ಗುರುಪುರ ಬೆಳ್ಳಿಬೆಟ್ಟುವಿನಲ್ಲಿ ಕುಸಿಯುವ ಭೀತಿಯಲ್ಲಿ ಐದಾರು ಮನೆಗಳು.. ದುರಂತ ನಡೆದರೆ ಯಾರು ಹೊಣೆ.?

ಮಂಜನಾಡಿ, ನಾಗುರಿ ರೀತಿಯ ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ ಮಂಗಳೂರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಹಲವು ಅನಾಹುತಗಳು ನಡೆದಿದೆ. ಜಿಲ್ಲಾಡಳಿತ ಅನಾಹುತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳದೆ ಇರುವುದರಿಂದ ಹಲವು ಸಾವು ನೋವುಗಳು ಸಂಭವಿಸಿದೆ. ಜನಪ್ರತಿನಿಧಿಗಳು ದುರಂತ ನಡೆದ ನಂತರ ತಂಡೋಪತಂಡವಾಗಿ ಬಂದು ಕಣ್ಣೀರು ಸುರಿಸಿ ಸಹಾಯಧನ ನೀಡುತ್ತಾ ತಮ್ಮ ಕರ್ತವ್ಯ ಮುಗಿಯಿತು ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಪಾಯ ನಡೆಯಲಿದೆ ಅನ್ನುವ ಖಾತರಿ ಇದ್ದಾಗ ಸಂಬಂಧಪಟ್ಟ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ […]

Continue Reading

ರಿವಾಲ್ವರ್, ಲಾಠಿ ಪ್ರಯೋಗಿಸದೇ ಮಂಗಳೂರಿನಲ್ಲಿ ಅಕ್ರಮ ದಂಧೆ, ಕೋಮುವಾದವನ್ನು ಮಟ್ಟಹಾಕಿದ್ದೇ ಕಮೀಷನರ್ ಸುಧೀರ್ ರೆಡ್ಡಿ, ಎಸ್ಪಿ ಅರುಣ್

ಗುಂಡು ಹಾರಿಸಿ ಸದೆಬಡಿಯಿರಿ. ಸಚಿವ ಖಾದರ್ ಸಲಹೆ ಪ್ರಜಾಪ್ರಭುತ್ವ ವಿರೋಧಿ, ದಕ್ಷ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಹುನ್ನಾರ: ಮುನೀರ್ ಕಾಟಿಪಳ್ಳ ಆಕ್ರೋಶ ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಅವರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರಲ್ಲಿ, ಮಂಗಳೂರಿನಲ್ಲಿ ನಡೆದಿರುವ ಕೊಲೆ, ಸುಲಿಗೆ, ಗಡೀಪಾರು ಮುಂತಾದವುಗಳ ಲೆಕ್ಕ (ಅಂಕಿ ಅಂಶ) ಕೇಳುವ, ಕ್ರಿಮಿನಲ್‌ ಗಳ ಕಾಲಿಗೆ ಗುಂಡು ಹಾರಿಸುವಂತೆ ಸಲಹೆ ನೀಡುವ, ಕಾನೂನು ಸುವ್ಯವಸ್ಥೆ ಕುರಿತಾಗಿ […]

Continue Reading

ಮಂಗಳೂರು: ಸಂಡೆ ಬಜಾರ್ ಮೇಲೆ ಮುಂದುವರಿದ ನಗರಪಾಲಿಕೆ ಧಾಳಿ; ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ

ಮಂಗಳೂರು: ನಗರದ ಪುರಭವನದ ಬಳಿ ಭಾನುವಾರ ರಜಾದಿನ ವ್ಯಾಪಾರ ಮಾಡುವ ಸಂಡೆ ಬಜಾರ್ ವ್ಯಾಪಾರಿಗಳ ವಿರುದ್ಧ ನಗರಪಾಲಿಕೆ ಕಾರ್ಯಾಚರಣೆ ಮುಂದುವರಿಸಿದೆ. ಇಂದು ಬೀದಿವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಮುಂದಾಗುತ್ತಿದ್ದಂತೆ ನಗರಪಾಲಿಕೆ ಆಯುಕ್ತರು ಕಾರ್ಯಾಚರಣೆ ಆರಂಭಿಸಲು ಆದೇಶ ನೀಡಿದರು. ಪಾಲಿಕೆ ಆಯುಕ್ತರ ಆದೇಶಕ್ಕೆ ಬೀದಿ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪಾದಚಾರಿಗಳ ಓಡಾಟಕ್ಕೆ ಬೇಕಾದಷ್ಟು ಜಾಗ ಇದ್ದರೂ ತೆರವುಗೊಳಿಸುವುದು ಸರಿಯಲ್ಲ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಆಯುಕ್ತರು ಧಾಳಿ ಮುಂದುವರಿಸಿದಾಗ ಬೀದಿಬದಿ ವ್ಯಾಪಾರಿಗಳು ಘೋಷಣೆ ಕೂಗುತ್ತ ರಸ್ತೆ ತಡೆಸಿ ಪ್ರತಿಭಟನೆ ನಡೆಸಿದರು. […]

Continue Reading

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ನಿಗೂಢ ಸಾವಿನ ಪ್ರಕರಣ; ಗೋವಾ ಪೊಲೀಸರ ಕಾರ್ಯಚರಣೆ; ಮಂಗಳೂರು ಮೂಲದ ಅಕ್ಷತಾ ಬಂಧನ

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಪ್ರಮುಖ ಆರೋಪಿ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್​ ರೂಪಶ್ರೀ ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಜಲಕ್ರೀಡಾ ದೋಣಿಗಳ ಉದ್ಯಮಿಯಾಗಿದ್ದ ಸಂದೀಪ ಸಾಲಿಯಾನ್​ ಮಲ್ಪೆ ನಿವಾಸಿಯಾಗಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿದ್ದರು. ನಂತರ ಚಾಲಕ ವೃತ್ತಿ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಯ ವ್ಯವಹಾರ ಆರಂಭಿಸಿದ್ದರು. ಜಲಕ್ರೀಡೆ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿ ಪ್ರಮುಖ ಉದ್ಯಮಿಯಾಗಿ […]

Continue Reading

ವಿಟ್ಲ ಪೊಲೀಸರ ಕಾರ್ಯಾಚರಣೆ: ಅಕ್ರಮ ಬಾಕ್ಸೈಟ್ ಗಣಿಗಾರಿಕೆ ಸ್ಥಳಕ್ಕೆ ಧಾಳಿ; ಆರೋಪಿಗಳು ಪರಾರಿ, ಯಂತ್ರೋಪಕರಣಗಳ ವಶ.

ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯ ಕರೋಪಾಡಿ ಮುಗುಳಿ ಎಂಬಲ್ಲಿ ಅಕ್ರಮ ಗಣಿಗಾರಿಕೆಯ ನಡೆಸುತ್ತಿರುವ ಬಗ್ಗೆ, ವಿಟ್ಲ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ಆಗಮನ ಆಗುತ್ತಿದ್ದಂತೆ, ಪೊಲೀಸರ ವಾಹನವನ್ನು ಕಂಡು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳು ಅಲ್ಲಿಂದ ಪರಾರಿಯಾಗಿರುತ್ತಾರೆ. ಸದ್ರಿ‌ ಸ್ಥಳವನ್ನುಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ರಮ ಕೆಂಪು ಕಲ್ಲು ಹಾಗೂ ಬಾಕ್ಸೈಟ್ ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ ಯಂತ್ರೋಪಕರಣಗಳು, ಸ್ಥಳದ‌ ಸಮೀಪದಲ್ಲೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವುದು ಹಾಗೂ […]

Continue Reading

ಬೈಕಂಪಾಡಿ ಹೈವೇ ದರೋಡೆ ಗ್ಯಾಂಗ್ ಲಾಕ್.. ಮಂಗಳೂರನ್ನು ಬೆಚ್ಚಿಬೀಳಿಸಿದ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು

ಮಂಗಳೂರನ್ನು ಬೆಚ್ಚಿಬೀಳಿಸಿದ ಹೈವೇ ದರೋಡೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ತಲಶ್ಶೇರಿ ಮಂಬರಮ್, ಪತಿರಿಯಾಡ್ ಗ್ರಾಮದ ಕಾಯಲೋಡೆ ನಿವಾಸಿ ನಾರಾಯಣ ಸ್ವಾಮಿ ಎಂಬವರ ಪುತ್ರ ನಿಮಿಲ್ ಆರ್ ಕೆ , ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹಕ್ಕತ್ತೂರು-ತೊಬ್ಬೊಟ್ಟು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಇರ್ಷಾದ್ ಹಾಗೂ ಮಡಿಕೇರಿ ಮಾರ್ಕೆಟ್ ಸ್ಟುಡಿಯೋ ಬಳಿ ನಿವಾಸಿ ದಿವಂಗತ ಭಾಷಾ ಎಂಬವರ ಪುತ್ರ ಮುಸ್ತಾಫ ಬಂಧಿತ ಆರೋಪಿಯಾಗಿದ್ದಾರೆ. ಜೂನ್ 29 ರಂದು ಬೈಕಂಪಾಡಿ ದ್ವಾರ […]

Continue Reading

ಎಚ್ಚರ..ಭೀಕರ ಭೂ ಕುಸಿತಕ್ಕೆ ಕಾರಣವಾಗುತ್ತಿದೆ ಮಾನವ ನಿರ್ಮಿತ ಅಜಾಗರೂಕತೆ..!

ಕರಾವಳಿ ಭಾಗದಲ್ಲಿ ಗುಡ್ಡ, ಬೆಟ್ಟಗಳ ನಾಶ ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ. ಮುಂದಕ್ಕೆ ಇದು ಮಾನವ ನಿರ್ಮಿತ ದುರಂತವಾಗಲಿದೆ.! ದುರಂತಗಳು ಯಾವಾಗಲೂ ದುರದೃಷ್ಟಕರವೇ. ಸಾವು ನೋವು ಮತ್ತು ವರ್ಷಗಳ ಕಠಿಣ ದುಡಿಮೆಯ ಮೂಲಕ ಸೃಷ್ಟಿಯಾದ ಸೊತ್ತಿನ ನಾಶಕ್ಕೆ ಇವು ಕಾರಣವಾಗುತ್ತವೆ. ದಿಢೀರ್‌ ಮತ್ತು ನಾವು ಊಹಿಸದೇ ಇದ್ದ ಸ್ಥಳದಲ್ಲಿ ಘಟಿಸುತ್ತವೆ. ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಅತಿವೃಷ್ಟಿ, ಸುನಾಮಿಯಂತಹ ದುರಂತಗಳು ಇತಿಹಾಸ ಪೂರ್ವದಿಂದಲೂ ಇದ್ದೇ ಇದ್ದವು. ಇವು ನೈಸರ್ಗಿಕ ಪ್ರಕೋಪಗಳು. ಮನುಷ್ಯ ಕೈಗಾರಿಕೆಯನ್ನು ಶೋಧಿಸುವುದರೊಂದಿಗೆ ಮಾನವ […]

Continue Reading

ಮಂಗಳೂರು: ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಭೇಟಿ; ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಸಿ ರವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಬೆಳ್ತಂಗಡಿ ತಾಲೂಕು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜೂನ್ 28 ರಂದು ಭೇಟಿ ಮಾಡಿ ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು, ಲೋಡರ್ಸ್, ಕ್ಲೀನರ್ಸ ಗಳಿಗೆ ನೇರ ಪಾವತಿ ಮಾಡಬೇಕು, ಪೌರ ಕಾರ್ಮಿಕರಿಗೆ ನಿವೇಶನ, ವಸತಿ ಸೌಕರ್ಯ ಒದಗಿಸಬೇಕು, ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಯಗಳನ್ನು ಸಂಜೀವಿನಿ […]

Continue Reading

ಸುರತ್ಕಲ್ ಪೊಲೀಸರ ಕಾರ್ಯಾಚರಣೆ: ಮಹಿಳೆಯರ ಸರ ಸುಲಿಗೆ ಪ್ರಕರಣದ ಆರೋಪಿಯ ಬಂಧನ; ಚಿನ್ನಾಭರಣಗಳ ವಶ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ ಎರಡನೇ ಬ್ಲಾಕ್ ನಲ್ಲಿರುವ ಶ್ರೀಮತಿ ಜಾಹೀದ್ ಎಂಬವರು ತನ್ನ ಮನೆಯ ಬೆಡ್ ರೂಮಿನಲ್ಲಿ ಮಲಗಿದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಿಟಿಕಿಯಿಂದ ಕೈ ಹಾಕಿ ಶ್ರೀಮತಿ ಜಾಹೀದಾರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಲು ಯತ್ನಿಸಿದಾಗ, ಕರಿಮಣಿ ಸರ ತುಂಡಾಗಿ ಸುಮಾರು 20 ಸಾವಿರ ರೂ. ಮೌಲ್ಯದ ಕರಿಮಣಿ ಸರದ ತುಂಡನ್ನು ಆರೋಪಿಯು ಕಸಿದುಕೊಂಡು ಹೋಗಿದ್ದು, ಉಳಿದ ಕರಿಮಣಿ ಸರದ ತುಂಡು ಜಾಹಿದಾ ಅವರಲ್ಲೇ ಬಾಕಿಯಾಗಿದ್ದು, ಈ […]

Continue Reading

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡದಿದ್ದಲ್ಲಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸುತ್ತೇವೆ: ಮುನೀರ್ ಕಾಟಿಪಳ್ಳ

ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ಗಂಜಿಮಠದಲ್ಲಿ ಬೃಹತ್ ಮಾನವ ಸರಪಳಿ ಸರಕಾರಿ ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಿ ಎಂದು ಜನರು ಆಗ್ರಹಿಸುತ್ತಿದ್ದರೆ, ಆರೋಗ್ಯ ಸಚಿವ ಯು.ಟಿ ಖಾದರ್ ಖಾಸಗಿಯವರ ಮಡಿಲಿಗೆ ಹಾಕಲು ಹೊರಟಿದ್ದಾರೆ. ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಿ ಎಂದು ಬೇಡಿಕೆ ಇಟ್ಟರೆ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಗಿಲೀಟಿನ ಮಾತುಗಳನ್ನು ಸರಕಾರ ಆಡುತ್ತದೆ. ವಿರೋಧ ಪಕ್ಷದ ಬಿಜೆಪಿ ಶಾಸಕರುಗಳು ಸರಕಾರದ ಇಂತಹ ಜನವಿರೋಧಿ ಧೋರಣೆಗಳ ವಿರುದ್ದ ಸೊಲ್ಲೆತ್ತುತ್ತಿಲ್ಲ. ಮಂಗಳೂರು ಉತ್ತರದ ಶಾಸಕ ಭರತ್ […]

Continue Reading