SSLC ಅಂಕಪಟ್ಟಿ ತಿದ್ದುಪಡಿಗೆ ಇನ್ನು ಅಲೆದಾಡಬೇಕಿಲ್ಲ; ದಾಖಲೆಗಳು ತಿದ್ದುಪಡಿ ಅಥವಾ ನಕಲಿಯಾಗಿದ್ದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ಹೊಣೆ.!

SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಹಾಗೂ ಇತರ ತಿದ್ದುಪಡಿಗಳಿಗೆ ಇನ್ನು ಮುಂದೆ ಆನ್‌ಲೈನ್‌ ಮೂಲಕ ಶಾಲಾ ಹಂತದಲ್ಲೇ ಅರ್ಜಿಗಳನ್ನು ಪಡೆಯಲಾಗುತ್ತದೆ. ಭೌತಿಕವಾಗಿ ಪ್ರಸ್ತಾವನೆ ಸ್ವೀಕರಿಸುವ ಪ್ರಕ್ರಿಯೆ ಇರದು. ಇದುವರೆಗೆ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿನ ತಿದ್ದುಪಡಿಗಾಗಿ ಮುಖ್ಯ ಶಿಕ್ಷಕರ ಮೂಲಕ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾಗೀಯ ಕಚೇರಿ ಅಥವಾ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸಲ್ಲಿಸಬೇಕಿತ್ತು. ವಿಭಾಗೀಯ ಕಚೇರಿಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ […]

Continue Reading

ಸ್ಕಿಲ್ ಗೇಮ್, ಇಸ್ಪೀಟ್ ಬಾಜಿ ಆಟಕ್ಕೆ ಡಿಜಿಪಿ ತಡೆ

ರಾಜ್ಯದಾದ್ಯಂತ ರಿಕ್ರಿಯೇಷನ್ ಕ್ಲಬ್ ಗಳ ಆರಂಭಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಡೆಯೊಡ್ಡಿದ್ದಾರೆ. ಬೆಂಗಳೂರು ನಗರ ಸಹಿತ ರಾಜ್ಯದ ಯಾವುದೇ ಭಾಗದಲ್ಲಿ ಇಸ್ಪೀಟ್ ಕ್ಲಬ್ ಆರಂಭಕ್ಕೆ ಅನುಮತಿ ನಿರಾಕರಿಸಿರುವ ಅವರು, ಈ ಸೂಚನೆಯನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಸದ್ಯ ಇಸ್ಪೀಟ್ ಕ್ಲಬ್ ಗಳು ಬಾಗಿಲೆಳೆದುಕೊಂಡಿದೆ. ಈ ಹಿಂದೆ ಮಂಗಳೂರಿನಲ್ಲಿ ಅಲ್ಲಲ್ಲಿ ನಾಯಿಕೊಡೆಯಂತೆ ತಲೆ ಎತ್ತಿ ರಾಜಾರೋಷವಾಗಿ ರಿಕ್ರಿಯೇಷನ್ […]

Continue Reading

ಸಹಾಯಕ ಪ್ರಾಧ್ಯಾಪಕರಿಗೆ ಡಿಸೆಂಬರ್ ಅಂತ್ಯದೊಳಗೆ ಆದೇಶ ಪತ್ರ : ಡಾ. ಎಂ.ಸಿ. ಸುಧಾಕರ್

ಬೆಂಗಳೂರು: 2021ನೇ ಸಾಲಿನ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ಆದೇಶ ಪತ್ರ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಇಂದು ಸಚಿವರ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗವು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದಂತಹ ಎಲ್ಲಾ ಅಡೆತಡೆಗಳನ್ನು ಕಾನೂನು ರಿತ್ಯ ಬಗೆಹರಿಸಿ ಅಂತಿಮ ಆಯ್ಕೆ ಪಟ್ಟಿಯು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ನೇಮಕಾತಿ ಈ ಹಂತಕ್ಕೆ ತಲುಪಲು […]

Continue Reading

ನೋಂದಣಿ ಇಲಾಖೆಯಲ್ಲಿ ‘ಕಾವೇರಿ 2.0’ ಹೊಸ ತಂತ್ರಾಶ. ಹೇಳೋರಿಲ್ಲ, ಕೇಳೋರಿಲ್ಲ ಜನರ ಗೋಳು.!

ಡೇಟಾ ಕದ್ದ ಕಳ್ಳರು ಸಿಕ್ಕಿಬಿದ್ದು, ನೋಂದಣಿ ಇಲಾಖೆಯ ಮರ್ಯಾದೆ ಬೀದಿ ಪಾಲು ✍️.ಇಸ್ಮಾಯಿಲ್ ಸುನಾಲ್ ವಕೀಲರು ರಾಜ್ಯದಲ್ಲೊಂದು ಕಾವೇರಿ 2.0 ಎನ್ನುವ ಸೊ ಕಾಲ್ಡ್ “ಸಾಫ್ಟ್ ವೇರ್ ಕ್ರಾಂತಿ” ಯ ಹೆಸರಲ್ಲಿ, ನೋಂದಣಿ ಇಲಾಖೆ ತನ್ನ ನಾಲಾಯಕ್ ಸಾಫ್ಟ್ ವೇರ್ ಜನರ ಮುಂದಿಟ್ಟು ಪ್ರಹಸನ ನಡೆಸುತ್ತಿದೆ. “ಸಾಫ್ಟ್ ವೇರ್ ಕಾವೇರಿ 2.0 ” ಹೆಸರಲ್ಲಿ ಜನರನ್ನು ಸಲ್ಲದ ಸಮಸ್ಯೆಗೆ ದೂಡುವ ಪ್ರಕ್ರಿಯೆಯಲ್ಲಿ ತೊಡಗಿರುವ ನೋಂದಣಿ ಇಲಾಖೆ, ಕಿವಿಯಿದ್ದು ಕುರುಡನಂತಾಗಿ ಹೋಗಿದೆ. ಕಾವೇರಿ 2.0 ಹೆಸರಲ್ಲಿ ನೋಂದಣಿ ಇಲಾಖೆ […]

Continue Reading

ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ವಿಧಿವಶ

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಸೋಮವಾರ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂಬ ಮಾಹಿತಿ ಇದೆ. ಡಿ.ಬಿ ಚಂದ್ರೇಗೌಡರು, ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ನಿರತರಾಗಿದ್ದರು. 1971ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ವಿಧಾನಸಭೆ, […]

Continue Reading

ಕೇಂದ್ರದ ಜನನ-ಮರಣ ತಿದ್ದುಪಡಿ ಕಾಯ್ದೆಗೆ ಮಧ್ಯಂತರ ತಡೆ ವಿಧಿಸಿದ ಕರ್ನಾಟಕ ಹೈಕೋರ್ಟ್‌

ಜನನ ಮರಣ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸಹಾಯಕ ಕಮಿಷನರ್(ಎ.ಸಿ.) ನ್ಯಾಯಾಲಯಕ್ಕೆ ನೀಡುವ ಸೆಕ್ಷನ್ 13(3)ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜನನ ಅಥವಾ ಮರಣ ದಿನಾಂಕ ಪರಿಶೀಲಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಅಥವಾ ಮುನ್ಸೀಫ್ ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಸೇರುವ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇಂದ್ರ […]

Continue Reading

ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ, ಪ್ರತಿಮಾ ಅವರ ಹಳೆ ಡ್ರೈವರ್​ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಪ್ರತಿಮಾ ಕೊಲೆ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಲಭ್ಯವಾಗಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಣಿ-ಭೂ ವಿಜ್ಞಾನಿ ಅಧಿಕಾರಿ ಪ್ರತಿಮೆ ಹತ್ಯೆ ಸಂಬಂಧ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರತಿಮಾ ಅವರು ಅಕ್ರಮ ಗಣಿಗಾರಿಕೆ ಸಂಬಂಧ ವರದಿ ನೀಡಿದ್ದರು. ಸರ್ವೆ ನಂಬರ್ 177, […]

Continue Reading

ಯಡಿಯೂರಪ್ಪ ಸಂಬಂಧಿ ಚಿಕ್ಕನಗೌಡರ್ ಬಿಜೆಪಿ ಪಕ್ಷ ತೊರೆದು ಜಗದೀಶ್ ಶೆಟ್ಟರ್ ನೇತ್ರತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ ಅವರು ಭಾನುವಾರ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ಚಿಕ್ಕನಗೌಡರ ಅವರೊಂದಿಗೆ ಶಿಗ್ಗಾವಿಯ ಬಿಜೆಪಿಯ ಕೆಲವು ಮುಖಂಡರು ಸಹ […]

Continue Reading

ಬೆಂಗಳೂರು: ಗಣಿ ಇಲಾಖೆ ಭೂ ವಿಜ್ಞಾನಿಯ ಕೊಲೆ ಪೂರ್ವ ನಿಯೋಜಿತ ಕೃತ್ಯ; ಗಣಿ ಮಾಫಿಯಾ ಶಂಕೆ

ರಾಜಧಾನಿ ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಪ್ರತಿಮಾ ಕೊಲೆ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಲಭ್ಯವಾಗಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಣಿ-ಭೂ ವಿಜ್ಞಾನಿ ಅಧಿಕಾರಿ ಪ್ರತಿಮೆ ಹತ್ಯೆ ಸಂಬಂಧ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರತಿಮಾ ಅವರು ಅಕ್ರಮ ಗಣಿಗಾರಿಕೆ ಸಂಬಂಧ ವರದಿ ನೀಡಿದ್ದರು. ಸರ್ವೆ ನಂಬರ್ 177, […]

Continue Reading

ಬೆಂಗಳೂರು ಕಂಬಳದಲ್ಲಿ ಕೊರಗರ “ಪನಿಕುಲ್ಲುನ” ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ.?: ಆದಿವಾಸಿಗಳ ಅಧ್ಯಯನ ಶಿಬಿರದಲ್ಲಿ ಮುನೀರ್ ಕಾಟಿಪಳ್ಳ ಪ್ರಶ್ನೆ

ಅವರು ಮಂಗಳೂರಿನ ವಾಮಂಜೂರಿನಲ್ಲಿ “ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ” ಕೊರಗ ಸಮುದಾಯದ ಪ್ರಮುಖ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಸೈದ್ದಾಂತಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ಧರು. ತುಳುನಾಡಿನ ಸಾಂಸ್ಕೃತಿಕ ಕ್ರೀಡಾ ವೈಭವವನ್ನು ರಾಜಧಾನಿಯಲ್ಲಿ ರಾಜಾಶ್ರಯದಲ್ಲಿ ಸಂಘಟಿಸುತ್ತಿರುವಾಗ ಕಂಬಳದ ಹೆಸರಿನಲ್ಲಿ ಅಜಲು ನಿಷೇಧ ಕಾನೂನು ಜಾರಿಗೆ ಬರುವವರೆಗೂ ಆಚರಿಸುತ್ತಿದ್ದ ‘ಪನಿ ಕುಲ್ಲಾವುನ’ ಎಂಬ ಅಮಾನುಷ ಜಾತಿ ದಮನ, ಶೋಷಣೆಯನ್ನು ಈ ಆಧುನಿಕ ಕಾಲಘಟ್ಟದಲ್ಲಿ ಮುಚ್ಚಿಡಬಾರದು. ಕಂಬಳದ ಹಿಂದಿನ ಸಾಯಂಕಾಲ ಸ್ಪರ್ಧೆಯ ಕೋಣಗಳು ಓಡುವ ಕಂಬಳದ ಕೆರೆಯಲ್ಲಿ ಗಾಜು, ಹರಿತ ಕಲ್ಲಿನ […]

Continue Reading