ಸತ್ತರೂ.. ಜೀವಂತವೆಂಬ ನಾಟಕ.! ಮೃತದೇಹದ ಹೆಸರಿನಲ್ಲಿ ಸುಲಿಗೆಗೆ ಇಳಿದಿವೆ ಕೆಲವೊಂದು ಖಾಸಗಿ ಆಸ್ಪತ್ರೆಗಳು.!

ಹೊರಗೆ ಸಜ್ಜನರ ಮುಖವಾಡ.. ಒಳಗಿದೆ ಕರಾಳತೆಯ ಛಾಯೆ.! ವೇದಿಕೆಯಲ್ಲಿ ಹೀರೋಗಳು ಎಜ್ಯುಕೇಶನಲ್ ಹಬ್ ಎಂದು ಕರೆಯಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಮೆಡಿಕಲ್ ಮಾಫಿಯಾ ದಂಧೆ ಅವ್ಯಾಹತವಾಗಿ ಬೆಳೆದಿದೆ. ಮೆಡಿಕಲ್ ಮಾಫಿಯಾ ದಂಧೆಗೆ ಹಲವಾರು ಬಡ ವರ್ಗದ ರೋಗಿಗಳು, ಬಡ ವಿದ್ಯಾರ್ಥಿಗಳ ಬದುಕು ಡೋಲಾಯಮಾನವಾಗಿದೆ. ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಸತ್ತವರನ್ನೇ […]

Continue Reading

ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ, ತಾಯ್ನೆಲಕ್ಕಾಗಿ ಹಂಬಲಿಸುತ್ತಿರುವ ಅಸಹಾಯಕ ಪ್ಯಾಲೆಸ್ತೀನಿಯರ ನರಮೇಧ: ಸುಕುಮಾರ್ ತೊಕ್ಕೊಟ್ಟು.

ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸ್ ನೋಟೀಸು, ಧ್ವನಿವರ್ಧಕ ತ್ಯಜಿಸಿ ಪ್ರತಿಭಟನಾ ಸಭೆ ನಡೆಸಿದ ಎಡಪಕ್ಷಗಳು ಪ್ಯಾಲೆಸ್ತೀನ್ ವಿರುದ್ದ ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ, ತಾಯ್ನೆಲದ ವಿಮೋಚನೆಗೆ ಹಂಬಲಿಸುತ್ತಿರುವ ಅಸಹಾಯಕ ಪ್ಯಾಲೆಸ್ತೀಯರ ನರಮೇಧ. ಯುದ್ಧ ನಿಯಮಗಳು, ವಿಶ್ವಸಂಸ್ಥೆಯ ಠರಾವುಗಳನ್ನು ಉಲ್ಲಂಘಿಸಿ ಇಸ್ರೇಲ್ ಗಾಝಾ ಮೇಲೆ ಧಾಳಿ ನಡೆಸುತ್ತಿದೆ. ಮಧ್ಯಪ್ರಾಚ್ಯ ಪೆಟ್ರೋಲಿಯಂ ಉತ್ಪನ್ನದ ಮೇಲಿನ ಹಿಡಿತಕ್ಕಾಗಿ ಅಮೆರಿಕಾ ಇಸ್ರೇಲ್ ಪರವಾಗಿ ನಿಂತು ಎಲ್ಲಾ ರೀತಿಯ ಬೆಂಬಲವನ್ನು ಒದಗಿಸುತ್ತಿದೆ‌. ಇದು ಖಂಡನೀಯ, ಇದರಿಂದಾಗಿ ಇಡೀ ಜಗತ್ತಿನ ಮೇಲೆ ಯುದ್ಧದ ಕಾರ್ಮೋಡ ಹರಡಿದೆ. […]

Continue Reading

ಬಜಪೆ ಪೊಲೀಸರ ಕಾರ್ಯಚರಣೆ ಮಾದಕ ವಸ್ತು MDMA(ಕ್ರೀಸ್ಟಲ್) ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಬಜಪೆ ಪೊಲೀಸರು ಕಾರ್ಯಾಚರಣೆ ನಡೆಸಿ MDMA ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ . ದಿನಾಂಕ 02-11-2024 ರಂದು ಸಂಜೆ ಬಜಪೆ ಪೊಲಿಸ್ ಠಾಣೆಯ PSI ರೇವಣಸಿದ್ದಪ್ಪ ರವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ತೆಂಕಎಕ್ಕಾರು ಗ್ರಾಮದ, ಬಜಪೆಯಿಂದ ಕಟೀಲು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಮಾದಕವಸ್ತು MDMA(ಕ್ರೀಸ್ಟಲ್) ಮಾರಾಟ ಮಾಡುತ್ತಿದ್ದ ಮಂಗಳೂರು ತಾಲೂಕು ತೋಕೂರು ಜೋಕಟ್ಟೆ ನಿವಾಸಿ ಕೆ.ಹಚ್ ಅಬ್ದುಲ್ ಖಾದರ್ ರವರ ಮಗ ಉಮ್ಮರ್ ಫಾರೂಕ್ ಮತ್ತು ಮಂಗಳೂರು ತಾಲೂಕು […]

Continue Reading

ಫರಂಗಿಪೇಟೆ: ಗ್ಯಾಂಗ್ ವಾರ್ ಆರೋಪಿಗಳು ಅಂದರ್; ‘ಪಲ್ಟಿ’ ಇನ್ನೂ ಭೂಗತ

ಅಕ್ರಮ ಗೋ ಮಾಂಸ ಕಾದಾಟ..ಹತ್ಯಾಯತ್ನ ಸುತ್ತಮುತ್ತ.. ವಾರದ ಹಿಂದೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಫರಂಗಿಪೇಟೆಯ ಗ್ಯಾಂಗ್ ವಾರ್ ಆರೋಪಿಗಳ ಪೈಕಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರು ಮಂದಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಫರಂಗಿಪೇಟೆಯ ಅಮ್ಮೆಮ್ಮಾರ್ ನಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಮಾಂಸ ಕಾದಾಟಕ್ಕೆ ಎರಡು ಗ್ಯಾಂಗ್ ಮಧ್ಯೆ ತಲವಾರು ಕಾಳಗ ನಡೆದಿತ್ತು. ಗ್ಯಾಂಗಿನ ಹುಡುಗರು ಕತ್ತಿಯನ್ನು ಕೈಯಲ್ಲಿಡಿದು ಝಳಪಿಸುವ ಹಾಗೂ ಹಲ್ಲೆ ನಡೆಸುವ ದೃಶ್ಯಾವಳಿಗಳು ಆ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಮ್ಮೆಮ್ಮಾರ್ […]

Continue Reading

ವಿದ್ಯಾರಣ್ಯರೂ, ಪೇಜಾವರರೂ ಮತ್ತು ಹರಿಪ್ರಸಾದರೂ….

ರಾಜಕೀಯ ಅರಗಿಸಿಕೊಳ್ಳಲಾಗದ ಈಗಿನ ಪೇಜಾವರ ಸ್ವಾಮೀಜಿಗಳು ದ್ವೈತ ಪ್ರಚಾರ, ಕೃಷ್ಣ ಕೈಂಕರ್ಯ ಮಾಡುವುದು ಬಿಟ್ಟು ರಾಜಕೀಯ ಮಾಡುವುದು ಯಾಕೆ.? ಸ್ವಾಮೀಜಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಶೈಲಿಯ ಟೀಕೆಯನ್ನು ಎದುರಿಸಬೇಕೇ ವಿನಹ ಜಾತಿ ಪರದೆಯ ಹಿಂದೆ ಅವಿತು ಅತ್ತು ರಕ್ಷಣೆಗಾಗಿ ಯಾರನ್ನೋ ಪ್ರಚೋದಿಸಬಾರದು. ✍️. ನವೀನ್ ಸೂರಿಂಜೆ. ಪತ್ರಕರ್ತರು ಸ್ವಾಮಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಪ್ರತಿಕ್ರಿಯೆ ಕೇಳಲು ತಯಾರಿರಬೇಕು. ಪ್ರತಿಕ್ರಿಯೆ ಬಂದಾಗ ತನ್ನ ಸಮುದಾಯವನ್ನು ರಾಜಕಾರಣಿ ವಿರುದ್ದ ಎತ್ತಿಕಟ್ಟುವ ವ್ಯಕ್ತಿಗಳು ರಾಜಕೀಯ ಮಾತನಾಡಬಾರದು. ದಿವಂಗತ ಪೇಜಾವರ […]

Continue Reading

ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ಅನಾರೋಗ್ಯ ಪೀಡಿತ ಯುವಕ ಹೃದಯಾಘಾತದಿಂದ ಸಾವು.

ಕಡಬ ತಾಲೂಕಿನ ಕರ್ಮಾಯಿ ನಿವಾಸಿ ಜಾರ್ಜ್ ಅವರ ಪುತ್ರ ಜೈಸನ್ ಜಾರ್ಜ್ (29) ಮೃತಪಟ್ಟ ಯುವಕ. ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಶನಿವಾರದಂದು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೃತ ಜೈಸನ್ ತಂದೆ, ತಾಯಿ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Continue Reading

ಕಡಬ ಕೋಡಿಂಬಾಳದಲ್ಲಿ ನಡೆದ ದುರ್ಘಟನೆ: ಚಲಿಸುತ್ತಿದ್ದ ಆಕ್ಟಿವಾ ಮೇಲೆ ಭಾರಿ ಗಾತ್ರದ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು.

ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ಅಘಾತಕಾರಿ ಘಟನೆ. ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡರ ಪುತ್ರ ಎಡಮಂಗಲ ಸಿ.ಎ.ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ(58) ಮೃತಪಟ್ಟ ಸವಾರ. ದೀಪಾವಳಿ ಪ್ರಯುಕ್ತ ಮನೆಯಲ್ಲಿ ದೈವಕ್ಕೆ ಹರಕೆ ಇದ್ದುದರಿಂದ ಕೋಳಿ ತರಲು ಕಡಬಕ್ಕೆ ಹೋಗಿ ತನ್ನ ಮನೆಗೆ ಹಿಂತಿರುಗುವಾಗ ರಸ್ತೆ ಬದಿಯ ಭಾರಿ ಗಾತ್ರದ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಸವಾರ ಸೀತಾರಾಮ ಗೌಡರ ತಲೆ ಮೇಲೆಯೇ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. […]

Continue Reading

ಮಂಗಳೂರು: ಬೈಕ್ ಅಪಘಾತ; ಪಿ.ಎ ಕಾಲೇಜು ವಿದ್ಯಾರ್ಥಿ ಸಲ್ಮಾನ್ ಫಾರೀಸ್ ಮೃತ್ಯು

ಉಳ್ಳಾಲ ಕಲ್ಲಾಪು ನೇತ್ರಾವತಿ ಸೇತುವೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ಯುವಕನನ್ನು ಬಂಟ್ವಾಳ ಲೊರೊಟ್ಟೋ ಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರೀಸ್ ಎಂದು ಗುರುತಿಸಲಾಗಿದೆ. ಈತ ದೇರಳಕಟ್ಟೆ ಪಿ.ಎ ಕಾಲೇಜಿನ ಫಾರ್ಮಸಿ ಕಲಿಯುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಸಹ ಸವಾರ ಮುಹಮ್ಮದ್ ಶಾಕೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

Continue Reading

ಬಜಪೆ: ಕಟೀಲು ನಿವಾಸಿ ತಾರಾನಾಥ ಹತ್ಯೆ ಪ್ರಕರಣ; ಆರೋಪಿ ದೇವಕಿ ಅಂದರ್

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ತಾಲೂಕು ಕೊಂಡೆಮೂಲ ಗ್ರಾಮದ ಕಟೀಲು ನಿವಾಸಿ ಬಾಬು ಮುಗೇರ ಎಂಬವರ ಮಗನಾದ ತಾರಾನಾಥ (39) ಎಂಬವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ 27-10-2024 ರಂದು ಗಿಡಿಗೆರೆ ದರ್ಖಾಸ್ ಎಂಬಲ್ಲಿ ಕುರುಚಲು ಗಿಡದ ಟ್ಯಾಂಕ್ ಬಳಿ ಕುತ್ತಿಗೆಗೆ ವಾಯರ್ ನ್ನು ಸುತ್ತಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ ಬಜಪೆ ಪೋಲಿಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ ಎಸ್ ರವರು ತನಿಖೆ […]

Continue Reading

ಹೃದಯ ವಿದ್ರಾವಕ ಘಟನೆ; ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಕಾಮಾಲೆ ರೋಗಕ್ಕೆ ಬಲಿ.!

ಸಾಹೀರ್, ಅನ್ವರ್ ಮೃತ ದುರ್ದೈವಿಗಳು.. ಬಾವಿಯ ನೀರಿನಲ್ಲಿ ಪತ್ತೆಯಾಯಿತು ಡೆಡ್ಲಿ ವೈರಸ್.. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ಕೇರಳ ಕಣ್ಣೂರಿನ ತಳಿಪರಂಬ ಪುರಸಭಾ ವ್ಯಾಪ್ತಿಯಲ್ಲಿ ಹೆಪಾಟೈಟಿಸ್ ಎ (ಕಾಮಾಲೆ ರೋಗ) ಉಲ್ಬಣಗೊಂಡು ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹಿದಾಯತ್ ನಗರದಲ್ಲಿ ನಡೆದಿದೆ. ಎಂ. ಸಾಹೀರ್ (40) ಮಂಗಳವಾರದಂದು ನಿಧನವಾದರೆ ಅವರ ಸಹೋದರ ಅನ್ವರ್ (36) ಬುಧವಾರದಂದು ಸಾವನ್ನಪ್ಪಿದ್ದಾರೆ. ಅವರು ಕೋಝಿಕ್ಕೋಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಇವರ ಕುಟುಂಬ […]

Continue Reading