ಮಂಗಳೂರು: ಕುರಿ ಫಂಡ್ ಕೇಳಲು ಮನೆಗೆ ಹೋಗಿದ್ದ ಶ್ರೀಮತಿ ಶೆಟ್ಟಿ; ಹಂದಿ ಕೊಯ್ಯುವ ಕತ್ತಿಯಿಂದ 29 ತುಂಡು ಮಾಡಿದ್ದ ಹಂತಕರು!

ಕರಾವಳಿ

ಸ್ಕೂಟರ್ ನೀಡಿತ್ತು ಸುಳಿವು; ಕ್ರೈಸ್ತ ದಂಪತಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ

ಸುಮಾರು ಐದು ವರ್ಷಗಳ ಹಿಂದೆ 2019 ರಂದು ನಂತೂರಿನಿಂದ ಕೆಪಿಟಿ ರಾಜ್ಯ ಹೆದ್ದಾರಿ ಪಕ್ಕದ ಗೂಡಂಗಡಿಯ ಬಳಿ ಚೀಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಹಿಳೆಯೊಬ್ಬಳ ರುಂಡ ಸಿಕ್ಕಿತ್ತು. ಆದರೆ ದೇಹದ ಇತರ ಭಾಗಗಳು ಅಲ್ಲಿರಲಿಲ್ಲ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲವೇ ಹೊತ್ತಿನಲ್ಲಿ ಪದುವ ಹೈಸ್ಕೂಲ್ ಬಳಿ, ನಂದಿಗುಡ್ಡೆ ಬಳಿ ಮಹಿಳೆಯ ದೇಹದ ಇತರ ಅವಯವಗಳು ಸಿಕ್ಕವು. ಕರಾವಳಿಯಲ್ಲಿ ಈ ಭೀಭತ್ಸ ಘಟನೆ ತೀವ್ರ ಸಂಚಲನವನ್ನು ಸೃಷ್ಟಿಸಿತ್ತು. ಕುರಿ ಫಂಡ್ ಕೇಳಲು ಹೋದ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದಳು.

ಶ್ರೀಮತಿ ಶೆಟ್ಟಿ ಅತ್ತಾವರದ ಬಳಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ ಅಂಗಡಿ ಹೊಂದಿದ್ದಳು. ಗಂಡನನ್ನು ತೊರೆದು ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಳು. 42 ರ ಹರೆಯದ ಶ್ರೀಮತಿ ಶೆಟ್ಟಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದಳು. ಬಡ್ಡಿಗೆ ಹಣವೂ ಕೊಡುತ್ತಿದ್ದಳು.

ಚಿಟ್ ಫಂಡ್ ಹಣ ಕೇಳಲು ಜೋನಸ್ ಸ್ಯಾಮ್ಸನ್ ಮನೆಗೆ ತೆರಳಿದ್ದ ಶ್ರೀಮತಿ ಶೆಟ್ಟಿ, ಸ್ಯಾಮ್ಸನ್ ಮಧ್ಯೆ ಗಲಾಟೆ ನಡೆದಿತ್ತು, ಹಣ ಕೊಡದಿದ್ದರೆ ಪೊಲೀಸ್ ದೂರು ನೀಡುವುದಾಗಿ ಬೆದರಿಸಿದ್ದಳು. ಇದರಿಂದ ಕುಪಿತರಾದ ಸ್ಯಾಮ್ಸನ್ ಮತ್ತಾತನ ಪತ್ನಿ ವಿಕ್ಟೀರಿಯಾ ಮರದ ದೊಣ್ಣೆಯಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀಮತಿ ಶೆಟ್ಟಿ ಯನ್ನು ಸ್ಯಾಮ್ಸನ್ ಮನೆಯಲ್ಲಿದ್ದ ಹಂದಿ ಕೊಯ್ಯುವ ಕತ್ತಿಯಿಂದ 29 ತುಂಡು ಮಾಡಿ ಆಕೆ ಬಂದಿದ್ದ ಸ್ಕೂಟರ್ ನಲ್ಲಿ ನಗರದ ವಿವಿಧ ಕಡೆ ಬಿಸಾಕಿ ಬಂದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ. ಸ್ಕೂಟರ್ ಅನ್ನು ಕಪಿತಾನಿಯೋ ಬಳಿ ಬಿಟ್ಟು ಬಂದಿದ್ದ.

ತನಿಖೆಗೆ ಇಳಿದ ಪೊಲೀಸರಿಗೆ ಸ್ಕೂಟರ್ ಪತ್ತೆಯಾಗಿತ್ತು. ಸ್ಕೂಟರ್ ನಲ್ಲಿ ರಕ್ತದ ಕಲೆಗಳಿದ್ದವು. ಶ್ರೀಮತಿ ಶೆಟ್ಟಿ ಕೊಲೆಯಾಗುವ ಮುನ್ನ ಕೊನೆಯ ಕಾಂಟಾಕ್ಟ್ ಇದ್ದಿದ್ದು ಸ್ಯಾಮ್ಸನ್ ನೊಂದಿಗೆ ಎಂಬುದು ಪೊಲೀಸರಿಗೆ ಮಾಹಿತಿ ತಿಳಿದು ಬಂತು. ಕೂಡಲೇ ಸ್ಯಾಮ್ಸನ್ ಹುಡುಕಿಕೊಂಡು ಆತನ ಮನೆಗೆ ತೆರಳಿದ್ದ ಪೊಲೀಸರಿಗೆ ಮನೆಗೆ ಬೀಗ ಹಾಕಿದ್ದು ಕಂಡು ಬಂತು. ಬೀಗ ಮುರಿದು ಒಳ ಹೋದ ಪೊಲೀಸರಿಗೆ ಮನೆಯ ಅಲ್ಲಲ್ಲಿ ಬಿದ್ದಿದ್ದ ರಕ್ತದ ಕುರುಹುಗಳು ಕಂಡು ಬಂತು. ಶ್ರೀಮತಿ ಶೆಟ್ಟಿ ಯನ್ನು ಇದೇ ಮನೆಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರಿಂದ ಪ್ರೂವ್ ಆಯಿತು. ತಲೆ ತಪ್ಪಿಸಿಕೊಂಡು ಮರಕಡದ ಸ್ನೇಹಿತನ ಮನೆಯಲ್ಲಿದ್ದ ಆರೋಪಿಗಳನ್ನು ಹೆಡೆ ಮುರಿ ಕಟ್ಟಿ ಪೊಲೀಸರು ಬಂಧಿಸಿದರು.

ಸಾಕ್ಷ್ಯಾಧಾರ ಸಂಗ್ರಹಿಸಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಐದು ವರ್ಷಗಳ ನಂತರ ದಂಪತಿಗಳ ಆರೋಪ ಸಾಬೀತಾಗಿದೆ. ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಹೊರಡಿಸಿದೆ. ಕೊಲೆಗೆ ಪರೋಕ್ಷ ಸಹಕರಿಸಿದ್ದ ಮರಕಡದ ರಾಜು ಗೆ ಆರು ತಿಂಗಳ ಸಜೆ ವಿಧಿಸಿದೆ. ಕರಾವಳಿಯಲ್ಲಿ ಕ್ರೌರ್ಯ ಮೆರೆದಿದ್ದ ಶ್ರೀಮತಿ ಶೆಟ್ಟಿ ಹಂತಕರಿಗೆ ಕೊನೆಗೂ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಘೋಷಿಸಿದೆ.