ಮೂಡಬಿದಿರೆ ಅಲಂಗಾರು ನಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಪಂಡಿತ್ ರೆಸಾರ್ಟ್ ಗೆ ಬೀಗ ಜಡಿಯಲಾಗಿದೆ.
ಮಂಗಳೂರಿನ ಎಂ.ಸಿ.ಸಿ.ಬ್ಯಾಂಕ್ ನಲ್ಲಿ ಸುಮಾರು 14 ಕೋಟಿ ರೂ.ಸಾಲ ಪಡೆದಿದ್ದು ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬೀಗ ಜಡಿಯಲಾಗಿದೆ.
ಬುಧವಾರ ಬ್ಯಾಂಕ್, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪಂಡಿತ್ ರೆಸಾರ್ಟ್ ಗೆ ಬೀಗಮುದ್ರೆ ಹಾಕಲಾಗಿದೆ.
