ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಬೀಗ ಮುದ್ರೆ

ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಸರ್ಕಾರ ಬುಧವಾರ ಬೀಗ ಮುದ್ರೆ ಹಾಕಿದೆ.ಗ್ರಾಮದಲ್ಲಿ ವಣ್ಣಿಯಾರ್ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಈ ದೇಗುಲವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಏಪ್ರಿಲ್‌ನಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ದಲಿತರು ಪೂಜೆ ಸಲ್ಲಿಸಲು ತೆರಳಿದ್ದಾಗ ವಣ್ಣಿಯಾರ್‌ ಮುಖಂಡರು ಅಡ್ಡಿಪಡಿಸಿದ್ದರಿಂದ ಘರ್ಷಣೆ ಸಂಭವಿಸಿತ್ತು. ದಲಿತರ ಮನವಿ ಮೇರೆಗೆ ಜಿಲ್ಲಾಡಳಿತವು ಎರಡು ಸಮುದಾಯಗಳ ನಡುವೆ ಹಲವು ಸುತ್ತಿನ ಶಾಂತಿ ಸಭೆ […]

Continue Reading

ಹೆಣ್ಣಿನ ಅರೆನಗ್ನ ದೇಹ ಪ್ರದರ್ಶನ ಪ್ರಮಾದವಲ್ಲ: ಕೇರಳ ಹೈಕೋರ್ಟ್

ಮಹಿಳಾ ಹಕ್ಕುಗಳ ಕಾರ್ಯಕರ್ತೆ,ಕೇರಳ ಮೂಲದ ರೆಹಾನಾ ಫಾತಿಮಾ ವಿರುದ್ಧದ ಪೋಕ್ಸೊ ಪ್ರಕರಣವನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆ ಹಾಗೂ ಲೈಂಗಿಕತೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ. 37ರ ಹರೆಯದ ಫಾತಿಮಾಳ ಅರೆ ನಗ್ನ ದೇಹದ ಮೇಲೆ ಆಕೆಯ ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊ 2020 ರಲ್ಲಿ ವೈರಲ್ ಆದ ನಂತರ […]

Continue Reading

ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ

ಹಿಂದೂ ಧರ್ಮದಲ್ಲಿ ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ. ಋಷಿಗಳು ಮತ್ತು ಸಂತರ ಈ ಭ್ರಾತೃತ್ವವು ಬಹಳ ಕಠಿಣ ತಪಸ್ಸು ಮಾಡುತ್ತಾರೆ ಮತ್ತು ಅವರ ಜೀವನವು ತುಂಬಾ ನಿಗೂಢವಾಗಿದೆ. ಸ್ತ್ರೀ ನಾಗಾ ಸಾಧುಗಳ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶ ಭಸ್ಮ, ರುದ್ರಾಕ್ಷ ಮಣಿ, ಉದ್ದನೆಯ ವಸ್ತ್ರಗಳನ್ನು ಮೈಮೇಲೆ ಇಟ್ಟುಕೊಂಡು ನಿಗೂಢವಾಗಿ ಕಾಣುವ ನಾಗಾ ಸಾಧುಗಳ ಲೋಕವೂ ಅವರಂತೆಯೇ ನಿಗೂಢ. ಆದರೆ, ಗಂಡು ಮತ್ತು ಹೆಣ್ಣು ನಾಗಾ ಸಾಧುಗಳಂತೆ ಹೆಣ್ಣು ನಾಗಾ ಸಾಧುಗಳೂ ಇದ್ದಾರೆ ಎಂಬುದು […]

Continue Reading

ಕೇವಲ ‘ಗೋ’ಮಾಂಸವನ್ನು ಹೊಂದುವುದು, ಗೋ ಉತ್ಪನ್ನ ಮಾರಾಟ ಅಪರಾಧ ಅಲ್ಲ; ಅಲಹಾಬಾದ್ ಹೈಕೋರ್ಟ್

ಮಾಂಸವನ್ನು ಹೊಂದುವುದು ಅಥವಾ ಸಾಗಿಸುವುದು, ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಾಗಣೆಯನ್ನು ಗೋಹತ್ಯೆ ಕಾಯಿದೆಯಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪಿಲಿಭಿತ್‌ನ ಪುರನ್‌ಪುರ ಪ್ರದೇಶದ ಇಬ್ರಾನ್ ಅಲಿಯಾಸ್ ಶೇರು ಜಾಮೀನು ಅರ್ಜಿ ಕುರಿತಂತೆ ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಈ ಆದೇಶ ನೀಡಿದ್ದಾರೆ. ಅಲ್ಲದೆ ವಶಪಡಿಸಿಕೊಂಡ ವಸ್ತು ಗೋಮಾಂಸ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇಬ್ರಾನ್ ಯಾನೆ ಶೇರು ಪೇಂಟರ್ ವೃತ್ತಿಗಾರನಾಗಿದ್ದು,ದಾಳಿ ನಡೆಸಿದ ವೇಳೆ ಆತನು ಮನೆಯಲ್ಲಿ […]

Continue Reading

ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿ ಇನ್ನೊಂದು ಪೆಟ್ಟು ನೀಡಲಿದ್ದಾರೆ. ದ್ವೇಷ ಎನ್ನುವುದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ.

✍️. ನವೀನ್ ಸೂರಿಂಜೆ “ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿಯವರು ಇನ್ನೊಂದು ಪೆಟ್ಟು ನೀಡಲಿದ್ದಾರೆ. ನೆಹರೂ ಹಿಂದೂಗಳಿಗೆ ಮಾಡಿದ್ದ ಅನ್ಯಾಯವನ್ನು ಮೋದಿ ಸರಿಪಡಿಸಲಿದ್ದಾರೆ” ಎಂದು ಸಂದೇಶವೊಂದು ಹರಿದಾಡುತ್ತಿದೆ. ಆರ್ಟಿಕಲ್ 30 ಮತ್ತು 30A ಪ್ರಕಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತಿಲ್ಲ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಬಹುದು ಎಂದು ಈ ಆರ್ಟಿಕಲ್ ಹೇಳುತ್ತದೆ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ. ಮೊದಲನೆಯದಾಗಿ, ಸಂವಿಧಾನದ ಆರ್ಟಿಕಲ್ 30 ಎಲ್ಲೂ ಭಗವದ್ಗೀತೆ, ಹಿಂದೂ ಧರ್ಮ, […]

Continue Reading

ಮಾನದಂಡ ಅನುಸರಣೆಯಲ್ಲಿ ಲೋಪ:40 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು,ಸರದಿಯಲ್ಲಿ ಇನ್ನೂ ಹಲವು ವೈದ್ಯಕೀಯ ಕಾಲೇಜುಗಳು

ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಕಾರಣ ಕಳೆದ ಕೆಲವು ತಿಂಗಳ ಅವಧಿಯಲ್ಲಿ ಸರಿ-ಸುಮಾರು 40ಕ್ಕೂ ಮಿಕ್ಕ ವೈದ್ಯಕೀಯ ಕಾಲೇಜುಗಳು ಮಾನ್ಯತೆಯನ್ನು ರದ್ದು ಪಡಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಮೂಲಗಳ ಪ್ರಕಾರ, ಭಾರತದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿದ ಮಾನದಂಡಗಳ ಪಾಲನೆಯಲ್ಲಿ ಲೋಪದೋಷ ಕಂಡುಬಂದ ಹಿನ್ನಲೆಯಲ್ಲಿ ದೇಶಾದ್ಯಂತ ಕಳೆದ ಕೆಲವು ತಿಂಗಳ ಅವಧಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ. ಅಲ್ಲದೆ ಇನ್ನೂ 100 ಕ್ಕೂ ಮಿಕ್ಕ ವೈದ್ಯಕೀಯ ಕಾಲೇಜುಗಳು ಎನ್‌ಎಂಸಿಯ […]

Continue Reading

ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ. ಆರೋಪಿಗೆ ಗಲ್ಲು ಶಿಕ್ಷೆ.15 ದಿನದಲ್ಲೇ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ವ್ಯಕ್ತಿಗೆ ಮಥುರಾದ ಪೋಕ್ಸೊ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ. ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರಾಮ್ ಕಿಶೋರ್ ಯಾದವ್ ಅವರು, ಎರಡೂ ಕಡೆಯ ವಾದ ಆಲಿಸಿದ ನಂತರ ಆರೋಪಿ ಮೊಹಮ್ಮದ್ ಸೈಫ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ ಎಂದು ವಿಶೇಷ ಜಿಲ್ಲಾ ಸರ್ಕಾರಿ ವಕೀಲರು ಹೇಳಿದ್ದಾರೆ. ನ್ಯಾಯಾಧೀಶರು ಕೇವಲ 15 ದಿನಗಳ ವಿಚಾರಣೆ ಬಳಿಕ ತೀರ್ಪು ಪ್ರಕಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Continue Reading

ಪತಿಗಿಂತ ಪತ್ನಿಯ ಸಂಪಾದನೆ ಹೆಚ್ಚು ಇದ್ದರೆ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ: ಮುಂಬೈ ಸೆಷನ್ಸ್ ಕೋರ್ಟ್

ತನ್ನ ಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆ ಇದ್ದರೆ ಅಂತಹ ಪ್ರಕರಣಗಳಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಮುಂಬೈ ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಈ ವಿಷಯವನ್ನು ಪತ್ನಿಗೆ ಹೇಳಿರಲಿಲ್ಲ. ಇದರ ಮಧ್ಯೆ ಆಕೆ ಗರ್ಭಿಣಿಯಾಗಿ ಮಗು ಹೆತ್ತಿದ್ದು, ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿ ಜಗಳ ಶುರು ಮಾಡಿದ್ದ. ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ ಬಳಿಕ […]

Continue Reading

ಸಾರ್ವಜನಿಕರಿಗೆ ಗುಡ್ ನ್ಯೂಸ್; ಅತೀ ಶೀಘ್ರವೇ ಸಮಗ್ರ ಕವರೇಜ್ ವಿಮೆ ಜಾರಿಗೆ ಸಿದ್ದತೆ.!

ಇದುವರೆಗೂ ಸಾರ್ವಜನಿಕರು ಆರೋಗ್ಯ, ಆಸ್ತಿ ರಕ್ಷಣೆ, ಅಪಘಾತ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸಬೇಕಿತ್ತು. ಈಗ ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದ್ದು ಈ ಎಲ್ಲ ಕವರೇಜ್ ಗಳನ್ನು ಒಳಗೊಂಡ ಸಮಗ್ರ ಏಕ ವಿಮಾ ಪಾಲಿಸಿ ಪರಿಚಯಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಈ ಕುರಿತಂತೆ ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಮತ್ತು ಲೈಫ್ ಇನ್ಸೂರೆನ್ಸ್ ಕೌನ್ಸಿಲ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸದ್ಯದಲ್ಲೇ ಸಮಗ್ರ ಕವರೇಜ್ […]

Continue Reading

ಎಂಟು ಬ್ಯಾಂಕುಗಳ ಪರವಾನಿಗೆ ರದ್ದು, ಎಲ್ಲಾ ರೀತಿಯ ವ್ಯವಹಾರ ನಿಷೇಧ:ಆರ್ ಬಿ ಐ

2022-23 ರ ಆರ್ಥಿಕ ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ. ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ 100ಕ್ಕೂ ಹೆಚ್ಚು ಬಾರಿ ದಂಡ ವಿಧಿಸಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಲಾಗಿದೆ. ಆದರೆ ಈ ಬ್ಯಾಂಕ್‌ಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಕಠಿಣ ಕ್ರಮಗಳನ್ನು ಕೈಗೊಂಡಿದೆ.ದ್ವಂದ್ವ ನಿಯಮ ಮತ್ತು ದುರ್ಬಲ ಹಣಕಾಸು ನೀತಿಯನ್ನು ಈ ಸಹಕಾರಿ ಬ್ಯಾಂಕ್ ಗಳು ಅನುಸರಿಸುತ್ತಿತ್ತು, ಮಾತ್ರವಲ್ಲದೆ ಸ್ಥಳೀಯ ಮುಖಂಡರು ಈ ಸಹಕಾರಿ […]

Continue Reading