ನಗರಸಭೆ ಪೌರಾಯುಕ್ತೆಗೆ ನಿಂದನೆ ಮತ್ತು ಜೀವ ಬೆದರಿಕೆ ಒಡ್ಡಿದ ಪ್ರಕರಣ; ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್‌ ಗೌಡರ ಬಂಧನ.

ನಗರಸಭೆ ಪೌರಾಯುಕ್ತೆ ಅಮೃತಗೌಡ ರವರಿಗೆ ನಿಂದನೆ ಮತ್ತು ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡರನ್ನು ಪೊಲೀಸರು ಕರ್ನಾಟಕ-ಕೇರಳ ಗಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕರ್ನಾಟಕ- ಕೇರಳ ಗಡಿಯಲ್ಲಿ ಪೊಲೀಸರು ರಾಜೀವ್‌ ಗೌಡರನ್ನು ಬಂಧಿಸಿ, ಅವರನ್ನು ಚಿಕ್ಕಬಳ್ಳಾಪುರಕ್ಕೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ. ಬ್ಯಾನರ್‌ ವಿಚಾರಕ್ಕೆ ಸಂಬಂಧಿಸಿ ಜ.12 ರಂದು ರಾಜೀವ್‌ ಗೌಡ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ್ದರು. ಧಮ್ಕಿ ಹಾಕಿ, ನಿಂದಿಸಿದ್ದಕ್ಕೆ ರಾಜೀವ್‌ ಗೌಡ ವಿರುದ್ಧ […]

Continue Reading

ಬೆಳ್ತಂಗಡಿ: ಯಾವುದೆ ಪರವಾನಿಗೆ ಪಡೆಯದೆ ಅಕ್ರಮ ಕಟ್ಟಡ ನಿರ್ಮಾಣ; ದ. ಕ ಜಿಲ್ಲಾ ಉಸ್ಸುವಾರಿ ಸಚಿವರಿಗೆ ದೂರು

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಕ್ಕೆ ವಂಚಿಸಿ, ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಮಾಜಿಕ ಕಾರ್ಯಕರ್ತ ಶೇಖರ್. ಲಾಯಿಲ ಮನವಿ ಸಲ್ಲಿಸಿದ್ದಾರೆ. ಇಂದು ಕುಕ್ಕೇಡಿ ಡಾ.ಬಿ.ಆರ್ ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಭ್ಯಾಸ್ ಕಾಲೇಜ್, […]

Continue Reading

ಹೈಟೆಕ್ ದರೋಡೆ; 400 ಕೋಟಿ ತುಂಬಿದ ಎರಡು ಕಂಟೈನರ್‌ಗಳನ್ನು ಹೈಜಾಕ್‌ ಮಾಡಿ ದರೋಡೆ

ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಗೆ ಸೇರಿದ 400 ಕೋಟಿ: ಮಹಾರಾಷ್ಟ್ರ ಪೊಲೀಸರ ಮಾಹಿತಿ ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್‌ ಮಾಡಿರುವ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದೇಶದ ಇತಿಹಾಸದಲ್ಲೇ ಅತೀ ದೊಡ್ಡ ದರೋಡೆ ಪ್ರಕರಣ ಇದಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಈ ಮೂರು ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನೇ ಈ ಘಟನೆ ಅಣಕಿಸುವಂತೆ ಮಾಡಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು, […]

Continue Reading

ರಾಜ್ಯ ಸರಕಾರಕ್ಕೆ ಅಬಕಾರಿ ಸಂಕಷ್ಟ.! ಅಬಕಾರಿ ಇಲಾಖೆಯಲ್ಲಿ ಮಹಾ ಹಗರಣ; ಸರ್ಕಾರದ ಮೂರನೇ ವಿಕೆಟ್ ಉರುಳಲಿದೆಯೇ.?

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ಕಂಟಕಗಳು ಎದುರಾಗುತ್ತಿವೆ. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳ ಬೆನ್ನಲ್ಲೇ ಇದೀಗ ಅಬಕಾರಿ ಇಲಾಖೆಯ ಮಹಾ ಹಗರಣವೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಇದೀಗ ಸಚಿವ ಆರ್.ಬಿ.ತಿಮ್ಮಾಪುರ ಅವರ ಕುರ್ಚಿ ಅಲುಗಾಡಿಸುತ್ತಿದ್ದು, ಸರ್ಕಾರದ ಮೂರನೇ ವಿಕೆಟ್ ಪತನವಾಗಲಿದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ರಾಜ್ಯಪಾಲರ ಭಾಷಣ ವಿವಾದಗಳ ನಡುವೆ ಸಿಲುಕಿದ್ದ ಸರ್ಕಾರಕ್ಕೆ, ಅಬಕಾರಿ ಇಲಾಖೆಯ ಲಂಚ ಪ್ರಕರಣ ನುಂಗಲಾರದ […]

Continue Reading

ಉಡುಪಿ: ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆ; ಸೂಕ್ತ ಕ್ರಮಕ್ಕೆ ಕರವೇ ಪ್ರವೀಣ್ ಶೆಟ್ಟಿ ಬಣದ ಮನವಿ, ಸ್ಪಂದಿಸಿದ ಉಡುಪಿ ಜಿಲ್ಲಾ ಪೊಲೀಸ್

ಉಡುಪಿ : ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣ ಅನೈತಿಕ ಚಟುವಟಿಕೆಯ ತಾಣವಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿಯನ್ನು ನೀಡಲಾಗಿತ್ತು. ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ರಾತ್ರಿಯ ಹೊತ್ತು ಕುಡುಕರು ಹಾಗೂ ತೃತೀಯ ಲಿಂಗಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶಾಲೆಯ […]

Continue Reading

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಕೆ; ವಿರೋಧ ವ್ಯಕ್ತಪಡಿಸುತ್ತಿದ್ದ ನಾಯಕರಿಗೆ ಸ್ಪಷ್ಟ ಸಂದೇಶ

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಹೈಕಮಾಂಡ್ ವಿಜಯೇಂದ್ರ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ. 19ಕ್ಕೂ ಹೆಚ್ಚು ರಾಜ್ಯಗಳ ಅಧ್ಯಕ್ಷರ ಬದಲಾವಣೆಯ ನಡುವೆಯೂ ವಿಜಯೇಂದ್ರ ಕುರ್ಚಿ ಅಲುಗಾಡದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಕೇವಲ ಅಧ್ಯಕ್ಷ ಸ್ಥಾನದ ಚರ್ಚೆಯಷ್ಟೇ ಅಲ್ಲದೆ, ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹೊಸ ರಾಷ್ಟ್ರೀಯ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯ ಬಿಜೆಪಿ ನಾಯಕತ್ವದಲ್ಲಿಯೂ ಬದಲಾವಣೆಗಳು ಬರುತ್ತವೆ ಎಂಬ ಮಾತುಗಳು ಹಲವು […]

Continue Reading

ಡಿಜಿಟಲ್ ಸೂರ್ಯೋದಯದ ಕೆಳಗಿನ ನೆರಳುಗಳ ಬಗ್ಗೆ ಕರ್ನಾಟಕದ ಕಂದಾಯ ಮಂತ್ರಿಗಳಿಗೊಂದು ಬಹಿರಂಗ ಪತ್ರ

ಕರ್ನಾಟಕದ ಕಾಗದ ರಹಿತ ನೋಂದಣಿ ಕನಸಿನ ಕುರಿತಾದ ಒಂದು ಎಚ್ಚರಿಕೆಯ ಚಿಂತನೆ ✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು. ಕರ್ನಾಟಕವು ಮತ್ತೊಮ್ಮೆ ಆವಿಷ್ಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ. ಕರಾವಳಿ ಬಂಟ್ವಾಳದ ಫಲವತ್ತಾದ ಹೊಲಗದ್ದೆಗಳಿಂದ ಹಿಡಿದು ಬೆಂಗಳೂರಿನ ಸಿಲಿಕಾನ್ ಕಾರಿಡಾರ್‌ಗಳವರೆಗೆ, ರಾಜ್ಯವು ಒಂದು ಹೊಸ ಭವಿಷ್ಯವನ್ನು ಪ್ರಸ್ತಾಪಿಸುತ್ತಿದೆ. ಅಲ್ಲಿ ಆಸ್ತಿ ವ್ಯವಹಾರಗಳು ಕಾಗದವಿಲ್ಲದೆ, ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆಯಿಲ್ಲದೆ ಮತ್ತು ಶಾಯಿಯ ಬಳಕೆಯಿಲ್ಲದೆ ನಡೆಯಲಿವೆ — ಕೇವಲ ಪರದೆಗಳು, ಕ್ಲಿಕ್‌ಗಳು ಮತ್ತು ಕ್ರಿಪ್ಟೋಗ್ರಾಫಿಕ್ ಮುದ್ರೆಗಳ ಮೂಲಕ ಮಾತ್ರ. ಕಾಗದರಹಿತ ನೋಂದಣಿ […]

Continue Reading

ಡಾ. ತಲ್ಲೂರು ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಉಡುಪಿ : ಯಕ್ಷಗಾನ, ಜಾನಪದ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ರಂಗ ಹಾಗೂ ಸಮಾಜ ಸೇವೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಉಡುಪಿಯ ಉದ್ಯಮ ರತ್ನ, ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ, ಕೊಡಗು ಇವರ ಜಂಟಿ ಆಶ್ರಯದಲ್ಲಿ ಹಾಸನದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜ.18ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ […]

Continue Reading

MG-NREGA ವಿವಾದಕ್ಕೆ ಸೆಡ್ಡು..! ರಾಜ್ಯದಲ್ಲೂ ಭಾಷಾ ಮಸೂದೆ ಜಾರಿಗೆ ಕಸರತ್ತು. ಎಲ್ಲಾ ಶಾಸಕರಿಗೆ CRF ನೀಡಿರುವ ಪ್ರಸ್ತಾವನೆ ಹೀಗಿದೆ

ಬೆಂಗಳೂರು: ನರೇಗಾ (MGNREGA) ಹೆಸರು ಬದಲಾವಣೆ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಸಮರ ಸಾರಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ, ಇದೀಗ ಕನ್ನಡ ಭಾಷಾ ವಿಚಾರದಲ್ಲೂ ಕಾನೂನು ಜಾರಿ ಸಂಬಂಧ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪರಿಶೀಲನೆ ನಡೆದಿದ್ದು, ಒಂದೊಮ್ಮೆ ಕನ್ನಡ ಸಂಬಂಧದ ಕಾನೂನು ಜಾರಿಗೆ ಬಂದರೆ, ಕೇರಳದ ಭಾಷಾ ಮಸೂದೆಗೆ ಪರ್ಯಾಯ ಕ್ರಮ ಎಂಬಂತಾಗಬಹುದು, ಜೊತೆಗೆ ಹಿಂದಿ ಏರಿಕೆಯ ವಿವಾದಕ್ಕೂ ತೆರೆ ಬೀಳುವ ಸಾಧ್ಯತೆಗಳಿವೆ. ಹಿಂದಿ ಭಾಷಾ ಏರಿಕೆ ವಿಚಾರದಲ್ಲಿ […]

Continue Reading

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯನನ್ನು ಅಂದ್ರಪ್ರದೇಶದಲ್ಲಿ ಬಂಧಿಸಿದ ಉರ್ವ ಪೊಲೀಸರು.

1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ. ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ, “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ಪ್ರಾಯ: 55 ವರ್ಷ, ತಂದೆ: ವೆಂಕಟಪ್ಪ ವಾಸ: ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು. ಬೆಂಗಳೂರು ಜಿಲ್ಲೆ. ಹಾಲಿ ವಾಸ: ವಿಜಯನಗರ […]

Continue Reading