ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಪ್ರತಿಭಟನೆ ನಿರತರ ಮೇಲೆ ಎಫ್ಐಆರ್ ದಾಖಲಿಸಿದ ಪೋಲೀಸ್ ನಡೆಗೆ ಖಂಡನೆ: ಡಿವೈಎಫ್ಐ

ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಿ ಉದ್ರೇಕಕಾರಿ ಭಾಷಣ ಮಾಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯಿಸಿ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ನಿನ್ನೆ ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನಾಕಾರರ ಮೇಲೆ ಉಳ್ಳಾಲ ಠಾಣಾ ಪೋಲೀಸರು ಪ್ರಕರಣ ದಾಖಲಿಸಿದ ಕ್ರಮವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸುತ್ತದೆ. ಮತ್ತು ಉಳ್ಳಾಲ ಪೊಲೀಸರ ಇಂತಹ ನಡೆಯ ವಿರುದ್ಧ ಹೋರಾಟ ರೂಪಿಸುವ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಪಡಿಸುವ, […]

Continue Reading

ಗುರುಪುರ ಹೋಬಳಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಹೋರಾಟ ಯಶಸ್ವಿಗೆ ಸಿದ್ದತಾ ಸಭೆ

ದಿನಾಂಕ 29-12-2023 ರಂದು ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ಸರಕಾರಿ ಅಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತ್ರತ್ವದಲ್ಲಿ ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿಗುರುಪುರ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ, ವೈದ್ಯರುಗಳ ಸಹಿತ ಸೂಕ್ತ ಮೂಲಭೂತ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ದಿನಾಂಕ 08-01-2024 ರಂದು ಪ್ರತಿಭಟನಾ ಧರಣೆ ನಡೆಸಲು […]

Continue Reading

ಮುಲ್ಕಿ: ಕಾಂಗ್ರೆಸ್-ಬಿಜೆಪಿ ಭಾಯಿ ಭಾಯಿ.. ಶಾಂಭಾವಿ ಸೇರಿದಂತೆ ಬಹುತೇಕ ನದಿಗಳಲ್ಲಿ ಅಕ್ರಮ ಮರಳುಗಾರಿಕೆಯದ್ದೇ ದರ್ಬಾರ್!!

ಚುನಾವಣಾ ಸಮಯದಲ್ಲಿ ಹಾವು-ಮುಂಗುಸಿಯಂತೆ ಪರಸ್ಪರ ಕಚ್ಚಾಡುವ ಬಿಜೆಪಿ-ಕಾಂಗ್ರೆಸ್ ಪಕ್ಷದ ಮುಖಂಡರು ಅಕ್ರಮ ದಂಧೆಯಲ್ಲಿ ಸಮಾನ ಪಾಲುದಾರರಾಗಿ ಭಾಯಿ ಭಾಯಿ ಆಗಿರುವ ಘಟನೆ ಮೂಲ್ಕಿ ಪರಿಸರದಲ್ಲಿ ನಡೆಯುತ್ತಿದೆ. ಮುಲ್ಕಿ ಶಾಂಭವಿ ನದಿಯ ಪಟ್ಟೆ, ಸಂಕಲಕರಿಯ, ಬಳ್ಕುಂಜೆ, ಉಳ್ಲೆಪಾಡಿ ಎಂಬಲ್ಲಿ ಸುಮಾರು 14 ರಿಂದ 15 ದಕ್ಕೆಗಳಲ್ಲಿ ರಾಜರೋಷಾಗಿ ಅಕ್ರಮ ಮರಳುಗಾರಿಕೆ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದೂ ಬಿಜೆಪಿ-ಕಾಂಗ್ರೆಸ್ಸಿಗರು ಇದಕ್ಕೆ ಸಾಥ್ ನೀಡಿ,ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೂಲ್ಕಿ ಪರಿಸರದ ಶಾಂಭವಿ ನದಿ ಮಾತ್ರವಲ್ಲ ಪಡುಪಣಂಬೂರು […]

Continue Reading

ಅಕ್ರಮ ಮದ್ಯ ಮಾರಾಟ ಪ್ರಕರಣ: ಗಂಜಿಮಠ ಗ್ರಾ.ಪಂ. ಸದಸ್ಯ ಜಯಾನಂದ ಕುಲಾಲ್ ಬಂಧನ

ಬಿಜೆಪಿ ಬೆಂಬಲಿತ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ, ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಯಾನಂದ ಕುಲಾಲ್ ಎಂಬವರ ಮೇಲೆ ಅಕ್ರಮ ಮದ್ಯ ಮಾರಾಟ ಆರೋಪದಡಿ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಮಾಲು ಸಮೇತ ಬಂಧಿಸಿದ್ದಾರೆ. ದಿನಾಂಕ 27-12-2023 ರಂದು ಸಂಜೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಗೆ ತೆರಳಿದ್ದ ಇಲಾಖಾ ವಾಹನ ಸಂಜೆ 5.45 ರ ಹೊತ್ತಿಗೆ ಮೊಗರು ಗ್ರಾಮದ ತೆಕ್ಕೆಮಾರ್ ಎಂಬಲ್ಲಿ ರಸ್ತೆ ಬಳಿಯಲ್ಲೇ ಇರುವ ಜಯಾನಂದ ಕುಲಾಲ್ ಎಂಬವರ […]

Continue Reading

ಶಾಸಕ ಭರತ್ ಶೆಟ್ಟಿಯವರ ವೈಫಲ್ಯವೇ ಶಾಲೆ ಭೂ ವಿವಾದಕ್ಕೆ ಕಾರಣ – ಮಾಜಿ ಶಾಸಕ ಮೊಯಿದಿನ್ ಬಾವ

ಸುರತ್ಕಲ್ : ಕಳೆದ 30ವರ್ಷಗಳಿಂದ ನಡೆಯುತ್ತಿರುವ ಸರಕಾರಿ ಶಾಲೆಯ ಭೂಮಿಯನ್ನು ವಿವಾದಗೊಳಿಸಲು ಶಾಲೆಯ ಭೂಮಿಯನ್ನು ವಸತಿ ವಲಯ ಮಾಡಿ ಮಾರಾಟ ಮಾಡುವ ಹಂತದವರೆಗೆ ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ಲೋಪವನ್ನು ಒಪ್ಪಲು ಸಾಧ್ಯವಿಲ್ಲ. ಮಂಗಳೂರು ಉತ್ತರ ಕ್ಷೇತ್ರದ ಶಾಸಕರ ವೈಫಲ್ಯವೇ ಶಾಲೆಯ ಭೂ ವಿವಾದಕ್ಕೆ ಕಾರಣ ಎಂದು ಮಾಜಿ ಶಾಸಕ ಬಿ. ಎ ಮೊಯಿದಿನ್ ಬಾವ ಆರೋಪಿಸಿದರು. ಅವರು ಇಂದು ಕಾನ-ಕಟ್ಲ ಜನತಾಕಾಲನಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ […]

Continue Reading

ಬಜಪೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಹತ್ತು ಲಕ್ಷ ರೂ. ಮೌಲ್ಯದ ಕಾರು ಸಹಿತ ಗೋವು ಕಳ್ಳರ ಬಂಧನ

ಬಡಗ ಎಡಪದವು ಗ್ರಾಮದ ಕಿನ್ನಿಮಜಲು ಚಂದನ್ ಉಪಾಧ್ಯಾಯ ಎಂಬವರ ಮೇಯಲು ಬಿಟ್ಟ ದನಗಳ ಪೈಕಿ ಎರಡು ಹಸು ಮತ್ತು ಒಂದು ಕರುವನ್ನು ಕಳವು ಮಾಡಿ ಮಾಂಸ ಮಾಡಿರುವ ಬಗ್ಗೆ ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಿನಾಂಕ 27-12-2023 ರಂದು ಬಜಪೆ ಪೊಲೀಸರು ಬೆಳಗ್ಗಿನ ಜಾವ PSI ಕುಮಾರೇಶನ್ ಹಾಗೂ ಸಿಬ್ಬಂದಿಗಳ ತಂಡ, ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಿವಿಧ ಕಡೆ ಕಾರುಗಳಲ್ಲಿ […]

Continue Reading

ಪುತ್ತೂರು: ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಅಕ್ರಮ ಮಾರಾಟ ಪ್ರಕರಣ: ಆರೋಪಿಗೆ ಶರತ್ತುಬದ್ದ ಜಾಮೀನು.

ಪುತ್ತೂರು: ಅಕ್ರಮವಾಗಿ ತಿಮಿಂಗಿಲದ ವಾಂತಿಯನ್ನು (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬ ಪ್ರಕರಣದ ಆರೋಪಿ ಎನ್ನಲಾಗಿದ್ದ ಅಬೂಬಕ್ಕರ್ ಸಿದ್ದೀಕ್ ಎಂಬವರಿಗೆ ಪುತ್ತೂರು ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ. ಪೋಲೀಸ್ ಗಸ್ತು ಅರಣ್ಯ ಸಂಚಾರಿ ದಳ ಮಂಗಳೂರು ಇವರಿಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ದಿನಾಂಕ 19 /12/2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರದ ಕೋರ್ಟ್ ರಸ್ತೆ ಬಳಿಯ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ […]

Continue Reading

ಹಿಡಿತವಿಲ್ಲದ ನಾಲಿಗೆಯು ನಾಗರೀಕ ಸಮಾಜದ, ಧಾರ್ಮಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ: ನ್ಯಾಯವಾದಿ ಇಸ್ಮಾಯಿಲ್ ಸುನಾಲ್

ನಮ್ಮ ನಾಗರೀಕ ಸಮಾಜವನ್ನು ಒಂದು ಶುಭ್ರ ಬಿಳಿ ವಸ್ತ್ರಕ್ಕೆ ಹೋಲಿಸುವುದಾದಲ್ಲಿ, ಸದ್ರಿ ವಸ್ತ್ರವನ್ನು ನಾವು ಧಾರ್ಮಿಕ ಸಾಮರಸ್ಯದ ನೂಲಿನ ಎಲೆಗಳಿಂದ ಸೂಕ್ಷ್ಮವಾಗಿ ಹೆಣೆಯಲಾಗಿರುವುದನ್ನು ಕಾಣಬಹುದಾಗಿದೆ. ಆದರೆ ಸಮಾಜದಲ್ಲಿ ನಮ್ಮ ನಿಮ್ಮ ನಡುವೆ ಇರುವ ಕೆಲವೊಂದು ಸಮಾಜಘಾತುಕ ವ್ಯಕ್ತಿಗಳು ಈ ಸಾಮಾಜಿಕ ಸಾಮರಸ್ಯದ ಬದುಕಿಗೆ, ತನ್ನ ಅನಿಯಂತ್ರಿತ ನಾಲಗೆಯ ತಲವಾರಿನಿಂದ ದಕ್ಕೆ ಉಂಟುಮಾಡುವುದನ್ನು ನಾವು ಕಾಲದಿಂದ ಕಾಲಕ್ಕೆ ನೋಡುತ್ತಾ ಬರುತ್ತಿದ್ದೇವೆ. ಅನಿಯಂತ್ರಿತ ನಾಲಿಗೆ, ಸಂವೇದನೆ ಇಲ್ಲದ ಮಾತುಗಳು ಹಾಗೂ ಕೀಳುಮಟ್ಟದ ಪದಬಳಕೆಗಳಿಂದಲೇ ,ಬಳಕೆಯಲ್ಲಿ ಉಳಿಯುವ ನಾಣ್ಯವಾಗಿರುವ ಕೆಲವೊಂದು ಅನಾಗರೀಕರು, […]

Continue Reading

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ ಜಾಮೀನು ಮಂಜೂರು

ಪುತ್ತೂರು: ತನ್ನದೇ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಪಾಣಾಜೆಯ ನಿವಾಸಿ ಅಬ್ದುಲ್ ಶೆಹನಾದ್ ಸಮೀಮ್ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.ತನ್ನ ನೆರೆಯ ನಿವಾಸಿ ಅಪ್ರಾಪ್ತ ಬಾಲಕಿಯ ಮನೆಯಲ್ಲಿ ಆರೋಪಿಯು ಅಪ್ರಾಪ್ತೆಯನ್ನು ಮರುಳು ಮಾಡಿ, ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸಿ, ಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿತ್ತು. ದಿನಾಂಕ 23/10/2023 ರಂದು ರಾತ್ರಿ 07:00 ರ ಸಮಯಕ್ಕೆ ಅಪ್ರಾಪ್ತ ಬಾಲಕಿಯ ತಾಯಿ ಮನೆ ಹತ್ತಿರದಲ್ಲಿರುವ ಅಜ್ಜಿ ಮನೆಗೆ […]

Continue Reading

ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ ನನ್ನು ಕೂಡಲೇ ಬಂಧಿಸಿ – ಸಿಪಿಐಎಂ.

ಕಳೆದೆರಡು ದಿನಗಳ ಹಿಂದೆ ಶ್ರೀ ರಂಗ ಪಟ್ಟಣದಲ್ಲಿ ಒಂದು ಸಮಾವೇಶವನ್ನುದ್ದೇಶಿಸಿ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ನಿಂದಿಸಿ ಕೋಮು ಪ್ರಚೋದಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ಈ ಹೇಳಿಕೆ ಅವರ ಕೀಳುತನದ ಮಟ್ವವನ್ನು ತೋರ್ಪಡಿಸುತ್ತದೆ ಎಂದು ಖಂಡಿಸಿದೆ. ಇದು ದಕ್ಷಿಣ ಕರ್ನಾಟಕದ ಮತ್ತು ಮೈಸೂರು ಭಾಗದಲ್ಲಿನ ಶಾಂತಿಯ ವಾತಾವರಣವನ್ನು ಕದಡಲು ವಹಿಸುತ್ತಿರುವ ಕೋಮುವಾದಿಗಳ ಸಂಚಿನ […]

Continue Reading