ಟೋಲ್ ಪ್ಲಾಜಾ ರದ್ದು,ಆರು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿ;ಹೆದ್ದಾರಿಗಳಲ್ಲಿ ಜಿಪಿಎಸ್ ಅಧಾರಿತ ಟೋಲ್ ವ್ಯವಸ್ಥೆ:ನಿತಿನ್ ಗಡ್ಕರಿ

ದೇಶದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಿ, ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನವನ್ನೊಳಗೊಂಡ ಜಿಪಿಎಸ್‌ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಈ ಹೊಸ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಹೆದ್ದಾರಿಗಳಲ್ಲಿ ಪ್ರಯಾಣಿಸಿದ ನಿಖರ ದೂರಕ್ಕೆ ಶುಲ್ಕವನ್ನು ವಿಧಿಸುವ ಗುರಿಯನ್ನು ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್ಎಐ) ಟೋಲ್‌ನಿಂದ ಸಂಗ್ರಹವಾಗುವ ಆದಾಯವು ₹.40,೦೦೦ ಕೋಟಿಯಷ್ಟು […]

Continue Reading

ಸಚಿವಾಲಯ ಅಧಿಸೂಚನೆ; ರಾಹುಲ್ ಗಾಂಧಿ ಸದಸ್ಯತ್ವದಿಂದ ಅನರ್ಹ.

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಶುಕ್ರವಾರ ಹೊರಡಿಸಿದೆ. ಸೂರತ್‌ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ಪರಿಣಾಮವಾಗಿ, ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಶ್ರೀ ರಾಹುಲ್ ಗಾಂಧಿ ಅವರು ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖವಾಗಿದೆ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್‌, ನೀರವ್‌ ಮೋದಿಯಾಗಿರಲಿ, ಲಲಿತ್‌ […]

Continue Reading

ಇದು ಯಾರ ದರ್ಗಾ.? ಈ ದರ್ಗಾ ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ; ರಾಜ್ ಠಾಕ್ರೆ

ರಾಜ್ ಠಾಕ್ರೆ ವಾರ್ನಿಂಗ್ ನೀಡಿದ 24 ಗಂಟೆಯೊಳಗೆ ದರ್ಗಾ ಕೆಡವಿದ ಮುಂಬೈ ಪೊಲೀಸ್ ಮುಂಬೈನ ಮಾಹಿಮ್ ಸಮುದ್ರದಲ್ಲಿ ಅಕ್ರಮ ದರ್ಗಾ ಕಟ್ಟಲಾಗಿದೆ.ಈ ದರ್ಗಾವನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಗುಡಿ ಪಾಡ್ವಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. ಇದು ಯಾರ ದರ್ಗಾ.? ಇದು ಮೀನಿನದ್ದೇ.? ಇದು ಒಂದೆರಡು ವರ್ಷಗಳ […]

Continue Reading