ಸುರತ್ಕಲ್ ಯಕ್ಷ ಅಭಿಮಾನಿ ಬಳಗದ ದಶಮಾನೋತ್ಸವ ಸಂಭ್ರಮಾಚರಣೆ ಉದ್ಘಾಟನೆ.

ಸಂಘಟನೆಗಳಿoದಾಗಿ ಯಕ್ಷಗಾನದ ಭವಿಷ್ಯ ಭದ್ರ: ಡಾ.ತಲ್ಲೂರು ಉಡುಪಿ : ಯಕ್ಷಗಾನ ಸಂಘಟನೆಯೊoದು ದಶಮಾನೋತ್ಸವವನ್ನು ಪೂರೈಸುತ್ತಿರುವುದು ಅಭಿಮಾನದ ಸಂಗತಿ. ಇಂದು ಮಹಿಳಾ ಯಕ್ಷಗಾನ ಸಂಘಟನೆಗಳು, ಮಕ್ಕಳ ಯಕ್ಷಗಾನ ಮೇಳ ಸೇರಿದಂತೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಈ ಸಂಘಟನೆಗಳಿoದಾಗಿಯೇ ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ […]

Continue Reading

ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿಯ ಲಕ್ಷ, ಲಕ್ಷ ನೀರಿನ ಬಿಲ್ಲು ಸ್ವಾಹ ಪ್ರಕರಣ

ಸಿಬ್ಬಂದಿ ಲಾವಣ್ಯ ವಿರುದ್ದ ಆಡಳಿತಾತ್ಮಕ ಕ್ರಮ ಜರುಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಿಡಿಓ ಗೆ ನೋಟಿಸ್ ಜಾರಿ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿಯ ಭ್ರಷ್ಟತೆಯ ಪರಮಾವಧಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಜೀಪ ಮೂಡ ಗ್ರಾಮ ಪಂಚಾಯತ್ ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪಿಡಿಒ ಅವರಿಗೆ ಸೂಚಿಸಿದ್ದಾರೆ. ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿ ಲಾವಣ್ಯ ಎಂಬಾಕೆ ಸಜೀಪ ಮೂಡ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾಗಾರರಾಗಿ […]

Continue Reading

ಮುಖ್ಯನ್ಯಾಯಮೂರ್ತಿಗಳ ಮೇಲೆ ದಾಳಿ-ಕೋಮುವಾದಿ ಶಕ್ತಿಗಳು ಮನುವಾದಿ ವಿಷ ತುಂಬುತ್ತಿರುವುದಕ್ಕೆ ಮತ್ತೊಂದು ಉದಾಹರಣೆ: ಸಿಪಿಐ(ಎಂ) ಖಂಡನೆ

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿಕೊಂಡಿರುವ ಮತ್ತು ದಸ್ತಗಿರಿಯಾಗಿರುವ ಸಂಬಂಧಪಟ್ಟ ವಕೀಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅದು ಒತ್ತಾಯಿಸಿದೆ. ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆಯಲಾಗಿದ್ದು, ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಜಾತಿವಾದಿ, ಮನುವಾದಿ ಮತ್ತು ಕೋಮುವಾದಿ ವಿಚಾರಗಳನ್ನು […]

Continue Reading

ಸಿಸಿ, ಒಸಿ ಇಲ್ಲದ ಕಟ್ಟಡ ಮಾಲಕರು ಕತ್ತಲಲ್ಲಿ.! ಸುಪ್ರೀಂಕೋರ್ಟ್‌ನ ಆದೇಶವು ಸರ್ಕಾರದ ಕೈಕಟ್ಟಿ ಹಾಕಿದೆ

ಸ್ವಾಧೀನಾನುಭವ ಪತ್ರ ಮತ್ತು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ ಇಲ್ಲದೆ 1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚಿನ ಮನೆ ಮಾಲೀಕರು ವಿದ್ಯುತ್ ಸೌಲಭ್ಯ ಸಿಗದೆ ಕತ್ತಲಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ನೀರಿನ ಸೌಲಭ್ಯವೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ತಲೆದೋರಿದೆ. ಈ ನಡುವೆ, ಸರ್ಕಾರವು ಕಾನೂನು ಕಟ್ಟಳೆ ಮೀರದೆ ಸಿಸಿ, ಒಸಿ ಇಲ್ಲದ ಮನೆಗಳಿಗೆ ಯಾವ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಬೇಕೆಂಬ ಇಕ್ಕಟ್ಟಿಗೆ ಸಿಲುಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿಕಾರಿಗಳ […]

Continue Reading

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಹಲ್ಲೆ ಯತ್ನ ಖಂಡನೆ.

ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿದ್ದ ವೇಳೆ ಇಂದು (6.10.2025) ಮತಾಂಧ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲಾ ಘಟಕವು ತೀವ್ರವಾಗಿ‌ ಖಂಡಿಸುತ್ತದೆ. ಆರ್.ಎಸ್.ಎಸ್. ಸಂಘಟನೆಯ ನೂರು ವರ್ಷದ ಸಂಭ್ರಮಾಚರಣೆಯ ಕರಿ ನೆರಳು ಈ ಮನುವಾದಿ, ದಲಿತ ವಿರೋಧಿ ಕೃತ್ಯದ ಹಿಂದೆ ಅಡಗಿದೆ. ನ್ಯಾಯಮೂರ್ತಿ ಗವಾಯಿಯವರ ತಾಯಿ ಕಮಲಾದೇವಿಯವರು ಆರ್.ಎಸ್.ಎಸ್. 100 ರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಬೆನ್ನಲ್ಲೇ ‘ಸನಾತನ […]

Continue Reading

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆ; ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹ

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ. ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್ ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ರಾಜ್ಯದ ಎಲ್ಲೆಡೆ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಪಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ ಹೊರ ರಾಜ್ಯಗಳ 12 ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ […]

Continue Reading

ದುಡಿಯುವ ವರ್ಗ ಹಸಿವಿನಿಂದ ಬಳಲುತ್ತಿರುವ ಭಾರತದಲ್ಲಿ 284 ಬಿಲಿಯನೇರ್ ಗಳ ಸೃಷ್ಟಿ ಮೋದಿ ಆಡಳಿತದ ಕೊಡುಗೆ – ಡಾ.ಕೆ ಪ್ರಕಾಶ್

ನವ ಉದಾರೀಕರಣದ ನೀತಿಗಳು ಅನುಷ್ಠಾನಗೊಂಡು ಮೂರು ದಶಕಗಳ ಈ ಅವಧಿಯಲ್ಲಿ ಭಾರತ ಅರ್ಥಿಕ ಸಮಾನತೆಯ ಉತ್ತುಂಗಕ್ಕೆ ತಲುಪಿದೆ. ಕಾರ್ಮಿಕರು ಕೂಲಿಕಾರರು ಸೇರಿದಂತೆ ದುಡಿಯುವ ಜನರು ಹಸಿವಿನಿಂದ ಬಳುತ್ತಿದ್ದಾರೆ.ಹೊಸ ಹೊಸ ಕಾಯಿದೆಗಳು ದುಡಿಯುವ ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಇದರ ಪರಿಣಾಮ ಬಾರತ ದೇಶದಲ್ಲಿ 284 ಬಿಲಿಯನೇರ್ ಗಳು ಸೃಷ್ಠಿಯಾಗಿದ್ಸಾರೆ.ನವ ಉದಾರೀಕರಣ ನೀತಿಗಳ ಪೂರ್ವದಲ್ಲಿ ಭಾರತದಲ್ಲಿ ಬಿಲಿಯನೇರ್ ಗಳು ಇರಲಿಲ್ಲ.ಈ ರೀತಿಯ ಬಡತನವೂ ಇರಲಿಲ್ಲ. ಆದರೆ ಇಂದು 284 ಬಿಲಿಯನೇರ್ ಗಳ ಕೈಯಲ್ಲಿ ಭಾರತ ದೇಶದ ಎರಡು ವರ್ಷಗಳ ಬಜೆಟ್ […]

Continue Reading

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. 7 ಲಕ್ಷ ನುಂಗಿದ ಸಜೀಪ ಮೂಡ ಗ್ರಾಮ ಪಂಚಾಯತ್ ಸಿಬ್ಬಂದಿ

ಭ್ರಷ್ಟೆ ಸಿಬ್ಬಂದಿ ಬೆನ್ನಿಗೆ ನಿಂತ ಪಂಚಾಯತ್ ಸದಸ್ಯರು, ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ.! ‘ಕಾವಲಿಗಿಟ್ಟವರೇ ಕೊಳ್ಳೆ ಹೊಡೆದ ಸ್ಥಿತಿಯಂತಾಗಿದೆ’ ಸಜೀಪ ಮೂಡ ಗ್ರಾಮ ಪಂಚಾಯತ್ ಪರಿಸ್ಥಿತಿ. ಇದು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ನ ಭ್ರಷ್ಟತೆಯ ಪರಮಾವಧಿಯ ಕಥೆ ವ್ಯಥೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನುತ್ತಾರಲ್ಲ ಅದಕ್ಕೆ ಪಕ್ಕಾ ಉದಾಹರಣೆಯಂತಿದೆ ಈ ಪಂಚಾಯತ್. ಇಲ್ಲಿನ ಪಂಚಾಯತ್ ಸಿಬ್ಬಂದಿಯೇ ದುಡ್ಡು ಸ್ವಾಹಾ ಮಾಡಿದರೂ, ಆಕೆಯ ರಕ್ಷಣೆಗೆ ಪಂಚಾಯತ್ ಸದಸ್ಯರ ಜೊತೆ ಕಾಂಗ್ರೆಸ್ ಮುಖಂಡರು ಬೆನ್ನಿಗೆ ನಿಂತಿರುವ […]

Continue Reading

ರಾಜ್ಯಾದ್ಯಂತ ನ್ಯಾಯಕ್ಕಾಗಿ Oct 9 ಜನಾಗ್ರಹ ದಿನವನ್ನಾಗಿ ಆಚರಿಸಲು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕರೆ

“ಧರ್ಮಸ್ಥಳ ದೌರ್ಜನ್ಯಗಳು – ಇತಿಹಾಸ ಮತ್ತು ವರ್ತಮಾನ” ಎಂಬ ಪುಸ್ತಕ ಬಿಡುಗಡೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9 ರಂದು 13 ವರ್ಷಗಳು ತುಂಬುತ್ತಿದ್ದು, ಆ ದಿನವನ್ನು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನವನ್ನಾಗಿ ಆಚರಿಸಲು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕರೆ ನೀಡಿದೆ. ಅಕ್ಟೋಬರ್ 9 ರಂದು ರಾಜ್ಯದಾದ್ಯಂತ ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬಳಿಕ ತಹಶೀಲ್ದಾರ್, ಜಿಲ್ಲಾಧಿಕಾರಿ ಮೂಲಕ ವೇದವಲ್ಲಿ, ಪದ್ಮಲತಾ, ಆನೆ ಮಾವುತ ನಾರಾಯಣ, ಸಹೋದರಿ ಯಮುನಾ […]

Continue Reading

ಸೈಫುದ್ದೀನ್ ಕೊಲೆ ಪ್ರಕರಣ: ಈ ಹತ್ಯೆಯ ಹಿಂದೆ ಹೆಣ್ಣಿನ ವಾಸನೆ, ಮಹಿಳೆಯ ಬಂಧನ

ಉಡುಪಿ: ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಒಳಸಂಚು ರೂಪಿಸಿದ ಆರೋಪದಲ್ಲಿ ಮಹಿಳಾ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಕೊಲೆ ಪ್ರಕರಣದ ಆರೋಪಿ ಮಹಮ್ಮದ್ ಫೈಜಲ್ ಖಾನ್ ಪತ್ನಿ ಮಿಷನ್ ಕಂಪೌಂಡೌ ನಿವಾಸಿ ರಿಧಾ ಶಭನಾ ಬಂಧಿತ ಆರೋಪಿ. ಈಕೆ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದಳು ಎನ್ನಲಾಗಿದೆ‌. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ರಿದಾ ಶಬಾನಾ ಸೈಪುದ್ದೀನ್ […]

Continue Reading