ಬುದ್ಧಿವಂತರ ಜಿಲ್ಲೆಯ ಸರಕಾರಿ ಶಾಲೆಯ ದಾರುಣ ಸ್ಥಿತಿ.!

ಶಿಕ್ಷಣ ಸಚಿವರು, ಶಾಸಕ ವೇದವ್ಯಾಸ ಕಾಮತ್ ಇನ್ನಾದರೂ ಕಣ್ಣು ತೆರೆಯಲಿ.! ಮಂಗಳೂರಿಗೆ ಬುದ್ಧಿವಂತರ ಜಿಲ್ಲೆ ಅನ್ನುವ ಟ್ರೇಡ್ ಮಾರ್ಕ್ ಏನೋ ಇದೆ. ದುಬಾರಿ ಡೊನೇಶನ್ ಪಡೆದು ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಆಂಗ್ಲ ಮಾಧ್ಯಮ ಶಾಲೆಗಳ ಕಟ್ಟಡಗಳು ಕಣ್ಣು ಕೋರೈಸುವ ರೀತಿಯಲ್ಲಿ ಇರುವುದೇನೂ ನಿಜ. ಇಲ್ಲಿ ಹೈ-ಫೈ ಕುಟುಂಬದ ಮಕ್ಕಳಿಗೆ ಮಾತ್ರ ಫೀಸು ಕಟ್ಟಲು ಸಾಧ್ಯ. ಆದರೆ ಮಂಗಳೂರಿನಲ್ಲಿ ಬಹುಪಾಲು ಜನತೆ ಈಗಲೂ ಶಿಕ್ಷಣಕ್ಕಾಗಿ ಆಶ್ರಯಿಸಿಕೊಂಡಿರುವುದು ಸರಕಾರಿ ಶಾಲೆ ಅನ್ನುವುದು ನೂರಕ್ಕೆ ನೂರು ಸತ್ಯ. ಇಲ್ಲಿನ […]

Continue Reading

ಜಿ.ಆರ್. ಮೆಡಿಕಲ್ ಕಾಲೇಜಿನ ಅನುಮತಿ ರದ್ದು ಪಡಿಸಿದ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್

ಮಂಗಳೂರು ಸಮೀಪದ ನೀರುಮಾರ್ಗದ ಬಿತ್ತಿಲ್ ಪಾದೆ ಎಂಬಲ್ಲಿರುವ ಜಿ ಆರ್ ಮೆಡಿಕಲ್ ಕಾಲೇಜಿಗೆ 2022-23ನೇ ಸಾಲಿನ ಎಂಬಿಬಿಎಸ್ ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ. 2021-22ನೇ ಸಾಲಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದು ಎಂಬಿಬಿಎಸ್ ಕೋರ್ಸ್ ಮುಂದುವರೆಸುತ್ತಿದ್ದ 150 ಮಂದಿ ವಿದ್ಯಾರ್ಥಿಗಳನ್ನು ರಾಜ್ಯದ ಇತರೆ ಕಾಲೇಜುಗಳಿಗೆ ಸ್ಥಳಾಂತರಿಸಲು ಸೂಚಿಸಿದ್ದ ಎನ್‌ಎಂಸಿ ನಿರ್ಧಾರವನ್ನು ಎತ್ತಿ ಹಿಡಿದಿದೆ. ಕಾಲೇಜಿಗೆ ಅನುಮತಿ ಮುಂದುವರೆಸುವುದು ಮತ್ತು ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದ ಎನ್‌ಎಂಸಿ […]

Continue Reading

ಪ್ರೇಯಸಿ ಕೊಲೆ ಯತ್ನ; ಪಾಗಲ್ ಪ್ರೇಮಿಗೆ 18 ವರ್ಷ ಕಠಿಣ ಶಿಕ್ಷೆ, 2 ಲಕ್ಷ ರೂಪಾಯಿ ದಂಡ.

ಜೀವನ್ಮರಣ ಹೋರಾಟದಲ್ಲಿ ಬದುಕಿ ಬಂದ ವಿದ್ಯಾರ್ಥಿನಿ ಮಂಗಳೂರು ಶಕ್ತಿನಗರದ ನಿವಾಸಿ ಸುಶಾಂತ ಯಾನೆ ಶಾನ್ ತನ್ನನ್ನು ಪ್ರೀತಿಸಲು ನಿರಾಕರಿಸಿದ ದೇರಳಕಟ್ಟೆ ನಿವಾಸಿ ಕುಮಾರಿ ದೀಕ್ಷಾ ಎಂಬ ಯುವತಿಗೆ ದಿನಾಂಕ 28-06-2019 ರಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಹಿಂದುಗಡೆ 18 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದ. ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ […]

Continue Reading

ಸುರತ್ಕಲ್ ನಿರುಪಯೋಗಿ ಟೋಲ್ ಗೇಟ್ ತೆರವು; ಜನತೆಯ ಒಗ್ಗಟ್ಟಿನ ಹೋರಾಟದ ಮುಂದೆ ಯಾವುದೂ ಅಸಾಧ್ಯವಲ್ಲ: ಮುನೀರ್ ಕಾಟಿಪಳ್ಳ

ಸತತ ಏಳು ವರ್ಷಗಳ ಹೋರಾಟದ ಫಲವಾಗಿ ವರ್ಷದ ಹಿಂದೆ ಟೋಲ್ ಸಂಗ್ರಹ ಸ್ಥಗಿತ ಗೊಂಡಿದ್ದ ಸುರತ್ಕಲ್ ಟೋಲ್ ಪ್ಲಾಜ಼ಾದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನಿರುಪಯೋಗಿ ಟೋಲ್ ಬೂತ್ ಗಳ ಸಹಿತ ಟೋಲ್ ಗೇಟ್ ಅವಶೇಷಗಳನ್ನು ಜನಾಗ್ರಹಕ್ಕೆ ಮಣಿದು ಹೆದ್ದಾರಿ ಪ್ರಾಧಿಕಾರ ಕೊನೆಗೂ ತೆರವು ಕಾರ್ಯಾಚರಣೆ ಆರಂಭಿಸಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಈ ಕುರಿತು ಹರ್ಷ ವ್ಯಕ್ತ ಪಡಿಸಿದ್ದು, ಜನತೆಯ ಒಗ್ಗಟ್ಟಿನ ಹೋರಾಟದ ಮುಂದೆ ಯಾವುದೂ ಅಸಾಧ್ಯವಲ್ಲ, ಅವಶೇಷಗಳ ತೆರವು ಮೂಲಕ ಸುರತ್ಕಲ್ ಟೋಲ್ ಗೇಟ್ ತೆರವು […]

Continue Reading

ಬಜಪೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಾಂಜಾ ಸೇವನೆ, ನಾಲ್ಕು ಮಂದಿ ವಿರುದ್ದ ಪ್ರಕರಣ ದಾಖಲು

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ, ಮರವೂರು, ಶಾಂತಿಗುಡ್ಡೆ ಮತ್ತು ಇತರ ಕಡೆಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕೃಷ ಮುರಳಿ, ವಿವೇಕ್ ಸಹನಿ, ರಾಹುಲ್ ಗುಪ್ತ ಮತ್ತು ಆರ್ಯನ್ ಶರ್ಮ ಎಂಬವರನ್ನು ಒಟ್ಟು ನಾಲ್ಕು ಜನರನ್ನು ಬಜಪೆ ಪೊಲೀಸ್ ಠಾಣೆಯ ಪಿಎಸ್ಐ ರವರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಈ ನಾಲ್ಕು ಮಂದಿಯ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ […]

Continue Reading

ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಉದ್ಘಾಟನೆ

ಬೀದಿ ವ್ಯಾಪಾರಿಯಾಗಲು ಪ್ರಧಾನಿ, ರಾಷ್ಟ್ರಪತಿಗಳಿಂದಲೂ ಪ್ರಶಸ್ತಿ ಸ್ವೀಕರಿಸಬಹುದು.ಬೀದಿ ಬದಿ ವ್ಯಾಪಾರಿಗಳು ಸ್ವಾಭಿಮಾನವನ್ನು ಎಂದೂ ಬಿಟ್ಟು ಕೊಡುವವರಲ್ಲ: ಹರೇಕಳ ಹಾಜಬ್ಬ ಮಂಗಳೂರು: ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬಿ ಬದುಕಿಗಾಗಿ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಉದ್ಘಾಟನೆ ಕಾರ್ಯಕ್ರಮ ಇಂದು ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಬೀದಿಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಳು ಕೇಂದ್ರ ಮತ್ತು ರಾಜ್ಯ ಸರಕಾರ […]

Continue Reading

ಮಂಗಳೂರಿನಲ್ಲಿ ಮುಸ್ಲಿಂ ಅಧಿಕಾರಿಗಳೇ ಟಾರ್ಗೆಟ್.! ಏನಿದು ‘ಸಂಘಿ’ ಅಜೆಂಡಾ.?

ಮೂಡದಲ್ಲಿ ಮೂಡಿದ ಬಂದ ಸತ್ಯ.! ಹೇಳಿ ಕೇಳಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದದ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಉಭಯ ಕೋಮಿನ ಹೆಣ್ಣು ಗಂಡು ಪರಸ್ಪರ ಕುಶಲೋಪಚಾರಿ ನಡೆಸಿದರೂ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಇದು ಇಂತಹವರ ಬಾಹುಳ್ಯ ಪ್ರದೇಶ, ಇಲ್ಲಿ ಇನ್ನೊಂದು ಕೋಮಿನ ವ್ಯಾಪಾರಸ್ಥರಿಗೆ ಅನುಮತಿ ಇಲ್ಲ ಅನ್ನುವ ಬೋರ್ಡ್ ಗಳು ರಾರಾಜಿಸಿದ್ದವು. ಜಾತ್ರೋತ್ಸವ ಸಮಯದಲ್ಲೂ ಇನ್ನೊಂದು ಕೋಮಿನವರಿಗೆ ವ್ಯಾಪಾರ ಇಲ್ಲ ಅನ್ನುವ ತಾಲಿಬಾನ್ ಸಂಸ್ಕೃತಿ ಹೇರಲ್ಪಟ್ಟಿರುವುದು ಬುದ್ಧಿವಂತ ಜಿಲ್ಲೆಯ […]

Continue Reading

ವೆನ್ಲಾಕ್ ಆಸ್ಪತ್ರೆಯು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಯೋಗಶಾಲೆಯಾಗಿದೆ: ಮುನೀರ್ ಕಾಟಿಪಳ್ಳ

ಇಂದು ಗುರುಪುರ ಕೈಕಂಬದ ಜಂಕ್ಷನ್ ಬಳಿ “ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಗುರುಪುರ” ಇದರ ನೇತೃತ್ವದಲ್ಲಿ ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳು, ವೈದ್ಯರುಗಳನ್ನು ಒದಗಿಸುವಂತೆ ಮತ್ತು ಗುರುಪುರ ಹೋಬಳಿಗೆ ಒಂದು ಸಮುದಾಯ ಆಸ್ಪತ್ರೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಸಾಮೂಹಿ ಧರಣಿ ನಡೆಸಲಾಯಿತು. ಧರಣಿಯನ್ನು ಉದ್ಘಾಟಿಸಿ ಡಿವೈಎಫ್ಐ ರಾಜ್ಯ ಅಧ್ಯಕ್ಷರಾಗಿರುವ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ ವೆನ್ಲಾಕ್ ಆಸ್ಪತ್ರೆಯು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಯೋಗ ಶಾಲೆ ಯಾಗಿದೆ. ವೆನ್ಲಾಕನ್ನು ಕೇಂದ್ರೀಕರಿಸಿ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜುಗಳು […]

Continue Reading

ಜನವರಿ 10 ರಂದು ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟನೆ

ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬಿ ಜೀವನಕ್ಕಾಗಿ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಇದು ರಾಜ್ಯದ ಮೊದಲ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಆಗಿದ್ದು ಇದರ ಉದ್ಘಾಟನೆ ತಾ/10/01/2024 ರಂದು ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಪದ್ಮಶ್ರೀ ಹಾಜಬ್ಬ ಹರೇಕಳ ಉದ್ಘಾಟನೆ ಮಾಡಲಿದ್ದಾರೆ. ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಅಪರ ಜಿಲ್ಲಾಧಿಕಾರಿ ಡಾ ಜಿ ಸಂತೋಷ್ ಕುಮಾರ್ ಷೇರು ಪ್ರಮಾಣ ಪತ್ರ ಬಿಡುಗಡೆ […]

Continue Reading

ಬದ್ರಿಯಾ ಜುಮಾ ಮಸೀದಿ ಕುಪ್ಪೆಪದವು, ಇದರ ನೂತನ ಅದ್ಯಕ್ಷರಾಗಿ ಮಹಮ್ಮದ್ ಶರೀಫ್ ಕಜೆ ಅವಿರೋಧವಾಗಿ ಅಯ್ಕೆ

ಕುಪ್ಪೆಪದವು: ಬದ್ರಿಯಾ ಜುಮಾ ಮಸೀದಿಯ ಮತ್ತು ಮದೀನತ್ತುಲ್ ಉಲೂಂ ಮದರಸ ಕುಪ್ಪೆಪದವು ಇದರ ನೂತನ ಅಧ್ಯಕ್ಷರಾಗಿ ಮಹಮ್ಮದ್ ಶರೀಫ್ ಕಜೆ ಮತ್ತು ಕಾರ್ಯದರ್ಶಿಯಾಗಿ ಕೆ. ರಫೀಕ್ ಅಚಾರಿಜೋರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷರು, ಹಿರಿಯರು ಆದ ಅಬ್ದುಲ್ ಲತೀಫ್ ಅಚಾರಿಚೋರ ಅವರ ಸಭಾಧ್ಯಕ್ಷತೆಯಲ್ಲಿ ದಿನಾಂಕ: 05-01-2024ರ ಶುಕ್ರವಾರ ಜುಮಾ ನಮಾಝಿನ ಬಳಿಕ ಮದೀನತ್ತುಲ್ ಉಲೂಂ ಮದರಸದ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಬದ್ರಿಯಾ ಜುಮಾ ಮಸೀದಿಯ ಇಮಾಮರಾದ ಬಹು॥ ಕೆ.ಎಚ್.ಯು […]

Continue Reading