ಗ್ರಾಮ ಪಂಚಾಯಿತಿಗಳಿಗೆ ವ್ಯಾಪಾರ ಪರವಾನಿಗೆ ನೀಡಲು ಅಧಿಕಾರವಿಲ್ಲ; ಸರಕಾರದ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ.

ರಾಜ್ಯಾದ್ಯಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ವ್ಯಾಪಾರ ಮಳಿಗೆ, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ವ್ಯಾಪಾರ ಪರವಾನಿಗೆ ನೀಡಲು ಗ್ರಾಮ ಪಂಚಾಯತ್ ಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು 2006 ರಲ್ಲಿ ಸರಕಾರ ಆದೇಶ ಹೊರಡಿಸಿದ್ದರೂ, ಪಂಚಾಯತ್ ಗಳಲ್ಲಿ ಇದು ಪಾಲನೆ ಆಗುತ್ತಿಲ್ಲ. ಪಂಚಾಯತ್ ನಿರಾಕ್ಷೇಪಣಾ ಪತ್ರ ಮಾತ್ರ ನೀಡಬೇಕಾಗಿದ್ದು, ಇದನ್ನೇ ಪರವಾನಿಗೆ ಎಂದು ಪಂಚಾಯತ್ ಹಾಗೂ ಜನರು ಭಾವಿಸಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಹನೀಫ್ ಪಾಜಪಳ್ಳ ಹೇಳಿದ್ದಾರೆ. ಪಂಚಾಯತ್ ನಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯ ವ್ಯಾಪಾರ […]

Continue Reading

ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಹೇಳಿದ್ದೆವು. ಆದರೆ, ಇಂದು ಬಿಜೆಪಿ ಮುಕ್ತವಾಗುತ್ತಿದೆ: ರೇಣುಕಾಚಾರ್ಯ

ಕರ್ನಾಟಕ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಕಲಹ ಮುಂದುವರಿದಿದ್ದು ತಾರಕ್ಕೇರುತ್ತಿದೆ.ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಶೀಘ್ರದಲ್ಲೇ ರಾಜ್ಯ ಬಿಜೆಪಿ ಮುಕ್ತವಾಗಲಿದೆ ಎಂದು ಹೇಳಿದ್ದಾರೆ. ಕರ್ನಾಟಕ ಬಿಜೆಪಿಯ ಪರಮೋಚ್ಚ ನಾಯಕ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ […]

Continue Reading

ಆಪರೇಷನ್‌ ಹಸ್ತದ ಮುನ್ಸೂಚನೆ; ತತ್ವ–ಸಿದ್ಧಾಂತ ಒಪ್ಪಿಕೊಳ್ಳುವವರು ಪಕ್ಷಕ್ಕೆ ಬರಬಹುದು: ಸಿದ್ದರಾಮಯ್ಯ

ಕಾಂಗ್ರೆಸ್‌ ತೊರೆದಿರುವವರ ಸಹಿತ ಅನ್ಯ ಪಕ್ಷಗಳ ಶಾಸಕರು ಹಾಗೂ ಮುಖಂಡರ ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿರುವ ಬಹಿರಂಗ ಆಹ್ವಾನ ಆಪರೇಷನ್‌ ಹಸ್ತದ ಮುನ್ಸೂಚನೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ವರಿಷ್ಠರು ನೀಡಿರುವ 20ರ ಗುರಿಗಾಗಿ ಅನ್ಯ ಪಕ್ಷಗಳ ಕನಿಷ್ಠ 20 ಪ್ರಭಾವಿ ನಾಯಕರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ನೀಲ ನಕ್ಷೆ ರೂಪಿಸುತ್ತಿದೆ ಎನ್ನಲಾಗಿದೆ. ಆಪರೇಷನ್‌ ಕಮಲ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ ಎಂದು […]

Continue Reading

ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ನಗರದ ಎಚ್ ಬಿ ಆರ್ ಲೇ ಔಟ್ ನ ವಸತಿ ಮನೆಯನ್ನು ಪ್ರಾರ್ಥನೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಭಾಗೀಯ ಪೀಠವು ಇತ್ತೀಚೆಗೆ ಪಿಐಎಲ್ ನ್ನು ವಜಾಗೊಳಿಸಿತ್ತು. ಪೀಠವು ಅರ್ಜಿಯನ್ನು ವಜಾಗೊಳಿಸಿ ಪ್ರಾರ್ಥನೆಗೆ […]

Continue Reading

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಉಸ್ತುವಾರಿಗಳ ನೇಮಕ

ಮುಂದಿನ ವರ್ಷ ಜೂನ್ ನಲ್ಲಿ ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಪದವೀಧರ/ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರತಿಪಕ್ಷ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಅರ್ಹ ಮತದಾರರ ನೋಂದಣಿ ಪ್ರಕ್ರಿಯೆಗೆ ಪ್ರೇರಣೆ ಸೇರಿ ಹಲವು ಚಟುವಟಿಕೆಗಳ ಮೇಲ್ವಿಚಾರಣೆಗೆ ಉಸ್ತುವಾರಿಗಳನ್ನು ನೇಮಿಸಿದೆ. ಮಾಜಿ ಸಚಿವರಿಗೆ ಕ್ಷೇತ್ರಾವರು ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಪದವೀಧರ ಕ್ಷೇತ್ರಗಳು: ಈಶಾನ್ಯ- ಬಿ. ಶ್ರೀರಾಮುಲು, ನೈರುತ್ಯ- ಸಿಟಿ ರವಿ, ದಕ್ಷಿಣ: ಕೆ ಎಸ್ ಈಶ್ವರಪ್ಪ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಡಾ. ಸಿ ಎನ್ ಅಶ್ವತ್ಥನಾರಾಯಣರನ್ನು ಉಸ್ತುವಾರಿಗಳನ್ನಾಗಿ ಪಕ್ಷದ […]

Continue Reading

ಸರಕಾರದಿಂದ ಶುಭ ಸುದ್ದಿ.! ಅಕ್ರಮ-ಸಕ್ರಮ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿರುವವರಿಗೆ ಹಕ್ಕುಪತ್ರ

ಸರಕಾರಿ ಜಾಗದಲ್ಲಿ ಮನೆ ಕಟ್ಟಿಸಿ ವಾಸವಿರುವವರಿಗೆ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದೆ. ಅಕ್ರಮ ಸಕ್ರಮ ಎನ್ನುವ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ. ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಬಡತನದಲ್ಲಿರುವ ಜನರಿಗೆ ಹಕ್ಕು ಪತ್ರ ನೀಡಿ, ಆ ಜಾಗವನ್ನು ಅವರಿಗೆ ಸೂಕ್ತ ಎನ್ನುವ ಹಾಗೆ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ. ಹಕ್ಕುಪತ್ರ ನೀಡಲು ಒಂದು ಕಂಡೀಷನ್ ಇಡಲಾಗಿದೆ.ಆ ವ್ಯಕ್ತಿಯ ವಾರ್ಷಿಕ ಆದಾಯ ಎಷ್ಟಿದೆ ಎಂದು […]

Continue Reading

ಚೆಕ್ ಅಮಾನ್ಯ ಪ್ರಕರಣ: ಆರೋಪಿ ದೋಷಮುಕ್ತ

ಸದಾನಂದ ಎಂಬವರು ಸುದೇಶ್ ಕೆ ಅವರಿಂದ ಟಿಪ್ಪರ್ ವಾಹನವನ್ನು ಖರೀದಿಸುವರೆ ಆರೋಪಿಯು ಅದರ ಬಾಬ್ತು ಎಗ್ರಿಮೆಂಟ್ ಮಾಡಿಕೊಂಡ ಪ್ರಕಾರ 2011 ರಲ್ಲಿ ರೂಪಾಯಿ 1,20,000 ಮೊತ್ತವನ್ನು ಸಾಲವಾಗಿ ಪಡಕೊಂಡಿದ್ದು, ಸದ್ರಿ ಸಾಲದ ಮರುಪಾವತಿಗಾಗಿ ಒಂದು ಚೆಕ್ಕನ್ನು ನೀಡಿರುತ್ತಾರೆ.ಪಿರ್ಯಾದಿ ಚೆಕ್ಕನ್ನು ಸದ್ರಿ ಹಣದ ಮರುಪಾವತಿಗಾಗಿ ದಿನಾಂಕ 25/09/2014ರ ತನ್ನ ಕೆನರಾ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ನಗದೀಕರಣಕ್ಕೆ ಸಲ್ಲಿಸಿದಾಗ ಸದ್ರಿ ಚೆಕ್ ಅಮಾನ್ಯವಾಗಿರುತ್ತದೆ.ಅದರಂತೆ ದೂರುದಾರರಾದ ಸುದೇಶ್ ಕೆ ರವರು ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ […]

Continue Reading

ನಕಲಿ ದಾಖಲೆ ಪತ್ರ ಸೃಷ್ಠಿಸಿ ವಿತರಣೆ : ಬಂಧಿತ ಆರೋಪಿಗೆ ಶರತ್ತು ಬದ್ದ ಜಾಮೀನು; ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ಸ್ಥಳೀಯ ಗ್ರಾ.ಪಂ.ಮತ್ತು ನಗರಸಭೆಯ ಹೆಸರಿನಲ್ಲಿ ಸೀಲು,ರಬ್ಬರ್ ಸ್ಟಾಂಪ್ ತಯಾರಿಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಮಾಡಿ,ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಿಶ್ವನಾಥ್ ಬಿ.ವಿ. ಅವರಿಗೆ ಜಿಲ್ಲಾ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ನೀಡಿದ ದೂರಿನಂತೆ, ಜು.11ರಂದು ಪುತ್ತೂರು ನಗರ ಪೊಲೀಸರು ಪಡೀಲ್‌ನ ಎಂ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಬಿ.ಬಿ.ಇಲೆಕ್ಟಿಕಲ್ಸ್ ಆಂಡ್ ಪ್ಲಂಗ್ಸ್ ಅಂಗಡಿಗೆ ದಾಳಿ ನಡೆಸಿದ್ದರು. ಆ ವೇಳೆ ಅಲ್ಲಿ ಲಭಿಸಿದ ವಿವಿಧ ಗ್ರಾ.ಪಂಗಳ […]

Continue Reading

ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸ ಮೂರ್ತಿಯ ಹೆಸರಲ್ಲಿ ಐದು ಮದ್ಯದಂಗಡಿ ಲೋಕಾಯುಕ್ತ ಪೊಲೀಸರಿಂದ ಪತ್ತೆ

ಬೆಂಗಳೂರು ಕೆ.ಆರ್. ಪುರ ತಾಲ್ಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸ ಮೂರ್ತಿರವರು ಐದು ಮದ್ಯದಂಗಡಿ ಹೊಂದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.ಈ ಅಧಿಕಾರಿಯು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ತುಮಕೂರು ಜಿಲ್ಲೆಯ 14 ಸ್ಥಳಗಳ ಮೇಲೆ ಮಂಗಳವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು,ತುಮಕೂರು ಜಿಲ್ಲೆಯ ಐದು ಕಡೆಗಳಲ್ಲಿ ಶ್ರೀನಿವಾಸಮೂರ್ತಿ ಮದ್ಯದಂಗಡಿಗಳನ್ನು ಹೊಂದಿರುವುದನ್ನು ಪತ್ತೆಹಚ್ಚಿದ್ದಾರೆ.ಇನ್ನು ಹಲವು ಕಡೆಗಳಲ್ಲಿ ಸ್ಥಿರಾಸ್ತಿಗಳನ್ನು […]

Continue Reading

ಜಿ.ಪಂ, ತಾ.ಪಂ, ಗ್ರಾ.ಪಂ‌. ಅಧ್ಯಕ್ಷರ ಅವಧಿ ಐದು ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ ಇಂಗಿತ

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಗೆ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು. ಕಾಂಗ್ರೆಸ್ ನೇತೃತ್ವದ […]

Continue Reading