ಉದ್ಯಮಿ ಮುಮ್ತಾಜ್ ಅಲಿ ಮೃತದೇಹ ಪತ್ತೆ

ಕಾಂಗ್ರೆಸ್ ಮುಖಂಡ, ಜಿಲ್ಲಾ ವಕ್ಫ್ ಮೆಂಬರ್ ಸೇರಿದಂತೆ 6 ಜನರ ಮೇಲೆ ಎಫ್ ಐ ಆರ್ ಸತತ 24 ಗಂಟೆಗಳ ಕಾರ್ಯಾಚರಣೆ.. ತಣ್ಣೀರುಬಾವಿ ತಂಡ, ಈಶ್ವರ್ ಮಲ್ಪೆ ಸೇರಿದಂತೆ ಎಕ್ಸ್ ಫರ್ಟ್ ಈಜುಪಟುಗಳ ಸತತ ಪ್ರಯತ್ನದ ಬಳಿಕವೂ ನಿಗೂಢತೆ ಸೃಷ್ಟಿಸಿದ್ದ ನಾಪತ್ತೆ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಫಲ್ಗುಣಿ ನದಿಯಲ್ಲಿ ಉದ್ಯಮಿ ಮೃತದೇಹ ಪತ್ತೆಯಾಗಿದೆ. ಕದ್ರಿಯ ಆಳ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್ ಅಪಾರ್ಟ್ಮೆಂಟ್ ನಿಂದ ರವಿವಾರ ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಹೊರಟು ಕಣ್ಮರೆಯಾಗಿದ್ದ […]

Continue Reading

ಮಂಗಳೂರು: ಉದ್ಯಮಿ ನಿಗೂಢ ಕಣ್ಮರೆಯ ಹಿಂದೆ ಕಾಣದ ಕೈ ಯಾವುದು.? ಕೋಟಿ,ಕೋಟಿಗೆ ಡಿಮ್ಯಾಂಡ್ ಮಾಡಿದವರು ಯಾರು.?

ಮಂಗಳೂರು: ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಉಧ್ಯಮಿ ನಿಗೂಢ ಕಣ್ಮರೆ ಹಿಂದೆ ಹಲವು ಆಯಾಮಗಳು ಗೋಚರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಫುಡಾರಿಯೊಬ್ಬನ ಕರಾಳ ಹಸ್ತ ಕೈಯಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಮುಂಜಾನೆ ನಾಲ್ಕು ಗಂಟೆಗೆ ಮನೆಯಿಂದ ಹೊರಟಿದ್ದ ಉದ್ಯಮಿ ತನ್ನ ಮಗಳಿಗೆ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿದ್ದು, ನಾನು ದೇವನ ಬಳಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಕೂಳೂರು ಸೇತುವೆ ಬಳಿ ಖಾಸಗಿ ಬಸ್ ವೊಂದಕ್ಕೆ ಇವರು ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿದ್ದು ಬಸ್ಸಿನ […]

Continue Reading

ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸಿದ ಡಾ. ಅರುಣ್ ಉಳ್ಳಾಲ್ ಮೇಲೆ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ.

ಕಾಮ್ರೇಡ್ ಮುನೀರ್ ಕಾಟಿಪಳ್ಳ “ಕ್ರೈಸ್ತ ಹಾಗೂ ಮುಸ್ಲಿಮರ ಮದುವೆ ಹಾಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ಹಿಂದುಗಳು ಬಹಿಷ್ಕರಿಸಬೇಕು…” ಎಂದು ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ಡಾ. ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ. ಘಟನೆ ನಡೆದದ್ದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ಕೇಶವ ಶಿಶು ಮಂದಿರದಲ್ಲಿ […]

Continue Reading

ಮಂಗಳೂರು ಪೊಲೀಸರ ‘ಸುಮೊಟೋ’ ಎಂಬ ಸಂಘಪರಿವಾರದ ರಕ್ಷಣೆ.!

ಇದು ಕೇವಲ ಒಬ್ಬ ಅರುಣ್ ಉಳ್ಳಾಲ್ ಎಂಬಾತನ ಕೃತ್ಯವಲ್ಲ, ಸಂಘಪರಿವಾರದ ಸಂಘಟಿತ ಕೃತ್ಯ ✍️. ನವೀನ್ ಸೂರಿಂಜೆ, ಪತ್ರಕರ್ತರು ಸಂಘಪರಿವಾರ ಅಥವಾ ಹಿಂದುತ್ವವಾದಿಗಳು ಈಗೀಗ ಯಾವ ಕ್ರೈಂ ಮಾಡಿದರೂ ಸಾರ್ವಜನಿಕರು ದೂರು ನೀಡುವ ಮುನ್ನವೇ ಮಂಗಳೂರು ಪೊಲೀಸರು ‘ಸುಮೊಟೋ’ ಕೇಸ್ ದಾಖಲಿಸುತ್ತಿದ್ದಾರೆ. ಇದು ಸಂಘಪರಿವಾರದ ರಕ್ಷಣೆಗಾಗಿಯೇ ಮಂಗಳೂರು ಪೊಲೀಸರು ಕಂಡುಕೊಂಡ ಹೊಸ ತಂತ್ರಗಾರಿಕೆ ! ಅರುಣ್ ಉಲ್ಲಾಳ್ ಎಂಬಾತನು 29.09.2024 ರಂದು ಕಿನ್ಯ ಕೇಶವ ಶಿಶು ಮಂದಿರದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಮಾತನಾಡುತ್ತಾ ” ನಾವು ನಮ್ಮ […]

Continue Reading

ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸಿ, ನಿಮ್ಮಂತಹ ಡಾಕ್ಟರೇಟ್‌ಗಳಿಗೆ ಇಂಗ್ಲೀಷ್ ಕಲಿಯಲು ಕಾರಣವಾದವರು ಕಿಟ್ಟೆಲರು ಇವರು ಕ್ರಿಶ್ಚಿಯನ್ ಸಮುದಾಯದವರು.

ಧರ್ಮದ್ವೇಶಿ, ಮಾನ್ಯ ಡಾ.ಅರುಣ್ ಉಳ್ಳಾಲ್ ರವರಿಗೊಂದು ಬಹಿರಂಗ ಪತ್ರ…. ✍️. ಮನೋಜ್ ವಾಮಂಜೂರು ವಿಧ್ಯೆ ಕಲಿತ ನಂತರ ಸಂತ ಸೆಬೆಸ್ಟಿಯನ್ ಕಾಲೇಜಿನಲ್ಲಿ ದುಡಿದಿದ್ದೀರಿ…. ಸಂತ ಆಗ್ನೆಸ್ ಕಾಲೇಜಿನಲ್ಲೂ ದುಡಿದಿದ್ದೀರಿ ಆಗ ನಿಮಗೆ ಈ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಭೇದಗಳು ಇರಲಿಲ್ಲವೇ ಅಥವಾ ಅದು ಕ್ರಿಶ್ಚಿಯನ್ ಸಂಸ್ಥೆ ಎಂದು ನಿಮಗೆ ತಿಳಿದಿರಲಿಲ್ಲವೇ ಎಂಬ ಇನ್ನೊಂದು ಪ್ರಶ್ನೆಯು ನನ್ನಲ್ಲಿದೆ ಕಿಟ್ಟೆಲ್ಲರು ಬರೆದ ಕನ್ನಡ ಇಂಗ್ಲಿಷ್ ನಿಘಂಟಿನ ಛಾಯೆ ಇರುವ ಒಂದು ನಿಘಂಟು ಮನೆಯಲ್ಲಿದ್ದರೂ ಕೂಡ ಅದನ್ನು ಪಕ್ಕಕ್ಕೆ ಇಟ್ಟು […]

Continue Reading

ಮಂಗಳೂರಿನಲ್ಲೊಬ್ಬ ಸಜ್ಜನ ಮುಖವಾಡದ ಧರ್ಮ ದ್ವೇಷಿ ಶಿಕ್ಷಕ..!

ಹಿಂದೂ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು ಕರೆಕೊಟ್ಟ ಆಗ್ನೇಸ್ ಕಾಲೇಜಿನ ಶಿಕ್ಷಕ.! ಇದೊಂದು ತರಹ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ರೀತಿಯ ಮಾತಿದು. ಮೋಟಿವೇಷನ್ ಸ್ಪೀಚ್ ಅದೂ ಇದೂ ಎಂದು ಸಜ್ಜನ ಮುಖವಾಡದ ಈತ ಕೆಲಸ ಮಾಡುತ್ತಿರುವುದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ. ಆದರೆ ತನ್ನ ಸಮುದಾಯದವರಿಗೆ ಕರೆಕೊಡುತ್ತಿರುವುದು ತಮ್ಮ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು. ಬುದ್ಧಿವಂತ ಜಿಲ್ಲೆಯಲ್ಲಿ ಎಂತೆಂತಹ ಕೋಮು ಮನಸ್ಥಿತಿಯ ಕರಾಳತೆ ಇದೆ ಅನ್ನುವುದಕ್ಕೆ ಈ ಧರ್ಮದ್ವೇಷಿ ಶಿಕ್ಷಕನೇ ಉದಾಹರಣೆ. ಉಳ್ಳಾಲದ […]

Continue Reading

ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಗಣಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ದಾಳಿ; 23 ದೋಣಿಗಳ ವಶ

ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗಳ ಮೇಲೆ ಶುಕ್ರವಾರದಂದು ಪೊಲೀಸ್, ಗಣಿ ಮತ್ತು ಕಂದಾಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಸರಿ ಸುಮಾರು 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರ ಜಂಟಿಯಾಗಿ ತಂಡಕಟ್ಟಿ ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.ಬೋಟುಗಳ ಒಟ್ಟು ಅಂದಾಜು ಮೌಲ್ಯ ರೂ. 46 […]

Continue Reading

ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿಗೆ ಮಹತ್ವದ ಆದೇಶ

ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀ ಜೆ.ಎಂ ತೀರ್ಪು ನೀಡಿದ್ದಾರೆ. ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದು, 2018 ರ ಮೇ 18 ರಂದು ಮಹೇಶ್ ಭಟ್ ಎಂಬವರು ಬೈಕ್ ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ರಾಜಸ್ಥಾನ ನೋಂದಣಿಯ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಮಹೇಶ್ ಭಟ್ ಮೃತಪಟ್ಟಿದ್ದರು. ಮಂಗಳೂರಿನ 1ನೇ […]

Continue Reading

ಮೂಡಬಿದಿರೆ: ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಚುನಾವಣೆ ಮುಂದಕ್ಕೆ.!

ಮೂಡಬಿದಿರೆಯ ಪಡುಮಾರ್ನಾಡು ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾಅತಿನಲ್ಲಿ ಕೆಲವು ಸಮಯಗಳಿಂದ ಸುನ್ನೀ ಸಂಘಟನೆಯ ಎರಡು ವಿಭಾಗಗಳ ಮಧ್ಯೆ ಭಿನ್ನಮತ ತಾರಕಕ್ಕೇರಿತ್ತು. ಇಲ್ಲಿ ಹಿಂದಿನಿಂದಲೂ ಇ.ಕೆ ವಿಭಾಗದ ಪಠ್ಯಕ್ರಮ ಸಿಲೆಬಸ್ ಹಾಗೂ ಇ.ಕೆ ವಿಭಾಗದ ಜಮಾಅತ್ ಹೆಚ್ಚಿರುವುದರಿಂದ ಇನ್ನೊಂದು ವಿಭಾಗ ಮಸೀದಿ ಆಡಳಿತ ಸಮಿತಿಯನ್ನು ವಶಪಡಿಸಲು ಮುಂದಾಗಿತ್ತು. ದ.ಕ ಜಿಲ್ಲಾ ವಕ್ಫ್ ಸಮಿತಿಯ ಮಧ್ಯಸ್ಥಿಕೆಯನ್ನು ಕೋರಿತ್ತು. ಜಿಲ್ಲಾ ವಕ್ಫ್ ಗುಂಡುಕಲ್ಲು ಜಮಾಅತಿ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಡಳಿತಧಿಕಾರಿಯನ್ನಾಗಿ ಬೆಳ್ತಂಗಡಿಯ ಮಹಮ್ಮದ್ ರಫೀ ಎಂಬವರನ್ನು ನೇಮಕ ಮಾಡಿ, ಚುನಾವಣೆಗೆ […]

Continue Reading

ಮಂಗಳೂರು: ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಉರ್ವ ಠಾಣೆಯ ಕಾನ್‌ಸ್ಟೆಬಲ್‌ ವೆಂಕಟೇಶ್‌ ಎಂಬವರನ್ನು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟೇಶ್‌ ಎಂಬವರು ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ಪುಷ್ಪರಾಜ್‌ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್‌ ಅವರು ಬೀಟ್‌ ಕರ್ತವ್ಯ ಸಿಬಂದಿಯವರಾದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ ರೋಹಿದಾಸ್‌ ಅವರಿಗೆ ಈ ವಿಚಾರ […]

Continue Reading