ವೃತ್ತಿಗಾಗಿ ವಿದೇಶದಲ್ಲಿ ನೆಲೆಸಲಿದ್ದಾರೆಂದು ತಾಯಿಗೆ ಮಗುವಿನ ಸುರ್ಪಧಿ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್
ಉತ್ತಮ ವೃತ್ತಿಜೀವನದ ನಿರೀಕ್ಷೆಗಳಿಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆಂದ ಮಾತ್ರಕ್ಕೆ ತಾಯಿಗೆ ಮಗುವಿನ ಸುಪರ್ದಿಯನ್ನು ನಿರಾಕರಿಸಲಾಗದು ಎಂಬುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮಗುವಿನ ಯೋಗಕ್ಷೇಮವು ಸುರಕ್ಷಿತವಾಗಿರುತ್ತದೆ ಎಂದಾದಲ್ಲಿ ಅಪೀಲುದಾರೆ ತಾಯಿಯು ಉತ್ತಮ ಭವಿಷ್ಯಕ್ಕಾಗಿ ಸ್ಥಳಾಂತರ ಹೊಂದುವುದನ್ನು ಮಗುವಿನ ಸುಪರ್ದಿಯನ್ನು ಕೋರುವುದಕ್ಕೆ ವಿರುದ್ಧವಾಗಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. ಮಗುವಿನ ಪೋಷಕರು ವಿಚ್ಛೇದನ […]
Continue Reading