ಕೆಂಪು‌ಕಲ್ಲು ದರ ಇಳಿಕೆಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು; ಸಿಪಿಐಎಂ ಆಗ್ರಹ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಹವಾಲು ಸಭೆ ನಡೆಸಿ, ಕೆಂಪು ಕಲ್ಲಿನ ದರ ನಿಗದಿಯನ್ನು ಜಿಲ್ಲಾಡಳಿತವೇ ಮಾಡಬೇಕು ರಾಜಧನವನ್ನು 257 ರೂ. ಗಳಿಂದ 97 ರೂ. ಗಳಿಗೆ ಇಳಿಕೆ ಮಾಡಿದ ತರುವಾಯವೂ ಕೆಂಪು ಕಲ್ಲು ಬೆಲೆಯನ್ಜು ಎರಡು ಪಟ್ಟು ಏರಿಕೆ ಮಾಡಿರುವ ಕೆಂಪುಕಲ್ಲು ಪಾಯಗಳ ಮಾಲಕರ ನೀತಿ ಕಾಳದಂಧೆಯ ವ್ಯಾಪಾರವನ್ನು ನೆನಪಿಸುವಂತಿದೆ. ಈ ವಿಪರೀತ ದರ ಏರಿಕೆ ಕಡಿಮೆ ಆದಾಯದ ಜನತೆಯ ಮನೆ ಕಟ್ಟುವ ಕನಸನ್ನು ಭಗ್ನಗೊಳಿಸಿದೆ, ಕಟ್ಟಡ ನಿರ್ಮಾಣ ಕಾರ್ಮಿಕರ ದುಡಿಮೆಗೆ ಬರೆ ಎಳೆದಿದೆ. ದ.ಕ. ಜಿಲ್ಲಾಧಿಕಾರಿಗಳು ಈ […]

Continue Reading

ಮುಚ್ಚಿ ಹೋಗಿರುವ ಕನ್ಯಾನ ಪೊಲೀಸ್ ಹೊರಠಾಣೆ ಆರಂಭಿಸಬೇಕು. ಗಡಿಭಾಗದ ಬೆರಿಪದವುನಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಬೇಕು.

ಸರ್ಕಾರಕ್ಕೆ, ಗೃಹ ಇಲಾಖೆಗೆ, ನಾಗರಿಕರ ಒತ್ತಾಯ . ವಿಟ್ಲ : ಅಂತರಾಜ್ಯಗಡಿ ಭಾಗದ ಕನ್ಯಾನದಲ್ಲಿ ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಕೋಮಾ ಸ್ಥಿತಿಗೆ ತಲುಪಿ ನಿರ್ಜೀವಗೊಂಡಿದೆ. 30/01/2021ರಂದು ಲೋಕಾರ್ಪಣೆ ಆಗಿದ್ದ ಕನ್ಯಾನ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಮುಚ್ಚಿ ಹೋಗಿತ್ತು. ಬೆರಿಪದವು ಗಡಿಭಾಗದಲ್ಲಿ ಚೆಕ್ ಪೋಸ್ಟ್ ಒತ್ತಾಯ.ಕೇರಳ ಗಡಿ ಭಾಗದ ಪೆರುವಾಯಿ ಗ್ರಾಮದಲ್ಲೂ ದೋ ನಂಬರ್ ದಂಧೆಯ ಖದೀಮರು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ.ಕೇರಳದಿಂದ ಬೆರಿಪದವು ಮೂಲಕ ಪೆರುವಾಯಿ ಗ್ರಾಮವನ್ನು ಸಂಪರ್ಕಿಸಿ […]

Continue Reading

ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ ಕುಟುಂಬದ BPL ಕಾರ್ಡ್ ರದ್ದು!

ಆಧಾರ್ -ಫ್ಯಾನ್-ಐಟಿ ಡೇಟಾಬೇಸ್ ಗಳು ಲಿಂಕ್ ಆಗಿರುವುದರಿಂದ ಸ್ವಯಂ ಚಾಲಿತವಾಗಿ ರದ್ದಾಗುತ್ತಿದೆ ರೇಷನ್ ಕಾರ್ಡ್ ಗಳು ಒಂದು ಕಡೆ ಗ್ಯಾರಂಟಿ ಕೊಟ್ಟು, ಇನ್ನೊಂದು ಕಡೆ ಕಸಿದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಬಿಪಿಎಲ್‌ ಹಾಗೂ ಅಂತ್ಯೋದಯ ರೇಷನ್‌ ಕಾರ್ಡ್‌ಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವನಾಡಿ. ಆದರೆ ಈಗ ಹೊಸ ಸಮಸ್ಯೆ ತಲೆದೋರಿದೆ. ಕುಟುಂಬದ ಒಬ್ಬರು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೂ ಸಾಕು ಇಡೀ ಕುಟುಂಬದ ರೇಷನ್ ಕಾರ್ಡ್‌ನ್ನು ಸಾಫ್ಟ್‌ವೇ‌ರ್ ‘ಅನರ್ಹ’ ಎಂದು ಗುರುತಿಸಿ ರದ್ದುಗೊಳಿಸುತ್ತಿದೆ. ಆಧಾರ್-ಪ್ಯಾನ್- ಐಟಿ ಡೇಟಾಬೇಸ್‌ಗಳು […]

Continue Reading

ಯಕ್ಷಗಾನ ಕಲಾವಿದ ಈಶ್ವರ ಗೌಡ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಉಡುಪಿ : ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮುಗಿಸಿ ಚೌಕಿಗೆ ನಿರ್ಗಮಿಸುತ್ತಿದ್ದಂತೆ ಈಶ್ವರ ಗೌಡರು ( 51) ಹೃದಯಾಘಾತದಿಂದ ನಿನ್ನೆ ನಿಧನರಾದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಈಶ್ವರ ಗೌಡರು ಬುಧವಾರ ರಾತ್ರಿ ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥ ಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ […]

Continue Reading

ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್​​ಗೆ ಬೀಗ ಜಡಿದ ಅಧಿಕಾರಿಗಳು

ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರಿ ಪ್ರತಿಷ್ಠಿತ ಮಾಲ್​ಗಳಲ್ಲಿ ಒಂದಾದ ಮಂತ್ರಿಮಾಲ್​​ಗೆ ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ.ಈ ಹಿಂದೆಯೂ ಕೋಟ್ಯಾಂತರ ತೆರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಾಲ್ ನ್ನು ಸೀಜ್ ಮಾಡಲಾಗಿತ್ತು. ಈ ಬಾರಿಯೂ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೀಗ ಜಡಿದಿದ್ದಾರೆ. ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಮಾಲ್​ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. ಮಂತ್ರಿ ಮಾಲ್’ಗೆ ಬೀಗ ಹಾಕಿದ್ದರಿಂದ ಮಾಲ್ ಸಿಬ್ಬಂದಿಗಳು ಕಂಗಾಲಾಗಿದ್ದಾರೆ. […]

Continue Reading

ಸುಖಾನಂದ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಗೆ ಆಶ್ರಯ ನೀಡಿದ ಅಡ್ಡೂರಿನ ಸಲಾಂ 19 ವರ್ಷಗಳ ನಂತರ ಖಾಕಿ ಬಲೆಗೆ

2006 ಡಿಸೆಂಬರ್ 1 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿಯನ್ನು ಗುರುಪುರ ಕಬೀರ್ ಹಾಗೂ ಆತನ ಸಹಚರರು ಸೇರಿಕೊಂಡು ಹತ್ಯೆ ಮಾಡಿದ್ದರು. ಸುಖಾನಂದ ಶೆಟ್ಟಿ ಹತ್ಯೆ ಆ ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಯಾನೆ ಅಡ್ಡೂರು ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ತಮ್ಮ ಅಡ್ಡೂರು ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಎರಡು […]

Continue Reading

ಮಂಗಳೂರು: ವಕೀಲರಿಗೆ ನಿಂದನೆ ಆರೋಪ; ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಪೊಲೀಸ್ ಆಯುಕ್ತರಿಗೆ, ಮಾನವ ಹಕ್ಕು ಆಯೋಗಕ್ಕೆ, ಡಿಜಿಪಿಗೆ ದೂರು

ಡಿವೈಎಫ್ಐ ಮುಖಂಡರು, ವಕೀಲರಾಗಿರುವ ನಿತಿನ್ ಕುತ್ತಾರ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃತ್ತಿ ಧರ್ಮಕ್ಕೆ ಅಪಮಾನ ಮಾಡಿರುವ ಆರೋಪದಲ್ಲಿ ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷರಾಗಿರುವ ಬಾಲಕೃಷ್ಣ ಎಂಬವರ ವಿರುದ್ಧ ಪೊಲೀಸ್ ಆಯುಕ್ತರಿಗೆ, ಮೇಲಾಧಿಕಾರಿಗಳಿಗೆ, ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಮಂಗಳೂರು ನಗರದಲ್ಲಿ ಏಳೆಂಟು ವರ್ಷಗಳಿಂದ ವಕೀಲ ವೃತ್ತಿ ನಡೆಸಿಕೊಂಡು ಬರುವ ಯುವ ವಕೀಲ ನಿತಿನ್ ಕುತ್ತಾರ್ ನವೆಂಬರ್ 13 ರಂದು ಕೌಟುಂಬಿಕ ವಿಚಾರವಾಗಿ ಕಕ್ಷಿದಾರರ ಪರವಾಗಿ ಮಂಗಳೂರು ನಗರ ಮಹಿಳಾ ಠಾಣೆಗೆ ಭೇಟಿ […]

Continue Reading

ಪತ್ನಿಗೆ ಜೀವನಾಂಶ ನೀಡಲು ಲುಕ್ ಔಟ್ ನೋಟಿಸ್ ಆದೇಶ ಹೊರಡಿಸಿದ್ದ ಮಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಿದ ಹೈಕೋರ್ಟ್

ಸಿ ಆರ್ ಪಿಸಿ ಸೆಕ್ಷನ್ 125ರಡಿ ಪತ್ನಿಗೆ ಜೀವನಾಂಶ ನೀಡಿದ್ದ ಆದೇಶ ಪಾಲನೆ ಮಾಡದ ಪತಿ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯಕ್ಕೆ ಆ ರೀತಿ ಲುಕ್ ಔಟ್ ನೋಟಿಸ್ ನೀಡುವ ಯಾವುದೇ ಅಧಿಕಾರವಿಲ್ಲವೆಂದು ಮಹತ್ವದ ತೀರ್ಪು ನೀಡಿದೆ. ಮಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಂಗಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಅರ್ಜಿಯನ್ನು […]

Continue Reading

National Level Beauty Pageant ನ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿ ಪಡೆದುಕೊಂಡ ಉಡುಪಿಯ ಸಚಿತ ರಾವ್

ಉಡುಪಿ : ಉಡುಪಿಯ ಪುಟಾಣಿ ಪ್ರತಿಭೆಯಾದ ಸಚಿತ ರಾವ್ ಅವರು ಇತ್ತೀಚೆಗೆ ನಡೆದ ಎರಡು ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ನವೆಂಬರ್ 15 ರಂದು ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದ National Level Beauty Pageant ನ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ ಮಲೆನಾಡು 2025 ಬ್ಯೂಟಿ ಕಾಂಟೆಸ್ಟ್‌ನಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಡುಪಿಯ […]

Continue Reading

ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರ 2 ಕೃತಿಗಳು ಲೋಕಾರ್ಪಣೆ

ಯಕ್ಷಗಾನ ಕ್ಷೇತ್ರ ಕಲಾವಿದರು ಹಾಗೂ ವಿದ್ವಾಂಸರ ಸಂಗಮ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಉಡುಪಿ : ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರು ಯಕ್ಷಗಾನದ ಬಗ್ಗೆ 7 ಕೃತಿಗಳನ್ನು ಬರೆದು ಬಿಡುಗಡೆ ಮಾಡಿರುವುದು ಓರ್ವ ಕಲಾವಿದನಾಗಿ ಯಕ್ಷಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಉದ್ಘಾಟನೆ […]

Continue Reading