ರಾಜ್ಯ ಕಾಂಗ್ರೆಸ್ ನಲ್ಲಿ ಶೀಘ್ರವೇ ಭಾರಿ ಬದಲಾವಣೆ..! ಸುಮಾರು 20 ಜಿಲ್ಲೆಯ ಜಿಲ್ಲಾಧ್ಯಕ್ಷರಿಗೆ ಕೊಕ್

ದ.ಕ ಜಿಲ್ಲೆಯಲ್ಲೂ ಮಹತ್ತರದ ಬದಲಾವಣೆ ಸಾಧ್ಯತೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹಾಕಿಕೊಂಡಿರುವ ಕಾಂಗ್ರೆಸ್‌ ಮುಂದೆ ಬರಲಿರುವ ಎಲ್ಲ ಚುನಾವಣೆಗಾಗಿ ಹೊಸ ತಂಡ ಕಟ್ಟುವ ಉದ್ದೇಶದಿಂದ ಕೆಪಿಸಿಸಿಯಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದೆ.ಎರಡೆರಡು ಜವಾಬ್ದಾರಿ ಬೇಡ, ಪಕ್ಷದ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹೊಸ ತಂಡ ಕಟ್ಟಬೇಕೆಂಬ ಹೈಕಮಾಂಡ್‌ ತೀರ್ಮಾನದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರ ಸಹಿತ ಪದಾಧಿಕಾರಿಗಳಾಗಿರುವ ಶಾಸಕರು, ಸಚಿವರು ಸದ್ಯದಲ್ಲೇ ಪಕ್ಷದ ಹುದ್ದೆಗಳಿಂದ ಬಿಡುಗಡೆಯಾಗಲಿದ್ದಾರೆ. ಹಾಲಿ ಇರುವ ಪದಾಧಿಕಾರಿಗಳ ಕಾರ್ಯವೈಖರಿಯ […]

Continue Reading

ಇದ್ರೀಷ್ ಪಾಷ ಕೊಲೆ ಆರೋಪಿ, ಕ್ರಿಮಿನಲ್ ಪುನಿತ್ ಕೆರೆಹಳ್ಳಿ ಗೂಂಡಾ ಕಾಯ್ದೆ ಅಡಿ ಬಂಧನ

ಇದ್ರೀಷ್ ಪಾಷಾ ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಕಳೆದ ಹತ್ತು ವರ್ಷಗಳಲ್ಲಿ ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧ ಕಾರ್ಯಗಳ, ಅಪರಾಧ ಪ್ರಕರಣಗಳನ್ನು ಆಧರಿಸಿ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಈತ, ಮೂಲತಃ ಹಾಸನದವನು.ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಜನರನ್ನು ಬೆದರಿಸುವ, ಸಮಾಜದ […]

Continue Reading

ಕಿರಿಯ ರೈಡರ್ ಶ್ರೇಯಸ್ ರೈಡಿಂಗ್ ವೇಳೆ ದುರ್ಮರಣ

ಚೆನ್ನೈ ನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ನಲ್ಲಿ ಆಯೋಜಿಸಿದ್ದ ಇಂಡಿಯನ್ ನ್ಯಾಷನಲ್ ಮೋಟಾರು ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಿರಿಯ ರೈಡರ್ ಶ್ರೇಯಸ್ ಹರೀಶ್ ದುರ್ಮರಣಕ್ಕೀಡಾಗಿದ್ದಾರೆ. ಶ್ರೇಯಸ್ ಹರೀಶ್ ಎಂಬ ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ಧೆಯಲ್ಲಿ ಮೂರನೇ ಸುತ್ತಿನ ರೈಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್ ಗಳನ್ನು ರದ್ದುಗೊಳಿಸಿದೆ. […]

Continue Reading

ಉಡುಪಿ..ಇದೀಗ ಪಕ್ಷಿಕೆರೆ ಸ್ನಾನಗೃಹ ವಿಡಿಯೋ..!ದೊಂಬರಾಟವಿಲ್ಲ..ಏನಿದುಸಂಘ ಪರಿವಾರದ ದ್ವಿಮುಖ ಧೋರಣೆ..!

ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ಟಾಯ್ಲೆಟ್ ವೀಡಿಯೋ ಪ್ರಕರಣದ ಬಗ್ಗೆ ರಾಜ್ಯದಾದ್ಯಂತ ಸುದ್ದಿ ಯಾಗುವಲ್ಲಿ ದೊಡ್ಡ ಕೊಡುಗೆ ನೀಡಿರುವ ಸಂಘ ಪರಿವಾರ ಹಾಗೂ ಮಾಧ್ಯಮಗಳು ಉಡುಪಿಯ ಆಜುಬಾಜಿನಲ್ಲಿರುವ ಮೂಲ್ಕಿ ಪಕ್ಷಿಕೆರೆ ಘಟನೆ ಬಗ್ಗೆ ತುಟಿಕ್ ಪಿಟಿಕ್ ಅನ್ನದಿರುವುದು ಸಂಘಪರಿವಾರದ ದ್ವಿಮುಖ ಧೋರಣೆಯ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಆರೋಪಿಗಳು ಇತರ ಧರ್ಮಕ್ಕೆ ಸೇರಿದರೆ ಮಾತ್ರವೇ ಅದು ಗಂಭೀರ ಪ್ರಕರಣವೇ..? ಅದೇ ರೀತಿಯ ಪ್ರಕರಣ ಸ್ವ ಸಮುದಾಯದ ಆರೋಪಿಗಳು, ಅದರಲ್ಲೂ ತಮ್ಮದೇ ಸಂಘಟನೆಯ ಕಾರ್ಯಕರ್ತರು ನಡೆಸಿದರೆ ಅದು ಗಂಭೀರ […]

Continue Reading

ಚರಣ್ ರಾಜ್ ರೈ ಹತ್ಯೆ ಪ್ರಕರಣ: ಆರೋಪಿ ಪ್ರಜ್ವಲ್ ಗೆ ನಿರೀಕ್ಷಣ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಪುತ್ತೂರಿನ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಗೆ ಪೂರ್ವ ತಯಾರಿ ಹಿನ್ನೆಲೆ ಕೆಲಸಕ್ಕೆ ಕಾರ್ಯಗಳಿಗೆ ಸಹಾಯ ಮಾಡಲು ಚರಣ್ ರಾಜ್ ಮತ್ತು ತನ್ನ ಸ್ನೇಹಿತ ನವೀನ್ ಕುಮಾರ್ ಪೆರ್ಲಂಪಾಡಿಗೆ ಮೆಡಿಕಲ್ ಶಾಪ್ ಬಳಿ ಕೆಲಸದಲ್ಲಿ ತೊಡಗಿದ್ದ ವೇಳೆ ಚರಣರಾಜ್ ರೈ ರವರು ಹೊರಗಡೆ ಬಂದು ಕಾರಿನ ಬಳಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಯಾರೋ ಬಂದು ಹಲ್ಲೆ ಮಾಡಿದ್ದು ಚರಣ್ ಬೊಬ್ಬೆ ಹೊಡೆಯುವುದನ್ನು ಕೇಳಿ ನವೀನ್ ಕುಮಾರ್ ಹೊರಗೆ ಬಂದಾಗ ಚರಣ್ ರಾಜ್ ರೈ ರವರನ್ನು ದುಷ್ಕರ್ಮಿಗಳು ಹತ್ಯೆ […]

Continue Reading

ಮಾಧ್ಯಮಗಳು ಮಾನಹಾನಿಕರ ಭಾಷೆಗಳನ್ನ ಬಳಸಬಾರದು: ಕರ್ನಾಟಕ ಹೈಕೋರ್ಟ್

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ಸುದ್ದಿ ಪ್ರಸ್ತುತಪಡಿಸುವಾಗ ಅನುಚಿತ ಅಥವಾ ಮಾನಹಾನಿಕರ ಭಾಷೆ ಬಳಕೆ ಮಾಡಬಾರದು ಎಂದು ಹೈಕೋರ್ಟ್‌ನ ಧಾರವಾಡ ಪೀಠವು ನಿರ್ದೇಶಿಸಿದೆ.ವಕೀಲ ಸಮುದಾಯವನ್ನು ತುಚ್ಛವಾಗಿ ಬಿಂಬಿಸಿದ ಆರೋಪದ ಮೇಲೆ ಲೋಕ ಶಿಕ್ಷಣ ಟ್ರಸ್ಟ್‌, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಪತ್ರಿಕೆಗಳ ವಿರುದ್ದ ದಾಖಲಾಗಿದ್ದ ಕ್ರಿಮಿನಲ್‌ ಪ್ರಕ್ರಿಯೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಪ್ರಕರಣವು ಹತ್ತು ವರ್ಷಗಳಿಂದ ವಿಚಾರಣಾಧೀನ ನ್ಯಾಯಾಲಯದಲ್ಲಿ […]

Continue Reading

ದೇಶದ ಅತ್ಯಂತ ಶ್ರೀಮಂತ, ಕೋಟಿ, ಕೋಟಿ ಬೆಲೆ ಬಾಳುವ ಶಾಸಕರಿವರು.!

ಬೆಂಗಳೂರು:ಮಾಜಿ ಸಚಿವ ಎನ್ ನಾಗರಾಜ್ ಅಲಿಯಾಸ್ ಎಂಟಿಬಿ ನಾಗರಾಜ್ ಅವರು 1,609 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಮುಂದುವರಿದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅವರ ಆಸ್ತಿ 400 ಕೋಟಿ ರೂ. ಏರಿಕೆಯಾಗಿದೆ. 2019ರ ಉಪಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು 1,200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಬಹುಶಃ ಇವರು ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿದ್ದಾರೆ. 1,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶ್ರೀಮಂತ […]

Continue Reading

ಡ್ಯಾನ್ಸ್ ಮಾಸ್ಟರ್ ಸೇರಿ ಮೂವರಿಂದ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಡ್ಯಾನ್ಸ್ ಮಾಸ್ಟರ್ ಸೇರಿದಂತೆ ಮೂವರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲೆಯ ಡ್ಯಾನ್ಸ್ ಮಾಸ್ಟರ್ ಆಂಡಿ ಜಾರ್ಜ್, ಸಂತೋಷ್ ಮತ್ತು ಶಶಿ ಎಂದು ಗುರುತಿಸಲಾಗಿದೆ.ಡ್ಯಾನ್ಸ್ ಮಾಸ್ಟರ್ ಆಂಡಿ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿದ್ದಾನೆ.ನಂತರ ಆಕೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ನಂತರ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ಬಳಿಕ ತನ್ನ ಬಳಿಯಿದ್ದ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ […]

Continue Reading

ಹೈಟೆಕ್ ಹನಿಟ್ರ್ಯಾಪ್ ಜಾಲ, ಬಾಂಬೆ ಮಾಡೆಲ್ ಗಳನ್ನು ಇಟ್ಟುಕೊಂಡು ಬೀಸುತ್ತಿದ್ರು ಬಲೆ.!

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಹನಿಟ್ರ್ಯಾಪ್ ನಡೆಸುತ್ತಿದ್ದ ಜಾಲವೊಂದನ್ನು ಖೆಡ್ಡಾಕ್ಕೆ ಬಿದ್ದಿದೆ.ಬಾಂಬೆಯ ಮಾಡೆಲ್ ಒಬ್ಬಾಕೆಯನ್ನು ಬಳಸಿಕೊಂಡು ಖತರ್ನಾಕ್ ಗ್ಯಾಂಗ್ ನಿಂದ ಈ ಕೃತ್ಯ ನಡೆಯುತ್ತಿತ್ತು. ಈ ಹೈಟೆಕ್ ಹನಿಟ್ರ್ಯಾಪ್ ಜಾಲವನ್ನು ಭೇದಿಸಿರುವ ಪುಟ್ಟೇನಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಶರಣ ಪ್ರಕಾಶ, ಅಬ್ದುಲ್ ಖಾದರ್, ಯಾಸಿನ್ ಬಂಧಿತರು. ನದೀಮ್ ಮತ್ತು ಯುವತಿ ನೇಹಾ ನಾಪತ್ತೆಯಾಗಿದ್ದಾರೆ. 20 ವರ್ಷದ ಯುವಕರಿಂದ ಹಿಡಿದು 50 ವರ್ಷದ ವ್ಯಕ್ತಿಗಳು ಇವರ ಟಾರ್ಗೆಟ್ ಆಗಿದ್ದರು. ಯುವತಿ ನೇಹಾ ಟೆಲಿಗ್ರಾಮ್ ಮೂಲಕ ಕೆಲವರನ್ನು […]

Continue Reading

ಗುತ್ತಿಗೆ ಪರವಾನಿಗೆ ಹೊಂದಿದ್ದರೆ ಗ್ರಾ.ಪಂ. ಸದಸ್ಯತನದಿಂದ ಅನರ್ಹಗೊಳಿಸಬಹುದು: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ವಿದ್ಯುತ್ ಗುತ್ತಿಗೆ ಇದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಗುತ್ತಿಗೆ ಪರವಾನಿಗೆ ಇದೆ ಎಂದರೆ ಅದು ಲಾಭದಾಯಕ ಹುದ್ದೆ ಅಥವಾ ಕಚೇರಿ ಹೊಂದುವುದಕ್ಕೆ ಸಮನಾಗಿದೆ ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ. ರಾಯಚೂರಿನ ಸಿವಿಲ್ ನ್ಯಾಯಾಲಯ ಮಾಣಿಕ್ಯಪ್ಪ ಎಂಬವರನ್ನು ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿತ್ತು. ಇವರು ವಿದ್ಯುತ್‌ ಗುತ್ತಿಗೆದಾರರು ಎಂಬ ಕಾರಣಕ್ಕೆ ಲಾಭದಾಯಕ ಹುದ್ದೆ ಹೊಂದಿದ್ದರು ಎಂದು […]

Continue Reading