ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮತೀಯ ಗಲಭೆ ಪ್ರಕರಣಗಳು, ದರೋಡೆಗೆ ಸಂಚು ಪ್ರಕರಣಗಳು ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾರಿಯಾಗಿದ್ದ NBW (Non-Bailable Warrant) ಗಳನ್ನು ತಪ್ಪಿಸಿಕೊಂಡು 2021 ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಬಿಜು @ ವಿಜಯ್, ರಾಯಿಕಟ್ಟೆ, ಬಂಗ್ರಕೂಳೂರು, ಕೂಳೂರು. ಈತನ ವಿರುದ್ಧ ಮಂಗಳೂರು ನಗರದ ಕಾವೂರು ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 02 NBW ವಾರಂಟ್ ಗಳು ಬಾಕಿ ಇದ್ದವು.
ಆರೋಪಿಯ ವಿರುದ್ಧ ಒಟ್ಟು 02 NBW ವಾರಂಟ್ ಗಳು ಬಾಕಿ ಇವೆ. ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 125/2021 ಮತ್ತು ಉರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2021 ಬಾಕಿ ಇವೆ.
ಆರೋಪಿಯು ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಆರೋಪಿಯ ವಿರುದ್ಧ ಈ ಕೆಳಕಂಡಂತೆ ಒಟ್ಟು ದಾಖಲಾದ ಪ್ರಕರಣಗಳು: ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 125/2021. ಉರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2021. ಪಣಂಬೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 89/2016. ಉತ್ತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2018. ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2018 ರಂತೆ ಐದು ಪ್ರಕರಣಗಳು ದಾಖಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
