ಇದು ಡಿಕೆಶಿ ಕ್ಯಾಂಪಿನ ಲೇಟೆಸ್ಟು ಚಿಂತೆ; ವರಿಷ್ಟರು ಯೆಸ್ ಅನ್ನುತ್ತಾರಾ?

ಬಿಜೆಪಿ ಭಿನ್ನರಿಗೆ ತಲೆನೋವು; ಜೋಡೆತ್ತುಗಳ ಬೆಂಬಲ ಬೇಕು ✍️. ಆರ್.ಟಿ.ವಿಠ್ಠಲಮೂರ್ತಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಲ್ಲಿ ಅನುಮಾನ ಶುರುವಾಗಿದೆ.ಸಿಎಂ ಸಿದ್ದರಾಮಯ್ಯ ಅವರ ಜಾಗಕ್ಕೆ ಬರಲು ಡಿಕೆಶಿ ಕಸರತ್ತು ನಡೆಸುತ್ತಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವೇ ಸಿಎಂ ಆಗಲು ಸಜ್ಜಾಗಿದ್ದಾರಾ ಎಂಬುದು ಈ ಅನುಮಾನ.ಪರಿಣಾಮ?ಸಿದ್ದರಾಮಯ್ಯ ಅವರ ಜಾಗಕ್ಕೆ ಬರಲು ಇದುವರೆಗೆ ಖರ್ಗೆಯವರ ನೆರವು ನಿರೀಕ್ಷಿಸುತ್ತಿದ್ದ ಡಿ.ಕೆ.ಶಿವಕುಮಾರ್ ಇನ್ನು ಮುಂದೆ ಪ್ರಿಯಾಂಕಾಗಾಂಧಿ ಅವರನ್ನಷ್ಟೇ ನೆಚ್ಚಿಕೊಳ್ಳುವುದು ಅನಿವಾರ್ಯ ಎಂಬುದು ಈ ಕ್ಯಾಂಪಿನ ಯೋಚನೆ.ಅಂದ ಹಾಗೆ ಡಿಕೆಶಿ ಕ್ಯಾಂಪಿಗೆ ಇಂತಹ ಅನುಮಾನ […]

Continue Reading

ಮೊಬೈಲ್ ಬಳಸದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕವಿರಾಜ್ ಅರೆಸ್ಟ್

10 ದಿನಗಳ ರಹಸ್ಯ ಕಾರ್ಯಾಚರಣೆಯಲ್ಲಿ ಭೂಗತ ಪಾತಕಿ ರವಿಪೂಜಾರಿ ಸಹಚರ ಖಾಕಿ ಬಲೆಗೆ ಬಿದ್ದಿದ್ದೇ ರೋಚಕ.! ಬಿಲ್ಡರ್ ವೊಬ್ಬರ ಹತ್ಯೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಸೇರಿದಂತೆ ದೇಶಾದಾದ್ಯಂತ ಹದಿನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕವಿರಾಜ್ ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಉತ್ತರಾಖಂಡ ಮೂಲದ ಕವಿರಾಜ್ ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿ ಗುರುತಿಸಿಕೊಂಡಿದ್ದ. […]

Continue Reading

ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಹೋರಾಟಕ್ಕೆ ಕೊನೆಗೂ ಮಂಡಿಯೂರಿದ ರಾಜ್ಯ ಸರಕಾರ

ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಂಡಿಯೂರಿದೆ. ಬಾಕಿ ವೇತನ ಪಾವತಿ, ವೇತನ ಪರಿಷ್ಕರಣೆ, ರಜೆಯ ಹಕ್ಕು ಸೇರಿ, ಹಲವು ಬೇಡಿಕೆಗಳ ಈಡೇರಿಕೆಗೆ, ನೌಕರರು ಬಿಗಿ ಪಟ್ಟು ಹಿಡಿದಿದ್ದಾರೆ. ನೌಕರರ ಸಂಘ ಹಲವು ಬಾರಿ ಸಿಎಂ, ಸಾರಿಗೆ ಸಚಿವರ ಭೇಟಿಗೆ ಪ್ರಯತ್ನಿಸಿದ್ದರೂ ಯಾವುದೇ ಜಯ ಸಿಕ್ಕಿಲ್ಲ. ಮೊದಲ ಸಭೆಯಲ್ಲಿ ನೌಕರರ ಬೇಡಿಕೆಗಳ ಬಗ್ಗೆ ಪರಿಶೀಲಿಸೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಅದೂ ಈಡೇರಿಲ್ಲ. ಬಾಕಿ ವೇತನ ನೀಡೋಕೆ ಸಾಧ್ಯವಿಲ್ಲ. 2028ರವರೆಗೆ ವೇತನ ಪರಿಷ್ಕರಣೆ […]

Continue Reading

ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳ ವಶ, ಕೇಸು ದಾಖಲು

ವಿಟ್ಲ ಠಾಣಾ ಪೊಲೀಸ್ ಉಪ-ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಇದು ಅಪರಾಹ್ನ ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ KA 01 AJ 9542 & KA 50 AF 3229 ನೋಂದಣಿ ಸಂಖ್ಯೆಯ ಎರಡು ಲಾರಿಗಳನ್ನು ತಪಾಸಣೆ ನಡೆಸಲಾಗಿ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆಯನ್ನು ಸದ್ರಿ ಲಾರಿಗಳ ಚಾಲಕರಲ್ಲಿ ಪರವಾನಿಗೆ ಇಲ್ಲವೆಂದು ಹಾಗೂ KA 01 […]

Continue Reading

ತಡೆಯಾಜ್ಞೆಯ ಗ್ಯಾಗ್ ಆರ್ಡರ್ ನೀಡಿದ ನ್ಯಾಯಾಧೀಶರಿಗೂ ಧರ್ಮಸ್ಥಳಕ್ಕೂ ಸಂಬಂಧ: ಕೇಸ್ ವರ್ಗಾವಣೆಗೆ ಮೆಮೋ

ಧರ್ಮಸ್ಥಳ ಹರ್ಷೇಂದ್ರ ಕುಮಾರ್, ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಸಂಸ್ಥೆ ಮತ್ತು ಕುಟುಂಬದ ವಿರುದ್ಧ ಸುದ್ದಿ ಪ್ರಕಟ ಮಾಡದಂತೆ 338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಬೆಂಗಳೂರಿನ 26 ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಎಸ್ಡಿಎಂ ಲಾ ಕಾಲೇಜು ವಿದ್ಯಾರ್ಥಿಯಾಗಿದ್ದು, ವಿರೇಂದ್ರ ಹೆಗ್ಗಡೆಯವರ ಕೇಸುಗಳನ್ನು ಪ್ರತಿನಿಧಿಸಿದ್ದ ಲಾ ಎಸೋಶಿಯೇಟ್ ನಲ್ಲಿ ವೃತ್ತಿ ನಡೆಸಿದ್ದಾರೆ. ಹಾಗಾಗಿ ಹರ್ಷೇಂದ್ರ ಕುಮಾರ್ ದಾಖಲಿಸಿದ್ದ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಪ್ರತಿವಾದಿ 25 ಆಗಿರುವ ಪತ್ರಕರ್ತ ನವೀನ್ […]

Continue Reading

ಮಣ್ಣಿನ ಮೊಮ್ಮಗನಿಗೆ ಜೀವಾವಧಿ.! ನೂರಾರು ಹೆಣ್ಣುಮಕ್ಕಳ ಮೈ ಹುರಿದು ಮುಕ್ಕಿದ ಪ್ರಜ್ವಲ್ ಜ್ವಾಲೆ ಕರಟಿತು..!

ಹಣ ಮತ್ತು ಅಧಿಕಾರದ ದರ್ಪದಿಂದ ಅಮಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪ್ರತಿಷ್ಠಿತರಿಗೆ ಇದು ಪಾಠವಾಗಬೇಕು ಕಾಮಾತುರಣಂನ ಲಜ್ಜ ನ ಭಯಂ! ಎಂಬಂತೆ ಸೀತೆಯ ಸಾಂಗತ್ಯ ಬಯಸಿದ ರಾವಣ ದುರಂತ ಅಂತ್ಯ ಕಂಡ. ದ್ರೌಪದಿಯ ಮೋಹಕ್ಕೆ ಸಿಲುಕಿದ ದುರ್ಯೋಧನ ಸರ್ವನಾಶವಾದ. ಪಾಂಚಾಲಿಯ ಮುಡಿಗೆ ಕೈ ಹಾಕಿದ, ಸೀರೆಯ ಸೆಳೆದ ದುಶ್ಯಾಸನ ಸೇರಿದಂತೆ ಇಡೀ ಕುರುವಂಶವೇ ನಾಶವಾಯಿತು. ಇತಿಹಾಸಕ್ಕೆ ಬಂದರೆ ರಾಜಾಧಿರಾಜರುಗಳೇ ಹೆಣ್ಣಿನ ಚಪಲಕ್ಕೆ ಅಂಟಿಕೊಂಡಿದ್ದರಿಂದ ಕೋಟೆ -ಕೊತ್ತಲಗಳೇ ಉರುಳಿ ಹೋಗಿವೆ. ಇಷ್ಟೆಲ್ಲಾ ನಿದರ್ಶನಗಳಿರುವಾಗ ಹುಲುಮಾನವರು ಲೋಲುಪ್ತತೆಯ […]

Continue Reading

ಬಂಟ್ವಾಳ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ಮೋಸ ಹೋದ ಗ್ರಾಹಕ; ಸಮಸ್ಯೆ ಬಗ್ಗೆ ಕಂಪೆನಿಗೆ, ಡೀಲರಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಯಾವುದೇ ಸ್ಪಂದನೆ ಇಲ್ಲ.

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಸಮೀಪದ ವ್ಯಕ್ತಿಯೊಬ್ಬರು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ಮೋಸ ಹೋದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀರೋ ವಿಡಾ ಕಂಪೆನಿಗೆ ಸೇರಿದ ವಿ1 ಪ್ರೊ ಮಾದರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಇವರು ಕಳೆದ 8 ತಿಂಗಳ ಹಿಂದೆ ಖರೀದಿಸಿದ್ದು, ವಾಹನ ಖರೀದಿಗೆ ಮುಂಚಿತವಾಗಿ ಕಂಪೆನಿ ವಿವಿಧ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ವಾಹನ ಖರೀದಿಸಿದ ಬಳಿಕ ಆಗುವ ಯಾವುದೇ ಸಮಸ್ಯೆಗಳಿಗೂ ಕ್ಯಾರೇ ಅನ್ನದೆ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದವರು ಆರೋಪಿಸಿದ್ದಾರೆ. ಕಳೆದ […]

Continue Reading

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ, ಆರೋಪಿಗಳ ಬಂಧನ

ಮಂಗಳೂರು ನಗರ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಭಾಗವಾಗಿ ಇಂದು ದೊಡ್ಡ ಪ್ರಮಾಣದ 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು. ಎರಡು ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬ ಸ್ಥಳದಲ್ಲಿ ಅಕ್ರಮವಾಗಿ […]

Continue Reading

ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲವೆಂಬ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯವೇ ಸಂಪೂರ್ಣ ಕಾರಣ ಎನ್ನಲಾಗದು: ಕರ್ನಾಟಕ ಹೈಕೋರ್ಟ್

ರಸ್ತೆ ಅಪಘಾತಕ್ಕೊಳಗಾದ ಸವಾರ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲವೆಂಬ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯವೇ ಸಂಪೂರ್ಣ ಕಾರಣ ಎನ್ನಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಶಿವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಪಘಾತಕ್ಕೆ ಇನ್ನೊಂದು ವಾಹನ ಸವಾರ ನೇರ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಅರ್ಜಿದಾರರು ಸಾಕಷ್ಟು ಪುರಾವೆಗಳನ್ನೂ ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಿದರು. ಹೀಗಿರುವಾಗ, ಅವರು ಚಾಲನಾ ಪರವಾನಗಿ ಹೊಂದಿಲ್ಲವೆಂಬ ಕಾರಣಕ್ಕೆ […]

Continue Reading

ಬಂಟ್ವಾಳ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದ ಸುಳ್ಯದ ಪೈಚಾರು ಸತೀಶ್ ಅಂದರ್

ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುಳ್ಯದ ಪೈಚಾರು ನಿವಾಸಿ, 29 ವರ್ಷದ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ ಜುಲೈ 22 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್‌ ಚೀಲದಲ್ಲಿದ್ದ ರೂ. 2,20,000/- ಮೌಲ್ಯದ ಒಣ ಅಡಿಕೆ ಕಳವಿನ ಬಗ್ಗೆ ದಿನಾಂಕ: 23-07-2025 ರಂದು ಅಕ್ರ 112/2025 […]

Continue Reading