ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ವೈಜ್ಞಾನಿಕವಾಗಿ ನಡೆಸಲು, ಟೋಲ್ ಗೇಟ್ ನಿರ್ಮಾಣದ ಸಂದರ್ಭ ನಿಯಮ ಪಾಲಿಸಲು, ಅಕ್ರಮ, ಸ್ವಜನಪಕ್ಷಪಾತಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿ ನಿರ್ಣಯ

ಕೆತ್ತಿಕಲ್ ಗುಡ್ಡ ಕಡಿದಿರುವುದು ಅಕ್ರಮ, ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ಅವೈಜ್ಞಾನಿಕ, ಸೂರಲ್ಪಾಡಿ ಟೋಲ್ ಗೇಟ್ ನಿರ್ಮಾಣ ನಿಯಮ ಬಾಹಿರ, ನಂತೂರು – ಮೂಡಬಿದ್ರೆ – ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೆಲವೆಡೆ ಭೂ ಸ್ವಾಧೀನದ ಸಮಸ್ಯೆಗಳನ್ನು ಇನ್ನೂ ಪರಿಹರಿಸಲಾಗಿಲ್ಲ. ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಇಡೀ ಕೈಕಂಬ ಪೇಟೆಯ ವ್ಯಾಪಾರ, ವ್ಯವಹಾರಗಳು ನಷ್ಟ ಹೊಂದುವ ಭೀತಿ ಎದುರಾಗಿದೆ‌. ಗುರುಪುರ ಪೇಟೆಯನ್ನು ಉಳಿಸುವ ಕಾರಣವನ್ನು ಮುಂದಿಟ್ಟು […]

Continue Reading

ವಿಟ್ಲ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಗ್ಯಾಸ್ ಹಂಡೆ, ಮನೆ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಖದೀಮರಿಬ್ಬರ ಬಂಧನ.

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು 29 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆ ಮನೆ ಕಳವು ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮದ ಮಹಮ್ಮದ್‌ ರಿಯಾಜ್‌ ಧರ್ಮನಗರ ನಿವಾಸಿ […]

Continue Reading

ಪುತ್ತೂರು: ಕೋಳಿ ಅಂಕಕ್ಕೆ ಪೊಲೀಸ್ ದಾಳಿ; ಐವರ ವಶ

ಪುತ್ತೂರಿನ ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ಜೂಜು ಅಡುತ್ತಿರುವ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿ ಎಸ್ ಐ ಜಂಬೂರಾಜ್ ಮಹಾಜನ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ದಾಳಿಗೆ ಹೆದರಿ ಇತರರು ಸ್ಥಳದಿಂದ ಓಡಿ ಹೋಗಿದ್ದಾರೆ. ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ಆಡುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳಿಂದ ಒಟ್ಟು 7710 ರೂಪಾಯಿ ನಗದು, 5 ಕೋಳಿಗಳು ಮತ್ತು ಕೋಳಿ ಕಾಲಿಗೆ ಕಟ್ಟಲು […]

Continue Reading

ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ಘಟಕ ತೊಡಕುಗಳನ್ನು ನಿವಾರಿಸಿ ತಕ್ಷಣ ಆರಂಭಿಸಲು, ಸ್ಥಳೀಯರಿಗೆ ಉದ್ಯೋಗ ಖಾತರಿಗೊಳಿಸಲು ಒತ್ತಾಯಿಸಿ ನಿರ್ಣಯ

ಕುಪ್ಪಪದವಿನಲ್ಲಿ ನಡೆದ ಸಿಪಿಐಎಂ ವಲಯ ಸಮ್ಮೇಳನದಲ್ಲಿ ನಿರ್ಣಯ ಗುರುಪುರ ಹೋಬಳಿಯ ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ನಿರ್ಮಾಣದ ಘೋಷಣೆಯನ್ನು 2014ರಲ್ಲಿ ಮಾಡಲಾಗಿತ್ತು. ಕೇಂದ್ರ ಸರಕಾರದ ಬಜೆಟ್ ನಲ್ಲೂ ಪ್ರಸ್ಥಾಪ ಮಾಡಲಾಗಿತ್ತು. ಘೋಷಣೆಯಾದ ಪ್ಲಾಸ್ಟಿಕ್ ಪಾರ್ಕ್ ಘಟಕ ಸ್ಥಾಪಿಸಲು 2021ರಲ್ಲಿ ಅಧಿಕೃತ ಅನುಮೋದನೆ ದೊರಕಿತ್ತು. ಮೂರು ವರ್ಷಗಳು ಸಂದರೂ ಕೂಡ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ಕನಿಷ್ಟ ಸಿದ್ದತೆಗಳಾಗಲಿ, ಅಥವಾ ಈ ಪ್ಲಾಸ್ಟಿಕ್ ಪಾರ್ಕ್ ನ ಒಳಗಡೆ ನಿರ್ಮಾಣಗೊಳ್ಳುವ ಕೈಗಾರಿಕೆಗಳು, ಹೂಡಿಕೆ ಆಗುವ ಒಟ್ಟು ಬಂಡವಾಳ, ಅವುಗಳ ಉತ್ಪಾದನೆ, […]

Continue Reading

ಸುರತ್ಕಲ್ ಹೆಣ್ಣುಮಗಳ FB ಮೆಸೆಂಜರ್ ಹ್ಯಾಕಿಂಗ್, ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ನ ಹೆಣ್ಣು ಮಗಳೊಬ್ಬಳ FB ಮೆಸೆಂಜರ್ ಹ್ಯಾಕ್ ಮಾಡಿ ಆತನ ಸೋದರನಿಗೆ ಬೆದರಿಕೆ ಹಾಕಿದ ಪ್ರಕರಣ ಕೋಮು ಬಣ್ಣ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದೆ. ಹುಡುಗಿ ಅನುಮಾನ ವ್ಯಕ್ತ ಪಡಿಸಿದ, ಡೋಲೊ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಮುಸ್ಲಿಂ ಯುವಕ ಶಾರೀಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅದರೆ, ಬಂಧಿತ ಯುವಕ, ಆತನ ಕುಟುಂಬಸ್ಥರು, ಗೆಳೆಯರು, ಈ ಪ್ರಕರಣವನ್ನು ಹತ್ತಿರದಿಂದ ಗಮನಿಸಿದವರು ಬೇರೆಯೆ ಕತೆ ಹೇಳುತ್ತಿದ್ದಾರೆ. ಅವರ ಪ್ರಕಾರ ಈ ಮೆಸೆಂಜರ್ ಹ್ಯಾಕಿಂಗ್ […]

Continue Reading

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಕೋಮುವಾದಿಗಳಿಗೆ ಶರಣಾಗಿದೆ, ಬಿಜೆಪಿಯೊಂದಿಗೆ ಅನೈತಿಕ ಮೈತ್ರಿ ಕುದುರಿಸಿದೆ : ಮುನೀರ್ ಕಾಟಿಪಳ್ಳ

ಸಂಘಪರಿವಾರ ಸೃಷ್ಟಿಸಿಸ ಮತೀಯ ಧ್ರುವೀಕರಣ, ದ್ವೇಷದ ರಾಜಕಾರಣದ ಅವಕಾಶ ಪಡೆದು ಸುಲಭದ ಗೆಲುವು ಸಾಧಿಸಿರುವ ಜಿಲ್ಲೆಯ ಬಿಜೆಪಿ ಶಾಸಕರುಗಳು ತುಳುನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿಯನ್ನೇ ಎತ್ತುತ್ತಿಲ್ಲ. ರಸ್ತೆ ದುರಸ್ತಿ, ಗುಂಡಿ ಮುಚ್ಚುವುದು, ನಿರ್ಮಾಣ ಹಂತದ ಹೆದ್ದಾರಿ ಕಾಮಗಾರಿಗಳಂತಹ ಕನಿಷ್ಟ ಪ್ರಶ್ನೆಗಳನ್ನೂ ಅವರು ಪರಿಹರಿಸುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ, ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸ್ಥಾಪನೆ, ಮೀನುಗಾರಿಕೆ, ವಸತಿ ಯೋಜನೆಯಂತಹ ಜ್ವಲಂತ ಸಮಸ್ಯೆಗಳು ಅವರ ಪಟ್ಟಿಯಲ್ಲೆ ಇಲ್ಲ. ಮುಂಗಳೂರು ಉತ್ತರ ಕ್ಷೇತ್ರ ಗಂಭೀರ ಸಮಸ್ಯೆಗಳಲ್ಲಿ ಬಳಲುತ್ತಿದ್ದರೂ ಜನರ ಸಮಸ್ಯೆಗಳನ್ನು […]

Continue Reading

ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ

ಅಕ್ರಮ ದಂಧೆಯಲ್ಲಿ ಬಿಜೆಪಿ -ಕಾಂಗ್ರೆಸ್ ಭಾಯಿ -ಭಾಯಿ.!ಅಧಿಕಾರಿಗಳು ಮೌನಕ್ಕೆ ಶರಣು ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಬೇಜವಬ್ದಾರಿತನದಿಂದ ನಡೆಯುತ್ತಿದೆ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದೆ. ಈ ಮಧ್ಯೆಯೇ ಗಂಜಿಮಠ ಸಮೀಪದ ಒಂಡೇಲಾ ಹಾಲ್ ಎದುರುಗಡೆ ಇರುವ ಬಲ್ಲಾಳ್ ಹಂಚಿನ ಕಾರ್ಖಾನೆ ಮುಂಭಾಗ ಮುಚ್ಚೂರು ಕ್ರಾಸ್ ರಸ್ತೆಯಿಂದ ಮುಂದುವರಿದು ರಸ್ತೆಗೆ ಸಂಬಂಧಿಸಿದ ಸರಿಸುಮಾರು ಎರಡು ಎಕ್ರೆ ಜಾಗದಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಗಣಿಗಾರಿಕೆಗೆ ಪ್ರಭಾವಿಗಳು ಸಾಥ್ […]

Continue Reading

ಅಮೆರಿಕವನ್ನು ಮೆಚ್ಚಿಸಲು ಇಸ್ರೇಲ್ ಗೆ ಮೋದಿ ಬೆಂಬಲ ನೀಡುತ್ತಿದ್ದಾರೆ: ಯಾದವ್ ಶೆಟ್ಟಿ ಆರೋಪ

ಅಮೆರಿಕವನ್ನು ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ನಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಆರೋಪಿಸಿದರು. ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಮಂಗಳೂರು ನಗರ ದಕ್ಷಿಣ ಸಮ್ಮೇಳನ ಭಾನುವಾರ (ಅಕ್ಟೋಬರ್ 27) ಮಂಗಳೂರಿನ ಕೊಟ್ಟಾರ ಚೌಕಿಯ ವಿ ಎಸ್ ಕೆ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ್ ಶೆಟ್ಟಿ, “ಜಗತ್ತು ಆತಂಕಕಾರಿ ಸ್ಥಿತಿಯಲ್ಲಿದೆ. ಒಂದು […]

Continue Reading

‘ಇಲಿಗೆ ಆಟ ಬೆಕ್ಕಿಗೆ ಪ್ರಾಣ ಸಂಕಟ’ ಹಂಗಾಗಿಬಿಟ್ಟಿದೆ ಉದ್ಯಮಿ ಸುಸೈಡ್ ಪ್ರಕರಣ ..

ಸೋಷಿಯಲ್ ಮೀಡಿಯಾದಲ್ಲಿ ಆರೋಪ – ಪ್ರತ್ಯಾರೋಪ; ಪೊಲೀಸ್ ದೂರು; ಇಲಾಖೆ ಮೌನ ಮಂಗಳೂರು ಉದ್ಯಮಿ, ಧಾರ್ಮಿಕ ಮುಖಂಡ ಮುಮ್ತಾಜ್ ಅಲಿ ಸುಸೈಡ್ ಕೇಸ್ ಪ್ರಕರಣ ಕಗ್ಗಂಟಾಗಿಯೇ ಉಳಿದಿದ್ದು, ದಿನಕ್ಕೊಂದು ವಿಚಿತ್ರ ತಿರುವು ಪಡೆಯುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಆರೋಪ -ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಅಮಾಯಕರನ್ನು ಸಿಲುಕಿಸಲಾಗುತ್ತಿದೆ ಅನ್ನುವ ಆರೋಪಗಳು ಕೇಳಿ ಬರತೊಡಗಿದೆ. ಮುಮ್ತಾಜ್ ಅಲಿ ಸುಸೈಡ್ ಕೇಸ್, ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಈವರೆಗೂ ಆರು ಜನ ಆರೋಪಿಗಳನ್ನು ಬಂಧಿಸಿದ್ದು, ಈ ಮಧ್ಯೆಯೇ ಈ ಘಟನೆಯ […]

Continue Reading

ನೀನೇ ಸಾಕಿದ ಗಿಣಿ.. ನಿನ್ನ ಹದ್ದಾಗಿ ಕುಕ್ಕಿತ್ತಲ್ಲೋ..!

ಅಧಿಕಾರದ ಲಾಲಸೆಗೆ ಚಡ್ಡಿ ದೋಸ್ತ್ ಗಳೇ ಖೆಡ್ಡಾ ತೋಡಿಬಿಟ್ರಾ..? ಮುಮ್ತಾಝ್ ಅಲಿ ಸುಸೈಡ್ ಬಗ್ಗೆ ಮೊಹಿದ್ದೀನ್ ಬಾವಾ ಹೀಗಂದಿದ್ದೇಕೆ.? ರಾಜ್ಯದಲ್ಲಿ ಭಾರೀ ಸಂಚಲನಕ್ಕೆ, ಮುಸ್ಲಿಂ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಮುಮ್ತಾಜ್ ಅಲಿ ಸುಸೈಡ್ ಮಿಸ್ಟರಿ ಬಗ್ಗೆ ಕುಟುಂಬಸ್ಥರು ಈವರೆಗೂ ಮೌನಕ್ಕೆ ಶರಣಾಗಿದ್ದು, ಇದೀಗ ಖುದ್ದು ಮುಮ್ತಾಜ್ ಅಲಿ ಸಹೋದರ, ಮಾಜಿ ಶಾಸಕ ಮೊಯ್ದಿನ್ ಬಾವಾ ಖಾಸಗಿ ಮಾಧ್ಯಮವೊಂದರಲ್ಲಿ ತನ್ನ ಮನಸ್ಸಿನಾಳವನ್ನು ಪೂರ್ತಿ ಬಿಚ್ಚಿಟ್ಟಿದ್ದಾರೆ. ಈವರೆಗೂ ಈ ಸುಸೈಡ್ ಹಿಂದಿನ ಇಬ್ಬರು ಹೈ ಪ್ರೊಫೈಲ್ ಬ್ಯಾರಿಗಳ ಹೆಸರು […]

Continue Reading