ವಿಟ್ಲ: ಮನೆ ಮೇಲೆ ಗುಡ್ಡವೊಂದು ಕುಸಿದು ಬಿದ್ದ ಘಟನೆ; ಮನೆ ಮಂದಿ ಅಪಾಯದಿಂದ ಪಾರು, ತಪ್ಪಿದ ಜೀವ ಹಾನಿ

ಭಾರೀ ಮಳೆಗೆ ಗುಡ್ಡವೊಂದು ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಮನೆಗೆ ಹಾನಿಯಾದ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ನಡೆದಿದೆ. ಕುರುಂಬಳ ನಿವಾಸಿ ಕಲಂದರ್ ಅಲಿ ಅವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಅ ಸಮಯದಲ್ಲಿ ಕಲಂದರ್ ಅಲಿ ಸಹಿತ ಮನೆಯಲ್ಲಿ ಕುಟುಂಬದ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಈ […]

Continue Reading

ಮಂಗಳೂರಿನ ತೋಕೂರು ನಿವಾಸಿ ಅಬ್ದುಲ್‌ ರಾಝೀಕ್‌ ಎಂಬವರಿಗೆ ಮಣಿಪಾಲದಲ್ಲಿ ಹಲ್ಲೆ; ಪ್ರಕರಣ ದಾಖಲು

ಸಮಾರಂಭಗಳಲ್ಲಿ ಹಾಡುಗಳ ರೆಕಾರ್ಡ್‌ ಮಾಡುವ ವೃತ್ತಿ ಮಾಡಿಕೊಂಡಿದ್ದ ಮಂಗಳೂರಿನ ತೋಕೂರು ನಿವಾಸಿ ಅಬ್ದುಲ್‌ ರಾಝೀಕ್‌ ಎಂಬವರಿಗೆ ಮಣಿಪಾಲದಲ್ಲಿ ಹಲ್ಲೆ ನಡೆಸಿದ ಘಟನೆ ಆ. 22ರಂದು ರಾತ್ರಿ ಸಂಭವಿಸಿದೆ. ವಾಜಿದ್‌ ಎಂಬಾತ ಅಕ್ಕನ ಮಗಳ ಹುಟ್ಟುಹಬ್ಬಕ್ಕೆ ಹಾಡು ರೆಕಾರ್ಡ್‌ ಮಾಡಿಕೊಡಬೇಕೆಂದು ರಾಝೀಕ್‌ಗೆ ತಿಳಿಸಿದ್ದು, ಹಾಡು ರೆಕಾರ್ಡ್‌ ಮಾಡಿ ನೀಡಿದ ಬಳಿಕ ಹಣವನ್ನು ನೀಡದೆ ಸತಾಯಿಸಿದ್ದರು. ಮಣಿಪಾಲಕ್ಕೆ ಬಂದರೆ ಹಣ ಕೊಡುತ್ತೇನೆ ಎಂದು ಹೇಳಿ ಕರೆಸಿದ ವಾಜಿದ್‌ ಮತ್ತು ಆತನ ಸ್ನೇಹಿತರು ರಾಝೀಕ್‌ಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಬೆಳ್ಳಿ ಚೈನು, […]

Continue Reading

ಸಾರ್ವಜನಿಕ ಶಿಕ್ಷಣ ಇಲಾಖೆಯ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಬಾಲಕ-ಬಾಲಕಿಯರ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲದ ಸೈಂಟ್ ರೀಟಾ ಶಾಲೆ

ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರೌಢಶಾಲಾ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಕೆಪಿಎಸ್‌ ಸರಕಾರಿ ಪ್ರೌಢಶಾಲೆ ಕನ್ಯಾನದಲ್ಲಿ ನಡೆಯಿತು. ಹುಡುಗರ ವಿಭಾಗದಲ್ಲಿ ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಠಲ ಪ್ರೌಢಶಾಲೆ ವಿಟ್ಲ ದ್ವಿತೀಯ ಸ್ಥಾನವನ್ನು ಗಳಿಸಿದೆ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ಪಡೆದುಕೊಂಡಿದೆ ದ್ವಿತೀಯ ಸ್ಥಾನವನ್ನು ಸೂರ್ಯ ಸರಕಾರಿ ಪ್ರೌಢಶಾಲೆ ಗಳಿಸಿದೆ. ಒಟ್ಟು 15 ಹುಡುಗರ ತಂಡ ಹಾಗೂ 9 ಹುಡುಗಿಯರ ತಂಡವು […]

Continue Reading

ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.!

ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.! ಐದು ಮೊಬೈಲ್,13ಲಕ್ಷ ನಗದು ವಶ.! ಉಪೇಂದ್ರ ಭಟ್ ಎಂಬವರಿಗೆ ವಾಟ್ಸಪ್ ಕಾಲ್ ಮಾಡಿ ನಕಲಿ ಕಂಪನಿಗೆ ಹಣ ಹಾಕಿಸಿದ್ದ ಕಿರಾತಕರು.! 33ಲಕ್ಷ ಹತ್ತು ಸಾವಿರ ಹಣ ನಕಲಿ ಕಂಪನಿಯ ಅಕೌಂಟ್ ಗೆ ಹಣ ಹೂಡಿದ್ದ ಉಪೇಂದ್ರ ಭಟ್.! ಉಡುಪಿ CEN ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ.! ಉಡುಪಿ ಎಸ್ಪಿ ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ […]

Continue Reading

ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಹಲ್ಲೆ; ಸಾಮಾಜಿಕ ತಾಣದಲ್ಲಿ ವೀಡಿಯೋ ವೈರಲ್.

ತಂಡವೊಂದು ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಮನಬಂದಂತೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ತಂಡದಿಂದ ಹಲ್ಲೆಗೊಳಗಾದ ಯುವಕ ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿ ರಹೀಂ ಎಂದು ತಿಳಿದು ಬಂದಿದೆ. ಹುಡುಗಿ ವಿಚಾರದಲ್ಲಿ ರಹೀಂನನ್ನು ಅಪಹರಿಸಿದ ಯುವಕರು ಪುತ್ತೂರು ಹೊರವಲಯದ ಮನೆಯೊಂದರಲ್ಲಿ ಕೂಡಿಹಾಕಿ ಥಳಿಸುತ್ತಿರುವ ದೃಶ್ಯ ಬುಧವಾರ ಸಂಜೆಯಿಂದ ವೈರಲಾಗುತ್ತಿದ್ದು ಈ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Continue Reading

ಕೋಮುವಾದಿಗಳಿಗೆ ಸಿಂಹಸ್ವಪ್ನ, ಭ್ರಷ್ಟರ ‌ಭೇಟೆಯಾಡುತ್ತಿರುವ ADC; ನಿಯತ್ತಿನ ಅಪರ ಜಿಲ್ಲಾಧಿಕಾರಿ ಡಾ॥ ಜಿ. ಸಂತೋಷ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ॥ ಜಿ. ಸಂತೋಷ್ ಕುಮಾರ್ ನಿಯತ್ತಿನ, ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟರ ವಿರುದ್ಧ ಯಾರ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ದಿಟ್ಟ, ನೇರ ನಡೆ-ನುಡಿಯ ಅಧಿಕಾರಿ ADC ಸಂತೋಷ್ ಕುಮಾರ್. ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ FDA ಕೊಕ್ಕೆ ಮಹೇಶನನ್ನು ಎತ್ತಂಗಡಿ ಮಾಡುವಲ್ಲಿ ಸಫಲರಾಗಿದ್ದಾರೆ. ಕೊಕ್ಕೆ ಮಹೇಶನ ಬಗ್ಗೆ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುತ್ತಿದ್ದರು. ಮಾತ್ರವಲ್ಲದೆ ಈತ ಸಾರ್ವಜನಿಕರನ್ನು ಬಹಳ ಸತಾಯಿಸುತ್ತಿದ್ದ. […]

Continue Reading

ಮಸೂದ್ ಟ್ರಸ್ಟ್ ವತಿಯಿಂದ ಡಾ.ಯು.ಟಿ ಇಫ್ತಿಕಾರ್ ಅಲಿಯವರಿಗೆ ಸನ್ಮಾನ

ಮಸೂದ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಅಲಿ ಅವರನ್ನು ಕುದ್ರೋಳಿಯಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಸನ್ಮಾನ ನೆರವೇರಿಸಿ ಮಾತನಾಡಿದರು. ಸ್ವಂತ ಸಾಮರ್ಥ್ಯದಿಂದ ಇಫ್ತಿಕಾರ್ ಅಲಿ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂಥ ಕ್ರಿಯಾಶೀಲ, ಸ್ಪೂರ್ತಿದಾಯಕ ಯುವಕರ ಅಗತ್ಯ ಸಮಾಜಕ್ಕೆ ಅತ್ಯಗತ್ಯ. ಆ ಮೂಲಕ ಸಮಾಜದ ಸೇವೆ ನಡೆಯಬೇಕು ಎಂದರು. ಡಾ. ಯು.ಟಿ ಇಫ್ತಿಕಾರ್ ಅಲಿ ಸನ್ಮಾನ ಸ್ವೀಕರಿಸಿ, ಮಸೂದ್ […]

Continue Reading

ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಬಸ್ ಮತ್ತು ಆಕ್ಟಿವಾ ಅಪಘಾತದಲ್ಲಿ ಗಾಯಗೊಂಡ ಮುಝಂಬಿಲ್ ಚಿಕಿತ್ಸೆ ಫಲಕಾರಿಯಾಗದೆ ನಿಧನ.

ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಆಗಸ್ಟ್ 12ರಂದು ನಡೆದಿದ್ದ ಬಸ್ ಮತ್ತು ಆಕ್ಟಿವಾ ನಡುವೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ತೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ನಿಧನ. ಮಂಗಳೂರಿಗೆ ಕಡೆ ಹೋಗುತ್ತಿದ್ದ ಮಹೇಶ್ ಖಾಸಗಿ ಬಸ್-ಆಕ್ಟಿವಾ ನಡುವೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಮುಝಾಂಬಿಲ್(30)ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳು ಮುಝಾಂಬಿಲ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ.

Continue Reading

ರಾಜ್ಯದಾದ್ಯಂತ ಭಾರೀ ಸುದ್ಧಿಯಾದ ಕಾರ್ಕಳ ಪರಶುರಾಮ ಮೂರ್ತಿ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ

ರಾಜ್ಯದಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಒಂದಿಲ್ಲೊಂದು ಸುದ್ದಿ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಕಾರ್ಕಳ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಫೈಟ್ ಗೆ ಕಾರಣವಾಗಿದ್ದ ಪರಶುರಾಮ ಥೀಮ್ ಪಾರ್ಕ್ ಹಲವು ಅಧಿಕಾರಿಗಳ ತಲೆದಂಡಕ್ಕೂ ಕಾರಣವಾಗಿತ್ತು. ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಮೂರ್ತಿ ವಿಚಾರದಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಕಂಚಿನ ಪ್ರತಿಮೆ ಬದಲು ಫೈಬರ್ ಮೂರ್ತಿ ಅಳವಡಿಸಿರುವುದಾಗಿ ಆರೋಪಗಳು ಕೇಳಿ ಬಂದಿತ್ತು. ರಾತ್ರೋರಾತ್ರಿ ಮೂರ್ತಿ ಕಾಣೆಯಾಗಿತ್ತು. ಈ ವಿವಾದವನ್ನು ಕಾಂಗ್ರೆಸ್ […]

Continue Reading

ಬಜರಂಗದಳದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಕೊಯ್ಯೂರು ಘಟಕದ ಪ್ರಮುಖ್ ಸಚಿನ್ ಕೊಯ್ಯೂರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಬಜರಂಗದಳದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿ ಸಚಿನ್‌ ಕೆಯ್ಯೂರು (27) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಸಚಿನ್ ಕೊಯ್ಯೂರು ಘಟಕದ ಸುರಕ್ಷಾ ಪ್ರಮುಖ್‌ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಸಚಿನ್ ಕೆಯ್ಯೂರು ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡಿದ್ದಾರೆ. ಬಿಸಿಎ ಪದವಿ […]

Continue Reading