ಬಾಲಕಿಯ ಮೃತದೇಹ ಮನೆಗೆ ಕೊಂಡೊಯ್ಯುತ್ತಿರುವಾಗ ಕಿಡಿಗೇಡಿಗಳಿಂದ ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿ, ರಸ್ತೆ ಮದ್ಯೆ ತಡೆ, ಪ್ರಕರಣ ದಾಖಲು

ಹೆಜ್ಜೇನು ಕಡಿತದಿಂದ ಮೃತಪಟ್ಟ ಬಾಲಕಿಯ ಮೃತದೇಹವನ್ನು ಮನೆಗೆ ಕೊಂಡೊಯ್ಯುತ್ತಿರುವಾಗ ಕಿಡಿಗೇಡಿಗಳು ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿ, ರಸ್ತೆ ಮದ್ಯೆ ತಡೆದು ನಿಲ್ಲಿಸಿದ ಘಟನೆ ಪೆರ್ನೆ- ಕಡಂಬು ಎಂಬಲ್ಲಿ ನಡೆದಿದೆ. ದಿನಾಂಕ 12-10-2025 ರ ರಾತ್ರಿ 12:30 ಗಂಟೆಗೆ, ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ, ಶವ ಸಾಗಿಸುತ್ತಿದ್ದ KA-21 AE-3033 ಅಂಬುಲೆನ್ಸ್‌ ಅನ್ನು ಬೊಲೆರೋ ವಾಹನ (ನಂ: KA 19 AE 7322) ಹಿಂಬದಿಯಿಂದ ಓವರ್‌ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರಮವಾಗಿ ತಡೆದ ಘಟನೆ ನಡೆದಿದೆ. […]

Continue Reading

ಕೆಂಪು ಕಲ್ಲು ಮತ್ತು ಮರಳು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಮಂಗಳವಾರದಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನೆಯು ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ತನಕ ನಡೆಯಿತು. ಪ್ರತಿಭಟನೆಯನ್ನು ಉದ್ಘಾಟಿಸುತ್ತಾ ಫೆಡರೇಶನ್ ರಾಜ್ಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು ಮಾತನಾಡುತ್ತಾ ಲಕ್ಷಾಂತರ ಜನತೆಗೆ ಸಂಬಂಧಿಸಿ ಆಳುವ […]

Continue Reading

ಉಡುಪಿಯ ಸಾಂಸ್ಕೃತಿಕ ಹರಿಕಾರ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75ರ ಅಭಿನಂದನೆ

ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಉಡುಪಿಯ ಸಾಂಸ್ಕೃತಿಕ ಹರಿಕಾರ ಎಂದೇ ಖ್ಯಾತರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ಭಾನುವಾರ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಕುಟುಂಬದ ಫ್ಯಾಮಿಲಿ ವೈದ್ಯ ಡಾ. ಆರ್.ಎನ್.ಭಟ್ ಅವರಿಗೆ ಜಾನಪದ ಶೈಲಿಯಲ್ಲಿ ಗೌರವಾರ್ಪಣೆ ನಡೆಯಿತು. ವೈದ್ಯರತ್ನ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಆರ್.ಎನ್. ಭಟ್, ಬಹಳ ವಿಶಿಷ್ಟ ರೀತಿಯಲ್ಲಿ ನಡೆದ ಈ ಸನ್ಮಾನದಿಂದ ಹೃದಯ ತುಂಬಿ […]

Continue Reading

ರಾಹುಲ್ ಗಾಂಧಿಗೆ ಸಿದ್ದು ಹೇಳಿದ್ದೇನು?, 12 ಹೊರಕ್ಕೆ 12 ಒಳಕ್ಕೆ

ಬಿಜೆಪಿ ಗೋಳು ತಪ್ಪುತ್ತಿಲ್ಲ, ಸಂಜಯ್ ಜೋಷಿಗೆ ಸಾರಥ್ಯ? ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ. ಅದರ ಪ್ರಕಾರ ರಾಹುಲ್ ಗಾಂಧಿಯವರಿಗೆ ಕೊಡಬೇಕಾದ ಮೆಸೇಜನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ.ಯಾವಾಗ ರಾಹುಲ್ ಗಾಂಧಿ ಅವರಿಗೆ ಈ ಮೆಸೇಜನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ ಎಂಬ ವರ್ತಮಾನ ಸಿಕ್ಕಿತೋ? ಇದಾದ ನಂತರ ಸಿದ್ಧು ಆಪ್ತರ ಪಡೆ ಸಂಪುಟ ಪುನರ್ರಚನೆಯ ದಿನವನ್ನು ಎದುರು ನೋಡುತ್ತಿದೆ.ಮೂಲಗಳ ಪ್ರಕಾರ, ಇತ್ತೀಚೆಗೆ ರಾಹುಲ್ ಗಾಂಧಿ ಅವರ ಜತೆ ಮಾತನಾಡಿದ […]

Continue Reading

ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ; ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಪಕ್ಕಾ

ರಾಜ್ಯ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸುಳಿವನ್ನು ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಆಗಿವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಶಾಸಕರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಿಎಂ ಸಂಪುಟ ಪುನಾರಚನೆಯ ಸುಳಿವು ನೀಡಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯ ಚರ್ಚೆ ಹೊತ್ತಲ್ಲೇ ಡಿನ್ನರ್ ಮೀಟಿಂಗ್ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಡಜನ್ ಗೂ ಹೆಚ್ಚು […]

Continue Reading

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಒಬ್ಬ ಒಳನುಸುಳುಕೋರ, ಅವರನ್ನು ಉತ್ತರಾಖಂಡಕ್ಕೆ ಗಡೀಪಾರು ಮಾಡಬೇಕು: ಅಖಿಲೇಶ್‌ ಯಾದವ್‌

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಒಬ್ಬ ಒಳನುಸುಳುಕೋರನಾಗಿದ್ದು, ಅವರನ್ನು ಉತ್ತರಾಖಂಡಕ್ಕೆ ಗಡೀಪಾರು ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾನುವಾರ ಆಗ್ರಹಿಸಿದ್ದಾರೆ. ಲಕ್ನೋದಲ್ಲಿ ನಡೆದ ರಾಮ್‌ ಮನೋಹರ್‌ ಲೋಹಿಯಾ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳನುಸುಳುಕೋರರ ಬಗ್ಗೆ ಬಿಜೆಪಿ ಲೆಕ್ಕಾಚಾರ ಕೊಡುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಒಳನುಸುಳುಕೋರರಿದ್ದಾರೆ. ನಮ್ಮ ಮುಖ್ಯಮಂತ್ರಿ ಉತ್ತರಾಖಂಡದವರು. ಅವರನ್ನು ಅಲ್ಲಿಗೇ ಕಳುಹಿಸಬೇಕು. ಸೈದ್ಧಾಂತಿಕವಾಗಿಯೂ ಅವರು ಒಳನುಸುಳುಕೋರ. ಅವರು ಮೊದಲು ಬಿಜೆಪಿಯಲ್ಲಿರಲಿಲ್ಲ. ಇಂತಹ ಒಳನುಸುಳುಕೋರರನ್ನು ಯಾವಾಗ ಹೊರಹಾಕುತ್ತೀರಿ ಎಂದು ಅಖಿಲೇಶ್ […]

Continue Reading

ಕೇಂದ್ರ, ರಾಜ್ಯ ಸರ್ಕಾರಗಳಿಂದ ಹಣಕಾಸು ನೆರವು ಪಡೆದುಕೊಳ್ಳುವ ಸಹಕಾರ ಸಂಘದ ಸಿಬ್ಬಂದಿ ಸಹ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ವ್ಯಾಪ್ತಿಗೆ: ಹೈಕೋರ್ಟ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣಕಾಸು ನೆರವು ಪಡೆದುಕೊಳ್ಳುವ ಸಹಕಾರ ಸಂಘದ ಸಿಬ್ಬಂದಿ ಸಹ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಾಸನ ಜಿಲ್ಲೆಯ ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿ ಆಸ್ತಿ ಪ್ರಕರಣ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವಂತೆ ಸಂಘಕ್ಕೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ. ಭ್ರಷ್ಟಾಚಾರದ ಆರೋಪದಲ್ಲಿ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ತನಿಖೆಗೆ ಅನುಮತಿ […]

Continue Reading

ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್, ಕೆಂಪು-ನೀಲಿ ಬಣ್ಣದ ಬೀಕನ್ ಗಳ ಬಳಕೆ ನಿಷೇಧಿಸುವಂತೆ ರಾಜ್ಯಗಳಿಗೆ ಸೂಚನೆ: ಸು.ಕೋ

ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್, ಕೆಂಪು ನೀಲಿ ಬಣ್ಣದ ಬೀಕನ್ ಗಳ ಖಾಸಗಿ ಬಳಕೆ, ತುರ್ತು ವಾಹನದ ಸೌಂಡ್ ನಿಷೇಧಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಕಾನೂನು ಬಾಹಿರ ಎಲ್‌ಇಡಿ ಲೈಟ್ ಗಳು ರಸ್ತೆ ಅಪಘಾತಗಳನ್ನು ಹೆಚ್ಚಿಸುತ್ತಿವೆ. ತುರ್ತು ವಾಹನಗಳಿಗೆಂದು ಇರುವ ಕೆಂಪು- ನೀಲಿ ಬೀಕನ್ ಗಳನ್ನು ಖಾಸಗಿ ವಾಹನಗಳಲ್ಲಿ ಬಳಸಲಾಗುತ್ತಿದೆ.ಇದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್, ಕೆಂಪು -ನೀಲಿ ಬಣ್ಣದ ಬೀಕನ್ ಗಳ ಬಳಕೆ […]

Continue Reading

ಬಜ್ಪೆ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ಆಯ್ಕೆ, ಹೊಸ ಕಾರ್ಯಕಾರಿ ಸಮಿತಿ ರಚನೆ

ದಿನಾಂಕ 10-10-2025ರ ಶುಕ್ರವಾರ ಸಂಜೆ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ, ದಲಿತ ಸಂಘದ ರಾಜ್ಯ ಸಂಚಾಲಕರಾದ ಎಂ.ದೇವದಾಸ್ ರವರ ಅದ್ಯಕ್ಷತೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು.ಸರ್ವಾನುಮತದಿಂದ ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ರವರನ್ನು ಆಯ್ಕೆಮಾಡಲಾಯಿತು. ಗೌರವ ಅದ್ಯಕ್ಷರುಗಳಾಗಿ ಎಂ. ದೇವದಾಸ್, ರಾಬರ್ಟ್ ರೇಗೊ, ಅಬ್ದುಲ್ ಖಾದರ್ MJM, ವಸಂತ್, ಮೊನಕ, ಉಪಾಧ್ಯಕ್ಷರುಗಳಾಗಿ ದೀಪಕ್ ಪೂಜಾರಿ, ಇಂಜಿನಿಯರ್ ಇಸ್ಮಾಯಿಲ್ ಮತ್ತು ಥೋಮಸ್. ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಗೋಪಾಲ ಸುವರ್ಣ, ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ, ಜೊತೆ […]

Continue Reading

ಸಿಜೆಐ ಮೇಲಿನ ದಾಳಿಯ ಹಿಂದೆ ಭಾರೀ ಸಂಚು ಸಾಧ್ಯತೆ; ಮನೋರಾಜ್ ಅನುಮಾನ

CJI ಮೇಲೆ ಶೂ ಎಸದವರು ಸನಾತನಿಗಳಲ್ಲ, ದೇಶದ್ರೋಹಿಗಳು; ಕಠಿಣ ಕಾನೂನು ಕ್ರಮಕ್ಕೆ ಮನೋರಾಜ್ ಆಗ್ರಹ ಸಿಜೆಐ ಮೇಲಿನ ಶೂ ದಾಳಿಗೆ ವ್ಯಾಪಕ ಖಂಡನೆ; ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮನೋರಾಜ್ ಆಗ್ರಹ ಮಂಗಳೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಮೇಲೆ ವಕೀಲನೊಬ್ಬ ಶೂ ಎಸೆದ ಘಟನೆಯನ್ನು ಕಾಂಗ್ರೆಸ್ ಪಕ್ಷದ ಕಾನೂನು ಘಟಕ ಖಂಡಿಸಿದೆ. ಈ ಬಗ್ಗೆ ಕರ್ನಾಟಕದ ವಕೀಲರೂ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಕಾಂಗ್ರೆಸ್ ಕಾನೂನು […]

Continue Reading