ಕರಾವಳಿ ಕಾಂಗ್ರೆಸ್ ನಲ್ಲಿ ಮೊಯ್ಲಿ, ಪೂಜಾರಿ, ರೈ ಬಣ ಯುಗ ಮುಗಿಯಿತು.. ಈಗೇನಿದ್ದರೂ ಡಿ.ಕೆ, ಸಿದ್ದು ಬಣ.!

ಕೆಟ್ಟ ಮೇಲೂ ಬುದ್ಧಿ ಬರದ ಕಾಂಗೈ ನಾಯಕರು! ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಅನ್ನುವ ಮಾತಿದೆ. ಆದರೆ ಕರಾವಳಿಯ ಕಾಂಗೈ ನಾಯಕರಿಗೆ ಅದೂ ಬಂದಿಲ್ಲ ಅನ್ನುವುದೇ ದುರ್ದೈವದ ಸಂಗತಿ. ಎಂಭತ್ತು, ತೊಂಬತ್ತರ ದಶಕದಲ್ಲಿ ಕರಾವಳಿ ಕಾಂಗ್ರೆಸ್ ಅನ್ನು ಆಳುತ್ತಿದ್ದುದು ಆಸ್ಕರ್, ಮೊಯ್ಲಿ, ಪೂಜಾರಿ ಅನ್ನುವ ತ್ರಿಮೂರ್ತಿಗಳು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಹವಾ.. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಪರಿಸ್ಥಿತಿ. ಗತವೈಭವದಲ್ಲಿ ಮೆರೆಯುತ್ತಿದ್ದ ಪಕ್ಷ ಹರಿದು ಹಂಚಿ ಹೋಗಲು ಮುಖ್ಯ ಕಾರಣವಾಗಿದ್ದೇ ಬಣ ಬಡಿದಾಟ. ಮೊಯ್ಲಿ, ಪೂಜಾರಿ ಬಣ […]

Continue Reading

“ಜನಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯ ಅಡಿಯಲ್ಲಿ ಡಿಸೆಂಬರ್ 8 ರಂದು ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಸಿಪಿಐಎಂ ನಿಂದ ಬೃಹತ್ ರಾಲಿ ಮತ್ತು ಬಹಿರಂಗ ಸಭೆ

ಅಸಮಾನ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರನ್ನು ಭಾದಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕು, ಜನಸಾಮಾನ್ಯರ ಬೇಡಿಕೆಗಳನ್ನು ಗಮನದಲ್ಲಿಟ್ಟು ಅಭಿವೃದ್ದಿಯೋಜನೆಗಳನ್ನು‌ ರೂಪಿಸಬೇಕು ಎಂಬ ಆಗ್ರಹದೊಂದಿಗೆ “ಜನಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯ ಅಡಿಯಲ್ಲಿ ಡಿಸೆಂಬರ್ 8 ರಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ನಗರದ ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.00 ಕ್ಕೆ ಮೆರವಣಿಗೆ ಹೊರಡಲಿದ್ದು, 11.00 ಗಂಟೆಗೆ ಸರಿಯಾಗಿ ಕ್ಲಾಕ್ ಟವರ್ ಬಳಿ […]

Continue Reading

ಹೆಚ್ಚಿನವರಿಗೆ ತಿಳಿಯದ ಸತ್ಯ: ಸಂತ ಶ್ರೀ ನಾರಾಯಣ ಗುರುಗಳನ್ನು ಮಂಗಳೂರಿಗೆ ಕರೆ ತಂದಿದ್ದು ಅಧ್ಯಕ್ಷ ಕೊರಗಪ್ಪ

ಅಂದು ಕೊರಗಪ್ಪನವರೊಂದಿಗೆ ಕೈ ಜೋಡಿಸಿದ ಸಿ.ಅಬ್ದುಲ್ ರಹಿಮಾನ್ ಹಾಗೂ ಬ್ಯಾರಿ ಸಮುದಾಯ,ಈ ಜಿಲ್ಲೆಯ ಸಾಮರಸ್ಯವನ್ನು, ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ. 19ನೆಯ ಶತಮಾನದ ಆರಂಭ ಕಾಲದಲ್ಲಿ ಮಾನವತಾ ವಾದಿ ಸಂತ ಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಬರಲು ಕಾರಣಕರ್ತರಾದ ಪ್ರಮುಖರು ಹೊಯಿಗೆ ಬಜಾರ್ ಕೊರಗಪ್ಪನವರು ಮತ್ತು ಸಿ.ಅಬ್ದುಲ್ ರೆಹಮಾನ್. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಲ್ಲಿ ಶ್ರೀ ನಾರಾಯಣ ಗುರುಗಳಿಗೆ ಬೆಂಬಲವಾಗಿ ನಿಂತು, ಅದರ ಸ್ಥಾಪಕ ಅಧ್ಯಕ್ಷರೂ. ಆದುದರಿಂದ ಮುಂದೆ ಅವರು ಅಧ್ಯಕ್ಷ ಕೊರಗಪ್ಪ ಎಂಬುದಾಗಿಯೇ ಹೆಸರಾದರು. ಮಂಗಳೂರಿನ […]

Continue Reading

ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ ಪ್ರಕರಣ; ಆರೋಪಿಗಳ ಬಂಧನ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ದಾಳಿ ನಡೆಸಿ, ಆರೋಪಿಗಳಾದ ಶಾಫಿ ಅಹ್ಮದ್ (40) ತಂದೆ: ದಿ. ಅಜೀಜ್ ಖಾನ್, 13 ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು ಮತ್ತು ಮೊಹಮ್ಮದ್ ಸಮೀರ್ (20) ತಂದೆ: ಮೊಹಮ್ಮದ್ ರಫೀ, ಅಪೋಲೋ ಮೆಡಿಕಲ್ ರಸ್ತೆ, ಕೋತಿಪುರ, ತುಮಕೂರು ಎಂಬವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 12 ಗ್ರಾಂ ಎಂ.ಡಿ.ಎಂ, ಹಾಗೂ 275 ಗ್ರಾಂ ಗಾಂಜಾ (ಮಾದಕ […]

Continue Reading

ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ವಾಹನ ಕಳವು ಪ್ರಕರಣ: ಕೇರಳ ಮೂಲದ ಇಬ್ಬರು ಅಂತ‌ರಾಜ್ಯ ಕದೀಮರನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರಿನ ನಾಗುರಿ, ಜಪ್ಪಿನಮೊಗರು ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಅಂತ‌ರಾಜ್ಯ ಕದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ವೆಲ್ಲಾಡ್‌ ಅಲೆಕ್ಸ್‌ ಡೊಮಿನಿಕ್‌, ಕೋಯಿಕೋಡ್ ಕುರಚೂರು ನಿವಾಸಿ ಅಮಲ್‌ ಕೃಷ್ಣ ಬಂಧಿತ ಆರೋಪಿಗಳು. ನವಂಬರ್ 14ರಂದು ಆರೋಪಿಗಳು ಸ್ನೇಹಿತರನ್ನು ಭೇಟಿ ಮಾಡಲು ಮಂಗಳೂರಿಗೆ ಬಂದು ನಗರದ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಬಳಿಕ ನಾಗುರಿಯ ಬಸ್‌ ತಂಗುದಾಣ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್‌ ಹಾಗೂ ಜೆಪ್ಪಿನಮೊಗರು ಆದಿಮಾಯೆ […]

Continue Reading

ಕೋಟೇಶ್ವರ ದೇವಳ ಕೊಡಿ ಹಬ್ಬ : ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ; ಭಗವಂತನ ಆರಾಧನೆಯಿಂದ ಬದುಕಿನಲ್ಲಿ ಉನ್ನತಿ: ಡಾ. ತಲ್ಲೂರು

ಉಡುಪಿ: ಕಲಾರಾಧಾನೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ. ಭಗವಂತನಿಗೆ ಅತೀ ಪ್ರಿಯವಾದದ್ದು ಕಲಾ ಸೇವೆ. ಅದು ನೃತ್ಯ, ಯಕ್ಷಗಾನ ಅಥವಾ ಇನ್ನಾವುದೇ ರೂಪದಲ್ಲಿ ಇರಬಹುದು. ಕಲಾ ಸೇವೆಯಿಂದ ಮನುಷ್ಯ ಅತೀ ಉನ್ನತ ಸ್ಥಾನವನ್ನು ಏರ ಬಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ( ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗವಂತ ಶ್ರೀಕೃಷ್ಣನಿಗೆ […]

Continue Reading

ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಸುರತ್ಕಲ್ ನಲ್ಲಿ12 ತಾಸುಗಳ ಸಾಮೂಹಿಕ ಧರಣಿ

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಾಣ ಆಗದೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್” ನೇತೃತ್ವದಲ್ಲಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸಾಮೂಹಿಕ ಧರಣಿ ನಡೆಯಿತು. ಹಲವು ಜನಪರ ಸಂಘಟನೆಗಳು, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಧರಣಿಯಲ್ಲಿ ಭಾಗಿಗಳಾದರು. ಸಾಮೂಹಿಕ ಧರಣಿಯನ್ನು ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತಾಡಿದರು. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರು ದಶಕದ ಹಿಂದೆ […]

Continue Reading

ಚಿನ್ನದ ವ್ಯಾಪಾರಿಯೊಬ್ಬರಿಂದ 31 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ತು ಪಡೆದು ಪರಾರಿಯಾಗಿದ್ದ ಅಂತರಾಜ್ಯ ವಂಚಕ ಪುಗಲ್ ಅರುಣ್ ಬಂಧನ

ತಮಿಳುನಾಡು ಮೂಲದ ವಂಚಕನ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು ಮಂಗಳೂರಿನ ಚಿನ್ನದ ವ್ಯಾಪಾರಿಯೊಬ್ಬರಿಂದ 31 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ತು ಪಡೆದು ಪರಾರಿಯಾಗಿದ್ದ ಅಂತರಾಜ್ಯ ವಂಚಕ ತಮಿಳುನಾಡು ಮೂಲದ ಅರುಣ್ ಎಂಬಾತನನ್ನು ಮಂಗಳೂರಿನ ಉರ್ವ ಪೊಲೀಸರು ಕೊಯಂಬತ್ತೂರಿನಲ್ಲಿ ಬಂಧಿಸಿ, ಮಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈತ ವಂಚಿಸಿದ 240 ಗ್ರಾಂ ತೂಕದ ಚಿನ್ನದ ಬಿಸ್ಕೀಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನವಂಬರ್ 21 ರಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಉರ್ವಾದ ಗುಜ್ಜಾಡಿ ಚೇಂಬರ್ಸ್‌ನಲ್ಲಿರುವ ಸ್ವರ್ಣ ಜುವೆಲರ್ಸ್‌ಗೆ ಭೇಟಿ ನೀಡಿ, […]

Continue Reading

ಏಳು ವರ್ಷದಿಂದ ದುಡಿಸಿ, ಸಂಬಳ ನೀಡದ ಬೀಡಿ ಮಾಲಕರ ವಿರುದ್ಧ ಮತ್ತು ಕನಿಷ್ಟ ಕೂಲಿ ಜಾರಿ ಮಾಡದಿದ್ದರ ವಿರುದ್ಧ ಬೀಡಿ ಕಾರ್ಮಿಕರ ಪ್ರತಿಭಟನೆ

01.04.2024 ರಿಂದ ಸರಕಾರ ನಿಗದಿ ಪಡಿಸಿ ಆದೇಶ ಮಾಡಿದ ಕನಿಷ್ಠ ಕೂಲಿಯನ್ನು ಕೂಡಾ ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು. ಅವರು ಇಂದು ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯಲ್ಲಿ ನಡೆದ ಬೀಡಿ ಕಾರ್ಮಿಕರ ಧೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖ ಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ […]

Continue Reading

ಮಂಗಳೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ, ಭೂ ದಾಖಲೆಗೆ ಸಂಬಂಧ ಪಟ್ಟ ಮೂರು ಮಂದಿ ಅಧಿಕಾರಿಗಳು ವಶಕ್ಕೆ

ಸರ್ವೆಯರ್ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಬಿ.ಕೆ.ರಾಜು, ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಹೊರಗುತ್ತಿಗೆ ನೌಕರನಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಭೂ ದಾಖಲೆಗೆ ಸಂಬಂಧ ಪಟ್ಟ ಮೂರು ಮಂದಿ ಅಧಿಕಾರಿಗಳನ್ನು ಇಂದು ಬಂಧಿಸಿರುತ್ತಾರೆ. ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಬಿ.ಕೆ.ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ […]

Continue Reading