ಮಂಗಳೂರು ನಗರದ ರಸ್ತೆಗಳು ಎಷ್ಟು ಸುರಕ್ಷಿತ..? ಅಪಘಾತಗಳಿಗೆ ಕಾರಣವಾಗುತ್ತಿದೆ ರಸ್ತೆ ನಿರ್ವಹಣೆ

ಪೊಲೀಸ್ ಇಲಾಖೆ ವರದಿ ನೀಡಿದರೂ ಮಹಾನಗರ ಪಾಲಿಕೆ ಜಾಣ ಮೌನಕ್ಕೆ ಜಾರಿದೆ.! ಮಂಗಳೂರಿನಲ್ಲಿ ಕೇವಲ ಕೋಮುಗಲಭೆಯಲ್ಲಿ ಮಾತ್ರ ಜೀವ ಹೋಗೋದಲ್ಲ. ಅಲ್ಲಲ್ಲಿ ರಸ್ತೆಯ ಅಪಘಾತಕ್ಕೂ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆಯಿಂದ ವ್ಯಕ್ತಿ ಈಗಲೂ ಹೊರಗೆ ಹೋದರೆ ಅದೇ ಪ್ರಾರ್ಥನೆ ‘ಮರಳಿ ಸುರಕ್ಷಿತವಾಗಿ ಬರಲಿ’ ಎಂದು. ಮಂಗಳೂರು ನಗರಕ್ಕೆ ಸಿಲಿಕಾನ್ ಹಬ್, ಐಟಿ ಬಿಟಿ ಗಳು ಬರಲಿದೆ ಅನ್ನುವ ಸುದ್ದಿಗಳು ಇವೆ. ಇದಕ್ಕೆ ಶಂಕುಸ್ಥಾಪನೆಗಳನ್ನು ಕೂಡ ರಾಜ್ಯ ಸರಕಾರ ನೆರವೇರಿಸಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಮತೀಯ ಶಕ್ತಿಗಳ ಅಟ್ಟಹಾಸ […]

Continue Reading

ಕರಾವಳಿಯಲ್ಲೊಂದು ಕೇರಳ ಮಾದರಿ ಮಾನವೀಯ ಸೇವೆ

ರೋಗಿಗಳು, ಅಶಕ್ತರ ಪಾಲಿನ ಸಾಂತ್ವನ ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿ “ನೋವಿನಲ್ಲಿ ನೀ ಒಬ್ಬಂಟಿಯಲ್ಲ , ಜೊತೆಗೆ ನಾವಿದ್ದೇವೆ” ಎಂಬ ಘೋಷಣೆಯೊಂದಿಗೆ ತಾಲೂಕಿನ ಮೂಲೆ ಮೂಲೆಗಳಲ್ಲಿರುವ ವಿವಿಧ ಕಾರಣಕ್ಕಾಗಿ ಹಾಸಿಗೆ ಹಿಡಿದಿರುವ ರೋಗಿಗಳನ್ನು ಭೇಟಿ ನೀಡಿ, ಅವರಿಗೆ ಆತ್ಮ ಸ್ಥೈರ್ಯ ಕೊಡುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ತಂಡ ಹಲವಾರು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ಇಂದು ಕಳೆಂಜ ಗ್ರಾಮದ ರಾಮಣ್ಣ ಗೌಡರ ಮನೆಗೆ ಭೇಟಿ […]

Continue Reading

ಪುತ್ತೂರು: ನಳಿನ್ ಕುಮಾರ್ ಕಟೀಲ್ MLA ಅಭ್ಯರ್ಥಿ.!

ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ವರ್ಷಗಳು ಬಾಕಿ ಉಳಿದಿವೆ. ಆದರೆ ಕರಾವಳಿಯ ರಾಜಕಾರಣದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದೆ. ಅದರಲ್ಲೂ ಬಿಜೆಪಿಯಲ್ಲಂತೂ ರಾಜಕೀಯ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿದೆ. ಮೂಡಬಿದ್ರೆ, ಬಂಟ್ವಾಳದಲ್ಲಿ ಬಿಜೆಪಿ ಹೊಸ ಮುಖದ ಅನ್ವೇಷಣೆಯಲ್ಲಿದೆ ಅನ್ನುವ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಗುಂಯ್ ಗುಡುತ್ತಿದೆ. ಮಂಗಳೂರು ಉತ್ತರದಲ್ಲೂ ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾಯಿಸಿದರೆ ಹೇಗೆ ಅನ್ನುವ ಸಣ್ಣ ಚರ್ಚೆಗಳು ನಡೆಯುತ್ತಿದೆ. ಅದರ ನಡುವೆ ಕೈಯಾರೆ ಪಕ್ಷವನ್ನು ಬಲಿಕೊಟ್ಟ ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಪತಾಕೆ ಹಾರಿಸಲು […]

Continue Reading

ಮೇನಲ್ಲಿ ಪ್ರಥಮ ಬಾರಿಗೆ ವಿಧಾನಸೌಧ ಮೆಟ್ಟಿಲು ಮೇಲೆ ಯಕ್ಷಗಾನ ಪ್ರದರ್ಶನ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಇದೇ ಪ್ರಥಮ ಬಾರಿಗೆ ಉಭಯತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ವಿಧಾನಸೌಧದ ಸ್ಪೀಕರ್‌ ಯು. ಟಿ .ಖಾದರ್‌ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾ ಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್‌ […]

Continue Reading

ಉಪ್ಪಿನಂಗಡಿ: ಮಾನಭಂಗ ಪ್ರಕರಣ: ಆರೋಪಿಗೆ ಜಾಮೀನು

ಪುತ್ತೂರು: ಉಪ್ಪಿನಂಗಡಿ ಬೊಳ್ಳಾವು ಎಂಬಲ್ಲಿ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 11 ರಂದು ಬೆಳಿಗ್ಗೆ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿದ್ದ ಸಂದರ್ಭ ಧರ್ನಪ್ಪ ನಾಯ್ಕ ಎಂಬಾತ ನನ್ನ ಬಳಿ ಬಂದು ನನ್ನ ಬಟ್ಟೆಯನ್ನು ಹರಿದು ಹಾಕಿ ಮೈಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿ ಅವಾಚ್ಯವಾಗಿ ಬೈದು, ತೋಟಕ್ಕೆ ನೀರು ಬಿಡುವ ಜೆಟ್ ನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಸುಮಿತ್ರಾ ಎಂಬವರು […]

Continue Reading

ಅಕ್ರಮ ಮಣ್ಣು ಮಾಫಿಯಾಕ್ಕೆ ಮೂಡಬಿದ್ರೆ ಆರ್.ಐ ಬಲಿಪಶುವಾದರೇ..?, ವರ್ಗಾವಣೆಯ ಮಸಲತ್ತು ನಡೆಸಿದ ಜಿಲ್ಲೆಯ ರಾಜಕಾರಣಿ ಯಾರು.?

ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಇದು ಕಾಲವಲ್ಲ.!, ಬಳ್ಳಾರಿ ಗಣಿ ಮಾಫಿಯಾವನ್ನು ಮೀರಿಸುವ ಬಾಕ್ಸೈಟ್ ದಂಧೆ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಕೇಂದ್ರವಾಗಿರುವ, ನಿರ್ಮಾಣ ಕಾಮಗಾರಿಗೆ ಅಗತ್ಯವಾಗಿರುವ, ನೂರಾರು ಬಡ ಕುಟುಂಬಗಳ ಪಾಲಿಗೆ ಆರ್ಥಿಕ ಶಕ್ತಿಯಾಗಿರುವ ಕೆಂಪು ಕಲ್ಲು ಗಣಿಗಾರಿಕೆಗೆ ದೊಡ್ಡ ಬ್ರೇಕ್ ಬಿದ್ದಿದ್ದರೂ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಮೂಡಬಿದ್ರೆಯಲ್ಲಿ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಕುಳಗಳಿಗೆ ಸಿಂಹಸ್ವಪ್ನರಾಗಿದ್ದ ಮೂಡಬಿದ್ರೆ ಕಂದಾಯ ನಿರೀಕ್ಷಕರಾದ ಹೆಚ್ ಬಿ ಮಂಜುನಾಥ ಅವರನ್ನು ಡಿಡೀರ್ ಆಗಿ […]

Continue Reading

​ಉಡುಪಿ: ಸಾರ್ವಜನಿಕ ಶೌಚಾಲಯಗಳು ‘ಲಕ್ಷ್ಮಿ’ ಪುತ್ರರ ಪಾಲೇ.? ಸಾರ್ವಜನಿಕರ ಸುಲಿಗೆಗೆ ಬೀಳಲಿ ಬ್ರೇಕ್ : ಕರವೇ ಜಿಲ್ಲಾಧ್ಯಕ್ಷ ಅ ರಾ ಪ್ರಭಾಕರ್ ಪೂಜಾರಿ

ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣ, ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣದಲ್ಲೂ ಕೂಡ ಇದೇ ರೀತಿಯ ಅನ್ಯಾಯ : ಹೋರಾಟ ಅನಿವಾರ್ಯ ​ಉಡುಪಿ: ಸಾಂಸ್ಕೃತಿಕ ನಗರಿ, ಪ್ರವಾಸಿ ತಾಣಗಳ ಬೀಡು ಉಡುಪಿ ಇಂದು ಶೌಚಾಲಯಗಳ ಹೆಸರಿನಲ್ಲಿ ನಡೆಯುತ್ತಿರುವ ಬಹಿರಂಗ ಲೂಟಿಗೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಇರುವ ‘ಸುಲಭ ಶೌಚಾಲಯ’ಗಳು ಹೆಸರಿಗೆ ಮಾತ್ರ ಸುಲಭ, ಆದರೆ ಸಾಮಾನ್ಯ ಜನರ ಜೇಬಿಗೆ ಮಾತ್ರ ಇದು ಕತ್ತರಿಯಾಗಿ ಪರಿಣಮಿಸಿದೆ. ಮನಸೋ ಇಚ್ಛೆ ದರ ವಸೂಲಿ ನಿಯಮಗಳನ್ನ ಗಾಳಿಗೆ ತೂರಾಟ​ನಗರದ ಪ್ರಮುಖ ಆಯಕಟ್ಟಿನ […]

Continue Reading

ವಿಟ್ಲ: ವೈದ್ಯ ಶರತ್ ಶೆಟ್ಟಿಯವರ ದೂರು ಹಿನ್ನಲೆ; ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ಬೀಗ ಜಡಿದ ಆರೋಗ್ಯ ಇಲಾಖೆ

ವಿಟ್ಲ: ರಕ್ತ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ ರಕ್ತದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದು ದೂರು ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಗೆ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನಧಿಕೃತ ಲ್ಯಾಬೊರೇಟರಿಗೆ ಬೀಗ ಜಡಿದಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬದನಾಜೆ ನಿವಾಸಿ ಕಿಯಾನ್ಕ್ ಹರ್ಬಲ್ ಕಂಪನಿಯ ಮಾಲೀಕ ಡಾ.ಶರತ್ ಶೆಟ್ಟಿ ದೂರುದಾರರು.ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆಯಲ್ಲಿ ಕೆಲಸಮಯಗಳ ಹಿಂದಷ್ಟೇ ಆರಂಭಗೊಂಡ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ವಾರದ ಹಿಂದೆ […]

Continue Reading

ಮಂಗಳೂರು ನಗರದ ಗಾಳಿಯ ಗುಣಮಟ್ಟ ವಿಷಕಾರಿ; ಗಂಭೀರ ಆರೋಗ್ಯದ ಸಮಸ್ಯೆಗೆ ಕಾರಣವಾಗಲಿದೆ: ತಜ್ಞರ ಎಚ್ಚರಿಕೆ

ಮಂಗಳೂರು ನಗರದಲ್ಲಿ ವಾಯುಮಾಲಿನ್ಯ ವಿಪರೀತವಾಗಿರುವುದರಿಂದ ಗಾಳಿಯ ಗುಣಮಟ್ಟ ಸತತ ಕುಸಿತ ಕಾಣುತ್ತಿದ್ದು, ಅದೀಗ ಎಕ್ಯೂಐ ಸೂಚ್ಯಂಕದಲ್ಲಿ 200 ರ ಗಡಿ ತಲುಪಿದೆ. ಎಕ್ಯೂಐ ಮಾಪನದ ಪ್ರಕಾರ 200 ರಿಂದ 300 ಸೂಚ್ಯಂಕ ಕಂಡುಬಂದರೆ ಅದು ಗಂಭೀರ ಹಂತ ತಲುಪಿದೆ ಎಂದರ್ಥ. ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರಿನ ಗಾಳಿ ವಿಷಕಾರಿಯಾಗಿದ್ದು, ಪುಟಾಣಿಗಳು, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಉಳ್ಳವರು ಹಾಗೂ ವೃದ್ಧರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ. ಮಂಗಳೂರಿನ ಈಗಿನ ವಾಯು ಗುಣಮಟ್ಟಗಳು ಆರೋಗ್ಯಕ್ಕೆ […]

Continue Reading

ಆಯುಷ್ಮಾನಡಿ ಬಡವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ( open heart surgery) ಮಾಡಲು ತಿಂಗಳುಗಟ್ಟಲೆ ಕಾಯಬೇಕಾ: ಸಂತೋಷ್ ಬಜಾಲ್ ಡಿವೈಎಪ್ಐ

ದ.ಕ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನಾ ಸಂಸ್ಥೆ ಸ್ಥಾಪನೆಗೆ ನಮ್ಮ ಬೇಡಿಕೆ ಯಾಕೆಂದು ಈ ಕೆಳಗಿನ ಕಥೆ ಓದಿ. ಇಂದು ಸಂಜೆಯ ಹೊತ್ತಿಗೆ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು ಸಮಸ್ಯೆ ಕೇಳಿ ಅವರಿರುವ ಆಸ್ಪತ್ರೆ ಬಳಿ ದಾವಿಸಿದೆ. ರೋಗಿಯ ಹೆಸರು ಕೃಷ್ಣಪ್ಪ ಸಪಲಿಗ ಸುಮಾರು 70 ಪ್ರಾಯ ಅವರದು ಕೂಲಿ ಕೆಲಸ ಮಾಡಿ ಬದುಕುವ ಸಾಮಾನ್ಯ ಬಡ ಕುಟುಂಬ. ಜೊತೆಗಿದ್ದ ಮಗ ಆತನದು ಮೆಕಾನಿಕ್ ವೃತ್ತಿ. ಮಗ ತಂದೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ […]

Continue Reading