ನಕಲಿ, ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ; ನೋಂದಣಿ ಇಲ್ಲದೆ ವೈದ್ಯ ವೃತ್ತಿ ಮಾಡುವವರಿಗೆ ಕಾದಿದೆ ಸಂಕಟ

ಮೊದಲ ಅಪರಾಧಕ್ಕೆ 25 ಸಾವಿರ ದಂಡ, 2ನೇ ಅಪರಾಧಕ್ಕೆ 2.5 ಲಕ್ಷ ರೂ. ಮತ್ತು ಒಂದು ವರ್ಷ ಜೈಲು, ನಂತರದ ಪ್ರತಿ ಅಪರಾಧಕ್ಕೆ 3ವರ್ಷಗಳವರೆಗೆ ಜೈಲು ಶಿಕ್ಷೆ 5 ಲಕ್ಷ ರೂ. ವರೆಗೆ ದಂಡ ನಕಲಿ ವೈದ್ಯರು ಮತ್ತು ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯರ ನೋಂದಣಿ […]

Continue Reading

ಬೆಳಗಾವಿ: ಸೈಬರ್ ವಂಚಕರ ಜಾಲ ಪತ್ತೆ; ಅಮೇರಿಕದ ಬ್ಯಾಂಕಿಗೆ ಕನ್ನ, 33 ಮಂದಿ ಆರೋಪಿಗಳ ಬಂಧನ

ಅನಧಿಕೃತ ಕಾಲ್‌ ಸೆಂಟರ್‌ ಬಗ್ಗೆ ಸಂಶಯಗೊಂಡ ನಾಗರಿಕರೊಬ್ಬರು ನೀಡಿರುವ ಮಾಹಿತಿಯಿಂದ ಪತ್ತೆ ಅಮೆರಿಕಾ ದೇಶದ ನಾಗರಿಕರ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ವಂಚಿಸುತ್ತಿದ್ದ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿದ ಬೆಳಗಾವಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು 33 ಆರೋಪಿಗಳನ್ನು ಬಂಧಿಸಿ, ಹಲವಾರು ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಜಂ ನಗರದ ಸರ್ಕಲ್‌ ಬಳಿಯ ಕುಮಾರ್‌ ಹಾಲ್‌ನಲ್ಲಿ ಅನಧಿಕೃತ ಕಾಲ್‌ ಸೆಂಟರ್‌ ಕಾರ‍್ಯ ನಿರ್ವಹಿಸುತ್ತಿರುವ ಕುರಿತು ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಸಿಕ್ಕಿತ್ತು. […]

Continue Reading

ನಕಲಿ ದಾಖಲೆ ಸೃಷ್ಟಿಸಿ, ಗ್ರಾಹಕರಿಗೆ ವಂಚಿಸಿದ ಪ್ರಕರಣ; ಉಪ-ನೋಂದಣಾಧಿಕಾರಿ ಮತ್ತು ನವಯುಗ ಪ್ರಾಪರ್ಟಿಸ್ ಪಾಲುದಾರನ ಬಂಧನ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೋಂದಣಿ ಮಾಡಿಸಿ ನೂರಾರು ಗ್ರಾಹಕರಿಗೆ ವಂಚಿಸಿದ ಆರೋಪದಡಿ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹಿಂದಿನ ಉಪ-ನೋಂದಣಾಧಿಕಾರಿ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ ಮತ್ತು ನವಯುಗ ಪ್ರಾಪರ್ಟಿಸ್ ಪಾಲುದಾರ ನವೀನ್‌ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಇತರೆ 38 ಮಂದಿ ಜತೆ ಸೇರಿಕೊಂಡು ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂಬರ್‌ 5/2ರಲ್ಲಿರುವ 40ಕ್ಕೂ ಹೆಚ್ಚು ನಿವೇಶನಗಳನ್ನು […]

Continue Reading

ಪೊಲೀಸರು ಸೀಜ್​ ಮಾಡಿದ್ದ ಕಾರಿನೊಳಗಿತ್ತು ಕೋಟಿಯಾಂತರ ಮೌಲ್ಯದ ಸೊತ್ತುಗಳು

ಪೊಲೀಸರು ಸೀಜ್​ ಮಾಡಿದ್ದ ಕಾರು ಒಂದು ತಿಂಗಳಿನಿಂದ ಪೊಲೀಸ್​ ಠಾಣೆಯ ಮುಂಬಾಗ ಬಿಸಿಲು, ಮಳೆ ಎನ್ನದೆ ಕೊಳೆಯುತ್ತಿತ್ತು. ಆದರೆ ಕಾರಿನೊಳಗಿತ್ತು ಲಕ್ಷಾಂತರ ರೂಪಾಯಿ ಬೆಳೆಬಾಳುವ ಹಣ, ಚಿನ್ನಾಭರಣಗಳು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಜ್ಯದ ಮಾಜಿ ಶಿಕ್ಷಣ ‌ಸಚಿವ ದಿ. ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್​ನ್ನು ಸಾಂಗ್ಲಿ ಪೊಲೀಸರ ನೆರವು ಪಡೆದು ಚಿಕ್ಕಮಂಗಳೂರು ಪೊಲೀಸರು ಬಂಧಿಸಿದ್ದರು. ಆ ವೇಳೆ ಆರೋಪಿಗಳು ಎಸ್ಕೇಪ್​ ಆಗಲು ಬಳಸಿದ್ದ ಕಾರನ್ನು ಸೀಜ್​ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯ […]

Continue Reading

ಗೋಹತ್ಯೆ‌ ನಿಷೇಧ ಕಾಯ್ದೆ ನೆಪ; ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ.

ಉತ್ತರಿಸಲು ಕಾಲಾವಕಾಶ ನೀಡದೆ, ನೋಟೀಸು ನೀಡಿದೆ, ವಾಸದ ಮನೆ ಜಪ್ತಿ ಮಾಡಿರುವುದು ಸಮರ್ಥನೀಯವಲ್ಲ, ಕಾನೂನು ಬದ್ದವೂ‌ ಅಲ್ಲ: ಮುನೀರ್ ಕಾಟಿಪಳ್ಳ ಗೋಹತ್ಯೆ‌ ನಿಷೇಧ ಕಾಯ್ದೆ ನೆಪ ಮುಂದಿಟ್ಟು ಧರ್ಮಸ್ಥಳ ಠಾಣಾ ಪೊಲೀಸರು, ದನ ಸಾಗಾಟಗಾರರಿಗೆ ಜಾನುವಾರು ಮಾರಾಟ ಮಾಡಿದ ಜೊಹರಾ ಎಂಬವರು ವಾಸ ಇದ್ದ, ಆಕೆಯ ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ. FIR ನಲ್ಲಿ ಹೆಸರಿಲ್ಲದೆ, ಮನೆಯ ಆವರಣದಲ್ಲಿ ಜಾನುವಾರು ಹತ್ಯೆಯ ಯಾವ ಸಾಕ್ಷ್ಯ, ಆಧಾರವೂ ಇಲ್ಲದೆ, ಉತ್ತರಿಸಲು ಕಾಲಾವಕಾಶ […]

Continue Reading

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ: ಮುಸ್ಲಿಮರಿಗೆ ಅನ್ಯಾಯ; ನಿಗಮದ ಸವಲತ್ತುಗಳು ಕಬ್ಬಿಣದ ಕಡಲೆ

ಜಮೀರಣ್ಣನವರೇ.. ತಮ್ಮ ಇಲಾಖೆ ಬಗ್ಗೆ ಗಮನ ಹರಿಸಿ, ಮೌನ ಮುರಿದು ಪುಣ್ಯ ಕಟ್ಕೊಳ್ಳಿ ರಾಜ್ಯ ಸರಕಾರವು ವಿವಿಧ ಸಮುದಾಯಗಳ ಅಭಿವೃದ್ಧಿಗೆ ಅನೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದೆ. ಅದರಲ್ಲೂ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸೇರಿ ನಾನಾ ಅಭಿವೃದ್ಧಿ ನಿಗಮಗಳಿಂದ ನಾನಾ ಸಮುದಾಯದವರಿಗೆ ಸವಲತ್ತುಗಳ ಮಹಾಪೂರ ಹರಿದು ಬರುತ್ತಿದೆ. ಅದರಲ್ಲೂ […]

Continue Reading

ಪ್ರಿಯಾಂಕ್ ಖರ್ಗೆ ಇಲಾಖೆಯಲ್ಲಿ ಹೀಗೊಂದು ಅವಾಂತರ; ಸಿಎಂಗೆ ದೂರು; ಕಾಯ್ದೆಯನ್ನೇ ತಿಳಿಯದ ಅಧಿಕಾರಿಗಳು.?

RTI ವಿಚಾರಣೆ ವೇಳೆ ಅನುಚಿತ ವರ್ತನೆ; ಅಧೀಕ್ಷಕ ಇಂಜಿನೀಯರ್ ವಿರುದ್ಧ ತನಿಖೆಗೆ ಆಗ್ರಹ ಮೇಲ್ಮನವಿ ವಿಚಾರಣೆ ನಡೆಸಿ ಸುಳ್ಳು ಮಾಹಿತಿ ನೀಡಿದ ಅಧಿಕಾರಿ; ಪ್ರಿಯಾಂಕ್ ಖರ್ಗೆಯ ಇಲಾಖೆಯ ಅಧಿಕಾರಿಗಳ ನಿಗೂಢ ನಡೆ ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿಗಳು ಸಾರ್ವಜನಿಕರನ್ನು ಯಾವ ರೀತಿ ಹೀನಾಯವಾಗಿ ಕಾಣುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳ ವಿರುದ್ಧ ಹೋರಾಟ ನಡೆಸಿ ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ […]

Continue Reading

ಬಿಹಾರ ಚುನಾವಣೆ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ಸಜ್ಜು

✍️. ಆರ್.ಟಿ. ವಿಠ್ಠಲಮೂರ್ತಿ ಕಾಂಗ್ರೆಸ್ ಪಾಳೆಯದಿಂದ ಕೇಳಿ ಬಂದ ಎರಡು ಸುದ್ದಿಗಳು ಬಿಜೆಪಿ ಪಾಳೆಯದಲ್ಲಿ ಹರ್ಷ ಮೂಡಿಸಿವೆ. ಈ ಪೈಕಿ ಒಂದು ಸುದ್ದಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ತೇಲಿ ಬಂದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ಮತ್ತೊಂದು ಸುದ್ದಿ ತೇಲಿ ಬಂದಿದೆ. ಬಿಜೆಪಿ ಪಾಳೆಯದ ಹರ್ಷಕ್ಕೆ ಈ ಎರಡು ಸುದ್ದಿಗಳೇ ಕಾರಣವಾಗಿವೆ. ಮೊದಲನೆಯದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕ್ಯಾಂಪಿನಿಂದ ತೇಲಿ ಬಂದ ಸುದ್ದಿ ಎಂದರೆ, ಬಿಹಾರ ವಿಧಾನಸಭಾಚುನಾವಣೆಯ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ […]

Continue Reading

ಸ್ಪೀಕರ್ ಖದರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಡಿದ ಬಿಜೆಪಿ ಶಾಸಕರ ವಿರುದ್ಧ ಹಕ್ಕುಚ್ಯುತಿ ದೂರು; ಕಾಂಗ್ರೆಸ್ MLC ಐವನ್ ಡಿಸೋಜಾ

ಮಂಗಳೂರು: ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ದ ಬಿಜೆಪಿ ನಾಯಕರು ಮಾಡಿರುವ ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾದುದು. ರಾಜಕೀಯ ದುರುದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದ್ದು, ಇದರಿಂದ ಸದನ ಹಕ್ಕುಚ್ಯುತಿ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಐವನ್ ಡಿಸೋಜಾ, ಯು.ಟಿ.ಖಾದರ್ ಅವರು ಶಾಸನ ಸಭೆಯ ಅತ್ಯನ್ನತ ಹುದ್ದೆಯಾಗಿರುವ ವಿಧಾನಸಭಾಧ್ಯಕ್ಷರಾಗಿದ್ದಾರೆ. ಆ ಸ್ಥಾನದಲ್ಲಿರುವವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಸಂದರ್ಭದಲ್ಲಿ ಶಾಸನಾತ್ಮಕ ಪ್ರಕ್ರಿಯೆಗಳನ್ನು ಅನುಸಬೇಕಾಗುತ್ತದೆ. ಅದನ್ನು ಹೊರತಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ […]

Continue Reading

ರಾಜ್ಯದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ನವೆಂಬರ್ ಒಂದರಿಂದ ಕೊನೆ ತನಕ ಕನ್ನಡದ ಬಾವುಟ ಹಾರಿಸುವ ಕುರಿತು ಶೀಘ್ರವೇ ಆದೇಶ: ಡಿಸಿಎಂ

ರಾಜ್ಯದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ನವೆಂಬರ್ ಒಂದರಿಂದ ನವಂಬರ್ ತಿಂಗಳ ಕೊನೆ ತನಕ ಕನ್ನಡದ ಬಾವುಟ ಹಾರಿಸುವ ಕುರಿತು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕನ್ನಡ ರಾಜ್ಯೋತ್ಸವದ ಮಹತ್ವ ಸಾರುವ ದೃಷ್ಟಿ ಯಿಂದ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ನವೆಂಬರ್ ತಿಂಗಳಿಡೀ ಕನ್ನಡಬಾವುಟ ಹಾರಿಸುವ ಕುರಿತು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಕನ್ನಡ […]

Continue Reading