ಅಡ್ಡೂರು: ಗರೋಡಿ ಮನೆ ಅಂಗಳದಲ್ಲಿ ಯಶಸ್ವಿಯಾಗಿ ಜರುಗಿದ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ

ಬ್ಯಾರಿ ಕಲಾರಂಗ ಮೈಕಾಲ ಇದರ ವತಿಯಿಂದ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಅಡ್ಡೂರು ಗರೋಡಿ ಮನೆ ಅಂಗಳದಲ್ಲಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪೂರ್ವಜರ ಕಾಲದ ನೆನಪುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಮೂಡಿಬಂತು. ಮದ್ರಸ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷರಾದ […]

Continue Reading

ಅನಿವಾಸಿ ಕನ್ನಡಿಗರಿಗೆ ಭರವಸೆ ಕೊಟ್ಟ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿ ಯಾವಾಗ.? ಸರಕಾರವನ್ನು ಪ್ರಶ್ನಿಸಿದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

ಯುಎಇಯಲ್ಲಿ ಕನ್ನಡ ಭವನಕ್ಕೆ 5 ಕೋಟಿ ದೇಣಿಗೆ ಘೋಷಿಸಿದ ಕೊಲಾಸೊ. 2.5 ಕೋಟಿ ದೇಣಿಗೆ ಘೋಷಿಸಿದ ಪ್ರವೀಣ್ ಕುಮಾರ್ ಶೆಟ್ಟಿ ದುಬೈ: ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ರಾಜ್ಯ ಸರಕಾರವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಪ್ರಶ್ನಿಸಿದ್ದಾರೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ವಿಧಾನ ಪರಿಷತ್ ಗೆ ನೂತನ […]

Continue Reading

ಶುಲ್ಕ ಪಾವತಿಗೆ ದಂಡ ವಸೂಲಿ ಶ್ರೀದೇವಿ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲು ಎಸ್ ಎಫ್ ಐ, ಆಗ್ರಹ

ಮಂಗಳೂರು: ನಗರದ ಶ್ರೀ ದೇವಿ ಕಾಲೇಜಿನ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಪಾವತಿಗೆ ವರ್ಷಾಂತ್ಯಕ್ಕೂ ಮೊದಲೇ ವಿಳಂಬ ಪಾವತಿಯ ಹೆಸರಿನಲ್ಲಿ ದಿನಕ್ಕೆ 100 ರೂಪಾಯಿಯಂತೆ ದಂಡ ವಸೂಲಿ ಮಾಡುತ್ತಿದ್ದು, ವಿಪರೀತ ದಂಡ ಕಟ್ಟಲು ಕಾಲೇಜು ಮಂಡಳಿ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಶಿಕ್ಷಣ ನೀತಿಗೆ ವಿರುದ್ಧವಾದುದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(SFI) ಆರೋಪಿಸಿದೆ. ವಿದ್ಯಾರ್ಥಿಗಳು ಶ್ರೀದೇವಿ ಕಾಲೇಜಿನ ದಂಡ ಪಾವತಿ ನೀತಿಯ ವಿರುದ್ಧ ತರಗತಿ ಬಹಿಷ್ಕರಿಸಿ ನಡೆಸಿರುವ ಹೋರಾಟವನ್ನು ಎಸ್ ಎಫ್ ಐ ಮತ್ತು ಡಿವೈಎಫ್ಐ ಬೆಂಬಲಿಸಿದ್ದು ಮಂಗಳೂರು […]

Continue Reading

ಪೊಲೀಸರು ಸೀಜ್​ ಮಾಡಿದ್ದ ಕಾರಿನೊಳಗಿತ್ತು ಕೋಟಿಯಾಂತರ ಮೌಲ್ಯದ ಸೊತ್ತುಗಳು

ಪೊಲೀಸರು ಸೀಜ್​ ಮಾಡಿದ್ದ ಕಾರು ಒಂದು ತಿಂಗಳಿನಿಂದ ಪೊಲೀಸ್​ ಠಾಣೆಯ ಮುಂಬಾಗ ಬಿಸಿಲು, ಮಳೆ ಎನ್ನದೆ ಕೊಳೆಯುತ್ತಿತ್ತು. ಆದರೆ ಕಾರಿನೊಳಗಿತ್ತು ಲಕ್ಷಾಂತರ ರೂಪಾಯಿ ಬೆಳೆಬಾಳುವ ಹಣ, ಚಿನ್ನಾಭರಣಗಳು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಜ್ಯದ ಮಾಜಿ ಶಿಕ್ಷಣ ‌ಸಚಿವ ದಿ. ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್​ನ್ನು ಸಾಂಗ್ಲಿ ಪೊಲೀಸರ ನೆರವು ಪಡೆದು ಚಿಕ್ಕಮಂಗಳೂರು ಪೊಲೀಸರು ಬಂಧಿಸಿದ್ದರು. ಆ ವೇಳೆ ಆರೋಪಿಗಳು ಎಸ್ಕೇಪ್​ ಆಗಲು ಬಳಸಿದ್ದ ಕಾರನ್ನು ಸೀಜ್​ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯ […]

Continue Reading

ಗೋಹತ್ಯೆ‌ ನಿಷೇಧ ಕಾಯ್ದೆ ನೆಪ; ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ.

ಉತ್ತರಿಸಲು ಕಾಲಾವಕಾಶ ನೀಡದೆ, ನೋಟೀಸು ನೀಡಿದೆ, ವಾಸದ ಮನೆ ಜಪ್ತಿ ಮಾಡಿರುವುದು ಸಮರ್ಥನೀಯವಲ್ಲ, ಕಾನೂನು ಬದ್ದವೂ‌ ಅಲ್ಲ: ಮುನೀರ್ ಕಾಟಿಪಳ್ಳ ಗೋಹತ್ಯೆ‌ ನಿಷೇಧ ಕಾಯ್ದೆ ನೆಪ ಮುಂದಿಟ್ಟು ಧರ್ಮಸ್ಥಳ ಠಾಣಾ ಪೊಲೀಸರು, ದನ ಸಾಗಾಟಗಾರರಿಗೆ ಜಾನುವಾರು ಮಾರಾಟ ಮಾಡಿದ ಜೊಹರಾ ಎಂಬವರು ವಾಸ ಇದ್ದ, ಆಕೆಯ ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ. FIR ನಲ್ಲಿ ಹೆಸರಿಲ್ಲದೆ, ಮನೆಯ ಆವರಣದಲ್ಲಿ ಜಾನುವಾರು ಹತ್ಯೆಯ ಯಾವ ಸಾಕ್ಷ್ಯ, ಆಧಾರವೂ ಇಲ್ಲದೆ, ಉತ್ತರಿಸಲು ಕಾಲಾವಕಾಶ […]

Continue Reading

ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆ ಸೃಷ್ಠಿಸಿ ವಂಚಿಸಿದ ಪ್ರಕರಣ, ಆರೋಪಿಯ ಬಂಧನ.

ಪುತ್ತೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಪತ್ರಗಳನ್ನು ನೀಡಿ, ಆರೋಪಿಯೊಬ್ಬನಿಗೆ ಜಾಮೀನು ಪಡೆಯಲು ವಂಚನೆ ಮಾಡಿದಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ನಂಬಿಸಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 84/2025 ಪ್ರಕರಣ ದಾಖಲಾತ್ತು. ಪ್ರಕರಣದಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಪಿರ್ಯಾದುದಾರರೆಂದು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯಕ್ಕೆ […]

Continue Reading

ಕಂಬಳ ಪ್ರೇಮಿ, ಉದ್ಯಮಿ ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಪುತ್ರ ಅಭಿಷೇಕ್ ಮೃತದೇಹ ನದಿ ಕಿನಾರೆಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ?

ಕಳೆದೆರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ, ಕಂಬಳ ಪ್ರೇಮಿ, ಉದ್ಯಮಿ ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಅವರ ಸುಪುತ್ರ ಅಭಿಷೇಕ್ ಆಳ್ವ ಅವರ ಮೃತದೇಹ ಇಂದು ಮೂಲ್ಕಿ ಬಪ್ಪನಾಡು ನದಿ ತೀರದಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದಷ್ಟೇ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡಿಕೊಂಡಿದ್ದ ಅಭಿಷೇಕ್ ಆಳ್ವ ಆ ನಂತರ ಡಿಢೀರಾಗಿ ನಾಪತ್ತೆಯಾಗಿದ್ದರು. ಮೂಲ್ಕಿ ಬಪ್ಪನಾಡು ಬಳಿ ಕಾರು ಪತ್ತೆಯಾಗಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರಿನಲ್ಲಿ ಆತ ಬಳಸುತ್ತಿದ್ದ ವಾಚ್ ಪತ್ತೆಯಾಗಿತ್ತು. […]

Continue Reading

ಹಳೇ ಹುಲಿಗಳು ಕಾಂಗ್ರೆಸ್ ತೆಕ್ಕೆಗೆ.! ಅಧಿಕಾರಿ, ಬಾವಾ ಬ್ರದರ್ಸ್ ಕಾಂಗ್ರೆಸ್ ಸೇರ್ಪಡೆಗೆ ಕೌಂಟ್ ಡೌನ್.!

ಕರಾವಳಿಯ ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಹಿಂದುತ್ವದ ತವರು ನೆಲದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಮಾಸ್ಟರ್ ಪ್ಲ್ಯಾನ್ ಈಗಿಂದಲೇ ಸಿದ್ಧಗೊಂಡಂತಿದೆ. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಖಾಡಕ್ಕೆ ಇಳಿದಿರುವ ಲಕ್ಷಣ ಗೋಚರಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಡಿಕೆಶಿ ಮುಖ್ಯಮಂತ್ರಿಯಾಗಲು ರಣತಂತ್ರಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ಗಾದಿಗೇರಲು ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಹೀಗೆ ಡಜನ್ ಗಟ್ಟಲೆ ನಾಯಕರು ಕ್ಯೂನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಿಎಂ […]

Continue Reading

“ಪ್ರಜಾಪ್ರಭುತ್ವದ ಕೊಲೆ”ಯ ಪ್ರಮುಖ ಅಪರಾಧಿಗಳು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು: ರಾಹುಲ್ ಗಾಂಧಿ

ನವದೆಹಲಿ: ಬಿಹಾರದಿಂದ “ವೋಟ್ ಚೋರಿ”ಯ ಪುರಾವೆಗಳನ್ನು ಬಲಪಡಿಸುವ ವರದಿಗಳು ಬಂದಿವೆ ಎಂದು ಹೇಳಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ “ಪ್ರಜಾಪ್ರಭುತ್ವದ ಕೊಲೆ”ಯ ಪ್ರಮುಖ ಅಪರಾಧಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು “ಸಂವಿಧಾನದ ವಿರುದ್ಧದ ಅತಿದೊಡ್ಡ ದ್ರೋಹ” ಮಾಡುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತ ಚಲಾಯಿಸಿದ ಅನೇಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಚಲಾಯಿಸುತ್ತಿದ್ದಾರೆ ಎಂದು ಗಾಂಧಿ ಆರೋಪಿಸಿದರು. ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನು […]

Continue Reading

ಜನವರಿ 01 2026 ರಿಂದ ನಿಷ್ಕ್ರಿಯಗೊಳ್ಳಲಿದೆ ಪ್ಯಾನ್ ಕಾರ್ಡ್: ಕೇಂದ್ರ ಸರ್ಕಾರ

ಡಿಸೆಂಬರ್ 31, 2025 ರೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನಮ್ಮ ದಿನನಿತ್ಯದ ಹಣಕಾಸು ವಹಿವಾಟುಗಳಲ್ಲಿ ಅತ್ಯಂತ ಅಗತ್ಯವಾದ ದಾಖಲೆಯಾಗಿದೆ ಪ್ಯಾನ್ ಕಾರ್ಡ್. ಟ್ಯಾಕ್ಸ್ ಸಲ್ಲಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ, ಉನ್ನತ ಮೌಲ್ಯದ ವಹಿವಾಟುಗಳನ್ನು ಮಾಡಲು ಪ್ಯಾನ್ ಕಾರ್ಡ್‌ ಬಹಳ ಪ್ರಮುಖವಾದ ದಾಖಲೆಯಾಗಿದೆ. ಅದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡದಿದ್ದರೆ, ಅದು ಜನವರಿ 01 2026 ರಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಡಿಸೆಂಬರ್ 31, 2025ರೊಳಗೆ ಲಿಂಕ್ ಪ್ರಕ್ರಿಯೆ […]

Continue Reading