ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಇಂದಿನಿಂದ ಹೊಸ ‘ಕ್ಯಾಪ್’

ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ ಸ್ಟೇಬಲ್‌ಗಳು ಇಂದಿನಿಂದ ಹೊಸ ‘ಕ್ಯಾಪ್’ ಧರಿಸಲಿದ್ದಾರೆ. ಈ ಮೂಲಕ ಹಲವಾರು ವರ್ಷಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಚೋಚ್ ಕ್ಯಾಪ್‌ಗೆ ಪೊಲೀಸ್‌ ಇಲಾಖೆ ಅಂತಿಮ ವಿದಾಯ ಹೇಳಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಇಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಮಾಡಲಿದ್ದಾರೆ. ತೆಲಂಗಾಣ ಮಾದರಿಯಲ್ಲೇ […]

Continue Reading

ರಾಜ್ಯ ಮಟ್ಟದ ಪಿಯು ಟೇಕ್ವಾಂಡೋ ಚಾಂಪಿಯನ್‌ಶಿಪ್‌; ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಂಚಿನ ಪದಕ

ದಕ್ಷಿಣ ಕನ್ನಡ ಜಿಲ್ಲಾ ಟೇಕ್ವಾಂಡೋ ತಂಡವು 2025-26ರ ರಾಜ್ಯ ಮಟ್ಟದ ಪ್ರಿ-ಯೂನಿವರ್ಸಿಟಿ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಮನ್ನಣೆ ಗಳಿಸಿತು, ಎರಡು ಕಂಚಿನ ಪದಕಗಳನ್ನು ಗಳಿಸಿತು. ಈ ಚಾಂಪಿಯನ್‌ಶಿಪ್ ಚಿಕ್ಕಬಳ್ಳಾಪುರದ ಅಗಲಗುರ್ಕಿಯ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಬಿಜಿಎಸ್ ರೂರಲ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ಕರ್ನಾಟಕದಾದ್ಯಂತ ಪಿಯು ಕಾಲೇಜು ಕ್ರೀಡಾಪಟುಗಳು ಭಾಗವಹಿಸಿದ್ದರು. ಬಾಲಕರ ಸ್ಪರ್ಧೆಯಲ್ಲಿ, ತುಂಬೆಯ ಬಿಎ ಪಿಯು ಕಾಲೇಜಿನ ಮೊಹಮ್ಮದ್ ಅಯಾನ್, ಶಿಸ್ತಿನ ಕೌಶಲ್ಯ ಮತ್ತು ಬಲವಾದ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸುವ ಮೂಲಕ 75 ಕೆಜಿ ವಯಸ್ಸಿನೊಳಗಿನ ವಿಭಾಗದಲ್ಲಿ ಕಂಚಿನ ಪದಕವನ್ನು […]

Continue Reading

ಹೊರಗೆ ಆರ್ ಎಸ್ ಎಸ್ ವಿರುದ್ಧ ಕಿಡಿ; ಒಳಗಡೆ ಆರ್ ಎಸ್ ಎಸ್ ಅಪ್ಪಿ ಮುದ್ದಾಡುತ್ತಿರುವ ಕಾಂಗ್ರೆಸ್ ಸೇನಾನಿಗಳು.!

ಕಾಂಗ್ರೆಸ್ ಸರ್ಕಾರದಲ್ಲಿ ಲಾಭದಾಯಕ ಹುದ್ದೆಗಳು ಆರ್ ಎಸ್ ಎಸ್ ಪಾಲು.! ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳ ನಿರ್ಬಂಧ ಬಗ್ಗೆ ಭಾರೀ ಸದ್ದು ಗದ್ದಲ ಕೇಳಿ ಬರುತ್ತಿರುವ ಹೊತ್ತಿಗೆ ಕಾಂಗ್ರೆಸ್ ಪಕ್ಷವನ್ನು ಲಗಾಡಿ ತೆಗೆಯುವವರಾರು.? ಅನ್ನುವ ಬಗ್ಗೆ ಚರ್ಚೆಗಳು ನಡೆಯತೊಡಗಿದೆ. ಕಾಂಗ್ರೆಸ್ ನಾಯಕರು ಮೃದು ಹಿಂದುತ್ವದ ಕಡೆಗೆ ವಾಲಿರುವ ಪರಿಣಾಮ ಕಾಂಗ್ರೆಸ್ ಗೆ ಸರಣಿ ಸೋಲಾಗುತ್ತಿದೆ. ಬಿಜೆಪಿಯ ಸೈದ್ಧಾಂತಿಕತೆಯ ವಿರುದ್ಧ ಸಮರ ಸಾರಿ ಪಕ್ಷವನ್ನು ಬೆಳೆಸಬೇಕಾದ ಕಾಂಗ್ರೆಸ್ಸಿಗರೇ ಸ್ವತ‌ಹ ಬಿಜೆಪಿಗರಾಗಿ ಪರಿವರ್ತಿತರಾಗುತ್ತಿರುವುದು ಕಾಂಗ್ರೆಸ್ ದೊಡ್ಡ […]

Continue Reading

ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್-ಜಮೀರ್?, ಕೆಪಿಸಿಸಿ ಪಟ್ಟಕ್ಕೆ ಕೃಷ್ಣ ಭೈರೇಗೌಡ.?

ಕುಮಾರಣ್ಣನಿಗೆ ಅಮಿತ್ ಶಾ ಸಿಗ್ನಲ್ಲು…, ಬಿಜೆಪಿಯಲ್ಲಿ ಜಿಬಿಎ ಕಿರಿಕಿರಿ… ✍️. ಆರ್.ಟಿ.ವಿಠ್ಠಲಮೂರ್ತಿ ಮುಂದಿನ ತಿಂಗಳ ಮೂರನೇ ವಾರ ದಿಲ್ಲಿ ದಂಡಯಾತ್ರೆಗೆ ಹೊರಡಲಿರುವ ಸಿಎಂ ಸಿದ್ಧರಾಮಯ್ಯ ವರಿಷ್ಟರ ಮುಂದೆ ಹೊಸ ಪ್ರಪೋಸಲ್ಲು ಮಂಡಿಸಲಿದ್ದಾರೆ. ಈ ಪ್ರಪೋಸಲ್ಲಿಗೆ ಒಪ್ಪಿಗೆ ಸಿಕ್ಕರೆ ಇನ್ನಿಬ್ಬರು ನಾಯಕರು ಕರ್ನಾಟಕದ ಉಪಮುಖ್ಯಮಂತ್ರಿಗಳಾಗಲಿದ್ದಾರೆ.ಸಿದ್ಧರಾಮಯ್ಯ ಅವರ ಆಪ್ತರ ಪ್ರಕಾರ: ಉಪಮುಖ್ಯಮಂತ್ರಿ ಪಟ್ಟಕ್ಕೆ ಬರಲಿರುವ ಈ ನಾಯಕರ ಪೈಕಿ ಒಬ್ಬರು ದಲಿತ ನಾಯಕ ಪ್ರಿಯಾಂಕ್ ಖರ್ಗೆ. ಮತ್ತೊಬ್ಬರು ಮುಸ್ಲಿಂ ನಾಯಕ ಜಮೀರ್ ಅಹ್ಮದ್. ಅಂದ ಹಾಗೆ ಉಪಮುಖ್ಯಮಂತ್ರಿ ಪಟ್ಟಕ್ಕೆ ಈ […]

Continue Reading

ರಾಜಾಂಗಣದಲ್ಲಿ ಯಕ್ಷ ಪಂಚಮಿ ಸಮಾರೋಪ : ಕಲಾವಿದ ಅಜ್ರಿ ಗೋಪಾಲ ಗಾಣಿಗರಿಗೆ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿ ಪ್ರದಾನ

ಯಕ್ಷಗಾನಕ್ಕೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕೊಡುಗೆ ಅಭಿನಂದನೀಯ : ಪರ್ಯಾಯ ಪುತ್ತಿಗೆ ಶ್ರೀ ಉಡುಪಿ : ಯಕ್ಷಗಾನ ಕಲೆಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂದಿನ ಪ್ರಶಸ್ತಿ ಪ್ರಧಾನ ಯಕ್ಷ ಕಲೆಗೆ ವಿಶೇಷ ಉತ್ತೇಜನ ಕೊಟ್ಟ ಹಾಗೆ. ತಲ್ಲೂರು ಶಿವರಾಮ ಶೆಟ್ಟಿ ಎಂದರೆ ಯಕ್ಷಗಾನ ಎಂಬುವುದೇ ಅಲ್ಲಿ ಪ್ರಸಿದ್ದಿಯಾಗಿದೆ. ಯಕ್ಷಗಾನ ಕಲೆಗೆ ಅವರು ನೀಡುತ್ತಿರುವ ಉತ್ತೇಜನ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಚಿರಸ್ಥಾಯಿಯಾಗಲಿ ಎಂದು ಪರ್ಯಾಯ ಪುತ್ತಿಗೆ […]

Continue Reading

ದ್ವೇಷ ಭಾಷಣ, ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ದ ಪ್ರಕರಣ ದಾಖಲು.

ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾಡಿದ ಭಾಷಣ ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟುಮಾಡುವಂತಿದೆ ಅವರು ಹಿಂದೂ-ಮುಸ್ಲಿಂ ಸಮುದಾಯಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ, ಮತದಾರರ ಸಂಖ್ಯೆಯ ಉಲ್ಲೇಖ ಮಾಡಿ ಧಾರ್ಮಿಕ ವೈಮನಸ್ಸು ಉಂಟುಮಾಡಿದ್ದಾರೆ. ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿರುವುದಾಗಿದೆ ಎಂದು ದೂರುದಾರರಾದ ಪುತ್ತೂರು ತಾಲೂಕು ಈಶ್ವರಿ ಪದ್ಮುಂಜ ಎಂಬವರು ದೂರು ನೀಡಿರುತ್ತಾರೆ. ಅವರ ದೂರಿನ್ವಯ ದಿನಾಂಕ: 25-10-2025 ರಂದು […]

Continue Reading

ಕೋಮು ದ್ವೇಷ ಭಾಷಣ, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ದೂರು ದಾಖಲು

ಪುತ್ತೂರು: ದೀಪಾವಳಿ ಸಂಭ್ರಮ ಸಾರ್ವಜನಿಕ ಸಮಾರಂಭವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ. ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪಾವಳಿ ಸಂಭ್ರಮ ಧಾರ್ಮಿಕ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿ, ಅವರ ಘನತೆಗೆ ಧಕ್ಕೆ ತರುವಂತೆ, ಗರ್ಭಿಣಿಯರ ವಿರುದ್ದ ಹಿಂಸೆಗೆ ಪ್ರೇರೆಪಿಸುವಂತೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ದ್ವೇಷ […]

Continue Reading

ಮದುವೆಯಾಗುವ ಭರವಸೆ ನೀಡಿ, ಮಹಿಳೆ ಮೇಲೆ ಅತ್ಯಾಚಾರ; ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಪ್ರಕರಣ ದಾಖಲು, ಎಎಸ್ಐ ಅಮಾನತು

ಮದುವೆಯಾಗುವ ಭರವಸೆ ನೀಡಿ, ಮಹಿಳೆ ಮೇಲೆ ಅತ್ಯಾಚಾರ ಆರೋಪದ ಅಡಿಯಲ್ಲಿ ಡಿಜೆ ಹಳ್ಳಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೂರ್ವ ವಿಭಾಗದ ಗೋವಿಂದಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಇನ್ಸ್ ಪೆಕ್ಟರ್ ಸುನಿಲ್ ಮತ್ತು ಎಎಸ್‌ಐ ಪ್ರಕಾಶ್ ರಾಥೋಡ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕರ್ತವ್ಯ ಲೋಪ ಆರೋಪದಡಿ ಪ್ರಕಾಶ್ ರಾಥೋಡ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಪಸಂಖ್ಯಾತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ರಿಜಿಸ್ಟ್ರಾರ್ ಮ್ಯಾರೇಜ್ ಆಗುವುದಾಗಿ […]

Continue Reading

ಸುರತ್ಕಲ್: ಕಾನಾ ಬಳಿ ಯುವಕರಿಬ್ಬರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ ಬೇಧಿಸಿದ ಸುರತ್ಕಲ್‌ ಪೊಲೀಸರು

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೋಲೀಸರು ದಸ್ತಗಿರಿ ಮಾಡಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ಫಿಯಾಗಿರುತ್ತಾರೆ. 23-10-2025 ರಂದು ರಾತ್ರಿ ಸುಮಾರು 10:30 ಗಂಟೆಗೆ ಸುರತ್ಕಲ್ ಕಾನಾ ಬಳಿಯ ದೀಪಕ್ ಬಾರ್ ಬಳಿಯಲ್ಲಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರಿಬ್ಬರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿoದ ಇರಿದು […]

Continue Reading

ಸ್ನೇಹಪರ ವ್ಯಕ್ತಿತ್ವದ ಮಂಗಳೂರು ತಾ.ಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಮುಹಮ್ಮದ್ ಸಿರಾಜು ಉಳಾಯಿಬೆಟ್ಟು ವಿಧಿವಶ

ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಸಿರಾಜ್ ಉಳಾಯಿಬೆಟ್ಟು ಅಲ್ಪಕಾಲದ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಸಿರಾಜುದ್ದೀನ್ ‘ಸಿರಾಜ್ ಮೋನು’ ಎಂದೇ ಜನಪ್ರಿಯರಾಗಿದ್ದರು. ಪ್ರಸ್ತುತ ಗುರುಪುರ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರಾಗಿಯೂ ಗುರುತಿಸಿಕೊಂಡಿದ್ದರು. ವೃತ್ತಿಯಲ್ಲಿ ಮಾವಿನ ವ್ಯಾಪಾರ ನಡೆಸುತ್ತಿದ್ದ ಸಿರಾಜುದ್ದೀನ್ ಎಲ್ಲರೊಂದಿಗೆ ಅತ್ಯಂತ ಆಪ್ತತೆಯಿಂದ ಬೆರೆಯುತ್ತಿದ್ದರು. ರಾಜಕಾರಣದ ಬಗ್ಗೆ ಹೆಚ್ಚು […]

Continue Reading