ವೇಶ್ಯಾಗೃಹ ನಡೆಸಲು ರಕ್ಷಣೆ ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ವಕೀಲ!

ಇಂತಹ ಅರ್ಜಿಗಳಿಂದ ಸಮಾಜದಲ್ಲಿ ವಕೀಲರ ಘನತೆಗೆ ಧಕ್ಕೆ ಉಂಟಾಗುತ್ತದೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ವೇಶ್ಯಾಗೃಹ ನಡೆಸಲು ಅಗತ್ಯ ರಕ್ಷಣೆ ನೀಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಗಲಿಬಿಲಿಗೊಂಡಿದ್ದಾರೆ. ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ ಐ ಆರ್ ಅನ್ನು ಕೂಡ ರದ್ದುಗೊಳಿಸುವಂತೆ ವಕೀಲ ರಾಜಾ ಮುರುಗನ್ ಅವರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಪುಗಳೇಂದಿ ಅವರಿದ್ದ ನ್ಯಾಯಪೀಠವು ಅರ್ಜಿದಾರರ ಮನವಿಗೆ […]

Continue Reading

ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದವರಿಗೆ ಜನ ಪಾಠ ಕಲಿಸಿದ್ದಾರೆ: ಪವಾರ್

ಮಹಾರಾಷ್ಟ್ರ: ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಿರುವವರಿಗೆ ದೇಶ ತಕ್ಕ ಪಾಠ ಕಲಿಸಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ. ಶೇಷರಾವ್ ಚವ್ಹಾಣ್ ಅವರ ಉರ್ದು ಅನುವಾದದ ಇಂಗ್ಲಿಷ್ ಪುಸ್ತಕ “ಪದ್ಮವಿಭೂಷಣ ಶರದ್ ಪವಾರ್ – ದಿ ಗ್ರೇಟ್ ಎನಿಗ್ಮಾ” ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ರಾಜಕೀಯ ಪರಿಸ್ಥಿತಿ ಬದಲಾಗಬೇಕು ಎಂದ ಪವಾರ್, “ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಯೋಚಿಸಬೇಕು. ದೇಶವು ತಪ್ಪು ಕೈಗೆ ಬೀಳದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.

Continue Reading

ನಕಲಿ ದಾಖಲೆ ಸೃಷ್ಠಿಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಮಹಿಳೆ ಹಾಗೂ ನಕಲಿ ದಾಖಲೆ ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲು

ಥಾಣೆ: ನಕಲಿ ದಾಖಲೆಗಳ ಆಧಾರದ ಮೇಲೆ ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಪಡೆದು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ 23 ವರ್ಷ ಪ್ರಾಯದ ಮಹಿಳೆಯ ವಿರುದ್ಧ ಹಾಗೂ ಆಕೆಗೆ ನಕಲಿ ದಾಖಲೆಗಳನ್ನು ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಹಿಳೆಯನ್ನು ನಗ್ಮಾ ನೂರ್ ಮಕ್ಸೂದ್ ಅಲಿ ಅಲಿಯಾಸ್ ಸನಮ್ ಖಾನ್ ಎಂದು ಗುರುತಿಸಲಾಗಿದ್ದು, ತನ್ನ ಹೆಸರನ್ನು ಬದಲಾಯಿಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮಗಳ ಜನನ ಪ್ರಮಾಣಪತ್ರವನ್ನು […]

Continue Reading

ಕೇರಳ: ದೇವರನಾಡು ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಆರ್ಭಟ.! ನಿಫಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕೇರಳದಲ್ಲಿ ಹಲವು ಕಡೆಗಳಲ್ಲಿ ಲಾಕ್ ಡೌನ್

ದೇವರನಾಡು ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಆರ್ಭಟಿಸುತ್ತಿದೆ. ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ಭಾನುವಾರ ಕೋಝಿಕ್ಕೋಡ್‌ನಲ್ಲಿ ಸಾವನ್ನಪ್ಪಿದ್ದಾನೆ. ಜೊತೆಗೆ ನಿಫಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇರಳದಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ.ಮಲಪ್ಪುರಂನ ಬಾಲಕನ ಸಾವಿನ ಬೆನ್ನಲ್ಲೇ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಫಾ ಸೋಂಕು ಸಾವಿಗೆ ಕಾರಣ ಅನ್ನೋದನ್ನು ಪತ್ತೆ ಹಚ್ಚಿದೆ. ನಿಫಾ ಸೋಂಕಿನಿಂದ ಸಾವನ್ನಪ್ಪಿರುವ ಬಾಲಕನ ಅಂತ್ಯಕ್ರಿಯೆಯನ್ನು ಸರಕಾರದ ಮಾರ್ಗಸೂಚಿಯಂತೆಯೇ ನಡೆಸಲಾಗಿದೆ. ಬಾಲಕ ಮಾತ್ರವಲ್ಲದೇ ಇನ್ನೂ ನಾಲ್ವರಲ್ಲಿ […]

Continue Reading

ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ 11.9 ಲಕ್ಷ ಜನ ಬಲಿ; ಅಮೆರಿಕ ವಿವಿಗಳ ಅಧ್ಯಯನ ವರದಿ

ಕೋವಿಡ್ ಸಾಂಕ್ರಾಮಿಕಕ್ಕೆ ಭಾರತದಲ್ಲಿ 11.9 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ಆಕ್ಸ್ ಫರ್ಡ್, ಸಿಟಿ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನ ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಕೇಂದ್ರ ಸರಕಾರ ಅಧಿಕೃತ ಲೆಕ್ಕಕ್ಕಿಂತ ಎಂಟು ಪಟ್ಟು ಅಧಿಕ.! ಅಮೆರಿಕದ ನ್ಯೂಯಾರ್ಕ್ ಆಕ್ಸ್ ಫರ್ಡ್ ಹಾಗೂ ನ್ಯೂಯಾರ್ಕ್ ಸಿಟಿ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸಿದ ಸಂಶೋಧನಾ ವರದಿಯು, ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದ ಮೊದಲ ವರ್ಷದಲ್ಲಿ ಭಾರತದಲ್ಲಿ ಮುಸ್ಲಿಮರು, ಆದಿವಾಸಿಗಳು, ದಲಿತರು, ಸಮಾಜದ ಶೋಷಿತ ವರ್ಗ, ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ […]

Continue Reading

ಭಯೋತ್ಪಾದನೆ, ಡ್ರಗ್ಸ್ ಮಾಫಿಯಾ ಮೂಲೋಚ್ಚಾಟನೆಗೆ ಕೇಂದ್ರ ಸಂಕಲ್ಪ; ‘ಮಲ್ಟಿ ಏಜೆನ್ಸಿ ಸೆಂಟರ್’ ಪರಿಪೂರ್ಣ ಬಲ, ಅಮಿತ್ ಶಾ ರಣತಂತ್ರ

ನವದೆಹಲಿ: ರಾಷ್ಟ್ರದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಬೇಡ ಎಂದು ಪ್ರತಿಪಾದಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ಕಾರದ ಸಮಗ್ರ ದೃಷ್ಟಿಕೋಣವನ್ನು ಅಳವಡಿಸಿಕೊಂಡು ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳ ಬೆಂಬಲಿತ ಪರಿಸರ ವ್ಯವಸ್ಥೆಯನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರದಲ್ಲಿ ಎಲ್ಲಾ ಸಂಸ್ಥೆಗಳ ನಡುವೆ ಸಮನ್ವಯ ಇರಬೇಕಿದೆ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ದೆಹಲಿಯಲ್ಲಿ ದೇಶದ ಭದ್ರತಾ ಸವಾಲುಗಳನ್ನು […]

Continue Reading

ಕೀರ್ತಿ ಅಡಿಯಲ್ಲಿ 100 ದಿನಗಳಲ್ಲಿ ಒಂದು ಲಕ್ಷ ಕ್ರೀಡಾಪಟುಗಳನ್ನು ಗುರುತಿಸಲಾಗುವುದು: ಮಾಂಡವೀಯ

ಹೊಸದಿಲ್ಲಿ: ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು 100 ದಿನಗಳಲ್ಲಿ ಒಂದು ಲಕ್ಷ ಯುವ ಅಥ್ಲೀಟ್‌ಗಳನ್ನು ಗುರುತಿಸುವ ಗುರಿಯೊಂದಿಗೆ ಕೀರ್ತಿ ಯೋಜನೆಯ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ನೀಡಿದರು. ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್ (ಕೀರ್ತಿ) ಅಡಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಾ ಹುಡುಕಾಟವು 2047 ರ ವೇಳೆಗೆ ಭಾರತವನ್ನು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಲು ಒಂದು ಮೆಟ್ಟಿಲು ಎಂದು ಅವರು ಭಾವಿಸಿದರು. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಎರಡನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ […]

Continue Reading

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ, ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಪ್ರಕರಣದ ಕಿಂಗ್ ಪಿನ್ ಬಂಧನ

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಎಂಬಿಬಿಎಸ್ ಅಧ್ಯಯನಕ್ಕೆ ಸರಕಾರಿ ಸೀಟು ಕೊಡಿಸುವುದಾಗಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಪ್ರಕರಣವನ್ನು ಭೇದಿಸಿದ ಬೆಳಗಾವಿ ನಗರ ಪೊಲೀಸರು ಪ್ರಕರಣದ ಕಿಂಗ್ ಪಿನ್, ತೆಲಂಗಾಣ ಮೂಲದ ಅರಗೊಂಡ ಅರವಿಂದ ಅಲಿಯಾಸ್‌ ಅರುಣಕುಮಾರ್ ಅರಗೊಂಡ ಪ್ರಕಾಶಂ ಎಂಬಾತನನ್ನು ಮುಂಬೈಯಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ 12 ಲಕ್ಷ ರೂ,5 ಮೊಬೈಲ್, 15 ಸಿಪಿಯು ಮಾನಿಟರ್, 1 ಲ್ಯಾಪ್‌ಟಾಪ್, ತಲಾ ಮೂರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, 12 ಅಡಾಪ್ಟರ್, 1 ಬಯೋಮೆಟ್ರಿಕ್ ಹಾಗೂ 1 […]

Continue Reading

2060 ರ ದಶಕದ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿ ತಲುಪಿ, ನಂತರ ಶೇಕಡಾ 12 ರಷ್ಟು ಕುಸಿತ ದಾಖಲಿಸಲಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಗುರುತಿಸಿಕೊಳ್ಳಲಿದೆ

2060 ರ ದಶಕದ ಹೊತ್ತಿಗೆ ಭಾರತದ ಜನಸಂಖ್ಯೆಯು ಸುಮಾರು 170 ಕೋಟಿ ತಲುಪಲಿದ್ದು, ನಂತರ ಶೇಕಡಾ 12 ರಷ್ಟು ಕುಸಿತ ದಾಖಲಿಸಿದೆ. ಆದಾಗ್ಯೂ ಶತಮಾನದುದ್ದಕ್ಕೂ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ‘ವರ್ಲ್ಡ್ ಪಾಪ್ಯುಲೇಷನ್ ಪ್ರಾಸ್ಪೆಕ್ಟಸ್-2024 ರ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ. “ಮುಂಬರುವ 50-60 ವರ್ಷಗಳಲ್ಲಿ ಜಗತ್ತಿನ ಜನಸಂಖ್ಯಾ ಬೆಳವಣಿಗೆ ಹೀಗೆಯೇ ಮುಂದುವರಿಯುವ ನಿರೀಕ್ಷೆ ಇದೆ. 2080 ರ ದಶಕದ ಮಧ್ಯಭಾಗದಲ್ಲಿ ವಿಶ್ವದ ಜನಸಂಖ್ಯೆ ಸುಮಾರು 10.3 […]

Continue Reading

ಎಂಟು ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು 13 ವರ್ಷದ ಮೂವರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರಗೈದು ಹತ್ಯೆ

ಹೈದರಾಬಾದ್: ಎಂಟು ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ 13 ವರ್ಷದ ಮೂವರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ನಡೆದಿದೆ. ಅತ್ಯಾಚಾರ ನಡೆಸಿ, ನಂತರ ಬಾಲಕಿಯನ್ನು ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಕಿಯ ಶವವನ್ನು ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ. ಬಾಲಕಿ ಭಾನುವಾರ ಮುಚ್ಚುಮರ್ರಿ ಪಾರ್ಕ್‍ನಲ್ಲಿ ಆಟವಾಡುತ್ತಿದ್ದಳು. […]

Continue Reading