ವಿಕ್ರಂ ಬೇತಾಳನ ಕತೆಯಾದ ಕಾವೇರಿ ತಂತ್ರಾಂಶ 2.0

ಸ್ವಾಮೀ, ರೆವೆನ್ಯೂ ಇಲಾಖೆಯಲ್ಲಿ ಹಣ ಪೋಲಾಗುತ್ತಿದೆ, ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶವು ಹಳೆಯದಾಗಿದೆ, ಈಗಾಗಲೇ ಸಾಕಷ್ಟು ಪಂಚರ್ ಗಳನ್ನು ಹಾಕಲಾಗಿದೆ ✍️. ಇಸ್ಮಾಯಿಲ್ ಸುನ್ನಾಲ್ ವಕೀಲರು ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸ ಕತೆ ಹೇಳಲು ಶುರು ಮಾಡಿತು. “ರಾಜಾ ವಿಕ್ರಮ ,ಒಂದಾನೊಂದು ಕಾಲದಲ್ಲಿ ಕರ್ನಾಟಕ ಎನ್ನುವ ರಾಜ್ಯದಲ್ಲಿ ಅಶೋಕನೆಂಬ ರಾಜನ […]

Continue Reading

ಮಹಿಳೆಯನ್ನು ಅರೆಬೆತ್ತಲೆಗೊಳಿಸಿ, ಪುತ್ರನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ 13 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್

ಬೆಳಗಾವಿ ಐನಾಪುರ ಪಟ್ಟಣದಲ್ಲಿ ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆಯನ್ನು ದುಷ್ಕರ್ಮಿಗಳು ಅರೆಬೆತ್ತಲುಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಹಾಗೂ ಆಕೆಯ ಪುತ್ರನ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಸಂತ್ರಸ್ತೆ ಗುರುವಾರ ಮಾಧ್ಯಮಗಳ ಎದುರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ ಐನಾಪುರಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಎಸ್.ಎನ್, ಅವರು ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ […]

Continue Reading

ನಕಲಿ ದಾಖಲೆ ಸೃಷ್ಠಿಸಿ ಹಲವು ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ: ದಂಪತಿ ವಿರುದ್ದ ಪ್ರಕರಣ ದಾಖಲು

ಒಂದೇ ಆಸ್ತಿಯ ದಾಖಲೆ ಪತ್ರಗಳನ್ನು ಬಳಸಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ನಗರದ ದಂಪತಿಯೊಬ್ಬರು ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ನಡೆದಿದೆ. ಬೆಂಗಳೂರು ನಗರದಲ್ಲೇ ಇಲ್ಲದ ಆಸ್ತಿಯ ಬಗ್ಗೆ ನಕಲಿ ದಾಖಲೆ ಸೃಷ್ಟಿ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ದಂಪತಿ ನೀಡಿದ್ದ ದಾಖಲೆ ಪತ್ರದಲ್ಲಿ ನಮೂದಿಸಿದಂತೆ ಬೆಂಗಳೂರು ದಕ್ಷಿಣ ಬೇಗೂರಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಲು ಹೋದಾಗ, ದಂಪತಿಗಳು ಅನೇಕ ಹಣಕಾಸು ಸಂಸ್ಥೆಗಳಿಗೆ ನಿವೇಶನವನ್ನು ಒತ್ತೆ ಇಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಬೇಗೂರು […]

Continue Reading

ಪ್ರಾಥಮಿಕ ಶಾಲಾ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ದ್ವಿಗುಣ; ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಳವಳಕಾರಿ

ಪ್ರಾಥಮಿಕ ಶಾಲಾ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಮೂರು ವರ್ಷದಲ್ಲೇ ಅತ್ಯಧಿಕ 9,461 ಮಕ್ಕಳನ್ನು ಗುರುತಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 2023-24 ರಲ್ಲಿ ಡಬಲ್ ಆಗಿರುವುದು ಅಂಕಿ ಸಂಖ್ಯೆಗಳಿಂದ ದೃಢಪಟ್ಟಿದೆ. ಪ್ರತಿ ವರ್ಷ ಶಾಲೆ ಬಿಟ್ಟ ಮಕ್ಕಳನ್ನು ಸರಕಾರ ಸಮೀಕ್ಷೆ ಮಾಡಿ ಗುರುತಿಸುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಹಿಸಿದರೂ ಡ್ರಾಪ್ ಔಟ್ ಆಗುತ್ತಿದ್ದು,2021-22 ನೇ ಸಾಲಿನಿಂದ 2023-24 ನೇ ಸಾಲಿನವರೆಗೆ ಶಾಲೆ ಬಿಟ್ಟ ಮಕ್ಕಳ ಅಂಕಿ ಸಂಖ್ಯೆ ನೋಡಿದರೆ ಕಳೆದ ವರ್ಷ ಹೆಚ್ಚಾಗಿದೆ […]

Continue Reading

ಅಂತರ ಜಿಲ್ಲಾ ವರ್ಗಾವಣೆ (ಪತಿ-ಪತ್ನಿಯರ) ಪ್ರಕರಣದಲ್ಲಿ ವರ್ಷಗಳಿಂದಲೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಕೊನೆಗೂ ಸಿಹಿ ಸುದ್ದಿ

ಅಂತರ ಜಿಲ್ಲಾ ವರ್ಗಾವಣೆ ಹಾಗೂ ಪತಿ-ಪತ್ನಿಯರ ಪ್ರಕರಣದಲ್ಲಿ ವರ್ಷಗಳಿಂದಲೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿದ್ದಾರೆ.ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಕುರಿತು ಗೃಹ ಸಚಿವರು ಇಲಾಖೆಗೆ ಸೋಮವಾರದಂದು ಕರ್ನಾಟಕ ರಾಜ್ಯದ ಡೈರಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಟಿಪ್ಪಣಿ ಹೊರಡಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ”ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ಗಳ (ಪತಿ-ಪತ್ನಿ ಪ್ರಕರಣಗಳು) ಅಂತರ […]

Continue Reading

ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಜಾರಿ ವಿರೋಧಿಸಿ ನಿರ್ಣಯ

ಮಂಗಳೂರು: ನರೇಂದ್ರ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ 2019 (ಸಿಎಎ) ಹಾಗೂ ಬಿಜೆಪಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಕಾಯ್ದೆ(ಯುಸಿಸಿ) ಕಾಯ್ದೆಗಳು, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಗಂಭೀರ ಧಕ್ಕೆ ಹಾಗೂ ಅಪಾಯವನ್ನು ಉಂಟು ಮಾಡುವ ಕಾಯ್ದೆಗಳಾಗಿವೆ. ಈ ಕಾಯ್ದೆಗಳ ಸಾರಾಂಶ ಮತ್ತು ಉದ್ದೇಶವು ಅಸಾಂವಿಧಾನಿಕ ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ರದ್ದುಪಡಿಸಲು ಡಿವೈಎಫ್‍ಐ 12 ನೇ ರಾಜ್ಯ ಸಮ್ಮೇಳನ ಆಗ್ರಹಿಸುತ್ತದೆ. ಸಿಎಎ ಕಾಯ್ದೆಯು ಪೌರತ್ವವನ್ನು ನಿರ್ಧರಿಸಲು, ಮತ ಧರ್ಮವನ್ನು […]

Continue Reading

ವಿದೇಶದಲ್ಲಿ ದುಡಿಯುವ ಕರ್ನಾಟಕದ ಉದ್ಯೋಗಿ, ವ್ಯಾಪಾರಿಗಳಿಗೆ ಕಲ್ಯಾಣ ಯೋಜನೆ ಜಾರಿಗೆ ಆಗ್ರಹಿಸಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ

ವಿದೇಶಗಳಲ್ಲಿ ಅದರಲ್ಲೂ ಪ್ರಧಾನವಾಗಿ ಗಲ್ಪ್ ರಾಷ್ಟ್ರಗಳಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕ ರಾಜ್ಯದ ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ, ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದಾರೆ. ತಾಯ್ನೆಲದಲ್ಲಿ ಉತ್ತಮ ಉದ್ಯೋಗಾವಕಾಶಗಳ ತೀವ್ರಕೊರತೆ, ನಿರುದ್ಯೋಗದಿಂದ ಕಂಗೆಟ್ಟು ಉತ್ತಮ ವೇತನ, ಘನತೆಯ ಬದುಕಿನ ಕನಸುಗಳೊಂದಿಗೆ ನಮ್ಮ ಯುವಜನರು ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಾರೆ. ಈ ರೀತಿ ತೆರಳಿದ ಬಹುತೇಕರು ಶ್ರಮವನ್ನು ಬೇಡುವ, ದೊಡ್ಡ ಮಟ್ಟಿಗಿನ ವೇತನ, ಭದ್ರತೆಯಿಲ್ಲದ ಅಕುಶಲ ಉದ್ಯೋಗಗಳನ್ನೆ ಅವಲಂಬಿಸಿದ್ದಾರೆ. ತಮ್ಮ ದುಡಿಮೆಯ ಬಹುತೇಕ ಭಾಗವನ್ನು ತಮ್ಮನ್ನು ಅವಲಂಬಿಸಿರುವ ಕುಟುಂವಕ್ಕಾಗಿ ಪ್ರತಿ ತಿಂಗಳು ಕಳುಹಿಸಿ […]

Continue Reading

12 ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಡಿವೈಎಫ್‌ಐ ಕಾರ್ಯಕರ್ತರು, ಅಂಗಾಗ ದಾನ ಮಾಡುವ ಮಹತ್ವದ ಪ್ರತಿಜ್ಞೆ

ಮಂಗಳೂರು : ಅಂಗಾಗ ದಾನ ಮಾಡುವ ಮಹತ್ವದ ನಿರ್ಧಾರವನ್ನು ಡಿವೈವೈಎಫ್‌ಐ 12 ನೇ ರಾಜ್ಯ ಸಮ್ಮೇಳನ ತೆಗೆದುಕೊಂಡಿದೆ. 12 ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಡಿವೈಎಫ್‌ಐ ಕಾರ್ಯಕರ್ತರು, ಅಂಗಾಗ ದಾನ ಮಾಡುವ ಮಹತ್ವದ ಪ್ರತಿಜ್ಞೆಯನ್ನು ಗೈದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಜ್ಞಾವಿಧಿ ಬೋಧಿಸಿದರು. ಅಂಗಾಗದಾನದ ಮಹತ್ವದ ನಿರ್ಧಾರದ ನಂತರ ಡಿವೈಎಫ್‌ಐ ದಕ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್‌ ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದು, ಅಂಗಾಂಗ ದಾನ ಈಗಿನ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಬೆಳವಣಿಗೆ. ಸಾಕಷ್ಟು ಜನರ ಜೀವ ಉಳಿಸುವ, […]

Continue Reading

ಬಿಜೆಪಿ ವಿರುದ್ಧ ತಿರುಗಿಬಿದ್ದ ದೇಗುಲಗಳ ಅರ್ಚಕರು; ಬಿಜೆಪಿಗೆ ಭಾರೀ ಮುಖಭಂಗ

ಬಿಜೆಪಿ ಸರ್ಕಾರ ನಮಗೆ ತಸ್ತಿಕ್‌ ಕೊಟ್ಟಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ. ರಾಜ್ಯಸರ್ಕಾರದ ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಬಿಜೆಪಿಯು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಈ ಕುರಿತು ರಾಜ್ಯದ ಹಿಂದೂ ದೇವಾಲಯಗಳ ಅರ್ಚಕರ ಸಂಘವು ಬಿಜೆಪಿ ವಿರುದ್ಧ ಕಿಡಿಕಾರಿದ್ದು ಕಾಂಗ್ರೆಸ್ ಸರ್ಕಾರದ ನಡೆಯನ್ನು ಸಮರ್ಥಿಸಿವೆ. ಕಾಂಗ್ರೆಸ್ ಸರ್ಕಾರವು ದೇವಾಲಯಗಳ ಹಣವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಚುನಾವಣಾ ಹತ್ತಿರ ಬರುತ್ತಿದಂತೆ ಬಿಜೆಪಿಯವರು ಭಾವನೆಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಚಕರ ಸಂಘವು ದೂರಿದೆ. […]

Continue Reading

ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಬ್ರಾಹ್ಮಣರು ಭೂಮಿಯನ್ನು ಕಳೆದುಕೊಂಡಿದ್ದರ ಶಾಪ ಅರಸು ಕುಟುಂಬವನ್ನು ತಟ್ಟಿದೆ: ಎಚ್ ಡಿ ಕುಮಾರಸ್ವಾಮಿ

ನಿಜಕ್ಕೂ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೇ.? ಫಲಾನುಭವಿಗಳೇ.? ✍️. ನವೀನ್ ಸೂರಿಂಜೆ ಪತ್ರಕರ್ತ ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಬ್ರಾಹ್ಮಣರು ಭೂಮಿಯನ್ನು ಕಳೆದುಕೊಂಡಿದ್ದರ ಶಾಪ ಅರಸು ಕುಟುಂಬವನ್ನು ತಟ್ಟಿದೆ ಅಂತ ಎಚ್ ಡಿ ದೇವೇಗೌಡರು ಹೇಳಿದ್ದರೆಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ನಿಜಕ್ಕೂ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೇ ? ಫಲಾನುಭವಿಗಳೇ ? ಈವರೆಗೆ ಬಂಟರು, ಒಕ್ಕಲಿಗರಂತಹ ಬಲಾಡ್ಯ ಜಾತಿಗಳನ್ನು ಮಾತ್ರ ಭೂಸುಧಾರಣಾ ಕಾಯ್ದೆಯ ಸಂತ್ರಸ್ತರೆಂದು ಬಿಂಬಿಸಲಾಗುತ್ತಿತ್ತು. ಈಗ ಆ ಸಾಲಿಗೆ ಬ್ರಾಹ್ಮಣರನ್ನೂ ಸೇರಿಸಲಾಗಿದೆ. ವಾಸ್ತವವಾಗಿ ಬ್ರಾಹ್ಮಣರು ಭೂಸುಧಾರಣಾ ಕಾಯ್ದೆಯ […]

Continue Reading