ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಏಕೆ ‘ಸಿದ್ಧವಾಗಿಲ್ಲ’: ಕಾಂಗ್ರೆಸ್

ನವದೆಹಲಿ: ಹಿಂದಿನ ಸರ್ಕಾರಗಳು ಎರಡೂ ಸದನಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಚರ್ಚೆಗೆ ಅವಕಾಶ ನೀಡಿದ್ದರೂ, ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಏಕೆ “ಸಿದ್ಧವಾಗಿಲ್ಲ” ಎಂದು ಕಾಂಗ್ರೆಸ್ ಶನಿವಾರ ಸರ್ಕಾರವನ್ನು ಕೇಳಿದೆ. ಚುನಾವಣಾ ಆಯೋಗದ ಚುನಾವಣಾ ಸುಧಾರಣೆಗಳು ಮತ್ತು ಚುನಾವಣೆಯಲ್ಲಿ ಹಣದ ಬಳಕೆಯ ಕುರಿತು ಚರ್ಚೆ ನಡೆದಾಗ ಹಿಂದೆ ಹಲವಾರು ಘಟನೆಗಳನ್ನು ಕಾಂಗ್ರೆಸ್ ನಾಯಕ ಮಾಣಿಕಮ್ ಟ್ಯಾಗೋರ್ ಉಲ್ಲೇಖಿಸಿದ್ದಾರೆ. “ಗೌರವಾನ್ವಿತ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ […]

Continue Reading

ಮಾದಕ ವ್ಯಸನಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ, ಹಲವು ಪುರುಷರೊಂದಿಗೆ ಲೈಂಗಿಕ ಸಂಬಂಧ, ಸುಮಾರು19 ಜನರಿಗೆ ಏಡ್ಸ್

ಮಾದಕ ವ್ಯಸನಕ್ಕೆ ಬಲಿಯಾದ 17 ವರ್ಷದ ಬಾಲಕಿಯೊಬ್ಬಳು ಹಲವಾರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಸರಿ-ಸುಮಾರು19 ಜನರಿಗೆ ಎಚ್ಐವಿ ಹರಡಿಸಿದ್ದಾಳೆ. ಉತ್ತರಾಖಂಡದ ರಾಮನಗರ ಪಟ್ಟಣದ ಗುಲರ್‌ಘಟ್ಟಿ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಬಾಲಕಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದವಳಾಗಿದ್ದು, ಡ್ರಗ್ಸ್ ಸೇವನೆಗೆ ತನ್ನ ಲೈಂಗಿಕ ಸಂಪರ್ಕದಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯೊಂದಿಗೆ ಸಂಪರ್ಕ ಹೊಂದಿದವರಲ್ಲಿ ವಿವಾಹಿತ ಪುರುಷರೂ ಸೇರಿದ್ದಾರೆ. ಆಕೆಗೆ ಎಚ್‌ಐವಿ ಇದೆ ಎಂದು ಅವರಿಗೆ ತಿಳಿದಿರಲಿಲ್ಲ […]

Continue Reading

ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ

ಮೀನಾಕ್ಷಿ ಆರ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಉಪ-ವಿಭಾಗ 2023ನೇ ಬ್ಯಾಚ್‌ನ ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪಿ. ಶ್ರವಣ್‌ ಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲಾ ಕುಮಟಾ ಉಪ ವಿಭಾಗದ ಉಪ-ವಿಭಾಧಿಕಾರಿಯಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ. ದಿನೇಶ್‌ ಕುಮಾರ್‌ ಮೀನಾ ಅವರಿಗೆ ಚಾಮರಾಜ ನಗರ ಜಿಲ್ಲಾ ಕೊಳ್ಳೇಗಾಲ ಉಪ-ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ನೀಡಲಾಗಿದೆ. ಮೀನಾಕ್ಷಿ ಆರ್ಯ ಅವರಿಗೆ […]

Continue Reading

ಮತಾಂತರವಾಗದೆ ನಡೆಯುವ ವಿವಾಹಗಳು ಕಾನೂನು ಬಾಹಿರ; ಆರ್ಯ ಸಮಾಜ, ದೇವಸ್ಥಾನಗಳು ನೀಡುವ ನಕಲಿ ವಿವಾಹ ಪ್ರಮಾಣಪತ್ರ ಪ್ರಕರಣಗಳ ಬಗ್ಗೆ ಗಂಭೀರ ಕಳವಳ: ಅಲಹಾಬಾದ್ ಹೈಕೋರ್ಟ್

ಅಂತರಧರ್ಮದ ಜನರಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿರುವ ಆರ್ಯ ಸಮಾಜ ಸಂಘಗಳನ್ನು ಡಿಸಿಪಿ, ಐಪಿಎಸ್ ಮಟ್ಟದ ಅಧಿಕಾರಿಯಿಂದ ತನಿಖೆಗೆ ಆದೇಶ ಮತಾಂತರವಿಲ್ಲದೆ ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ಜನರ ನಡುವಿನ ವಿವಾಹವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು ಅಲಹಾಬಾದ್ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆರ್ಯ ಸಮಾಜದಂತಹ ಸಂಸ್ಥೆಗಳು ವಿವಾಹ ಪ್ರಮಾಣಪತ್ರಗಳನ್ನು ನೀಡುವ ಮತ್ತು ವಿವಾಹ ವಿಧಿವಿಧಾನದ ನಿಗದಿತ ಶುಲ್ಕ ಮತ್ತು ದಕ್ಷಿಣೆಯನ್ನು ತೆಗೆದುಕೊಂಡು ಯಾರಿಗಾದರೂ ವಿವಾಹ ಪ್ರಮಾಣಪತ್ರಗಳನ್ನು ನೀಡುವ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ನೀಡಲಾಗಿದೆ. ಅಂದರೆ, ಅಂತಹ ವಿವಾಹಗಳು ಕಾನೂನಿನ […]

Continue Reading

ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಾಮೋಸ.. ದಂಪತಿಗಳಿಗೆ 35 ಲಕ್ಷ ಪಂಗನಾಮ.!

ದೇಶವೇ ಬೆಚ್ಚಿಬೀಳಿಸುವ ಹಗರಣ.. ಸೃಷ್ಟಿ ಫರ್ಟಿಲಿಟಿ ವೈದ್ಯೆ ಸೇರಿ ಎಂಟು ಜನರ ಬಂಧನ ನೈಸರ್ಗಿಕವಾಗಿ ಮಗು ಪಡೆಯಲಾಗದವರಿಗೆ ಮಗು ಪಡೆಯಲು ಹಲವು ದಾರಿಗಳಿವೆ. ಇದಕ್ಕಾಗಿಯೇ ಗಲ್ಲಿ ಗಲ್ಲಿಗಳಲ್ಲಿ ಐವಿಎಸ್‌ ಸೆಂಟರ್‌ಗಳು ತಲೆ ಎತ್ತಿವೆ. ಇದೀಗ ಹೈದರಾಬಾದ್ ನಲ್ಲಿ ಒಂದು ಐವಿಎಫ್‌ ಕೇಂದ್ರ ತನ್ನ ಗ್ರಾಹಕರಿಗೆ ಯಾಮಾರಿಸಿದೆ. ಒಂದು ದಂಪತಿಗಳು ತಮ್ಮ ಕನಸನ್ನು ನನಸಾಗಿಸಲು ಹೈದರಾಬಾದ್‌ನ ಸುಪ್ರಸಿದ್ಧ ಫಲವತ್ತತೆ ಕ್ಲಿನಿಕ್‌ಗೆ ಬೇಟಿ ತಮ್ಮ ಕನಸು ನನಸಾಗಿಸುವ ಬಗ್ಗೆ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಆದರೆ, ಅವರಿಗೆ ತಿಳಿದಿರಲಿಲ್ಲ, ಆ ಕ್ಲಿನಿಕ್‌ನ […]

Continue Reading

ಆಗಸ್ಟ್ ಒಂದರಿಂದ ಫೋನ್ ಪೇ, ಗೂಗಲ್ ಪೇ ಗೆ ಹೊಸ ನಿಯಮ ಜಾರಿ. ಬ್ಯಾಲೆನ್ಸ್ ಚೆಕ್ಕ್ ಮಾಡಿದರೆ ದಂಡ.!

ಫೋನ್ ಪೇ, ಗೂಗಲ್ ಪೇ ಇಲ್ಲದೆ ವ್ಯವಹಾರವೇ ನಡೆಯುದಿಲ್ಲ. ಹೀಗಿರುವಾಗ ಫೋನ್ ಪೇ, ಗೂಗಲ್ ಪೇ ಆಗಾಗ ಹೊಸ ನಿಯಮಗಳನ್ನು ತರುತ್ತಿದೆ. ಆಗಸ್ಟ್ ಒಂದರಿಂದ ಹೊಸ ನಿಯಮವೊಂದು ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಫೋನ್ ಪೇ, ಗೂಗಲ್ ಪೇ ನಲ್ಲಿ ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದಾಗಿರುತ್ತದೆ. ಆಟೋ ಪೇ […]

Continue Reading

ಭೀಕರ ರಸ್ತೆ ಅಪಘಾತ: ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್‌ಪಿಗಳು ಸಾವು. ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರಿಗೆ ಗಾಯ

ಶನಿವಾರದಂದು ಹೈದರಾಬಾದ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್‌ಪಿಗಳು ಸಾವನ್ನಪ್ಪಿದ್ದು, ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.ಪೊಲೀಸ್ ಅಧಿಕಾರಿಗಳು ಅಧಿಕೃತ ಕೆಲಸದ ನಿಮಿತ್ತ ವಿಜಯವಾಡದಿಂದ ಹೈದರಾಬಾದ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ಹಠಾತ್ ಬ್ರೇಕ್ ಹಾಕಿದಾಗ, ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ರಸ್ತೆಯ ಇನ್ನೊಂದು ಬದಿಗೆ ಬಿದ್ದು, ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ […]

Continue Reading

ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ, ಬಲವಂತದಿಂದ ಗರ್ಭಪಾತ, ಪ್ರಕರಣ ದಾಖಲು

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿ, ಗರ್ಭಿಣಿ ಬಲವಂತದಿಂದ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಿ ಎಚ್‌ಐವಿ ಸೋಂಕಿತ ಬಾಲಕಿ ನೀಡಿದ ದೂರಿನ ಮೇರೆಗೆ ಶುಕ್ರವಾರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧೋಕಿ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನ ಪ್ರಕಾರ, ಈ ಘಟನೆಗಳು ಜುಲೈ 13, 2023 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ […]

Continue Reading

ಸೈಬರ್ ವಂಚನೆ ಪ್ರಕರಣಗಳಲ್ಲಿ 22,845.73 ಕೋಟಿಗೂ ಅಧಿಕ ಹಣ ಕಳಕೊಂಡ ಭಾರತೀಯರು. ಕೇಂದ್ರ ಗೃಹ ಸಚಿವಾಲಯದ ವರದಿ.

2024 ರಲ್ಲಿ ಭಾರತೀಯರು ಸೈಬರ್ ವಂಚನೆ ಪ್ರಕರಣಗಳಲ್ಲಿ 22,845.73 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ(MHA) ಮಂಗಳವಾರ ಲೋಕಸಭೆಗೆ ತಿಳಿಸಿದೆ. ಇದು ಹಿಂದಿನ ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ ಸುಮಾರು ಶೇ. 206 ರಷ್ಚು ಭಾರಿ ಏರಿಕೆಯಾಗಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ MHA ಅಡಿಯಲ್ಲಿ I4C ನಿರ್ವಹಿಸುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ಮತ್ತು ನಾಗರಿಕ […]

Continue Reading

ಕಾನೂನಿನ ಎಲ್ಲೆ ಮೀರಿ ವರ್ತಿಸುತ್ತಿದೆ ಇ.ಡಿ, ಕೋರ್ಟ್ ಹೊರಗಡೆ ರಾಜಕೀಯ ಮಾಡಿ, ತನಿಖಾ ಸಂಸ್ದೆಗಳು ನಿಮ್ಮ ದಾಳವಲ್ಲ: ಸುಪ್ರೀಂ ಕೋರ್ಟ್

ನ್ಯಾಯಾಂಗದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಸುಪ್ರೀಂ ಕೋರ್ಟ್‌ 4 ವಿವಿಧ ಪ್ರಕರಣಗಳಲ್ಲಿ ಒಂದೇ ದಿನ ಅಭಿಪ್ರಾಯ ವ್ಯಕ್ತಪಡಿಸಿದೆ.ಮುಡಾ ಹಗರಣ, ತೇಜಸ್ವಿ ಸೂರ್ಯ ವಿರುದ್ಧದ ಕ್ರಿಮಿನಲ್‌ ಪ್ರಕರಣ, ಮಮತಾ ಬ್ಯಾನರ್ಜಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಹಾಗೂ ವಕೀಲರಿಗೆ ಇ.ಡಿ.ನೋಟಿಸ್‌ ನೀಡಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಲ್ಕು ಪ್ರಕರಣಗಳನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾ| ಬಿ.ಆರ್‌. ಗವಾಯಿ ಹಾಗೂ ನ್ಯಾ| ಕೆ. ವಿನೋದ್‌ ಚಂದ್ರನ್‌ ಅವರಿದ್ದ ಪೀಠ, ನ್ಯಾಯಾಲಯದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ […]

Continue Reading