ನಿಯಮ ಪಾಲಿಸದೇ ಅಕ್ರಮವಾಗಿ ನಿರ್ಮಾಣಮಾಡಿರುವ ಕಟ್ಟಡಗಳನ್ನು ಮುಲಾಜಿಲ್ಲದೆ ಒಡೆದು ಹಾಕುತ್ತೇವೆ: ಡಿಕೆಸಿ ಎಚ್ಚರಿಕೆ

ಸುರಕ್ಷಿತ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ನಿರ್ಮಾಣಮಾಡಿರುವ ಕಟ್ಟಡಗಳನ್ನು ದುರಸ್ಥಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಲಾಜಿಲ್ಲದೆ ಒಡೆದು ಹಾಕುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ನಿನ್ನ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಶೇ. 70 ರಷ್ಟು ಕಟ್ಟಡಗಳ ನಿರ್ಮಾಣ ಅಕ್ರಮವಾಗಿದೆ. ಹಳೆಯ ಬಡಾವಣೆಗಳಷ್ಟೇ ಅಲ್ಲ, ಹೊಸ ಬಿಡಿಎ ಬಡಾವಣೆಗಳಲ್ಲೂ ಒಂದು ಮತ್ತು ನಾಲ್ಕು ಮಹಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. […]

Continue Reading

ನೇರ ನಡೆ ನುಡಿಯ, ಅಪರೂಪದ ದಕ್ಷ, ನಿಷ್ಠಾವಂತ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಬೆಳ್ಳಿಯಪ್ಪ

ಪೊಲೀಸ್ ಅನ್ನುವ ಪದಕ್ಕೆ ಗೌರವ, ಪ್ರಾಮಾಣಿಕತೆಯ ಹೆಸರು ತಂದುಕೊಟ್ಟವರು ಕೆ.ಯು. ಬೆಳ್ಳಿಯಪ್ಪ ಅವರು. ತನ್ನ ದಕ್ಷ, ಸಮರ್ಥ ಕಾರ್ಯ ನಿರ್ವಹಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಸಿನಲ್ಲಿ ಬೇರೂರಿರುವ ಅಪರೂಪದ ಪೊಲೀಸ್ ಅಧಿಕಾರಿ ಆಗಿದ್ದಾರೆ ಡಿವೈಎಸ್ಪಿ ಬೆಳ್ಳಿಯಪ್ಪ. ನೇರ ನಡೆ ನುಡಿಯ ದಕ್ಷ ಪೊಲೀಸ್ ಅಧಿಕಾರಿ ಆಗಿರುವ ಬೆಳ್ಳಿಯಪ್ಪ ತಮ್ಮ ಸೇವಾವಧಿಯನ್ನು ಹೆಚ್ಚಿನ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದರು. ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಲವು ಠಾಣೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿ ಎಂದು […]

Continue Reading

ಹೈಕೋರ್ಟ್ ಗಳಿಗಿಂತ ಸುಪ್ರೀಂ ಕೋರ್ಟ್ ಶ್ರೇಷ್ಠವಲ್ಲ

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಎರಡೂ ಸಂವಿಧಾನಿಕ ನ್ಯಾಲಯಗಳು. ಎರಡರ ಪೈಕಿ ಶ್ರೇಷ್ಠ ಅಥವಾ ಕೀಳು ಎಂಬುದಿಲ್ಲ: ಸಿಜೆಐ ಗವಾಯಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಕೊಲಿಜಿಯಂ ಎರಡೂ ಸಾಂವಿಧಾನಿಕ ಸಂಸ್ಥೆಗಳು. ಇವುಗಳಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರುಸುಪ್ರೀಂ ಕೋರ್ಟ್ ಬಾರ್‌ ಅಸೋಸಿಯೇಷನ್‌ ಅಯೋಜಿಸಿದ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು ಈ ಸಂದರ್ಭದಲ್ಲಿ SCBA ಇದರ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು, […]

Continue Reading

ಇನ್ಸ್ ಪೆಕ್ಟರ್ ಶಾಂತರಾಮ್, ಸಿಸಿಬಿ ಎ.ಎಸ್.ಐ ಸುಜನ್ ಶೆಟ್ಟಿ ರವರಿಗೆ ರಾಷ್ಟ್ರಪತಿ ಪದಕ ಗೌರವ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆಯಲ್ಲಿ ಸಮರ್ಥ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದಿಂದ 19 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು, ಮಂಗಳೂರು ಸಿಸಿಬಿ ಯಲ್ಲಿ ಎ.ಎಸ್.ಐ ಆಗಿರುವ ಸುಜನ್ ಶೆಟ್ಟಿ ಹಾಗೂ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್ಸ್ ಪೆಕ್ಟರ್ ಶಾಂತರಾಮ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ಸ್ ಪೆಕ್ಟರ್ ಶಾಂತರಾಮ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ, ಪಣಂಬೂರು, ಸಿಸಿಬಿ ಸೇರಿದಂತೆ ಹಲವು […]

Continue Reading

ವಾಣಿಜ್ಯ ಪರವಾನಗಿ ರದ್ಧುಪಡಿಸುವ ಪ್ರಶ್ನೆಯೇ ಇಲ್ಲ. ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ಪಡೆಯುವುದು ಕಡ್ಡಾಯ: ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು

ರಾಜ್ಯದಲ್ಲಿ ವಾಣಿಜ್ಯ ಪರವಾನಗಿ ರದ್ಧುಪಡಿಸುವ ಪ್ರಶ್ನೆಯೇ ಇಲ್ಲ. ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಿಗದಿತ ಶುಲ್ಕ ಪಡೆದು ವ್ಯಾಪಾರ ಪರವಾನಗಿಯನ್ನು ನೀಡಲಾಗುತ್ತಿದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸ್ವಲ್ಪ ಮಟ್ಟಿನ ಆದಾಯ ಬರುತ್ತಿದೆ. ಒಂದು ವೇಳೆ ರದ್ದು ಮಾಡಿದರೆ ಪ್ರಾಧಿಕಾರಗಳ ಮೇಲೆ ಆರ್ಥಿಕ ಹೊರೆ […]

Continue Reading

ಅಗಸ್ಟ್ 12 ರಂದು ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳೊಂದಿಗೆ ಮರಳು,ಕಲ್ಲು ಗಣಿಗಾರಿಕೆ ಸಂಬಂಧ ಬೆಂಗಳೂರಿನಲ್ಲಿ ಮಹತ್ವದ ಸಭೆ

ಇನ್ನಾದರೂ ಸಮಸ್ಯೆ ಇತ್ಯರ್ಥವಾಗಬಹುದಾ.? ದ.ಕ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಆಗಿರುವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು, ಕರಾವಳಿ ಭಾಗದವರೇ ಆದ ವಿಧಾನಸಭಾ ಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಅಗಸ್ಟ್ 12 (ಮಂಗಳವಾರ) ದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಸಮಸ್ಯೆ ಹಾಗೂ ಕೆಂಪು ಕಲ್ಲು ಗಣಿಗಾರಿಕೆ ಬಗ್ಗೆ ಮಹತ್ವದ ಸಭೆ ಬೆಂಗಳೂರು ವಿಧಾನ ಸೌಧದಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸಂಸದರು, ಶಾಸಕರು […]

Continue Reading

ಸುನೀಲ್ ಕುಮಾರ್ ಫೀಲ್ಡಿಗೆ ಎಂಟ್ರಿಯಾಗಿದ್ದು ಹೇಗೆ.? ಬಿಜೆಪಿ ವರಿಷ್ಟರಿಗೆ ಜೆಡಿಎಸ್ ಏಕೆ ಬೇಕು?

✍️ .ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಅವರ ಕಿವಿಗೆ ಒಂದು ಸಂದೇಶ ತಲುಪಿದೆ.ಅವರಿಗೆ ಈ ಸಂದೇಶ ತಲುಪಿಸಿದ್ದು ಸ್ವತ: ಅವರ ಗೂಢಚಾರರ ಪಡೆ.ವಿಧಾನಸಬೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಡಿದರೆನ್ನಲಾದ ಮಾತನ್ನು ಈ ಗೂಢಚಾರರ ಪಡೆ ತಮ್ಮ ಕಿವಿಗೆ ತಲುಪಿಸಿದ್ದೇ ತಡ,ವಿಜಯೇಂದ್ರ ಕೆಂಡಾಮಂಡಲಗೊಂಡಿದ್ದಾರೆ.ಅಷ್ಟೇ ಅಲ್ಲ,ತಮಗೆ ತಲುಪಿದ ಸಂದೇಶದ ವಿವರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಲುಪಿಸಿ:’ಹೀಗೆಲ್ಲ ಆದರೆ ನಾನು ಕೆಲಸ ಮಾಡುವುದು ಹೇಗೆ ಸಾರ್?’ಅಂತ ಕೇಳಿದ್ದಾರೆ.ಅಂದ ಹಾಗೆ ವಿಜಯೇಂದ್ರ ಅವರ ಕೋಪಕ್ಕೆ […]

Continue Reading

ಸಿದ್ದರಾಮಯ್ಯರವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ G.V ಸೀತಾರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿತ್ಯ ನಿರಂತರವಾಗಿ ಪ್ರತಿನಿತ್ಯ ಒಂದಿಲ್ಲೊಂದು ಗೊಂದಲ, ಕುತೂಹಲಕಾರಿ ಬೆಳವಣಿಗೆಗಳು, ಬಣಗಳ ನಡುವಿನ ತಿಕ್ಕಾಟ ನಡೆಯುತ್ತಲೇ ಇದೆ. ಈ ಮಧ್ಯೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಇಂದು ಕಾಂಗ್ರೆಸ್ ನಾಯಕನೊಬ್ಬನ ಉಚ್ಛಾಟನೆಯಾಗಿದೆ. ಅದೂ ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ G.V ಸೀತಾರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದು ಪಕ್ಷದೊಳಗಿನ ಶೀತಲ ಸಮಾರಾ ಇನ್ನಷ್ಟು ಹೆಚ್ಚಾಗುವ ಸೂಚನೆ ನೀಡಿದಂತಿದೆ. ಸಿದ್ದರಾಮಯ್ಯರ ಪರಮಾಪ್ತ […]

Continue Reading

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಾಯಗೊಂಡರೆ, ಮೃತಪಟ್ಟರೆ ವಾಹನ ಮಾಲೀಕನೇ ಜವಾಬ್ದಾರಿ, ಆತನೇ ಪರಿಹಾರ ಪಾವತಿಸಬೇಕು: ಹೈಕೋರ್ಟ್ ಮಹತ್ವದ ಆದೇಶ

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೆ ಅಥವಾ ಮೃತಪಟ್ಟ ವೇಳೆ ಆ ವಾಹನದ ಮಾಲೀಕರು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪೆನಿಯನ್ನು ಹೊಣೆಗಾರನನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮೆ ನೀಡಿದ್ದ ‘ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ’ […]

Continue Reading

ಎರಡು-ಮೂರು ತಿಂಗಳೊಳಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಇನ್ನು ಎರಡು ತಿಂಗಳಲ್ಲಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎರಡು-ಮೂರು ತಿಂಗಳಲ್ಲಿ ಚುನಾವಣೆಗೆ ನೋಟಿಫಿಕೇಶನ್ ಹೊರಡಿಸಲಾಗುವುದು. ಬಿಜೆಪಿ ಅಧಿಕಾರದಲ್ಲಿದ್ದಾಗ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಮುಂದೂಡುತ್ತಲೆ ಬಂದಿದೆ. ಆದರೆ, ಈ ಬಾರಿ ನಾವು ಚುನಾವಣೆ ನಡೆಸುವುದು ಖಚಿತ ಎಂದರು. ಇತ್ತೀಚೆಗೆ ಮಾನ್ಯ ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಎಚ್ಚರಿಕೆಯನ್ನು […]

Continue Reading