ಕೋವಿಡ್-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಫೋಟೋ ಮಾಯ.!

ಕೋವಿಡ್-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮಾಯವಾಗಿದೆ. ಈ ಮೊದಲು ಕೋವಿನ್ ಲಸಿಕೆ ಪಡೆದ ಜನರಿಗೆ ಸಿಗುತ್ತಿದ್ದ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಹಾಕಲಾಗಿತ್ತು. ಮೋದಿಯವರ ಚಿತ್ರ ತೆಗೆದುಹಾಕಿದ್ದನ್ನು ಬುಧವಾರ ಸಾಮಾಜಿಕ ಮಾಧ್ಯಮ ಬಳಕೆದಾರ ನಡುವೆ ಚರ್ಚೆಗೆ ಕಾರಣವಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದ ತಕ್ಷಣ ಎಲ್ಲ ಸರ್ಕಾರಿ ವೆಬ್‌ಸೈಟ್ ನಿಂದ ಮೋದಿಯವರ ಭಾವಚಿತ್ರಕ್ಕೆ ಖೋಕ್ ನೀಡಲಾಗಿದೆ ಎನ್ನಲಾಗಿದೆ. ಈತನ್ಮಧ್ಯೆ ಲಸಿಕೆಯ ಅಡ್ಡ ಪರಿಣಾಮದ […]

Continue Reading

ಕೊರೋನ ವ್ಯಾಕ್ಸಿನ್ ಕೋವಿಶಿಲ್ಡ್ ನಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ; ಕೋರ್ಟ್ ನಲ್ಲಿ ಒಪ್ಪಿಕೊಂಡ ಕಂಪನಿ

ಕೋವಿಡ್ ವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಅಸ್ಟ್ರಾಜೆನಿಕಾ ತಮ್ಮ ಲಸಿಕೆಯಿಂದ ಆರೋಗ್ಯದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಮೊದಲ ಬಾರಿಗೆ ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ. ಆಕ್ಸ್ ಫರ್ಡ್ ಅಸ್ಟ್ರಾಜೆನಿಕಾ ಕೋವಿಡ್ ವ್ಯಾಕ್ಸಿನ್ ಕಂಪನಿ ಕೋವಿಶೀಲ್ಡ್ ಮತ್ತು ವ್ಯಾಕ್ಸೇವರಿಯಾ ಎಂಬ ಎರಡು ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದು ವಿಶ್ವದ ಹಲವೆಡೆ ಈ ಲಸಿಕೆಯನ್ನು ಹಂಚಲಾಗಿತ್ತು. ಭಾರತದಲ್ಲೂ ಕೋವಿಶೀಲ್ಡ್ ಲಸಿಕೆ ಬಳಕೆಯಾಗಿದೆ. ಆದರೆ ಹಲವು ಕುಟುಂಬಗಳು ಈ ಸಂಸ್ಥೆಯ ಲಸಿಕೆ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿರುವ ಬಗ್ಗೆ […]

Continue Reading

ಬಾಬಾ ರಾಮದೇವ್ ಅವರ ಔಷಧಿ ಕಂಪನಿಯ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಿಗೆ ರದ್ದು

ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪೆನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ. ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನೆಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನ ಕೋಪಕ್ಕೂ ತುತ್ತಾಗಿದ್ದಾರೆ. ಉತ್ತರಾಖಂಡ ಸರಕಾರವು ಏಪ್ರಿಲ್ 15 ರಂದು ಈ ಅಮಾನತು ಆದೇಶ […]

Continue Reading

ಉತ್ತರ ಪ್ರದೇಶದ ರಾಜಕೀಯದಲ್ಲಿ ಬಾರಿ ಬದಲಾವಣೆ ಸಾಧ್ಯತೆ: ಯೋಗೇಂದ್ರ ಯಾದವ್ ಭವಿಷ್ಯ

ಹಿರಿಯ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ಲೋಕಸಭೆ ಚುನಾವಣೆಗಳ ಬಗ್ಗೆ ತಮ್ಮ ಗ್ರೌಂಡ್ ರಿಪೋರ್ಟ್‌ ನೀಡಿದ್ದು, 2024 ಲೋಕಸಭೆ ಚುನಾವಣೆಯು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ. ಚುನಾವಣೆಗಳ ಸೂಕ್ಷ್ಮ ವಿಶ್ಲೇಷಣೆಗೆ ಹೆಸರುವಾಸಿಯಾದ ಯಾದವ್ ತಮ್ಮ ಅವಲೋಕನಗಳನ್ನು X ನಲ್ಲಿ ಹಂಚಿಕೊಂಡಿದ್ದಾರೆ. ಮೀರತ್‌ನಿಂದ ಬನಾರಸ್‌ವರೆಗಿನ 15 ಸಂಸದೀಯ ಕ್ಷೇತ್ರಗಳಲ್ಲಿ ನೂರಾರು ಗ್ರಾಮೀಣ ಮತದಾರರೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿ ವಿಶ್ಲೇಷಣೆ ನಡೆಸಿದ್ದಾರೆ. ಉತ್ತರ ಪ್ರದೇಶದ ಎಲ್ಲಾ ಜಾತಿಗಳಲ್ಲಿ ಬಿಜೆಪಿಯ ವರ್ಚಸ್ಸು ಗಮನಾರ್ಹವಾಗಿ ಕುಸಿದಿದೆ. ಈ ಹಿಂದೆ ನಿರೀಕ್ಷಿತ […]

Continue Reading

ಮಂಗಳಸೂತ್ರಕ್ಕೆ’ ಕೈ ಹಾಕಿ, ಗೌರವ ಕಳೆದುಕೊಂಡರೇ ಮೋದಿ.?

ದೇಶಾದ್ಯಂತ ಸಿಡಿದೆದ್ದ ಮಹಿಳೆಯರು; ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಲೋಕಸಭೆ ಚುನಾವಣೆಯ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ್ದಾರೆ. ಆತುರದ ಹೇಳಿಕೆಯಿಂದ ಗೌರವ ಕಳೆದುಕೊಂಡರೇ ಮೋದಿ.?ದೇಶಾದ್ಯಂತ ಮಹಿಳೆಯರು ಸಿಡಿದೆದ್ದಿದ್ದಾರೆ, ಪ್ರಧಾನಿ ಹೇಳಿಕೆಯ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಯಾವ ಮಹಿಳೆಯೂ ಸಹಿಸಲಾರಳು. ಮಂಗಳಸೂತ್ರ ಜಾರಿಬಿದ್ದರೆ ಸಾಕು, ತುಂಡಾದರೆ ಸಾಕು […]

Continue Reading

ಮಹಾರಾಷ್ಟ್ರದ ಗ್ಯಾಂಗ್‌ಗೆ ಸುಪಾರಿ, ಆಸ್ತಿಗಾಗಿ ಕುಟುಂಬಸ್ಥರ ಹತ್ಯೆ; ಮಗನಿಂದಲೇ ಸುಪಾರಿ, ಆರೋಪಿಗಳ ಬಂಧನ

ಗದಗ ಜಿಲ್ಲೆಯ ಜನತೆಯ ನಿದ್ದೆಗೆಡಿಸಿದ್ದ ಗದಗ ದಾಸರಗಲ್ಲಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕಾಶ ಬಾಕಳೆ ಹಿರಿಯ ಪುತ್ರನೇ ಮಹಾರಾಷ್ಟ್ರದ ಫಯಾಜ್ ಗ್ಯಾಂಗ್‌ಗೆ ಸುಪಾರಿ ನೀಡಿ ಹತ್ಯೆ ಮಾಡಿದ ಅಂಶ ಬೆಳಕಿಗೆ ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಬಾಕಳೆ ಪುತ್ರ ವಿನಾಯಕ ಬಾಕಳೆಯನ್ನು ಗದಗನಲ್ಲಿ ಹಾಗೂ ಇತರೆ ಏಳು ಜನರನ್ನು ಮಿರಜ್‌ನಲ್ಲಿ ಪೊಲೀರು ಬಂಧಿಸಿದ್ದಾರೆ. ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿಷಯದಲ್ಲಿ ನಡೆದಿದ್ದ ಕಲಹವೇ ಈ ಕೊಲೆಗೆ ಕಾರಣ. […]

Continue Reading

ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ವೀಕ್ಷಿಸುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್

ಮಕ್ಕಳನ್ನು ಒಳಗೊಂಡ ಕೆಲವು ಅಶ್ಲೀಲ ವಿಡಿಯೋವನ್ನು ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದಕ್ಕಾಗಿ 28 ವರ್ಷದ ಎಸ್ ಹರೀಶ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಜನವರಿ 11 ರಂದು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ ಹರೀಶ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್‌ಜಿಒ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ […]

Continue Reading

ಬಿಜೆಪಿ ಪಕ್ಷಕ್ಕೆ ಹೆಚ್ಚು ಓಟು ನೀಡುವ ಇವಿಎಂಗಳು ಕಾಸರಗೋಡಿನಲ್ಲಿ ಪತ್ತೆ; ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಲೋಕಸಭಾ ಚುನಾವಣೆಗೆ ಮುನ್ನ ಕಾಸರಗೋಡಿನಲ್ಲಿ ಚುನಾವಣಾ ಆಯೋಗ ನಡೆಸಿದ ಅಣಕು ಮತದಾನದ ಸಂದರ್ಭದಲ್ಲಿ ಯಾರಿಗೇ ಮತ ನೀಡಿದರೂ ಬಿಜೆಪಿಗೆ ಹೆಚ್ಚು ಸಂಖ್ಯೆ ಒದಗಿಸುವ ಇವಿಎಂ ಗಳು ಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮತ ಎಣಿಕೆ ಸಂದರ್ಭದಲ್ಲಿ ಎಲ್ಲ ವಿವಿ ಪ್ಯಾಟ್ ಗಳ ವಿವಿ ಪ್ಯಾಟ್ ಚೀಟಿಗಳನ್ನೂ ಎಣಿಸುವಂತೆ ಆದೇಶಿಸಲು ಕೋರಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಕೇರಳದ ಕಾಸರಗೋಡಿನಲ್ಲಿ ನಡೆದಿರುವ ಪ್ರಕರಣ ಸಂಬಂಧಿಸಿದಂತೆ ಚುನಾವಣೆಯ […]

Continue Reading

ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯೂ ಜಯ ಬಾರಿಸಲಿದ್ದು, ಬಿಜೆಪಿಯ ಸಾಧನೆ ಶೂನ್ಯ ಎಂದು ಸಮೀಕ್ಷೆಯಲ್ಲಿ ತಿಳಿಸಿಲಾಗಿದೆ. ಇದು ಬಿಜೆಪಿಗೆ ಬಿಗ್‌ ಶಾಕ್ ನೀಡಿದೆ

ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ, ತಮ್ಮ ಗೆಲುವಿನ ಹಾದಿಯನ್ನು ರಚಿಸಿದೆ. ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರ ಪ್ರಚಾರವನ್ನು ಕೈಗೊಂಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಸಮೀಕ್ಷೆಗಳು ನಡೆಯುತ್ತಿದ್ದು, ಲೋಕ್‌ ಪೋಲ್‌ ತಮ್ಮ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ರಾಜ್ಯದ ನೆರೆಯ ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯೂ ಎಲ್ಲಾ ಸ್ಥಾನಗಳಲ್ಲಿ ಜಯ ಬಾರಿಸಲಿದ್ದು, ಬಿಜೆಪಿಯ ಸಾಧನೆ ಶೂನ್ಯ ಎಂದು ಸಮೀಕ್ಷೆಯಲ್ಲಿ ತಿಳಿಸಿಲಾಗಿದೆ. ಇದು ಬಿಜೆಪಿಗೆ ಬಿಗ್‌ ಶಾಕ್‌ ನೀಡಿದೆ. ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಇಂಡಿಯಾ […]

Continue Reading

200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿ, ಸನ್ಯಾಸತ್ವ ಸ್ವೀಕರಿಸಿದ ಗುಜರಾತ್ ದಂಪತಿ

ಗುಜರಾತ್ ಉಧ್ಯಮಿ ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಿವಾಸಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿದ್ಯಾವಂತರು ಮಾತ್ರ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಸಾಕಷ್ಟು ಜನರು ಸನ್ಯಾಸತ್ವದ ಕಡೆಗೆ ವಾಲುತ್ತಿದ್ದಾರೆ. ತಮ್ಮ 200 ಕೋಟಿ […]

Continue Reading