ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್ ಸ್ಟೇಬಲ್‌ಗಳು ಇಂದಿನಿಂದ ಹೊಸ ‘ಕ್ಯಾಪ್’ ಧರಿಸಲಿದ್ದಾರೆ. ಈ ಮೂಲಕ ಹಲವಾರು ವರ್ಷಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಚೋಚ್ ಕ್ಯಾಪ್‌ಗೆ ಪೊಲೀಸ್ ಇಲಾಖೆ ಅಂತಿಮ ವಿದಾಯ ಹೇಳಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಇಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಮಾಡಲಿದ್ದಾರೆ.

ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯೆಯಲ್ಲಿ ಪ್ರಿಂಟ್ ಮಾಡಲಾಗಿದೆ. ಎಎಸ್‌ಐ ಸೇರಿದಂತೆ ಮೇಲಾಧಿಕಾರಿಗಳು ಈ ಹಿಂದಿನಂತೆಯೇ ಖಾಕಿ ಬಣ್ಣದ ಕ್ಯಾಪ್ ಧರಿಸಲಿದ್ದಾರೆ. ಪಿಸಿ, ಎಚ್.ಸಿ ಮಟ್ಟದ ಸಿಬ್ಬಂದಿಗಳ ಕ್ಯಾಪ್ ಮಾತ್ರ ಬದಲಾವಣೆ ಮಾಡಲಾಗಿದೆ.
