ಅವಧಿ ಮುಗಿದ ಗ್ರಾಮ ಪಂಚಾಯತ್ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಬೇಕೆಂದು ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಒತ್ತಾಯ

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದೆ ಇರುವ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳುಗಳ ಕಾಲ ವಿಸ್ತರಿಸಬೇಕೆಂದು ಸರ್ಕಾರಕ್ಕೆ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಒತ್ತಾಯಿಸಿದೆ. ಅವಧಿ ವಿಸ್ತರಣೆ ಮಾಡದೆ ಇದ್ದರೆ 27ರಂದು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ-ಮುಖ್ಯ ಮಂತ್ರಿ ಅವರಿಗೆ ಪತ್ರ ಬರೆದಿರುವ ಮಹಾಒಕ್ಕೂಟ, ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದೆ ಇರುವ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳು ಮುಂದುವರಿಸುವಂತೆ ಮನವಿ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ […]

Continue Reading

UAE ಬಿಸಿಸಿಐ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ; ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ ಆಯ್ಕೆ

ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್ ಮುಖ್ಯ ಪೋಷಕರಾಗಿರುವ BCCIಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೊಟೇಲಿನಲ್ಲಿ ನಡೆಯಿತು. ಈ ವಾರ್ಷಿಕ ಮಹಾಸಭೆಯಲ್ಲಿ 2026–2028ರ ಅವಧಿಗೆ ಹಿದಾಯತ್‌ ಅಡ್ಡೂರು ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಅವರ ನೇತೃತ್ವದಲ್ಲಿ 2025ರ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ‘ಬ್ಯಾರಿ ಸಮ್ಮೇಳನ’ವು ಇತಿಹಾಸವನ್ನು ಸೃಷ್ಟಿಸಿತ್ತು. ಇದೇ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ, ಖಜಾಂಚಿಯಾಗಿ ಹಂಝಾ ಎ. ಖಾದರ್, ಸಂಚಾಲಕರಾಗಿ ಅಶ್ರಫ್ ಶಾ ಮಾಂತೂರು […]

Continue Reading

ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ.

ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯತ್ ಗಳಲ್ಲಿ ಇನ್ಮುಂದೆ ಆಡಳಿತಾಧಿಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತುರ್ತು ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊರಡಿಸಿದೆ. ಸಂವಿಧಾನದ ಅನುಚ್ಛೇಧ 243-E ಉಪಬಂಧದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಹಾಗೂ […]

Continue Reading

ಆಢಳಿತ ರೂಢ ಬಿಜೆಪಿಗೆ ಮುಖಭಂಗ; İSLAM ಪಕ್ಷವು ಮಾಲೆಗಾಂವ್ ಮುನ್ಸಿಪಲ್ ನಲ್ಲಿ ಏಕೈಕ ಅತಿದೊಡ್ಡ ಪಕ್ಷ, ಭರ್ಜರಿ ಗೆಲುವು

ಇಂಡಿಯನ್ ಸೆಕ್ಯುಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ(ಇಸ್ಲಾಂ) ಪಕ್ಷವು ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಗರಸಭೆಯ ಒಟ್ಟು 84 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಇಸ್ಲಾಂ ಪಕ್ಷ ಗೆದ್ದಿದ್ದರೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 21 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18 ಸ್ಥಾನಗಳನ್ನು ಪಡೆದಿದ್ದು, ಸಮಾಜವಾದಿ ಪಕ್ಷಕ್ಕೆ ಐದು ಮತ್ತು ಕಾಂಗ್ರೆಸ್‌ಗೆ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯದ ಈ ಪಟ್ಟಣದಲ್ಲಿ ಭಾರತೀಯ […]

Continue Reading

ಅಗಲಿಕೆಗೆ ನಾಲ್ಕು ವರ್ಷ; ಜಾತಿ-ಧರ್ಮ ಮೀರಿ ಬೆಳೆದ ಝಾಕೀರ್ ಸೂರಲ್ಪಾಡಿ ನೆನಪು ಮಾತ್ರ

ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಆರ್.ಎಸ್.ಝಾಕೀರ್ ಸೂರಲ್ಪಾಡಿ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಹಗಲು-ರಾತ್ರಿಯೆನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ,ಸಾರ್ವಜನಿಕ ಕರೆಗೆ ಸ್ಪಂದಿಸುತ್ತಿದ್ದ ವ್ಯಕ್ತಿ. 15 ವರ್ಷಗಳಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ, ಸೋಲಿಲ್ಲದ ಸರದಾರನಾಗಿ, ಬಡವರ ಪಾಲಿನ ಬಂಧುವಾಗಿ ಕ್ಷೇತ್ರದಾದ್ಯಂತ ಜನ ಮನ್ನಣೆಗಳಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ತಿನ ಅಭಿವೃದ್ಧಿಯ ಹರಿಕಾರ. ಪಂಚಾಯತ್ ವ್ಯಾಪ್ತಿಯ ನಂಬರ್ ಒನ್ ಸದಸ್ಯ. ಗ್ರಾ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲೆ ದಾಖಲೆ ಮಟ್ಟದ ಮತ (1020)ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದ ವ್ಯಕ್ತಿ. ಚಾಲೆಂಜರ್ಸ್ ಫ್ರೆಂಡ್ಸ್ ಕ್ಲಬ್ ಸೂರಲ್ಪಾಡಿ ಇದರ ಮೂಲಕ […]

Continue Reading

ತಂದೆಯ ಮೃತದೇಹ ನೋಡಲು ಪಾಸ್ ಪೋರ್ಟ್ ಇಲ್ಲದೇ ಕಂಗಾಲಾದ ಮಗನಿಗೆ ನೆರವಾದ ಮಾಜಿ ಶಾಸಕ.!

ಗಂಜಿಮಠದ ಯುವಕನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಟ್ಟು ಮಾನವೀಯತೆ ಮೆರೆದ ಮೊಹಿದ್ದೀನ್ ಬಾವಾ ತಂದೆ ವಿದೇಶದಲ್ಲಿ ಮರಣ, ಮಗ ಊರಿನಲ್ಲಿ. ತಂದೆಯ ಮುಖವನ್ನು ಕೊನೆಯ ಬಾರಿ ನೋಡಿ ಬೀಳ್ಕೊಡಬೇಕಾದ ಮಗನಿಗೆ ಪಾಸ್ ಪೋರ್ಟ್ ಇಲ್ಲದೇ ಊರಿನಲ್ಲಿಯೇ ಬಾಕಿಯಾಗುವ ದುಃಖತಪ್ತದ ವಾತಾವರಣ. ಆ ಸಂದರ್ಭದಲ್ಲಿ ಕುಟುಂಬಕ್ಕೆ ನೆನಪಾಗಿದ್ದು ಮಾಜಿ ಶಾಸಕ ಮೊಹಿದ್ದೀನ್ ಬಾವಾ. ವಿಷಯ ತಿಳಿಯುತ್ತಿದ್ದಂತೆ ಮಗನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಮೊಹಿದ್ದೀನ್ ಬಾವಾ. […]

Continue Reading

ಹೊಲ, ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಎತ್ತು, ಹೊರಿಗಳ ಕಳ್ಳತನ; ಆರು ಮಂದಿ ಕುಖ್ಯಾತ ದನಗಳ್ಳರ ಬಂಧನ

ಆರು ಮಂದಿ ದನಗಳ್ಳರನ್ನು ಶಿರಸಿ ಗ್ರಾಮೀಣ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಲ್ಲರ ಬಿಡಾರದ ಮೋಹನ ಶೇಖಪ್ಪ ಗೊಲ್ಲರ, ಬಸವರಾಜ ಅಮ್ಮಣಪ್ಪ ಗೊಲ್ಲರ, ಅವಿನಾಶ ರುದ್ದಪ್ಪ ಗೊಲ್ಲರ, ಸುರೇಶ ಫಕೀರಪ್ಪ ಕೊಪ್ಪರಶಿಕೊಪ್ಪ ಗೊಲ್ಲರ, ಬಸವರಾಜ ಫಕೀರಪ್ಪ ಗೊಲ್ಲರ, ಅಯೂಬ ಅನೀಮ್ ಸಾಬ ಬಂಧಿತ ಗೋ ಕಳ್ಳರು. ಬಿಳಗೇರಿ ಸರಗುಪ್ಪಾದಲ್ಲಿ ಜ.9 ರಂದು ಗ್ರಾಮದ ನಿವಾಸಿ ರಾಮಚಂದ್ರ ನರಸಿಂಹ ಗೌಡ ಮತ್ತು ಅವರ ಬಸಹೋದರರ ಹೊಲದಲ್ಲಿರುವ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಮತ್ತು […]

Continue Reading

ರಾಜ್ಯದ ವಿದ್ಯುತ್ ಗ್ರಾಹಕರಿಗೆ ಭಾರಿ ಶಾಕ್, ವಿದ್ಯುತ್ ದರ ಹೆಚ್ಚಳಕ್ಕೆ ಚಿಂತನೆ; KERC ಮೊರೆ

ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿ 4,900 ಕೋಟಿ ರೂಪಾಯಿಯಷ್ಟು ನಷ್ಟ ಆಗಿದ್ದು, ಇದನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ತಯಾರಿ ನಡೆದಿದೆ. ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(KERC)ಕ್ಕೆ ವಾರ್ಷಿಕ ಕಾರ್ಯಕ್ಷಮತೆ ವರದಿ ಸಲ್ಲಿಸಿವೆ.2024- 25 ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ್ದು, ಆದಾಯದಲ್ಲಿ 4900 ಕೋಟಿ ರೂ. ಖೋತಾ ಆಗಿದೆ. ಸಮತೋಲನ ಕಾಯ್ದುಕೊಳ್ಳಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಎಸ್ಕಾಂ ಗಳು ಕೆಇಆರ್‌ಸಿಗೆ […]

Continue Reading

ಕುಂಬಳೆ ಟೋಲ್ ಗೇಟ್ ತೆರವು ಹೋರಾಟಕ್ಕೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬೆಂಬಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಅಂತರದ ನಿಯಮ ಪಾಲಿಸಲು ಆಗ್ರಹ: ಮುನೀರ್ ಕಾಟಿಪಳ್ಳ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಆರಂಭಿಸಿರುವುದು ಜನತೆಯ ತೀವ್ರ ಆಕ್ರೋಶಕ್ಕೆ‌ ಕಾರಣವಾಗಿದೆ.‌ ಪ್ರತಿಭಟನೆಗಳು ಭುಗಿಲೆದ್ದಿವೆ.‌ ಮಂಜೇಶ್ವರದ ಶಾಸಕರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ‘ಕರ್ನಾಟಕದ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ತಲಪಾಡಿ ಟೋಲ್ ಗೇಟ್ ನಿಂದ ಕುಂಬಳೆ ಟೋಲ್ ಗೇಟ್ ಗೆ ಇರುವ ಅಂತರ ಕೇವಲ 26 ಕಿ ಮೀ ಮಾತ್ರ, ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್ ಗಳ […]

Continue Reading

ಜಿಲ್ಲೆಯಲ್ಲಿ ಮತ್ತೆ ಚಿಗಿತುಕೊಳ್ಳುತ್ತಿರುವ ಅನೈತಿಕ ಪೊಲೀಸ್ ಗಿರಿ.!

ಗಂಜಿಮಠ ಗೂಡಂಗಡಿಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ದುರ್ಷ್ಕರ್ಮಿಗಳು; ಎಫ್ ಐ ಆರ್ ದಾಖಲು ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಿಗಿತುಕೊಳ್ಳುತ್ತಿದ್ದು, ಬಾಲ ಬಿಚ್ಚುವ ದುರ್ಷ್ಕರ್ಮಿಗಳ ಬಾಲ ಕಟ್ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಖಡಕ್ ಆಫೀಸರ್ಸ್ ಇಲ್ಲದೇ ಇದ್ದರೆ ಇಂತಹ ಕ್ಷುಲ್ಲಕ ಘಟನೆಗಳು ಕೋಮು ಗಲಭೆಗಳಿಗೆ ಕಾರಣವಾಗುತ್ತಿತ್ತು. ಆ ಮಟ್ಟಿಗೆ ಇಲ್ಲಿನ ಪೊಲೀಸ್ ಇಲಾಖೆಯ ಸ್ಥೈರ್ಯವನ್ನು ಮೆಚ್ಚಲೇಬೇಕು. ಗಂಜಿಮಠ ಗಾಂಧಿನಗರ ಬಳಿಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವ, ಜಾತ್ರೆ, ಕಾರ್ಯಕ್ರಮಗಳಿಗೆ […]

Continue Reading