ಕೇರಳ ಬಾಂಬ್ ಸ್ಪೋಟ ಪ್ರಕರಣ: ಧರ್ಮದ್ವೇಷಿ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

ಕೇರಳ ಕಲುಮಶ್ಯೇರಿ ಚರ್ಚ್ ಮೇಲೆ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಗಳ ಮಧ್ಯೆ ವಿದ್ವೇಷ ಉಂಟು ಮಾಡುವ ಪೋಸ್ಟ್ ಶೇರ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ದ್ವೇಷವನ್ನು ಹರಡಿದ ಆರೋಪದಡಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿಕೆಯಲ್ಲಿ […]

Continue Reading

ಯುದ್ದದಲ್ಲಿ ಮಾನವೀಯತೆಯೇ ಕಟಕಟೆಯಲ್ಲಿದೆ..! ಸೋನಿಯಾ ಗಾಂಧಿ

‘ದ ಹಿಂದೂ ‘ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸೋನಿಯಾ ಗಾಂಧಿಯವರ ಆಂಗ್ಲ ಬಾಷೆಯ ಲೇಖನವನ್ನು ಪತ್ರಕರ್ತ ನವೀನ್ ಸೂರಿಂಜೆ ಕನ್ನಡಕ್ಕೆ ಅನುವಾದಿಸಿದ್ದಾರೆ. October 7, 2023 ರಂದು, ಯೋಮ್ ಕಿಪ್ಪೂರ್ ಯುದ್ಧದ 50 ನೇ ವರ್ಷಗಳನ್ನು ನೆನಪಿಸುವಂತೆ, ಹಮಾಸ್ ಇಸ್ರೇಲ್ ಮೇಲೆ ಕ್ರೂರ ದಾಳಿಯನ್ನು ಪ್ರಾರಂಭಿಸಿತು. ಸಾವಿರಕ್ಕೂ ಹೆಚ್ಚು ಜನರು ಹತರಾಗಿದ್ದು ಅದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಮಾಯಕ ನಾಗರಿಕರಿದ್ದರು. 200 ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿತ್ತು. ಇಂತಹ ಅಘಾತಕಾರಿ ದಾಳಿಯು ಇಸ್ರೇಲ್‌ಗೆ ವಿನಾಶಕಾರಿಯಾಗಿದೆ. ‘ಸಭ್ಯ ಜಗತ್ತಿನಲ್ಲಿ ಹಿಂಸೆಗೆ ಅವಕಾಶವಿಲ್ಲ’ […]

Continue Reading

ಕೊರೋನ ವೈರಸ್ ನಿಂದಾಗಿ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ಕರೋನವೈರಸ್ ನಿಂದಾಗಿ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನವನ್ನು ಉಲ್ಲೇಖಿಸಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೋವಿಡ್ -19 ವೈರಸ್ ನಿಂದ ತೀವ್ರವಾಗಿ ಸೋಂಕಿಗೆ ಒಳಗಾದ ಜನರು ಹೃದಯಾಘಾತವನ್ನು ತಪ್ಪಿಸಲು ಒಂದು ಅಥವಾ ಎರಡು ವರ್ಷಗಳ ಕಾಲ ಅತಿಯಾಗಿ ಕೆಲಸ ಮಾಡಬಾರದು ಎಂದು ಹೇಳಿದರು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ‘ಗರ್ಬಾ’ ಆಡುವಾಗ ನಡೆದ ಘಟನೆ ಸೇರಿದಂತೆ ಹೃದಯ ಸಂಬಂಧಿತ […]

Continue Reading

ಗಡಿದಾಟಿದ ಪ್ರೇಮ ಪ್ರಕರಣ.! ಪ್ರಿಯಕರನಿಗಾಗಿ ಗಡಿ ದಾಟಿ ಬಂದ ಪ್ರೇಯಸಿ

ದೇಶದಲ್ಲಿ ಒಂದಾದ ಮೇಲೊಂದು ಕ್ರಾಸ್‌ ಬಾರ್ಡರ್‌ ಪ್ರೇಮ ಪ್ರಕರಣಗಳು ನಡೆಯುತ್ತಲೇ ಇವೆ. ಸೀಮ ಹೈದರ್‌ ಗಡಿ ದಾಟಿ ಭಾರತಕ್ಕೆ ಬಂದಂತೆ ಇದೀಗ ಬಾಂಗ್ಲಾದೇಶದಿಂದ ಯುವತಿಯೊಬ್ಬರು ಗಡಿದಾಟಿ ಬಂದಿದ್ದಾರೆ. ಫಾತೆಮ ನುಸ್ರತ್ ಅನ್ನೊ 24 ವರ್ಷದ ಬಾಂಗ್ಲಾ ಯುವತಿ ತ್ರಿಪುರದ ಧರ್ಮನಗರ್‌ ಡಿವಿಶನ್‌ನ ಪುಲ್ಭರಿ ಮೂಲದ 34 ವರ್ಷದ ನೂರ್‌ ಜಲಾಲ್‌ ಎಂಬಾತನನ್ನ ಹುಡಿಕಿಕೊಂಡು ಬಂದಿದ್ದಾರೆ. ಸ್ಚಾರಸ್ಯ ಏನಪ್ಪ ಅಂದ್ರೆ ಇವರಿಬ್ಬರೂ ಈಗಾಗಲೇ ವಿವಾಹಿತರು. ಆಯುರ್ವೇದ ಪಂಡಿತನಾಗಿದ್ದ ಜಲಾಲ್‌ ಆಗಾಗ್ಗೆ ಬಾಂಗ್ಲಾದ ಮೌಲ್ವಿ ಬಜಾರ್‌ಗೆ ಭೇಟಿ ಕೊಡ್ತಿದ್ದ. ಅಲ್ಲೇ […]

Continue Reading

ಕಲಮಶ್ಯೇರಿ ಬ್ಲಾಸ್ಟ್ ಯಹೂದಿಗಳನ್ನು ಗುರಿಯಾಗಿಸಿ ನಡೆದಿಲ್ಲ; ಇಲ್ಲಿ ಯಹೂದಿಗಳು ವಾಸವಿಲ್ಲ: ದಿ ಕ್ವಿಂಟ್ ಪ್ಯಾಕ್ಟ್ ಚೆಕ್

ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಇಬ್ಬರು ಮಹಿಳೆಯರು ಸಾವಿಗಿಡಾಗಿದ್ದು, ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಪ್ಯಾಲೆಸ್ಟೀನ್‌ ಪರವಾದ ರ್‍ಯಾಲಿಯೊಂದು ಇದೇ 28ರಂದು ನಡೆದಿತ್ತು. ಈ ವೇಳೆ ಹಮಾಸ್‌ನ ನಾಯಕ ಖಾಲಿದ್‌ ಮಶಾಲ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದ್ದರು. ಖಾಲಿದ್‌ ಭಾಷಣವನ್ನು ಉಲ್ಲೇಖಿಸಿ, ‘ಜಿಹಾದಿಗಳು ಭಾರತದ ಬೀದಿಗಿಳಿಯಲು ಸಿದ್ಧರಾಗಬೇಕು ಎಂದು ಖಾಲಿದ್‌ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದ್ದರಿಂದಲೇ ಈ ಸ್ಫೋಟ […]

Continue Reading

ವಂಚನೆಯ ಹೊಸ ಟ್ರೆಂಡ್: ಸಿಮ್ ಅದಲು ಬದಲು ದಂಧೆ.. ಎಚ್ಚರ ತಪ್ಪಿದರೆ ನಿಮ್ಮ ಖಾತೆಯ ಹಣ ಮಾಯ.!

ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ರೀತಿಯ ವಂಚನೆ ಪ್ರಕರಣಗಳೂ ಹುಟ್ಟಿಕೊಳ್ಳುತ್ತಿವೆ. ಸೈಬರ್ ಕ್ರೈಂ ಬಲಿಪಶು ಆಗಬಾರದು ಎಂದರೆ ಯಾವುದೇ ಕಾರಣಕ್ಕೂ ಯಾರಿಗೂ ಒಟಿಪಿ ಕೊಡಬೇಡಿ ಅಂತಾರೆ ಪೊಲೀಸರು. ಆದರೆ, ನಿಮ್ಮ ಬಳಿ ಒಟಿಪಿ ಪಡೆಯದೇ ನಿಮ್ಮ ಖಾತೆಯಲ್ಲಿ ಇರುವ ಹಣ ವಂಚಕರ ಪಾಲಾಗಿಬಿಟ್ರೆ? ಈ ಪ್ರಶ್ನೆಯೇ ಆತಂಕಕಾರಿ! ಆದರೆ, ಈ ರೀತಿಯ ಕೃತ್ಯಗಳು ನಡೆದಿವೆ. ಇದಕ್ಕೆ ಸಿಮ್ ಸ್ವ್ಯಾಪಿಂಗ್ ವಂಚನೆ ಅಂತಾರೆ! ನಿಮ್ಮ ಮೊಬೈಲ್ ನಂಬರ್‌ ವಂಚಕರ ಪಾಲಾಗುವ ಕುತಂತ್ರ ಇದು! ಇತ್ತೀಚೆಗೆ ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ […]

Continue Reading

ಸರಕಾರಿ ನೌಕರರು ‘ಬಹುಪತ್ನಿತ್ವ’ ಹೊಂದಿದರೆ ದಂಡ, ಕಡ್ಡಾಯ ನಿವೃತ್ತಿ ಶಿಕ್ಷೆ: ಅಸ್ಸಾಂನಲ್ಲಿ ಕಾನೂನು ಜಾರಿ

ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಇಲ್ಲಿನ ರಾಜ್ಯ ಸರಕಾರ ಮಹತ್ವದ ಕಾನೂನೊಂದನ್ನು ಜಾರಿಗೆ ತಂದಿದ್ದು, ಧರ್ಮ ಅವಕಾಶ ನೀಡಿದರೂ, ರಾಜ್ಯದಲ್ಲಿ ಯಾವುದೇ ಸರ್ಕಾರಿ ನೌಕರ ಬಹುಪತ್ನಿತ್ವ ಹೊಂದಲು ಅವಕಾಶ ಇಲ್ಲ. ಒಂದು ವೇಳೆ ಕಾನೂನು ಮೀರಿದರೆ ದಂಡ ಹಾಗೂ ಸರಕಾರಿ ನೌಕರಿಯಿಂದಲೇ ವಜಾ ಮಾಡುವ ಕಾನೂನನ್ನು ಜಾರಿಗೆ ತಂದಿದೆ. ಈ ಸಂಬಂಧ ಶುಕ್ರವಾರ ಅಸ್ಸಾಂ ಸರಕಾರಿ ಸೇವಾ ನಿಯಮ 26ರ ಅಡಿ ಆದೇಶ ಹೊರಡಿಸಿರುವ ರಾಜ್ಯ ಸರಕಾರವು ಯಾವುದೇ ಧರ್ಮ, ಮತ ಪಂಥಗಳ ಉಲ್ಲೇಖ ಮಾಡದೆ […]

Continue Reading

ದೇಶಗಳಿಗೆ ವಲಸೆ ಹೋಗುವಲ್ಲಿ, ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ

ದೆಹಲಿ: ದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಇತ್ತೀಚಿನ ವರದಿಯೊಂದರಲ್ಲಿ ಹೇಳಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ. ವಿದೇಶೀಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎಂದು ‘ಅಂತಾರಾಷ್ಟ್ರೀಯ ವಲಸೆ ಮುನ್ನೋಟ: 2023′ ಶೀರ್ಷಿಕೆಯ ವರದಿ ತಿಳಿಸಿದೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ […]

Continue Reading

ಸಾಲ ವಸೂಲಾತಿಗೆ ಬೆಳಿಗ್ಗೆ 8 ರ ಮೊದಲು, ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್.ಬಿ.ಐ ಮಹತ್ವದ ಆದೇಶ

ಬಾಕಿ ಇರುವ ಸಾಲಗಳನ್ನು ವಸೂಲಿ ಮಾಡಲು ಆರ್ಬಿಐ ಗುರುವಾರ ಕಠಿಣ ನಿಯಮಗಳನ್ನು ಪ್ರಸ್ತಾಪಿಸಿದೆ, ಇದರ ಅಡಿಯಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆಂಟರು ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆಯುವಂತಿಲ್ಲ ಅಂತ ಉಲ್ಲೇಖ ಮಾಡಿದೆ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಂತಹ ನಿಯಂತ್ರಿತ ಘಟಕಗಳು (ಆರ್‌ಇಗಳು) ನೀತಿ ನಿರೂಪಣೆ ಮತ್ತು ಕೆವೈಸಿ ಮಾನದಂಡಗಳ ಅನುಸರಣೆಯನ್ನು ನಿರ್ಧರಿಸುವುದು ಮತ್ತು ಸಾಲಗಳಿಗೆ ಮಂಜೂರಾತಿ ನೀಡುವಂತಹ ನಿರ್ಧಾರ ತೆಗೆದುಕೊಳ್ಳುವ ಕಾರ್ಯಗಳು ಸೇರಿದಂತೆ ಪ್ರಮುಖ ನಿರ್ವಹಣಾ […]

Continue Reading

ಭಾರತದಲ್ಲಿ ಯುವಜನರ ನಿರುದ್ಯೋಗ ದರವು ನೆರೆದೇಶಗಳಿಗಿಂತ ಹೆಚ್ಚಿದೆ: ವಿಶ್ವಬ್ಯಾಂಕ್

ಕಳೆದ ವರ್ಷ ಭಾರತದಲ್ಲಿ ಯುವಜನರ ನಿರುದ್ಯೋಗ ದರವು ಶೇ.23.22ರಷ್ಟಿದ್ದು,ಇದು ನೆರೆದೇಶಗಳಾದ ಪಾಕಿಸ್ತಾನ (ಶೇ.11.3),ಬಾಂಗ್ಲಾದೇಶ (ಶೇ.12.9) ಮತ್ತು ಭೂತಾನ (ಶೇ.14.4)ಗಿಂತ ಅಧಿಕವಾಗಿತ್ತು ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ 2022ರಲ್ಲಿ ನಿರುದ್ಯೋಗ ದರವು ಚೀನಾದಲ್ಲಿ ಶೇ.13.2,ಸಿರಿಯಾದಲ್ಲಿ ಶೇ.22.1,ಇಂಡೋನೇಶ್ಯಾದಲ್ಲಿ ಶೇ.13,ಮಲೇಶ್ಯಾದಲ್ಲಿ ಶೇ.11.7,ವಿಯೆಟ್ನಾಮ್ನಲ್ಲಿ ಶೇ.7.4,ದಕ್ಷಿಣ ಕೊರಿಯಾದಲ್ಲಿ ಶೇ.6.9 ಮತ್ತು ಸಿಂಗಪುರದಲ್ಲಿ ಶೇ.6.1ರಷ್ಟಿತ್ತು. ವರದಿಯು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ದತ್ತಾಂಶಗಳನ್ನು ಪಡೆದುಕೊಂಡಿದೆ. ಯುವಜನರ ನಿರುದ್ಯೋಗ ದರವು 15ರಿಂದ 24 ವರ್ಷ ವಯೋಮಾನದ, ಉದ್ಯೋಗವಿಲ್ಲದ ಆದರೆ ಉದ್ಯೋಗಕ್ಕಾಗಿ ಸಕ್ರಿಯ ಹುಡುಕಾಟದಲ್ಲಿರುವವರನ್ನು ಸೂಚಿಸುತ್ತದೆ. […]

Continue Reading