ಮನೆಯಂಗಳದಲ್ಲೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು; ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಬಳಿ ದುರ್ಘಟನೆ.

ಮನೆಯಂಗಳದಲ್ಲಿ ಮಹಿಳೆಯೊಬ್ಬರು ಕಾರು ಹಿಂದಕ್ಕೆ ತೆಗೆಯುವ ಸಂದರ್ಭ ಮನೆಯ ಮಗುವೇ ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಮಲ್ಲಿಗೆ ಮಜಲು ಎಂಬಲ್ಲಿ ನಡೆದಿದೆ. ಮಲ್ಲಿಗೆ ಮಜಲು ನಿವಾಸಿ ಅಬ್ದುಲ್ ಹಮೀದ್ ಪುತ್ರ ನವಾಫ್ ಇಸ್ಮಾಯಿಲ್ ಮೃತ ಬಾಲಕ.! ಮನೆಯ ಮಹಿಳೆಯೊಬ್ಬರು ಅಂಗಳದಲ್ಲೇ ಕಾರು ಹಿಂದಕ್ಕೆ ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಮುಂದಕ್ಕೆ ಚಲಾಯಿಸಿ ಡಿಕ್ಕಿ ಹೊಡೆದಿದೆ. ಶಾಲೆ ಬಿಟ್ಟು ಆಗಷ್ಟೇ ಮನೆಗೆ ಬಂದಿದ್ದ ಬಾಲಕ ನವಾಫ್ ಕಾರಿನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ […]

Continue Reading

ಮೂಡಬಿದ್ರೆ: ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ನಲ್ಲಿ ಎರಡನೇ ಸ್ಥಾನ

ಗಾಂಜಾ, ಡ್ರಗ್ಸ್ ಪಿಡುಗನ್ನು ಸಂಘಟಿತ ಹೋರಾಟದಿಂದ ಮಣಿಸೋಣ: ಇನ್ಸ್ ಪೆಕ್ಟರ್ ಸಂದೇಶ್ ನೂರುಲ್ ಇಸ್ಲಾಂ ಮದ್ರಸ ಈದ್ಗಾ ಮೂಡುಬಿದಿರೆ, ಈದ್ಗಾ ಫ್ರೆಂಡ್ಸ್ ಈದ್ಗಾ ಹಾಗೂ SKSSF ಈದ್ಗಾ ಯುನಿಟ್ ಇದರ ವತಿಯಿಂದ ‘ಇಶಲ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜೆ ಡ್ರಗ್ಸ್, ಗಾಂಜಾ ಪಿಡುಗಿಗೆ ಯುವ ಜನತೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಡ್ರಗ್ಸ್ ದಂಧೆ ಇದ್ದರೆ, ಉಳಿದ ಶೇಕಡಾ 28 ರಷ್ಟು ದಕ್ಷಿಣ ಕನ್ನಡ […]

Continue Reading

ಸಿದ್ಧರಾಮಯ್ಯರವರೇ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರವರಿಗೆ ದಯಮಾಡಿ ಮೊಬೈಲ್ ಕೊಡಿಸಿ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ಆಯುಕ್ತರಾಗಿ ನೂರ್ ಜಹಾರ ಖಾನುಮ್ ಕೆ.ಎ.ಎಸ್ (ಸುಪರ್ ಟೈಮ್ ಶ್ರೇಣಿ) ಇವರು ಸೇವೆ ಸಲ್ಲಿಸುತ್ತಿದ್ದಾರೆ. ನಾನು ದಿನಾಂಕ 04-09-2024 ರಂದು ಜಪ್ಪಿನಮೊಗರು ಬಿ ಗ್ರಾಮದ ಉಮರ್ ಫಾರೂಕ್ ಎಂಬವರ ಕಟ್ಟಡದ ಅಕ್ರಮದ ಬಗ್ಗೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ದೂರು ಅರ್ಜಿಯನ್ನು ಸಲ್ಲಿಸಿದ ಸಮಯ ಬೆಳಿಗ್ಗೆಯಾಗಿರುವುದರಿಂದ ಆಯುಕ್ತರು ತಮ್ಮ ದಫೆದಾರ್ ರಾದ ಕರುಣಾಕರ್ ರವರ ಬಳಿ ಮಧ್ಯಾಹ್ನ 3.30 ರ ನಂತರ ಭೇಟಿಯಾಗಲು ತಿಳಿಸಿರುತ್ತಾರೆ. ದೂರು ಅರ್ಜಿಯು ಅಕ್ರಮ ಹಾಗೂ ತುಂಬಾ ಗಂಭೀರವಾಗಿರುವುದರಿಂದ […]

Continue Reading

ಹಳೆಯ ಪರ್ಮಿಟ್, ಹೊಸ ದಂಧೆ? ‘ಉಳಿಯ’ ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾಕ್ಕೆ ಅಧಿಕಾರಿಗಳ ಸಾಥ್? CSಗೆ ಪರಿಸರ ಹೋರಾಟಗಾರ ದೂರು

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತಾಂಡವವಾಡುತ್ತಿರುವ ಮರಳು ಮಾಫಿಯಾ ವಿರುದ್ಧ ರಣಕಹಳೆ ಮೊಳಗಿದೆ. ಮಂಗಳೂರು ಹೊರವಲಯದ ‘ಉಳಿಯ’ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿರುವಂತೆಯೇ, ಮರಳು ಮಾಫಿಯಾ ಜೊತೆ ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹಿರಿಯ ಪತ್ರಕರ್ತರೂ ಆದ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಈ ದೂರನ್ನು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧವೇ ಆದ್ಯ ಕ್ರಮವಾಗಬೇಕಿದೆ ಎಂದು ಗಮನಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು […]

Continue Reading

ಪೋಕ್ಸೋ ಪ್ರಕರಣದ ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..

ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವಿನಲ್ಲಿ ದುಷ್ಕೃತ್ಯ.. ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕ ಕುದ್ದುಪದವು ಜಂಕ್ಷನಲ್ಲಿರುವ ಮಹಮ್ಮದ್ ಅಶ್ರಫ್ ಮಾಲಿಕತ್ವದ ಎಂ.ಎಮ್.ಸ್ಟೋರ್ಸ್ ಅಂಗಡಿಗೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದಲ್ಲಿ ಮಹಮ್ಮದ್ ಅಶ್ರಫ್ ನನ್ನು ವಿಟ್ಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಕೇವಲ ಐದು ದಿನದಲ್ಲೇ ಆರೋಪಿ ಅಶ್ರಫ್ ಜಾಮೀನು ಪಡೆದು ಹೊರ ಬಂದಿದ್ದ. ಈ ವಿಚಾರ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. […]

Continue Reading

ಮಲೆನಾಡಿಗೆ ಯಾರ ಶಾಪ ತಟ್ಟಿದೆಯೋ ಗೊತ್ತಿಲ್ಲ.. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ ಕಮಲ್ ಬಿಲ್ಡರ್ಸ್ ಅವೈಜ್ಞಾನಿಕ ಕಾಮಗಾರಿಗೆ ಜನ ಸುಸ್ತೋ ಸುಸ್ತು.!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರೀತಿಯ ತೀರ್ಮಾನಗಳು ಹಾಗೂ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ವಲ್ಪವೂ ಲೋಕ ಜ್ಞಾನ ಇಲ್ಲ ಎಂಬುದಾಗಿ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬರುವಾಗಲೇ ಇದ್ದ ಡಾಂಬರ್ ರಸ್ತೆಯನ್ನು ಅಗೆದು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾದ ಪರಿಣಾಮ ಆನೇಮಹಲ್ ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್ ನಿಂದ ದೋಣಿಗಾಲ್ ಕಡೆಗಿನ 5-6 ಕಿ.ಮೀ ಉದ್ದದ ರಸ್ತೆಗಳು […]

Continue Reading

ಸುರತ್ಕಲ್, ನಂತೂರು ಹೆದ್ದಾರಿ ಗುಂಡಿ ಮುಚ್ಚಲು, ಕೂಳೂರು ಹೊಸ ಸೇತುವೆ ಕಾಮಗಾರಿ ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ

ಸುರತ್ಕಲ್ – ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೃಹತ್ ಗಾತ್ರದ ಗುಂಡಿಗಳು ದೊಡ್ಡ ಸಂಖ್ಯೆಯಲ್ಲಿ ಬಿದ್ದಿದ್ದು ವಾಹನ ಸಂಚಾರ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ಅಪಘಾತಗಳು ನಡೆದು, ಪ್ರಾಣಹಾನಿಗಳು ಉಂಟಾಗಿವೆ. ಕೆಲವೆಡೆ ರಸ್ತೆ ಪೂರ್ತಿ ಆಳವಾದ ಗುಂಡಿಗಳೇ ತುಂಬಿದ್ದು, ವಾಹನಗಳು ಸರಾಗವಾಗಿ ಚಲಿಸಲಾಗದೆ ಮೈಲುಗಳಷ್ಟು ಉದ್ದಕ್ಕೆ ಟ್ರಾಫಿಕ್ ಜಾಮ್ ಪ್ರತಿದಿನ ಸಂಭವಿಸುತ್ತಿದೆ. ಮಳೆಗಾಲಕ್ಕೂ ಮುನ್ನ ಈ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿರುವುದು, ವರ್ಷಗಳಿಂದ ಸರಿಯಾಗಿ ಮೈಂಟನೆನ್ಸ್ ಮಾಡದಿರುವುದು ರಸ್ತೆ ಈ […]

Continue Reading

ಪುತ್ತೂರು: ಬ್ಯಾಂಕ್ ಸಿಬ್ಬಂದಿಗಳನ್ನು ಮನೆಯೊಳಗೆ ಕೂಡಿ ಹಾಕಿ, ಪಿಸ್ತೂಲ್ ತೋರಿಸಿ ಹತ್ಯೆಗೈಯುವ ಬೆದರಿಕೆಯೊಡ್ಡಿದ ಪುತ್ತೂರು ತಿರುಮಲ ಹೋಂಡಾ ಶೋ ರೂಂ ಮಾಲಿಕರು.

ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್‌ ಎಂಬವರು ಪುತ್ತೂರು ಕೋರ್ಟ್ ರಸ್ತೆಯ SBI ಶಾಖೆಯಿಂದ ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ ಬ್ರಾಂಚ್ ಮ್ಯಾನೇಜರ್ ಚೈತನ್ಯ ಹೆಚ್.ಸಿ ತನ್ನ […]

Continue Reading

ಮಂಜೇಶ್ವರ, ಉಪ್ಪಳ ; ಡ್ರಗ್ಸ್ ದಂಧಾ ಹೈ ದಂಧಾ..! ಉಪ್ಪಿನಕಾಯಿ ಡಬ್ಬದಲ್ಲೂ ಎಂಡಿಎಂಎ

ವಂಚಕರ ಟಾರ್ಗೆಟ್ ಗೆ ಸಿಲುಕಿ ಜೈಲುಪಾಲಾದ ಅಮಾಯಕರು.! ಕೇರಳ -ಕರ್ನಾಟಕ ಡ್ರಗ್ಸ್ ದಂಧೆಕೋರರ ಪಾಲಿನ ಹಬ್ ಎಂದೇ ಕುಖ್ಯಾತಿ ಪಡೆದಿರುವಂತದ್ದು. ಅದರಲ್ಲೂ ಮಂಜೇಶ್ವರ ಡ್ರಗ್ಸ್ ದಂಧೆಯಲ್ಲಿ ಹವಾ ಎಬ್ಬಿಸುತ್ತಿದೆ. ಡ್ರಗ್ಸ್ ದಂಧೆಕೋರರ ಕರಾಳ ಛಾಯೆಗೆ ಸಿಲುಕಿ ಕೊಲ್ಲಿ ರಾಷ್ಟ್ರದಲ್ಲಿ ಜೈಲುಪಾಲಾದ ಉಧಾಹರಣೆಯೂ ಇದೆ. ಒಟ್ಟಾರೆ ದಂಧಾ ಹೈ ದಂಧೆಗೆ ಅಮಾಯಕರು ಬಲಿಪಶುವಾಗುತ್ತಿರುವುದು ದು:ಖಕರ ಸಂಗತಿ. ಇತ್ತೀಚೆಗಷ್ಟೇ ಉಪ್ಪಳ ಸಮೀಪದ ಮುಳಿಯ ಪತ್ವಾಡಿಯ ಮನೆಯೊಂದರಿಂದ 3 ಕೆಜಿ 407 ಕಿಲೋ ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಇದರ ಮುಖ್ಯ ರೂವಾರಿ […]

Continue Reading

ಮಂಗಳೂರು: ಕುರಿ ಫಂಡ್ ಕೇಳಲು ಮನೆಗೆ ಹೋಗಿದ್ದ ಶ್ರೀಮತಿ ಶೆಟ್ಟಿ; ಹಂದಿ ಕೊಯ್ಯುವ ಕತ್ತಿಯಿಂದ 29 ತುಂಡು ಮಾಡಿದ್ದ ಹಂತಕರು!

ಸ್ಕೂಟರ್ ನೀಡಿತ್ತು ಸುಳಿವು; ಕ್ರೈಸ್ತ ದಂಪತಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ ಸುಮಾರು ಐದು ವರ್ಷಗಳ ಹಿಂದೆ 2019 ರಂದು ನಂತೂರಿನಿಂದ ಕೆಪಿಟಿ ರಾಜ್ಯ ಹೆದ್ದಾರಿ ಪಕ್ಕದ ಗೂಡಂಗಡಿಯ ಬಳಿ ಚೀಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಹಿಳೆಯೊಬ್ಬಳ ರುಂಡ ಸಿಕ್ಕಿತ್ತು. ಆದರೆ ದೇಹದ ಇತರ ಭಾಗಗಳು ಅಲ್ಲಿರಲಿಲ್ಲ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲವೇ ಹೊತ್ತಿನಲ್ಲಿ ಪದುವ ಹೈಸ್ಕೂಲ್ ಬಳಿ, ನಂದಿಗುಡ್ಡೆ ಬಳಿ ಮಹಿಳೆಯ ದೇಹದ ಇತರ ಅವಯವಗಳು ಸಿಕ್ಕವು. ಕರಾವಳಿಯಲ್ಲಿ ಈ ಭೀಭತ್ಸ ಘಟನೆ ತೀವ್ರ […]

Continue Reading