ಬೆಳಗ್ಗೆ ಹಾಗೂ ಸಾಯಂಕಾಲ ಐದು ಗಂಟೆ ಸಮವಸ್ತ್ರದಲ್ಲಿ ಪೊಲೀಸರು ಕಡ್ಡಾಯವಾಗಿ ಗಸ್ತು ತಿರುಗಬೇಕು: ಪೊಲೀಸ್ ಮಹಾ ನಿರ್ದೇಶಕರು

ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲ ಐದು ಗಂಟೆ ಸಮವಸ್ತ್ರದಲ್ಲಿ ಪೊಲೀಸರು ಕಡ್ಡಾಯವಾಗಿ ಗಸ್ತು ತಿರುಗಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಆದೇಶಿಸಿದ್ದಾರೆ. ರಾಜ್ಯದ ಪೊಲೀಸರ ಕಾರ್ಯನಿರ್ವಹಣೆ ಕುರಿತು 20 ಸ್ಪಷ್ಟ ಸೂಚನೆಗಳನ್ನು ನೀಡಿರುವ ಡಿಜಿಪಿ, ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಸಲುವಾಗಿ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 6 ರಿಂದ ರಾತ್ರಿ 9 ರವರೆಗೆ ಸಮವಸ್ತ್ರ ಧರಿಸಿ ಗಸ್ತು ತಿರುಗಬೇಕು ಎಂದು ನಿರ್ದೇಶಿಸಿದ್ದಾರೆ. […]

Continue Reading

ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ದೃಶ್ಯ ವೀಕ್ಷಿಸುವುದು ಮಾಹಿತಿ ತಂತ್ರಜ್ಞಾನದ ಕಾಯ್ದೆಯಡಿ ಅಪರಾಧ ಹೊರಿಸಲಾಗದು: ಹೈಕೋರ್ಟ್

ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ದೃಶ್ಯ ವೀಕ್ಷಿಸಿದ ವ್ಯಕ್ತಿಯ ಮೇಲೆ ಮಾಹಿತಿ ತಂತ್ರಜ್ಞಾನದ ಕಾಯ್ದೆಯಡಿ ಅಪರಾಧ ಹೊರಿಸಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ, ಅಪ್ ಲೋಡ್, ಪ್ರಸರಣ ಮಾಡುವುದು ಅಪರಾಧವೆಂದು ಹೇಳಿ ಪ್ರಕರಣ ರದ್ದುಪಡಿಸಲಾಗಿದೆ. ವೆಬ್ ಸೈಟ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋ ವೀಕ್ಷಿಸಿದ ಆರೋಪದ ಮೇಲೆ ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು […]

Continue Reading

ಐಷಾರಾಮಿ ಕಾರುಗಳನ್ನು ಕಳವು ಮಾಡಿ, ನಕಲಿ ಎನ್‌ಒಸಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು

ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ, 2.56 ಕೋಟಿ ರೂಪಾಯಿ ಮೌಲ್ಯದ 17 ಕಾರುಗಳ ವಶ ನಗರ ಪ್ರದೇಶದಲ್ಲಿ ಕಳವು ಮಾಡಿದ ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್‌ಒಸಿ ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 2.56 ಕೋಟಿ ರೂಪಾಯಿ ಮೌಲ್ಯದ 17 ಕಾರುಗಳನ್ನು ವಶಪಡಿಸಿ ಕೊಂಡಿದ್ದಾರೆ. ಗೋವಾದ ಆಸ್ಟಿನ್ ಕರೋಡ ಅಲಿಯಾಸ್ ಚಿಂಟು ಮತ್ತು ಪೇಜರ್ ಟೌನ್ ನಿವಾಸಿ ಸಯ್ಯದ್ ರಿಯಾಜ್ ಬಂಧಿತ ಆರೋಪಿಗಳು. […]

Continue Reading

ಐದು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಸೇವೆ ಪೂರೈಸಿರುವ ಪಿ.ಸಿ, ಎ.ಎಸ್ ಐ ವರೆಗಿನ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಪೊಲೀಸ್ ಮಹಾ ನಿರ್ದೇಶಕರ ಆದೇಶ.

ಐದು ವರ್ಷಗಳ ಕಾಲ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ವರೆಗೂ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಇತ್ತೀಚೆಗೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸೂಚನೆಯ ಅನ್ವಯ ತಮ್ಮ ಘಟಕಗಳಲ್ಲಿ ಒಂದೇ ಸ್ಥಳ ಅಥವಾ ಠಾಣೆಗಳಲ್ಲಿ ಐದು ವರ್ಷ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯಿಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯವರೆಗಿನ ಅಧಿಕಾರಿ, ಸಿಬ್ಬಂದಿಯನ್ನು ಕೂಡಲೇ ಬೇರೆ ಠಾಣೆ ಅಥವಾ […]

Continue Reading

ವಕೀಲರು ಸಮಾಜಮುಖಿ ವೃತ್ತಿ ಶ್ರೇಷ್ಠರು’; ಹೈಕೋರ್ಟ್ ನ್ಯಾಯಮೂರ್ತಿ ಇಂದ್ರೇಶ್

ಕೋಲಾರ: ಸಮಾಜದ ಹಿತವು ವಕೀಲರನ್ನೂ ಆಧರಿಸಿರುವಾಗ ನ್ಯಾಯವಾದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ‌ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್ ಪ್ರತಿಪಾದಿಸಿದ್ದಾರೆ. ಪ್ರಸಕ್ತ ಸನ್ನಿವೇಶಗಳಲ್ಲಿ ಲಾಯರ್‌ಗಳು ಲಾ ಮೇಕರ್ ಮತ್ತು ಜನಸಾಮಾನ್ಯರ ನಡುವೆ ರಾಯಭಾರಿಯಂತಿದ್ದು, ವಕೀಲರ ಸಮಾಜಮುಖಿ ಕಾರ್ಯನಿರ್ವಹಣೆಯಿಂದ ಅವರ ವೃತ್ತಿಶ್ರೇಷ್ಠತೆ ಬಿಂಬಿತವಾಗುತ್ತದೆ ಎಂದವರು ಬಣ್ಣಿಸಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಪ್ರತಿಷ್ಠಿತ ಶ್ರೀ ಕೆಂಗಲ್ ಹನುಮಂತಯ್ಯ ಕಾನೂನು ಮಹಾವಿದ್ಯಾಲಯದ 42ನೇ ಪದವಿ ದಿನ (Graduation Day) ಸಮಾರಂಭದಲ್ಲಿ ಭಾಗವಹಿಸಿ, ಕಾನೂನು ಶಿಕ್ಷಿತರಿಗೆ ಮಾರ್ಗದರ್ಶನ ಭಾಷಣ ಮಾಡಿದ ನ್ಯಾಯಮೂರ್ತಿ ಇಂದ್ರೇಶ್, ಭಾವೀ […]

Continue Reading

ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ.! ವಾಲ್ಮೀಕಿ, ಮುಡಾ ಬೆನ್ನಲ್ಲೇ ವಕ್ಫ್‌ ಮಂಡಳಿಯ ಕೋಟ್ಯಾಂತರ ರೂಪಾಯಿ ಹಣ ಅಕ್ರಮ ವರ್ಗಾವಣೆ ದೂರು

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದಂತೆ, ಹಗರಣಗಳು ಸಾಲಾಗಿ ಬೆಳಕಿಗೆ ಬರುತ್ತಿವೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ಬೆನ್ನಲ್ಲೇ ಕರ್ನಾಟಕ ವಕ್ಫ್‌ ಮಂಡಳಿಯ ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ದೂರು ದಾಖಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಹಗರಣಗಳು ಸಾಲಾಗಿ ಬೆಳಕಿಗೆ ಬರುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ಬೆನ್ನಲ್ಲೇ ಮತ್ತೊಂದು […]

Continue Reading

ಸೆಪ್ಟೆಂಬರ್ 15 ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಸ್ತೆಗಿಳಿದರೆ 1000 ದಂಡ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ

ಅತೀ ಸುರಕ್ಷಿತ HSRP ನಂಬರ್ ಪ್ಲೇಟ್ ಅಳವಡಿಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ವಾಹನ ಸವಾರರು ಈ HSRP ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈಗಾಗಲೇ ಸರ್ಕಾರ ಸಾಕಷ್ಟು ಬಾರಿ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಎರಡು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ಕೊನೆಯ ದಿನಾಂಕವಾಗಿ ಘೋಷಿಸಿದೆ. ಇದೀಗ ಮತ್ತೆ ಸಮಯಾವಕಾಶವನ್ನು ಸರ್ಕಾರ ವಿಸ್ತರಿಸಿದೆ. ವಾಹನ […]

Continue Reading

ಹೊಂದಾಣಿಕೆ ರಾಜಕೀಯ, ಸಮನ್ವಯದ ಕೊರತೆ, ಭ್ರಷ್ಟಾಚಾರ ಆರೋಪ, ಕುಟುಂಬ ರಾಜಕರಣ, ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳು.

ಹೊಂದಾಣಿಕೆ ರಾಜಕೀಯ, ಪಕ್ಷ ಮತ್ತು ಸರ್ಕಾರ ಮಧ್ಯೆ ಸಮನ್ವಯದ ಕೊರತೆ, ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ತುಂಬುವ ಮೊದಲೇ ಗಂಭೀರವಾಗಿ ಕೇಳಿ ಬಂದ ಭ್ರಷ್ಟಾಚಾರ ಆರೋಪ, ಅಂಕೆ ದಾಟಿದ ಕುಟುಂಬ ರಾಜಕರಣವೇಲೋಕಸಭೆ ಚುನಾವಣೆಯ ಸೋಲಿಗೆ ಕಾಂಗ್ರೆಸ್‌ ನಾಯಕರು ಮುಂದಿಟ್ಟ ಕಾರಣಗಳು. ಸೋಲಿನ ಪರಾಮರ್ಶೆ ಎಐಸಿಸಿ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿ ಮುಂದೆ ಕಾಂಗ್ರೆಸ್‌ ನಾಯಕರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸಚಿವರು, ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಅಭಿಪ್ರಾಯ ಹಂಚಿಕೊಂಡರು. ವಿಧಾನಸಭೆ […]

Continue Reading

ನಾಮದ ಸೆಕ್ಸ್ ಮತ್ತು ಬಿ ಎಸ್ ವೈ ಸೆಕ್ಸುವಲ್ ಕ್ರೈಂ ಕೇಸ್ | ನಿನ್ನೆ ಕಲ್ಲಡ್ಕ, ಇಂದು ಬಿಎಸ್ ವೈಗೆ ಹೈಕೋರ್ಟ್ ರಿಲೀಫ್.!

ಬಾಲಕಿಗೆ ಸೆಕ್ಸುವಲ್ ಹೆರಾಸ್ಮೆಂಟ್ ಕೊಡುವುದಕ್ಕಿಂತ ನಾಮಕ್ಕೆ ಸೆಕ್ಸ್ ಎನ್ನುವುದು ಗಂಭೀರ ಅಪರಾಧವೇ.? ✍️. ನವೀನ್ ಸೂರಿಂಜೆ, ಪತ್ರಕರ್ತ ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಬಿ ಎಸ್ ಯಡಿಯೂರಪ್ಪಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ‌. ಈ ಹಿಂದೆ ಯಡಿಯೂರಪ್ಪರನ್ನು ಬಂಧಿಸದಂತೆ ಆದೇಶಿಸಿದ್ದ ಹೈಕೋರ್ಟ್, ಶುಕ್ರವಾರ ಯಡಿಯೂರಪ್ಪ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವುದರಿಂದಲೂ ವಿನಾಯಿತಿ ನೀಡಿದೆ. “ಬಿ ಎಸ್ ಯಡಿಯೂರಪ್ಪ ವಿಚಾರಣೆಗೆ ಹಾಜರಾಗುತ್ತಾರೆ. ಹಾಗಾಗಿ ಬಂಧಿಸಬಾರದು. ವಿಚಾರಣೆ ನಡೆಯಲಿ” ಎಂದು ಬಿ ಎಸ್ ಯಡಿಯೂರಪ್ಪ ಪರ ವಕೀಲರು […]

Continue Reading

ಒಂದೇ ವರ್ಷದಲ್ಲಿ ಬರೋಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂಬ ಅಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ತುಮಕೂರು ಜಿಲ್ಲೆಯಿಂದ ಆಘಾತಕಾರಿ ಅಂಶವೊಂದು ಹೊರ ಬಿದ್ದಿದ್ದು, ಒಂದೇ ವರ್ಷದಲ್ಲಿ ಬರೋಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂಬ ಅಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಇವರಲ್ಲಿ ನಾಲ್ವರು ಬಾಲಕಿಯರು 11 ವರ್ಷಕ್ಕಿಂತಲೂ ಚಿಕ್ಕವರು ಎಂಬ ವಿಲಕ್ಷಣ ಅಂಶ ಸಮಾಜವನ್ನು ಆತಂಕಕ್ಕೆ ಹೂಡುವಂತೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಈ ಅಂಕಿ-ಅಂಶವನ್ನು ಬಹಿರಂಗೊಳಿಸಿದೆ. ಇಂತಹ ಅನಾಹುತಕ್ಕೆ ಕಾರಣವಾಗುತ್ತಿರುವುದೇನು.?ಜನರಲ್ಲಿ ಶಿಕ್ಷಣದ ಕೊರತೆ, ಮೊಬೈಲ್ ಬಳಕೆ, ತಂದೆ ತಾಯಿಗಳ ನಿರ್ಲಕ್ಷ್ಯದಿಂದ ಮಕ್ಕಳು ತಪ್ಪು ದಾರಿ ತುಳಿದಿದ್ದು ಚಿಕ್ಕವಯಸ್ಸಿನಲ್ಲೇ ಅನೈತಿಕವಾಗಿ […]

Continue Reading