಿ

ಕರ್ನಾಟಕ-ಗೋವಾ ಗಡಿಯಲ್ಲಿ 2025ರ ಅಕ್ಟೋಬರ್‌ನಲ್ಲಿ ನಡೆದ 400 ಕೋಟಿ ರೂಪಾಯಿ ದರೋಡೆ ಪ್ರಕರಣವೇ ಕಟ್ಟುಕಥೆ ಎಂದು ಮಹಾರಾಷ್ಟ್ರ ವಿಶೇಷ ತನಿಖಾ ತಂಡ (SIT) ತನ್ನ ವರದಿಯಲ್ಲಿ ತಿಳಿಸಿದೆ.ದೂರುದಾರ ಸಂದೀಪ್ ದತ್ತಾ ಪಾಟೀಲ್ ಅವರ ಹೇಳಿಕೆಗಳಲ್ಲಿ ಗಂಭೀರ ವ್ಯತ್ಯಾಸಗಳು, ಕರೆ ವಿವರಗಳು, ಪ್ರಯಾಣ ಮಾರ್ಗ ಮತ್ತು ಸಮಯದಲ್ಲಿ ಹೋಲಿಕೆಯಾಗಿಲ್ಲ ಎಂದು ತನಿಖೆಯಲ್ಲಿ ಧೃಢಪಟ್ಟಿದೆ. ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಜನವರಿ 2026ರಂದು ಸಲ್ಲಿಸಲಾದ ದೂರಿನಲ್ಲಿ ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಗೋವಾದಿಂದ ಅಹಮದಾಬಾದ್‌ನ ಒಂದು ಆಶ್ರಮಕ್ಕೆ […]

Continue Reading

ಕುಪ್ಪೆಪದವು ನಿವೇಶನ ವಂಚಿತರ ಹೋರಾಟ: ಗುರುತು ಪಡಿಸಿದ ಜಮೀನಿನ ದಾಖಲೆಗಳನ್ನು ಮಾರ್ಚ್ 16 ರ ಒಳಗಡೆ ಸಿದ್ದಪಡಿಸಿ ಸಹಾಯಕ ಆಯುಕ್ತರ ಕಚೇರಿಗೆ ತಲುಪಿಸುವ ಭರವಸೆ ನೀಡಿದ ತಹಶೀಲ್ದಾರ್

ಕುಪ್ಪೆಪದವು: 2018 ನೇ ಇಸವಿಯಲ್ಲಿ ಹಕ್ಕು ಪತ್ರ ಪಡೆದು ಈವರೆಗೂ ನಿವೇಶನ ಪಡೆಯದ ಕುಪ್ಪೆಪದವು ಗ್ರಾಮದ 80 ಕುಟುಂಬಗಳಿಗೆ ತಕ್ಷಣ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ ಇಂದು ಕುಪ್ಪೆಪದವು ಗ್ರಾಮಪಂಚಾಯತ್ ಮುಂಭಾಗ ನಿವೇಶನ ವಂಚಿತರು ಸಾಂಕೇತಿಕವಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಸುತ್ತಿನ ಪ್ರತಿಭಟನೆ, ಅನಿರ್ದಿಷ್ಟಾವಧಿ ಧರಣಿಗಳನ್ನು ನಡೆಸಿದರೂ ನಿವೇಶನ ಗುರುತಿಸಲು, ವಿತರಿಸಲು ಗ್ರಾಮಪಂಚಾಯತ್ ಹಾಗು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಆಕ್ರೋಶಿತರಾದ ನಿವೇಶನ ವಂಚಿತರು ಇಂದು ಹೋರಾಟ […]

Continue Reading

ಬ್ಯಾರಿ ಲೇಖನ ಸ್ಪರ್ದೆ: ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ‘ಬ್ಯಾರಿ ಲೇಖನ ಸ್ಪರ್ದೆ – 2026’ರ ಫಲಿತಾಶವನ್ನು ಇಂದು ರಾತ್ರಿ 8.30ಕ್ಕೆ ಪ್ರಕಟಿಸಲಿದೆ

ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ ‘ ಬ್ಯಾರಿವಾರ್ತೆ’ ತನ್ನ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ‘ಬ್ಯಾರಿ ಲೇಖನ ಸ್ಪರ್ದೆ – 2026’ರ ಫಲಿತಾಶವನ್ನು ಇಂದು 16-2-2026ನೇ ಸೋಮವಾರ ರಾತ್ರೆ 8.30ಕ್ಕೆ ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ. ಈ ಸ್ಪರ್ದೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಹಿತ ವಿದೇಶಗಳಿಂದಲೂ 149 ಲೇಖನಗಳು ಬಂದಿದ್ದು ಇದೊಂದು ದಾಖಲೆಯಾಗಿದೆ. ಈ ಸ್ಪರ್ದೆಯ ಫಲಿತಾಂಶವನ್ನು ವಿನೂತನ ಶೈಲಿಯಲ್ಲಿ ಪ್ರಟಿಸಲು ಉದ್ದೇಶಿಸಲಾಗಿದೆ. ಫಲಿತಾಂಶವನ್ನು ಒಂದು ವಿಶೇಷ ವಿಡಿಯೊ ಮೂಲಕ ‘Bearyinfo’ ಯೂಟ್ಯೂಬ್ ಚಾನೆಲ್‌ನಲ್ಲಿ 16-8-2026 ಸೋಮವಾರ ರಾತ್ರೆ 8.30ಕ್ಕೆ […]

Continue Reading

ಮತ್ತೆ ತಲೆ ಎತ್ತಲಿದೆ ಪ್ರಗತಿಪರ ದಳ.?, ಬಿಜೆಪಿಯಲ್ಲಿ ಹೊಸ ಸಂಕಟ; ಕುಮಾರಸ್ವಾಮಿ ಕೈಗೆ ಮತ್ತಷ್ಟು ಬಲಿಷ್ಟ ಖಾತೆ ಯೋಚನೆ.!

‘ಸಿದ್ದು ಪಾಳಯದ ಲೇಟೆಸ್ಟು ಸುದ್ದಿ; ’ಡೋಂಟ್ ವರಿ ಶಿವಕುಮಾರ್ ಜೀ. ಬೇಗ ಸೆಟ್ಲ್ ಮಾಡುತ್ತೇವೆ ✍️. ಆರ್. ಟಿ. ವಿಠ್ಠಲ್ ಮೂರ್ತಿ ಕಳೆದ ವಾರ ದಿಲ್ಲಿಯಿಂದ ಹಾರಿ ಬಂದ ವರ್ತಮಾನ ಏಕಕಾಲಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯಗಳ ಹರ್ಷಕ್ಕೆ ಕಾರಣವಾಯಿತು.ದಿಲ್ಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತಮ್ಮ ಪರವಾಗಿವೆ ಎಂಬ ನಂಬಿಕೆಯೇ‌ ಇದಕ್ಕೆ ಕಾರಣ. ಅಂದ ಹಾಗೆ ಅಸ್ಸಾಂ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಕಳೆದ ವಾರ ದಿಲ್ಲಿಗೆ ಹೋದರಲ್ಲ? ಈ ಸಂದರ್ಭದಲ್ಲಿ […]

Continue Reading

ಆನ್‌ಲೈನ್ ಜೂಜಾಟದ ಚಟಕ್ಕೆ ಬಿದ್ದ ಇಂಡಿಯನ್ ಬ್ಯಾಂಕಿ‌ನ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್

ಗ್ರಾಹಕರು ಅಡಮಾನವಿಟ್ಟ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನೇ ಮಾಯ ಮಾಡಿ ಬಿಟ್ಟ ಆನ್‌ಲೈನ್ ಜೂಜಾಟದ ಚಟಕ್ಕೆ ಬಿದ್ದ ಇಂಡಿಯನ್ ಬ್ಯಾಂಕಿ‌ನ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬ ತನ್ನ ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನವಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಾರವನ್ನೇ ಮಾಯ ಮಾಡಿದ್ದಾನೆ. ಈ ಘಟನೆ ಇಂಡಿಯನ್ ಬ್ಯಾಂಕ್‌ನಲ್ಲಿ ನಡೆದಿದ್ದು, ಸದ್ಯ ಆರೋಪಿ ಕಿರಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಕಳೆದ ಹಲವು ತಿಂಗಳಿನಿಂದ ಈ […]

Continue Reading

ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ: ಜಾಮೀನು ಪಡೆದು ಒಂಬತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಜಾಮೀನು ಷರತ್ತು ಉಲ್ಲಂಘಿಸಿದ ಹಿನ್ನೆಲೆ ಮತ್ತೊಂದು ಪ್ರಕರಣ ದಾಖಲು ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 51/2012 ಹಾಗೂ ಅ.ಕ್ರ:52/2012 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರು ಕಸಬಾ ಗ್ರಾಮದ ನಿವಾಸಿ ಅಬ್ಬಾಸ್ ಆಲಿ ಆಲ್ತಾಫ್ (55) (ಪ್ರಸ್ತುತ ವಾಸ: ಪದವು, ಮಂಗಳೂರು) ಎಂಬಾತನನ್ನು ಮಂಗಳೂರು, ಕುಲಶೇಖರ, ಬಿಕರ್ನಕಟ್ಟೆ ಎಂಬಲ್ಲಿಂದ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ: 27.02.2026 ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಮುಂದುವರಿದಂತೆ ಮಾನ್ಯ […]

Continue Reading

ನ್ಯಾಯಮೂರ್ತಿಗಳ ವಿರುದ್ಧ ಸಿಜೆಐ ಕಚೇರಿಗೆ 2016 ರಿಂದ 2026ರ ವರೆಗೆ 8,630 ದೂರು; ಕೇಂದ್ರ ಕಾನೂನು ಸಚಿವಾಲಯ ಬಹಿರಂಗ

ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ. ಲೋಕಸಭೆಯಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಡಿಎಂಕೆ ಸಂಸದ ಮಾಥೇಶ್ವರನ್ ವಿ.ಎಸ್ ಕೇಳಿದ ಪ್ರಶ್ನೆಗೆ ಕಾನೂನು ಸಚಿವ ಅರ್ಜುನ್‌ ರಾಮ್ ಮೇಘವಾಲ್‌ ಈ ಉತ್ತರ ನೀಡಿದರು. ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಕೆಯಾಗಿರುವ ಭ್ರಷ್ಟಾಚಾರ, ಲೈಂಗಿಕ ದುರ್ನಡತೆ ಅಥವಾ ಇತರ ಗಂಭೀರ ಅನುಚಿತ ವರ್ತನೆಗೆ ಸಂಬಂಧಿಸಿದ ದೂರುಗಳ ಬಗ್ಗೆ […]

Continue Reading

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಮಾರಾಟ ಮಾಡಲು ಯತ್ನಿಸಿದ ಮೂವರ ಬಂಧನ.

ಮಂಗಳೂರು ನಗರಕ್ಕೆ ಬೆಂಗಳೂರು ನಗರದಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಖರೀದಿಸಿಕೊಂಡು ಅದನ್ನು ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸ್ವೀಪ್ಟ್ ಕಾರಿನಲ್ಲಿ ತಲಪಾಡಿಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಸಮೇತ ಸ್ವೀಪ್ಟ್ ಕಾರನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ ಬಂಧಿತರನ್ನು ಮುಸ್ತಫಾ ಸೀದಿಯಬ್ಬ, ಉಳ್ಳಾಲ. ಮೈಯದ್ದಿ, ಉಳ್ಳಾಲ. ಮೊಹಮ್ಮದ್ ಶಿಫಾನ್, ಮುಕ್ಕಚೇರಿ, ಉಳ್ಳಾಲ, ಮಂಗಳೂರು. ಎಂಬವರನ್ನು ವಶಕ್ಕೆ ಪಡೆದು, ರೂ.11 ಲಕ್ಷದ […]

Continue Reading