ಬಾಂಗ್ಲಾ ಮಾದರಿ ದಂಗೆಗೆ ಐವನ್ ಸಂಚು.? ಕಾಂಗ್ರೆಸ್ ಶಾಸಕರ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಬಿಜೆಪಿ ಆಗ್ರಹ

ಬೆಂಗಳೂರು: ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗುತ್ತಿರುವ ಮಂಗಳೂರು ಮೂಲದ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಇದೀಗ ತಮ್ಮ ಲೂಸ್ ಟಾಕ್‌ನಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.‌ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರನ್ನು ಬಾಂಗ್ಲಾದೇಶ ಮಾದರಿಯಲ್ಲಿ ಕೆಳಗಿಸುತ್ತೇವೆಂದು ಕಾಂಗ್ರೆಸ್ ಶಾಸಕರೂ ಆದ ಐವಾನ್ ಡಿಸೋಜಾ ಹೇಳಿದ್ದಾರೆಂದು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದ್ದಾರೆ. ಐವನ್ ಡಿಸೋಜಾ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್‌ […]

Continue Reading

ಬುದ್ದೀಸಂ ವರ್ಸಸ್ ಬ್ರಾಹ್ಮಣ್ಯ ಮತ್ತು ಭವಿಷ್ಯ ಭಾರತದ ತಂಗಲಾನ್…!

ಅಂದು ಬ್ರಿಟೀಷರ ಜೊತೆ ಮೇಲ್ವಿಚಾರಣೆಗೆಂದು ಬಂದ ಬ್ರಾಹ್ಮಣರ ಮಕ್ಕಳು ಕೆಜಿಎಫ್ ಗಣಿ ಯೂನಿಟ್ ನ ಇಂಜಿನಿಯರ್ ಗಳಾದರು. ದಲಿತ ಗಣಿ ಕಾರ್ಮಿಕರ ಮಕ್ಕಳು ಗಣಿ ಕಾರ್ಮಿಕರ ಮಕ್ಕಳಾಗಿಯೇ ಉಳಿದರು ! ✍️. ನವೀನ್ ಸೂರಿಂಜೆ, ಪತ್ರಕರ್ತರು ದಲಿತ/ ನಾಗ ಪರಂಪರೆ/ ಬುದ್ದೀಸಂನ ಪ್ರತಿಪಾದಕಿ ಆರತಿಯ ರಕ್ತವೇ ಚಿನ್ನವಾಯಿತು ! ಪ ರಂಜಿತ್ ನಿರ್ದೇಶನದ ‘ತಂಗಲಾನ್’ ಸಿನೇಮಾದ ಕತೆಯಿದು. ಸಿನೇಮಾದ ಮೊದಲಾರ್ಧದಲ್ಲಿ ‘ನಾಗ ಪರಂಪರೆಯ ನಾಯಕಿ, ಬೌದ್ದಧರ್ಮದ ಅನುಯಾಯಿ ಆರತಿಯ ರಕ್ತ ಚಿನ್ನವಾಗುತ್ತದೆ’ ಎಂದು ತಂಗಲಾನ್ ತನ್ನ ಮಕ್ಕಳಿಗೆ […]

Continue Reading

ಸಮೀರ್ ಕಡಪ್ಪರ ಹತ್ಯೆ ಪ್ರಕರಣ: ಕಷ್ಟಡಿಯಲ್ಲಿದ್ದ ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ; ಪ್ರಮುಖ ಸೂತ್ರಧಾರನ ಬಂಧನ ಯಾವಾಗ.?

ಉಳ್ಳಾಲ ಕಡಪ್ಪರ ನಿವಾಸಿ ರೌಡಿ ಶೀಟರ್ ಸಮೀರ್ ಹತ್ಯೆಗೆ ಸಂಬಂಧಿಸಿದಂತೆ ಟಾರ್ಗೆಟ್ ಇಲ್ಯಾಸ್ ಭಾವ ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಕಿನ್ಯಾ ನಿವಾಸಿ ನಿಯಾಝ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು, ಕಾಪು ಮಜೂರಿನ ಇಕ್ಬಾಲ್ ಯಾನೆ ಇಕ್ಕು ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದರು. ಹತ್ಯೆಗೆ ಸಂಬಂಧಿಸಿ ಪ್ರಮುಖ ಸೂತ್ರಧಾರಿಯ ಬಂಧನ ಇನ್ನಷ್ಟೇ ಬಾಕಿಯಿದೆ. ಅಗಸ್ಟ್ 11 ರ ತಡರಾತ್ರಿ ಆತ್ಮೀಯ ಪರಿಚಿತ ರೌಡಿಯೊಬ್ಬನ ಫೋನ್ ಕರೆಗೆ ತೊಕ್ಕೊಟ್ಟು ಕಲ್ಲಾಪು ರೆಸ್ಟೋರೆಂಟ್ ಬಳಿ […]

Continue Reading

ಬುದ್ಧಿಮಾತು ಹೇಳಿದ್ದಕ್ಕೆ ಆಟೋ ಚಾಲಕಗೆ ಚೂರಿಯಿಂದ ಇರಿದ ಗಾಂಜಾ ವ್ಯಸನಿ; ಗಾಂಜಾ ಅಡ್ಡೆಯಾಗುತ್ತಿರುವ ವಿಟ್ಲ ಠಾಣಾ ವ್ಯಾಪ್ತಿ.

ವಿಟ್ಲ ಠಾಣಾ ವ್ಯಾಪ್ತಿಯ ಗಾಂಜಾ ಅಡ್ಡೆಯೆಂದೇ ಕುಖ್ಯಾತಿ ಪಡೆದ ಉರಿಮಜಲು ಜಂಕ್ಷನಲ್ಲಿ ಆಟೋ ಚಾಲಕಗೆ ಡ್ರಗ್ಸ್ ವ್ಯಸನಿಯೊಬ್ಬ ಚೂರಿಯಿಂದ ಇರಿತು ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಆಟೋ ಚಾಲಕ ಶರೀಫ್ ಎಂಬವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಡಿ ನಿವಾಸಿ ರಫೂಫ್ ಪುತ್ರ ಗಾಂಜಾ ಅಫೀಝ್@ ಅಪ್ಪಿ(22)ಎಂಬಾತ ಉರಿಮಜಲು ಜಂಕ್ಷನಲ್ಲಿ ಬಸ್ ತಂಗುದಾಣದಲ್ಲಿ ಕುಳಿತು ಮಹಿಳೆಯರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಅವಮಾನ ಮಾಡುತ್ತಿದ್ದ. ಆ ಸಂದರ್ಭ ಅದೇ ಪರಿಸರದಲ್ಲಿದ್ದ ಆಟೋ ಚಾಲಕ ಶರೀಫ್ ಎಂಬವರು ಅಪ್ಪಿಗೆ […]

Continue Reading

ಸದ್ಯದಲ್ಲೇ ಕಂದಾವರ ಗ್ರಾಮ ಪಂಚಾಯತ್ ಗೆ ತಟ್ಟಲಿದೆ ಪ್ರತಿಭಟನೆಯ ಬಿಸಿ; ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ.

ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ. ಕಳೆದ 23 ವರ್ಷಗಳಿಂದ ಇಲ್ಲಿನ ನಿರ್ವಸಿತರ ಪಾಡಂತೂ ನಾಯಿಪಾಡು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ ಆಗುವ ಸಂಧರ್ಭದಲ್ಲಿ ಜಾಗ ಕಳೆದುಕೊಂಡು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರ, ಕೊಳಂಬೆಗೆ ಬಂದ ನಿರ್ವಸಿತರ ಪಾಡು ಕೇಳುವವರಿಲ್ಲ.! ಸರಿ-ಸುಮಾರು 200 ರಷ್ಟು ಶಾಲೆಗೆ ಹೋಗುವ ಮಕ್ಕಳಿದ್ದರೂ ಈವರೆಗೂ ಮಕ್ಕಳ ಅನುಕೂಲಕ್ಕಾಗಿ ಶಾಲೆ ತೆರೆಯುವ ಗೋಜಿಗೆ ಯಾರೂ ಹೋಗಿಲ್ಲ. ಮೂಲಭೂತ ಸೌಕರ್ಯದಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ. ಸರಿಯಾದ ಚರಂಡಿ […]

Continue Reading

ಸ್ಪೆಷಲ್ ನ್ಯೂಸ್ ವರದಿ ಫಲಶ್ರುತಿ; ಕೊಕ್ಕೆ ಮಹೇಶ ಹಿಂಬಡ್ತಿ ನೀಡಿ ಮಂಗಳೂರು ಎ.ಸಿ ಕಚೇರಿಯಿಂದ ಎತ್ತಂಗಡಿ: ಜಿಲ್ಲಾಧಿಕಾರಿ ಆದೇಶ

ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಕೊಕ್ಕೆ ಮಹೇಶ ನನ್ನು ಹಿಂಬಡ್ತಿ ನೀಡಿ ಪುತ್ತೂರು ತಾಲೂಕು ಕಚೇರಿಗೆ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಪತ್ರ ಹೊರಡಿಸಿದ್ದಾರೆ. ಕೊಕ್ಕೆ ಮಹೇಶನ ರಂಪಾಟ, ಭ್ರಷ್ಟತೆಯ ಮುಖವಾಡವನ್ನು ಸ್ಪೆಷಲ್ ನ್ಯೂಸ್ ಪತ್ರಿಕೆ ಇಂಚಿಂಚಾಗಿ ವರದಿ ಮಾಡಿತ್ತು. ಸ್ಪೆಷಲ್ ನ್ಯೂಸ್ ವೆಬ್ ಪೋರ್ಟಲ್ ಕೂಡ ವರದಿ ಮಾಡಿದ್ದವು. ‘ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್’ ಹೆಡ್ ಲೈನ್ ನೊಂದಿಗೆ ಪತ್ರಿಕೆ ಸವಿವರವಾಗಿ ವರದಿ ಪ್ರಕಟಿಸಿತ್ತು. ಈ ವರದಿ ಅಧಿಕಾರಿ […]

Continue Reading

ಮಂಗಳೂರು ಎ.ಸಿ ಕಚೇರಿ: ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್.!

ಬನ್ನೂರು ಕುರಿ ಮಾಂಸ, ಅಂಜಲ್, ಮಾಂಜಿಯಿಂದ ಬಲೆ ಬೀಸಿ, ಮಂಕು ಬೂದಿ ಎರಚುವ ಕನಕಪುರದ ಕೊಕ್ಕೆ ಕನಕಪುರ ಮೂಲದ ಮಹೇಶ ನಿಯೋಜನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಎ.ಸಿ ಸಾಹೇಬ್ರ ಆತ್ಮೀಯ! ಎಂಟು ತಿಂಗಳ ಹಿಂದೆ ಪುತ್ತೂರು ತಾಲೂಕು ಕಚೇರಿಯಲ್ಲಿ FDA ಆಗಿದ್ದಾಗ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಮಾಡಿ ದೊಡ್ಡ ರಾದ್ಧಾಂತ ಎಬ್ಬಿಸಿದ್ದ. ಪೊಲೀಸರಿಂದ ಪೆಟ್ಟು ತಿಂದು ಕೊನೆಗೂ ರಾಜಿ ಪಂಚಾತಿಕೆ ಮೊರೆ ಹೋಗಿ ಪರಿಶಿಷ್ಟ ಜಾತಿಯವನ ಕಾಲು ಹಿಡಿದು […]

Continue Reading

ಮಳೆ ಹಾನಿ ಪ್ರದೇಶ ವೀಕ್ಷಿಸಲು ಬಂದ ಹರೀಶ್ ಪೂಂಜಾರನ್ನು ತರಾಟೆಗೆ ತೆಗೆದು, ಘೇರಾವ್ ಹಾಕಿದ ಗ್ರಾಮಸ್ಥರು.

ಇತ್ತೀಚಿಗೆ ಸುರಿದ ಬಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ರಸ್ತೆ ವ್ಯಾಪಕವಾಗಿ ಬಿರುಕು ಬಿಟ್ಟು ಜನ , ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆ ಪ್ರದೇಶಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಜನರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಇಂದು ನಡೆದಿದೆ. ದ.ಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳುಗಳಿಂದ ಬಾರಿ ಮಳೆಯಾಗಿ ತಾಲೂಕಿನಾದ್ಯಂತ ವ್ಯಾಪಕವಾಗಿ ಪ್ರಾಕೃತಿಕ ವಿಕೋಪ ಸಂಭವಿಸಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೈಸೂರಿನ […]

Continue Reading

ಇಂದಬೆಟ್ಟು: ” ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಮಗಾರಿಗೆ ತಮ್ಮಿಂದ ಒಂದು ರೂಪಾಯಿ ಸಹಾಯಧನ ನೀಡಲು ವಿನಂತಿ

ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಹೋರಾಟಗಾರ ವೆಂಕಪ್ಪ ಕೋಟ್ಯಾನ್ ರವರ ವಿನೂತನ ಪ್ರತಿಭಟನೆ ಇಂದಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅರ್ಧನಾರೀಶ್ವರಿ ದೇವಸ್ಥಾನದ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದಾಗಿ ಬೇಸತ್ತ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಹೋರಾಟಗಾರ ವಿಶಿಷ್ಟವಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ್ದು, ಈ ಬ್ಯಾನರ್ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಶ್ರೀ ಅರ್ಧನಾರೀಶ್ವರಿ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಇತಿಹಾಸ ಪ್ರಸಿದ್ಧವಾಗಿದೆ. […]

Continue Reading

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಏಕಪಕ್ಷೀಯ ನಿರ್ಧಾರ ಕೈಗೊಂಡ ಜಿಲ್ಲಾಡಳಿತದ ವಿರುದ್ಧ ರಿಕ್ಷಾ ಚಾಲಕರಿಂದ ಬ್ರಹತ್ ಪ್ರತಿಭಟನೆ

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ದ.ಕ.ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಅಟೋರಿಕ್ಷಾ ಚಾಲಕರು ನಗರದಲ್ಲಿಂದು (16-08-2024) CITU ನೇತ್ರತ್ವದಲ್ಲಿ ವಿವಿಧ ಅಟೋರಿಕ್ಷಾ ಚಾಲಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಬ್ರಹತ್ ಪ್ರತಿಭಟನೆಯನ್ನು ನಡೆಸಿದರು. 500ಕ್ಕೂ ಮಿಕ್ಕಿದ ಅಟೋರಿಕ್ಷಾ ಚಾಲಕರು ಜಿಲ್ಲಾಡಳಿತದ ತೀರ್ಮಾನ ಹಾಗೂ ಕೇಂದ್ರ ರಾಜ್ಯ ಸರಕಾರಗಳ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಸರಕಾರಗಳ ನೀತಿಗಳನ್ನು ಖಂಡಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ ಡ್ರೈವರ್ಸ್ ಯೂನಿಯನ್ ನ ದ.ಕ‌.ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ […]

Continue Reading