ನಾಯಿ ಕಚ್ಚಿದರೆ ರಾಜ್ಯ ಸರಕಾರವೇ ಹೊಣೆ, ಪರಿಹಾರ ನೀಡಲಿ; ಬೀದಿ ನಾಯಿಗಳ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಮನೆಗೊಯ್ದು ಸಾಕಿ: ಸುಪ್ರೀಂ ಕೋರ್ಟ್

ದೇಶಾದ್ಯಂತ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಜನವರಿ 13ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಗರಿಕರು ನಾಯಿ ಕಡಿತದಿಂದ ಸತ್ತರೆ ಅಥವಾ ಗಾಯಗೊಂಡರೆ, ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿತು. 75 ವರ್ಷಗಳಿಂದ ಸರ್ಕಾರಗಳು ಬೀದಿ ನಾಯಿ ಸಮಸ್ಯೆಯನ್ನು ನಿಭಾಯಿಸಲು ಏನೂ […]

Continue Reading

ಬುದ್ದಿವಂತರ ಜಿಲ್ಲೆಯಲ್ಲಿ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳು; ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತೀ ಅಪಾಯಕಾರಿ: ಸಿಪಿಐಎಂ ಖಂಡನೆ

ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು “ಬಾಂಗ್ಲಾ ನುಸುಳುಕೋರ” ಎಂದು ಆಪಾದಿಸಿ ಹಲ್ಲೆ ನಡೆಸಿರುವುದು, ಈ ಸಂದರ್ಭ ಆತನಿಂದ ಹಲವು ಬಾರಿ “ಜೈ ಶ್ರೀರಾಮ್” ಘೋಷಣೆ ಹಾಕಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತದೆ. ಈ ಹಲ್ಲೆಕೋರರು ಸಂಘಪರಿವಾರದ “ಹಿಂದು ಜಾಗರಣ ವೇದಿಕೆ” ಗುಂಪಿಗೆ ಸೇರಿದವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ […]

Continue Reading

ಮೂಲ್ಕಿ: ಕಂಬಳದ ಕೋಣ ಮಾಲೀಕರಿಗೆ ಹಲ್ಲೆ, ಸುಲಿಗೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಕೆಕೋಕಾ ಪ್ರಕರಣ ದಾಖಲು

ಪಡು ಪಣಂಬೂರು ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ 2 ನೇ ಬಹುಮಾನ ಗೆದ್ದ ಸಂಶುದ್ದೀನ್ ಅವರ ಬಳಿ ಸುಲಿಗೆ ಮಾಡಲು ಯತ್ನಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೆಕೋಕಾ (ಕರ್ನಾಟಕ ಕಂಟ್ರೋಲ್ ಅರ್ಗನೈಸ್ಡ್ ಕ್ರೈಂ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾದ ಸುವಿನ್ ಕಾಂಚನ್ ಹೆಜಮಾಡಿ, ಅಕ್ಷಯ್ ಪೂಜಾರಿ ಕಾರ್ನಾಡ್ […]

Continue Reading

ವಲಸೆ ಕಾರ್ಮಿಕನ ರಾಷ್ಟ್ರೀಯತೆ ಪ್ರಶ್ನಿಸಿ, ಗುರುತಿನ ದಾಖಲೆ ತೋರಿಸುವಂತೆ ಒತ್ತಾಯ; ಗಂಭೀರ ಹಲ್ಲೆ, ಪ್ರಕರಣ ದಾಖಲು

ಹಲ್ಲೆ.ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣ ಕೂಳೂರು ಸಮೀಪ ನಡೆದಿದೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿರುವ ಸಂತ್ರಸ್ತನನ್ನು ಆತನ ರಾಷ್ಟ್ರೀಯತೆ ಯಾವುದೆಂದು ಪ್ರಶ್ನಿಸಿ, ಗುರುತಿನ ದಾಖಲೆಗಳನ್ನು ತೋರಿಸುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ತಾನು ಭಾರತೀಯ ಪ್ರಜೆ ಎಂದು ಪದೇ ಪದೆ ಹೇಳುತ್ತಿದ್ದರೂ, ಆರೋಪಿಗಳು ಆತನಿಗೆ ಕಿರುಕುಳ ನೀಡುತ್ತ, ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತನಿಗೆ ಸೇರಿದ ಉಪಕರಣಗಳಿಂದಲೇ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಇದರ […]

Continue Reading

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶ

2025-26ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದಿದ್ದಾರೆ. ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ), ಯಶಸ್ವಿನಿ ಟ್ರಸ್ಟ್ ಇವರ ಪತ್ರದಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ […]

Continue Reading

ಹಿಜಾಬ್ ಬ್ಯಾನ್ ವಾಪಾಸ್ ಮತ್ತು 2ಬಿ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಮುಸ್ಲಿಂ ಶಾಸಕರುಗಳು ಸರಕಾರವನ್ನು ಒತ್ತಾಯಿಸಬೇಕು: ಸಿರಾಜ್ ಬಜ್ಪೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಧರ್ಮಗಳಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ, ಸರಕಾರದಿಂದ ಆಗಬೇಕಾಗಿದೆ. ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಬ್ಯಾನ್ ಮಾಡಿರುವ ಹಿಜಾಬ್ ಮತ್ತು 2ಬಿ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡಿರುವ ಭರವಸೆಯಿಂದ ಈ ರಾಜ್ಯದ ಮುಸ್ಲಿಮರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇಟ್ಟು, ಶೇಕಡ 88% ರಷ್ಟು ಜನ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಿ ವಿಜಯದ ಪತಾಕೆ ಹಾರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಈ ರಾಜ್ಯದ ಮುಸ್ಲಿಂ […]

Continue Reading

ಡಿ. ಕೆ ಶಿವಕುಮಾರ್ ಅವರ ತುಳುನಾಡಿನ ಕುರಿತಾದ ಕಾಳಜಿಯು, ಜನಸಾಮಾನ್ಯರಲ್ಲಿ ಮೂಡಿರುವ ಆತಂಕಗಳೂ…

ಬಂಡವಾಳಶಾಹಿಗಳನ್ನು ಮತ್ತಷ್ಟು ಕೊಬ್ಬಿಸುವ, ಸೂಕ್ಷ್ಮವಾದ ಪ್ರಕೃತಿಯನ್ನು ನುಂಗಿ ಹಾಳುಗೆಡಹುವ, ತುಳುನಾಡಿನ ಮಣ್ಣಿನ ಮಕ್ಕಳನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳುವ ಬಣ್ಣದ ಮಾತುಗಳು ಮಾತ್ರ ಆಗಿ ಉಳಿಯುವುದಿಲ್ಲವೆ: ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಇಂದು ‘ಪ್ರವಾಸೋದ್ಯಮ ಸಮಾವೇಶ’ ನಡೆದಿದೆ. ಇತ್ತೀಚಿಗಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳ, ಸಮಸ್ಯೆ, ಅಭಿವೃದ್ದಿಯ ಕುರಿತು ಪದೇ ಪದೆ ಬಹಳ ಕಾಳಜಿಯಿಂದ ಮಾತಾಡುತ್ತಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಸಮಾವೇಶದಲ್ಲಿ ಮತ್ತೆ ಕರಾವಳಿಯ ಹಿಂದುಳಿಯುವಿಕೆಯ ಕುರಿತು ಮಹತ್ವದ ಅಂಶಗಳನ್ನು ಎತ್ತಿ ಮಾತಾಡಿದ್ದಾರೆ. ಪ್ರವಾಸೋದ್ಯಮದ ಮೂಲಕ ಅಭಿವೃದ್ದಿಯ […]

Continue Reading

ಬ್ಯಾರಿ ಸಮುದಾಯಕ್ಕೆ ಮಾದರಿಯಾದ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ರಿ) ಟ್ರಸ್ಟ್ ಉದ್ಘಾಟನೆ, ವಿಚಾರ ಸಂಕಿರಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ರಿ) ಮಂಗಳೂರು ಇದರ ಟ್ರಸ್ಟ್ ಉದ್ಘಾಟನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ನಗರದ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗಿತು. ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಮರ್ ಹೂಂ ಹಾಜಿ ಬಿ.ಎ ಮೊಹಿದ್ದೀನ್ ಅವರ ಕೊಡುಗೆಯನ್ನು ಸ್ಮರಿಸಿ ಕಾರ್ಯಕ್ರಮದ ವೇದಿಕೆಗೆ ಇಟ್ಟು ಒಂದು ಮಾದರಿಯುತ ಕಾರ್ಯಕ್ರಮ ನಡೆಸುವಲ್ಲಿ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಸಂಘ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ 37 ವಿಶ್ವವಿದ್ಯಾನಿಲಯಗಳಿವೆ. ರಾಜ್ಯದಲ್ಲೇ ಮುಸ್ಲಿಂ ಸಮುದಾಯದ […]

Continue Reading

ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಹಿರಿಯ ತಂತ್ರಿ ಕಂಠರರ್ ರಾಜೀವರ್ ಬಂಧನ

ಶಬರಿಮಲೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆಯ ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದು, ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ ಬೆಲೆಬಾಳುವ ಆಭರಣಗಳ ಕುರಿತು ತನಿಖೆ ನಡೆಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ದೇವಾಲಯದ ಒಳಗಿನ ಚಿನ್ನಾಭರಣಗಳು ಕಳುವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಈ ಗಂಭೀರ ಪ್ರಕರಣದ ಬೆನ್ನಲ್ಲೇ ತನಿಖೆಯನ್ನು ಆರಂಭಿಸಲಾಗಿತ್ತು. ಇದೀಗ ತನಿಖಾ ತಂಡವು ಮುಖ್ಯ ಅರ್ಚಕರನ್ನೇ ವಿಚಾರಣೆಗೆ ಒಳಪಡಿಸಿರುವುದು ಭಕ್ತರಲ್ಲಿ ಮತ್ತು […]

Continue Reading

ವೈಭವದ ಕರಾವಳಿ ಉತ್ಸವ, ಕಂಬಳದ ಅಬ್ಬರದಲ್ಲಿ ಬಡವರು, ದುರ್ಬಲ ಸಮುದಾಯಗಳ ಸಂಕಷ್ಟಗಳನ್ನು ಜಿಲ್ಲಾಡಳಿತ ಕಡೆಗಣಿಸಿದೆ: ಮುನೀರ್ ಕಾಟಿಪಳ್ಳ

ಮನೆ, ನಿವೇಶನ ಹಸ್ತಾಂತರಿಸಲು ಆಗ್ರಹಿಸಿ ಫಲಾನುಭವಿ ಕೊರಗ ಕುಟುಂಬಗಳಿಂದ 12 ತಾಸುಗಳ ಧರಣಿ ಕುಡುಪು‌ ಗ್ರಾಮದ ಮಂಗಳಜ್ಯೋತಿಯಲ್ಲಿ‌ ಕೊರಗ ಕುಟುಂಬಗಳಿಗೆ 2018 ರಲ್ಲಿ ನಗರ ಪಾಲಿಕೆ ಮಂಜೂರಾಗಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸುತ್ತಿರುವ ಮಂಗಳೂರು ನಗರಪಾಲಿಕೆ ಹಾಗು ಜಿಲ್ಲಾಡಳಿತದ ಅಮಾನವೀಯ ಧೋರಣೆಯನ್ನು ಖಂಡಿಸಿ, ತಕ್ಷಣವೆ ನಿವೇಶನ ಸ್ವಾಧೀನ ನೀಡುವಂತೆ ಆಗ್ರಹಿಸಿ ಫಲಾನುಭವಿ ಕುಟುಂಬಗಳು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಂಗಳೂರು ನಗರ ಪಾಲಿಕೆ ಕಚೇರಿ ಮುಂಭಾಗ 12 ತಾಸುಗಳ ಧರಣಿ ಸತ್ಯಾಗ್ರಹ ನಡೆಸಿದರು. ಧರಣಿಯನ್ನು […]

Continue Reading