ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ

ಮೀನಾಕ್ಷಿ ಆರ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಉಪ-ವಿಭಾಗ 2023ನೇ ಬ್ಯಾಚ್‌ನ ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪಿ. ಶ್ರವಣ್‌ ಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲಾ ಕುಮಟಾ ಉಪ ವಿಭಾಗದ ಉಪ-ವಿಭಾಧಿಕಾರಿಯಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ. ದಿನೇಶ್‌ ಕುಮಾರ್‌ ಮೀನಾ ಅವರಿಗೆ ಚಾಮರಾಜ ನಗರ ಜಿಲ್ಲಾ ಕೊಳ್ಳೇಗಾಲ ಉಪ-ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ನೀಡಲಾಗಿದೆ. ಮೀನಾಕ್ಷಿ ಆರ್ಯ ಅವರಿಗೆ […]

Continue Reading

ನಕಲಿ ಚಾ ಹುಡಿ ದಂಧೆ; ಚಹಾ ಪುಡಿಗೂ ಹಾಕ್ತಾರೆ ಡೆಡ್ಲಿ ಕೆಮಿಕಲ್.!

ಸುಳ್ಯ, ಪುತ್ತೂರು ಭಾಗದಲ್ಲಿ ನಕಲಿ ಟೀ ಪುಡಿ ಜಾಲ ಸಕ್ರೀಯ, ಮಾರಕ ರೋಗಕ್ಕೆ ಕಾರಣವಾಗುತ್ತಿದೆ ಚಹಾ ಪುಡಿ ಚಹಾ ನಾವು ಇಷ್ಟಪಟ್ಟು ಕುಡಿಯುವ ಪೇಯ. ಆಹಾರ ಖದೀಮರು ಟೀ ಪುಡಿಯನ್ನು ಬಿಡದೆ ಕಲಬೆರಕೆ ಮಾಡುತ್ತಾರೆ ಅನ್ನುವ ಸ್ಪೋಟಕ ಅಂಶ ಬಯಲಾಗಿದೆ. ರಾಜ್ಯದ ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಟೀ ಮಾಫಿಯಾದ ಸಮಗ್ರ ವಿವರಣೆಯನ್ನು ಬಯಲಿಗೆ ತಂದಿತ್ತು. ಟೀ ಪುಡಿಗೆ ಕೃತಕ ಬಣ್ಣ ಬಳಸಿ ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿಯಲ್ಲಿ ಸಕ್ರೀಯವಾಗಿದೆ. ಟೀ ಪುಡಿಯ ಆಕರ್ಷಕ ಬಣ್ಣಕ್ಕೆ ಮೈ […]

Continue Reading

ಜಮೀನಿನ ಮೂಲ ದಾಖಲೆಗಾಗಿ ಹದಿನೈದು ವರ್ಷಗಳಿಂದ ಹೋರಾಟ ನಡೆಸುತ್ತಿರುವ ವಿಟ್ಲದ ಮಾಂಕು ಕೊರಗ..

ಬಂಟ್ವಾಳ ತಾಲೂಕು ಕಛೇರಿಯ ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯಬೇಕೇ.? ಅಗಸ್ಟ್ 15ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮೀನಿನ ದಾಖಲೆಗಳ ಯಥಾಪ್ರತಿ ನೀಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಹೌದು.. ಕಂದಾಯ ಇಲಾಖೆ ಎಂಬುದು ಅದ್ಯಾವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂಬುದಕ್ಕೆ ವಿಟ್ಲದ ಮಾಂಕು ಕೊರಗ ಎಂಬವರ ಹದಿನೈದು ವರ್ಷಗಳ ಹೋರಾಟವೇ ಸಾಕ್ಷಿಯಾಗಿದೆ. ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಲಪದವು ನಿವಾಸಿ ಮಾಂಕು ಕೊರಗ ಹಾಗೂ ಪತ್ನಿ ಹೆಸರಿಗೆ 2010ರಲ್ಲಿ ಅಂದಿನ ವಿಟ್ಲ ಕ್ಷೇತ್ರದ ಶಾಸಕ ಪದ್ಮನಾಭ ಕೊಟ್ಟಾರಿಯವರ ಶಿಫಾರಸ್ಸಿನಿಂದಾಗಿ […]

Continue Reading

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ, ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ: ಬಿ.ಎಂ ಭಟ್

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ, ಪ್ರಭುತ್ವದ ಧಾಳಿ, ದಬ್ಬಾಳಿಕೆ ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶವು ಇಂದು ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಜರಗಿತು. ಸುಮಾರು 250ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷರೂ, ವಕೀಲರೂ ಆದ ಬಿ.ಎಂ ಭಟ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ ಐದು ಕೋಟಿಗೂ ಹೆಚ್ಚು ಬೀದಿ […]

Continue Reading

ವಕ್ಫ್ ಆಸ್ತಿ ಬಚಾವ್ ಮಾಡಿದ ಜಿ. ಎ. ಬಾವಾ, ದೇಶಕ್ಕೆ ಇದು ಮಾದರಿ ಪದ್ಧತಿ: ಬಾಬಾ ನಝರ್ ಮೊಹಮ್ಮದ್ ಖಾನ್

ಸಮುದಾಯದ ‘ಚೇಂಜ್ ಮೇಕರ್’ ಜಿ.ಎ ಬಾವ.! ಭಾರತದಲ್ಲಿ ಹಲವಾರು ಸಂಘ ಸಂಸ್ಥೆಗಳು ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿದೆ. ಕೆಲವೊಂದು ಸಂಸ್ಥೆಗಳ ಯೋಜನೆಗಳು ಅತ್ಯುತ್ತಮ ಫಲಿತಾಂಶ ತರುತ್ತಿದೆ. ಇಂತಹ ಯೋಜಗಳ ಮಾದರಿಗಳನ್ನು ಪರಿಚಯಿಸುವ ಹಾಗೂ ಪರಸ್ಪರ ಸಹಯೋಗದಲ್ಲಿ ಮಾಡುವ ಅವಕಾಶಕ್ಕಾಗಿ ಬೀದರ್ ಶಾಹೀನ್ ಕಾಲೇಜಿನಲ್ಲಿ ಎರಡು ದಿನಗಳ ಕಾಲದ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ನಡೆಯಿತು. ದೇಶದ ವಿವಿಧ ಭಾಗದಿಂದ ಆಗಮಿಸಿದ ಎನ್.ಜಿ. ಒ ಗಳು ತಮ್ಮ ಯೋಜನೆಗಳನ್ನು ಪರಿಚಯ ಮಾಡಿದರು. ಚೇಂಜ್ ಮೇಕರ್ ಎಂಬ ಈ ಕಾರ್ಯಕ್ರಮದಲ್ಲಿ […]

Continue Reading

ವರದಿ ಫಲಶ್ರುತಿ: ಕೊನೆಗೂ ಎಚ್ಚೆತ್ತ ಮಲ್ಲೂರು ಗ್ರಾಮ ಪಂಚಾಯತ್

ರಾಶಿ ರಾಶಿ ಕಸಕ್ಕೆ ಮುಕ್ತಿ; ಶಾಶ್ವತ ಪರಿಹಾರಕ್ಕೆ ಪಂಚಾಯತ್ ಗಮನ ಹರಿಸಲಿ ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಮಲ್ಲೂರು ಗ್ರಾಮ ಪಂಚಾಯತ್ ನ ಬೇಜವಾಬ್ದಾರಿ, ನಿರ್ಲಕ್ಷ್ಯತನದ ಬಗ್ಗೆ ಸಮಗ್ರ ವರದಿ ಮಾಡಿತ್ತು. ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬದ್ರಿಯಾನಗರ ಚರ್ಚ್ ಬಳಿ ರಾಶಿ ರಾಶಿ ಕಸ ವಿಲೇವಾರಿ ಮಾಡದೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಬಗ್ಗೆ, ಜನವಸತಿ ಪ್ರದೇಶದಲ್ಲಿ ರಾಶಿ ರಾಶಿ ಕಸ ಇದ್ದರೂ ವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಇದೀಗ […]

Continue Reading

ರಾಜ್ಯ ಸರಕಾರದ ಮಹತ್ತದ ಸೂಚನೆ. ಸರಕಾರದಿಂದಲೇ ವಾರಿಸುದಾರರ ಹೆಸರಿಗೆ ಪೌತಿ ಖಾತೆ: ಕಂದಾಯ ಸಚಿವರು

ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್ ಒಳಗೆ ವಾರಸುದಾರರ ಹೆಸರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ರಾಜ್ಯದಲ್ಲಿ ಸುಮಾರು 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರೆಯುತ್ತಿದ್ದು, ವಾರಸುದಾರರ ನಡುವೆ ತಕರಾರು ಇಲ್ಲದ ಎಲ್ಲಾ ಜಮೀನುಗಳನ್ನು ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್ ಒಳಗೆ ವಾರಸುದಾರರ ಹೆಸರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸಸೌಧರಲ್ಲಿ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಮಾಸಿಕ ಪ್ರಗತಿ ಪರಿಶೀನಾ ಸಭೆ ನಡೆಸಿ ಹೇಳಿದರು. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಹನಿ ನೀರಾವರಿ, […]

Continue Reading

ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಮೂಲದ ಮಂಗಳೂರಿನ ತಲಪಾಡಿ ನಿವಾಸಿ ಅಕ್ಬರ್ ಸೊಹೈಬ್ (24) ಬಂಧಿತ ಆರೋಪಿಯಾಗಿದ್ದಾನೆ. ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದ ಪೊಲೀಸ್ ತಂಡ ಅಗಸ್ಟ್ 4 ರಂದು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:98/2020, ಎಸ್.ಸಿ ಸಂಖ್ಯೆ:5025/2021 ಕಲಂ 341,392,397,511,120-B ಐ.ಪಿ.ಸಿ ಹಾಗೂ ಅ.ಕ್ರ:109/2020, ಸಿ.ಸಿ ಸಂಖ್ಯೆ:276/2022 ಕಲಂ: […]

Continue Reading

ಜನವಸತಿ ಪ್ರದೇಶದಲ್ಲೇ ರಾಶಿ ರಾಶಿ ಕಸ. ಮಲ್ಲೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಹೈರಾಣು.!

ಪಕ್ಕದಲ್ಲೇ ಆರೋಗ್ಯ ಕೇಂದ್ರ ಇದ್ದರೂ ಗಡದ್ದಾಗಿ ನಿದ್ರೆಗೆ ಜಾರಿದೆ.. ಸಾಂಕ್ರಾಮಿಕ ರೋಗ ಹರಡಿದರೆ ಯಾರು ಹೊಣೆ.? ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂ. ಅಧ್ಯಕ್ಷೆ.! ಇದು ಮಲ್ಲೂರು ಗ್ರಾಮ ಪಂಚಾಯತ್ ಕಥೆಯೋ.. ಕರ್ಮಕಥೆಯೋ ಒಂದೂ ತಿಳಿಯುತ್ತಿಲ್ಲ. ಯಾರ ಶಾಪವೋ ಗೊತ್ತಿಲ್ಲ. ಉಳಾಯಿಬೆಟ್ಟು -ಮಲ್ಲೂರು ಜಂಟಿಯಾಗಿ ಇದ್ದಾಗ ಅಭಿವೃದ್ಧಿಯ ದಾಪುಗಾಲಿಗೆ ತೆರೆದಿದ್ದ ಗ್ರಾಮ ಪಂಚಾಯತ್, ಮಲ್ಲೂರಿಗೆ ಪ್ರತ್ಯೇಕ ಗ್ರಾಮ ಪಂಚಾಯತ್ ಆದ ನಂತರವಂತೂ ಅಭಿವೃದ್ಧಿಗೆ ಮಂಕು ಕವಿದಿದೆ. ಜನಪ್ರತಿನಿಧಿಗಳೆನಿಸಿಕೊಂಡವರ ನಿರ್ಲಕ್ಷ್ಯದ ಪರಮಾವಧಿ ಅಭಿವೃದ್ಧಿಗೆ ಗ್ರಹಣ ಬಡಿದಿದೆ. ಜನಸಾಮಾನ್ಯರು ಹೈರಣಾಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗೆ […]

Continue Reading

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅಮಾನತು ಆದೇಶ ರದ್ದುಗೊಳಿಸಿದ ಹೈಕೋರ್ಟ್

ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮನೆ ಕಟ್ಟುವ ಸಂಬಂಧ ದೃಢೀಕರಣ ನೀಡಲು ಲಂಚ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಅಧಿಕಾರಿಗಳೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಮೇ 28 ರಂದು ಬಂಧಿಸಿದ್ದರು. ಇದರ ವಿರುದ್ಧ ಹೈಕೋರ್ಟ್ ಗೆ ಸೂಕ್ತ ದಾಖಲೆಗಳೊಂದಿಗೆ ಕೃಷ್ಣವೇಣಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ […]

Continue Reading