ಬೆಳ್ತಂಗಡಿ: ಶೈಕ್ಷಣಿಕ ಸಮಾಲೋಚನೆ ಮತ್ತು ಪ್ರೋತ್ಸಾಹ ಕೇಂದ್ರ ‘ಉಜಿರೆ ಕಮ್ಯೂನಿಟಿ ಸೆಂಟರ್’ ಉದ್ಘಾಟನೆ

ಹುಟ್ಟೂರಿನ ಮಕ್ಕಳ ಭವಿಷ್ಯಕ್ಕೆ ನೆರಳಾಗಲು ಸೆಂಟರಿಗೆ ಕಟ್ಟಡ ದಾನ ಮಾಡಿದ ಉಧ್ಯಮಿ ಶಾಹುಲ್ ಹಮೀದ್ ಉಜಿರೆ ಬೆಳ್ತಂಗಡಿ ತಾಲೂಕನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವ ಮಹತ್ವದ ಕನಸಿನೊಂದಿಗೆ ಉಜಿರೆ ಕಮ್ಯೂನಿಟಿ ಸೆಂಟರನ್ನು ನಿರ್ಮಿಸಲಾಗಿದೆ. ಭವಿಷ್ಯದ ತಲೆಮಾರಿಗೆ ಉನ್ನತ ಶಿಕ್ಷಣ ಮತ್ತು ಉತ್ತಮ ಉಧ್ಯೋಗ ಸಿಗಲು ಅವರಿಗೆ ಬೇಕಾದ ಪ್ರೇರಣೆ, ಸಲಹೆ, ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಮ್ಯೂನಿಟಿ ಸೆಂಟರ್ ಒದಗಿಸಲಿದೆ ಎಂದು ಅನಿವಾಸಿ ಉಧ್ಯಮಿ,ವೆಲ್ಡನ್ ಅರೇಭಿಯಾ ಕಂಪೆನಿಯ ಮಾಲಕರಾದ ಶಾಹುಲ್ ಹಮೀದ್ ಉಜಿರೆ ಹೇಳಿದರು. ಉಜಿರೆಯ ಟಿ.ಬಿ. ರೋಡ್ […]

Continue Reading

ಜ್ವರದಿಂದ ಬಳಲುತ್ತಿದ್ದ ನೇರಳಕಟ್ಟೆಯ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ್ಯು

ವಿಟ್ಲ: ಜ್ವರದಿಂದ ಬಳಲುತ್ತಿದ್ದ ನೇರಳಕಟ್ಟೆಯ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕ್ಯಾನಿಕ್ ವೃತ್ತಿಯ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ(22) ಮೃತಪಟ್ಟವರು. ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಬಾತಿಷಾಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ವೇಳೆಗೆ […]

Continue Reading

ಜನರ ತೀವ್ರ ಆಕ್ಷೇಪದ ನಡುವೆಯೂ ಬಿಲ್ಡರ್ ಲಾಭಿಯ ವಿವಾದಿತ ಜಮೀನಿಗೆ ಟಿಡಿಆರ್ ಅನುಮೋದನೆ

ರಾಜ್ಯ ಸರಕಾರದ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು. ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಆಗ್ರಹ: ಸಂಚಾಲಕರು ಮುನೀರ್ ಕಾಟಿಪಳ್ಳ ನಗರದ ಹೊರವಲಯದ ಮರಕಡದಲ್ಲಿರುವ ಜನ ವಿರೋಧದಿಂದ ತಡೆ ಹಿಡಿಯಲ್ಪಟ್ಟಿದ್ದ ಹತ್ತು ಎಕರೆ ವಿವಾದಿತ ಜಮೀನಿನ ಟಿಡಿಆರ್ ಕಡತಕ್ಕೆ ಬಿಜೆಪಿ ಅಡಳಿತದ ಮಂಗಳೂರು ನಗರ ಪಾಲಿಕೆಯು ಇಂದಿನ ಮಾಸಿಕ ಸಭೆಯಲ್ಲಿ ಏಕಾಏಕಿ ಅನುಮೋದನೆ ನೀಡಿರುವದಕ್ಕೆ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ರಾಜ್ಯ ಸರಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಈ ವಿವಾದಿತ ಕಡತವನ್ನು […]

Continue Reading

ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಹೆದ್ದಾರಿ ಪ್ರಾಧಿಕಾರ ನಡೆಸಿದ ಅಮಾನವೀಯ ದಬ್ಬಾಳಿಕೆಗೆ ತಕ್ಕ ಉತ್ತರ ನೀಡುವೆವು: ಬಿ.ಕೆ.ಇಮ್ತಿಯಾಜ್

ಬಡಪಾಯಿ ಬೀದಿಬದಿ ವ್ಯಾಪಾರಸ್ಥರು ಜೀವನೋಪಾಯಕ್ಕಾಗಿ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ವ್ಯಾಪಾರ ನಡೆಸುತ್ತಿದ್ದು,ಅವರ ಮೇಲೆ ಏಕಾಏಕಿ ಧಾಳಿ ನಡೆಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮ ತೀರಾ ಖಂಡನೀಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎಕರೆಗಟ್ಟಲೆ ಭೂಮಿಯನ್ನು ಕಬಳಿಸಿದ ಅತಿಕ್ರಮಣದಾರರ ವಿರುದ್ಧ ಎಳ್ಳಷ್ಟೂ ಕ್ರಮ ವಹಿಸದ ಹೆದ್ದಾರಿ ಪ್ರಾಧಿಕಾರ ಬಡಪಾಯಿಗಳ ಮೇಲೆ ಧಾಳಿ ನಡೆಸಿರುವುದು ಎಷ್ಟು ಸರಿ….?ಬೀದಿಬದಿ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡ ವ್ಯಾಪಾರಸ್ಥರ ಬದುಕನ್ನೇ ನಾಶ ಮಾಡಲು ಹೊರಟ ಹೆದ್ದಾರಿ ಪ್ರಾಧಿಕಾರದ ದುರಂಹಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು […]

Continue Reading

ಮೂಡುಬಿದಿರೆ: ಸಾಲ ಮರುಪಾವತಿ ಮಾಡದ ಹಿನ್ನಲೆ; ಪಂಡಿತ್ ರೆಸಾರ್ಟ್ ಗೆ ಬೀಗ.!

ಮೂಡಬಿದಿರೆ ಅಲಂಗಾರು ನಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಪಂಡಿತ್ ರೆಸಾರ್ಟ್ ಗೆ ಬೀಗ ಜಡಿಯಲಾಗಿದೆ. ಮಂಗಳೂರಿನ ಎಂ.ಸಿ.ಸಿ.ಬ್ಯಾಂಕ್ ನಲ್ಲಿ ಸುಮಾರು 14 ಕೋಟಿ ರೂ.ಸಾಲ ಪಡೆದಿದ್ದು ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬೀಗ ಜಡಿಯಲಾಗಿದೆ. ಬುಧವಾರ ಬ್ಯಾಂಕ್, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪಂಡಿತ್ ರೆಸಾರ್ಟ್ ಗೆ ಬೀಗಮುದ್ರೆ ಹಾಕಲಾಗಿದೆ.

Continue Reading

ಮಂಗಳೂರು: ಪಾಲಿಕೆ ಕಟ್ಟಡ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆಗೆ “ಬಿಲ್ಡಿಂಗ್‌ ಬೈಲಾ’ದ ಸಿದ್ದತೆ

ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ತರುವ “ಬಿಲ್ಡಿಂಗ್‌ ಬೈಲಾ’ದ ಉಪವಿಧಿಗಳ ಪರಿಷ್ಕೃತ ಅನುಮೋದನೆಗೆ ಸಿದ್ದತೆ ಅಂತಿಮಗೊಂಡಿದೆ. ಸರಕಾರದಿಂದ ಬಂದಿರುವ ಕರಡು ಉಪವಿಧಿಗಳನ್ನು ಪಾಲಿಕೆ ಪರಿಶೀಲಿಸಿ, ಅದನ್ನು ಸರಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವ ಮೂಲಕ ಪರಿಷ್ಕೃತ ಬೈಲಾ ಅನುಷ್ಠಾನವಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ “ಬಿಲ್ಡಿಂಗ್‌ ಬೈಲಾ’ ಅನುಷ್ಠಾನದಲ್ಲಿದೆ. ಆದರೆ, ಅದು ಹಳೆಯ ಕಾಲದ್ದಾಗಿರುವುದರಿಂದ ಈಗ ಕೆಲವೊಂದಿಷ್ಟು ಹೊಸತನ, ಜನಸ್ನೇಹಿ ನಿಯಮಗಳನ್ನು ಕಟ್ಟಡ ನಿರ್ಮಾಣ ಸಂದರ್ಭ ಪಾಲಿಸಬೇಕಾದ ಕಾರಣದಿಂದ ಹೊಸ ಉಪವಿಧಿಗಳ ಅನುಷ್ಠಾನಕ್ಕೆ ಸರಕಾರ ಈ […]

Continue Reading

ಉಡುಪಿ: ಕಂಚಿನಡ್ಕ ಟೋಲ್ ಸಂಗ್ರಹ ಆದೇಶ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ: ಕರವೇ. ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ

ವರದಿ: ಅನುಷಾ ಉಡುಪಿ ಕಾಪು: ಹಲವು ವಿಫಲ ಪ್ರಯತ್ನಗಳ ಬಳಿಕ ಇದೀಗ ಮತ್ತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹಕ್ಕೆ ಆದೇಶ ನೀಡಿದ ಬಗ್ಗೆ ತಿಳಿದುಬಂದಿದ್ದು, ಜನವಿರೋಧಿ ಅದೇಶವನ್ನು 10 ದಿನದೊಳಗೆ ರದ್ದುಪಡಿಸದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ. ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅನ್ಸಾರ್ ಅಹಮದ್ […]

Continue Reading

ಟ್ಯಾಂಕರ್ ಡಿಕ್ಕಿ ಸ್ಕೂಟರ್ ಸವಾರ ವಿಕಲಚೇತನ ಮೃತ್ಯು. ಪುತ್ತೂರಿನಲ್ಲಿ ಕಳೆದ ರಾತ್ರಿ ನಡೆದ ಭೀಕರ ಅಪಘಾತ.

ಪುತ್ತೂರು : ನಗರದ ಮಂಜಲಪಡ್ಪು ಎಂಬಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು ವಿಕಲಚೇತನ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಡ್ಕಿದು ಗ್ರಾಮದ ಏಮಾಜೆ ನಿವಾಸಿ ಶಿವರಾಮ ನಾಯ್ಕ(50)ಮೃತಪಟ್ಟ ಸವಾರ. ಲಾರಿ ಚಾಲಕ ಸಂತೋಷ್‌ ಕುಮಾರ್ ಎಂಬವರು KA-05-MG-5926 ನೇ ನೋಂದಣಿ ನಂಬ್ರದ ಲಾರಿಯನ್ನು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಮಂಗಳ ಸ್ಟೋರ್‌ ಮುಂಭಾಗದಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪುತ್ತೂರು ಕಡೆಗೆ ಹೋಗುತ್ತಿದ್ದ […]

Continue Reading

ಗುರುಪುರ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಸ್ಕೂಟರ್, ಚಪ್ಪಲಿ ಪತ್ತೆ, ನದಿಗೆ ಹಾರಿರುವ ಶಂಕೆ.

ಮಂಗಳೂರು ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಪಾಲ್ಗುಣಿ ನದಿಯ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಮತ್ತು ಒಂದು ಜೊತೆ ಚಪ್ಪಲಿ ಪತ್ತೆಯಾಗಿದೆ. ಸ್ಕೂಟರ್ ವಾರೀಸುದಾರರು ಇದ್ದಲ್ಲಿ ತಿಳಿಸುವಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಮಧ್ಯೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಗ್ರಾಮದ ಪಡೀಲ್ ನಿವಾಸಿ ಗಣೇಶ್(48)ಎಂಬವರು 22ರ ರಾತ್ರಿ 8 ಗಂಟೆಯಿಂದ KA19 HM 4598 ಸಂಖ್ಯೆಯ ಸ್ಕೂಟರ್ ಜೊತೆ ನಾಪತ್ತೆಯಾದ ಬಗ್ಗೆ ಪತ್ನಿ ಅಶ್ವಿತಾ ಎಂಬವರು ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ. […]

Continue Reading

ಮನಪಾ ಆಯುಕ್ತರನ್ನು ವಜಾಗೊಳಿಸಲು ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರಿಂದ ಪಾಲಿಕೆ ಕಚೇರಿಗೆ ಮುತ್ತಿಗೆ, ಬಂಧನ

ಅಕ್ರಮ ಆಸ್ತಿ ಸಂಪಾದಿಸಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಅವರನ್ನು ಕೂಡಲೇ ವಜಾಗೊಳಿಸಲು ಒತ್ತಾಯಿಸಿ ನಗರದಲ್ಲಿಂದು ಸಿಪಿಐಎಂ ಕಾರ್ಯಕರ್ತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು. ಭ್ರಷ್ಟ ಲೂಟಿಕೊರ ಆಯುಕ್ತರು ತೊಲಗಲೇಬೇಕೆಂದು ಸೇರಿದ್ದ ಪ್ರತಿಭಟನಾಕಾರರು ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ, ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಸಹಿತ ಇತರೆ ಯೋಜನೆಯ ನೂರಾರೂ ಕೋಟಿ ಅನುದಾನವನ್ನು ನಗರದ ಅಭಿವೃದ್ಧಿಗೆ ಬಳಸುವ ಬದಲಾಗಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. […]

Continue Reading