ಅಯೋಧ್ಯೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು, ಆ ಪವಿತ್ರ ಭೂಮಿಯನ್ನು ಮುಂದಿಟ್ಟು ರಾಜಕಾರಣ ಮಾಡುವವರಿಗೆ ಇದೊಂದು ಪಾಠವಾಗಲಿ

ಅಯೋಧ್ಯೆ ಎಂಬ ಆ ಪವಿತ್ರವಾದ ಭೂಮಿಯ ಆ ಮಣ್ಣಿನಲ್ಲಿ ವಾಸವಾಗಿರುವ ಹಿಂದೂ, ಮುಸ್ಲಿಂ ಮಾತ್ರವಲ್ಲದೆ ಅನ್ಯ ಜಾತಿಯ ಮತ ಧರ್ಮದ ವಿಶ್ವಾಸಿಗಳಿಗೆ ಅಲ್ಲಿ ಯಾವುದೇ ರೀತಿಯ ಬಿನ್ನಾಭಿಪ್ರಾಯವಾಗಲಿ,ವರ್ಗೀಯ ವಾದವಾಗಲಿ,ಮತೀಯವಾದವಾಗಲಿ, ಕಿಂಚಿತ್ತೂ ಇರುವುದಿಲ್ಲ.ಇದೆಲ್ಲವೂ ಈ ದೇಶದ ಕುಲಗೆಟ್ಟ ಕೋಮುವಾದಿ ರಾಜಕೀಯ ಪಕ್ಷಗಳ ಷಡ್ಯಂತರದಿಂದ ಅವರವರ ಲಾಭಕ್ಕಾಗಿ, ಜಾತಿ-ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ತಮ್ಮ ಸ್ವಾರ್ಥ ಸಾಧನೆಗೋಸ್ಕರ ಜಾತ್ಯಾತೀತ ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸುತ್ತಿದ್ದಾರೆ.ಇದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ಮುನ್ಸಿಪಾಲಿಟಿಯ ಚುನಾವಣೆಯಲ್ಲಿ ಒಟ್ಟಾರೆ […]

Continue Reading

ಮತ್ತಷ್ಟು ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಸಿದ್ದತೆ.?

ಸಾರ್ವಜನಿಕ ವಲಯದ ಮತ್ತಷ್ಟು ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅಂತಹ ಸಾರ್ವಜನಿಕ ಬ್ಯಾಂಕ್ ಗಳ ಪಟ್ಟಿ ಮಾಡಲು ಸಮಿತಿಯೊಂದನ್ನು ಕೇಂದ್ರ ಸರಕಾರ ಸದ್ಯದಲ್ಲೇ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕ್ ಗಳ ಸುಸ್ತಿ ಸಾಲ, ಕಾರ್ಯದಕ್ಷತೆ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಮಧ್ಯಮ ಗಾತ್ರ ಮತ್ತು ಸಣ್ಣ ಗಾತ್ರದ ಹಲವು ಸರಕಾರಿ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲು ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಈ ಬ್ಯಾಂಕ್ ಗಳ ಪಾಲುದಾರಿಕೆ ಮಾರಾಟದ […]

Continue Reading

ದಯಾ ನಾಯಕ್ ಮುಂಬೈ ಕ್ರೈಂ ಬ್ರ್ಯಾಂಚ್‌ ಇನ್ಸ್‌ಪೆಕ್ಟರ್ ಆಗಿ ನೇಮಕ

ಎನ್‌ಕೌಂಟರ್ ಸ್ಪೆಷಲಿಸ್ಟ್ ‘ ಎಂದೇ ಪ್ರಖ್ಯಾತಿ ಪಡೆದಿರುವ ಕಾರ್ಕಳ ಎಣ್ಣೆಹೊಳೆ ಮೂಲದವರಾದ ದಯಾ ನಾಯಕ್ ಮುಂಬೈ ಪೊಲೀಸ್‌ ಅಪರಾಧ ವಿಭಾಗದ 9 ನೇ ಘಟಕದ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ್ದ ನಾಯಕ್ ಅವರನ್ನು ಮಾರ್ಚ್ 28 ರಂದು ಎಟಿಎಸ್​ನಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿತ್ತು. ಮಹಾರಾಷ್ಟ್ರ ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್ ಅವರು​, ಎಂಪಿಎಸ್​ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ […]

Continue Reading

ಎರಡು ಸಾವಿರ ಮುಖಬೆಲೆಯ ನೋಟು ಬ್ಯಾನ್,ಆರ್ ಬಿ ಐ ಆದೇಶ.ಬದಲಾವಣೆ ಸೆ.30 ವರೆಗೆ ಅವಕಾಶ

ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ಶುಕ್ರವಾರ ಘೋಷಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ₹ 2 ಸಾವಿರದ ನೋಟು ವಿತರಣೆ ನಿಲ್ಲಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್‌ 30ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಮೇ 23ರಿಂದ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ.

Continue Reading

ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ, ಗಂಭೀರ ಹಲ್ಲೆ

ನಿಂಕುಜ್ ಕಮಾರ್ ಪಾಟೀಲ್ ಎಂಬ ವ್ಯಕ್ತಿ ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿ,ದೈಹಿಕವಾಗಿ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯು ಅಕ್ರಮ ಸಂಬಂಧ ಹೊಂದಿದ ಮಹಿಳೆಯ ಖಾಸಗಿ ಅಂಗಕ್ಕೆ ಮೆಣಸಿನಕಾಯಿಯನ್ನು ತುಂಬಿ ದುಷ್ಟ ಕೃತ್ಯವೆಸಗಿ ಅನಾಗರೀಕತೆ ಮೆರೆದಿದ್ದಾನೆ. ಇದೀಗ ಆಕೆ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಸೇರಿದ್ದಾಳೆ. ನಿಕುಂಜ್ ಕುಮಾರ್ ಪಟೇಲ್ ಎಂಬ ವ್ಯಕ್ತಿ ವಿವಾಹಿತನಾಗಿದ್ದು ಪತ್ನಿ ಬೇರೆಡೆ ವಾಸವಾಗಿದ್ದಳು. ಆದರೆ ಈತ ತನ್ನ ಪತ್ನಿ ಬೇರೆ ಗ್ರಾಮದಲ್ಲಿ ವಾಸಿಸುತ್ತಿರುವ ವಿಷಯವನ್ನು ಮುಚ್ಚಿಟ್ಟಿು,ಬೇರೆ ಮಹಿಳೆಯೊಂದಿಗಿನ […]

Continue Reading

ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಕೊನೆಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ನೇಮಕಾತಿ ವ್ಯವಸ್ಥೆಯಲ್ಲಿ ತಮ್ಮ ಸರ್ಕಾರ ತಂದ ಬದಲಾವಣೆಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಸಾಧ್ಯತೆಯನ್ನು ಕೊನೆಗೊಳಿಸಿದೆ ಎಂದು ಮಂಗಳವಾರ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ರೋಜ್ಗಾರ್ ಮೇಳ’ದಲ್ಲಿ 71,000 ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ನೀಡಿದರು.ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಫಲಿತಾಂಶ ಪ್ರಕಟಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ ಎಂದು ಅವರು ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಆಡಳಿತವು ಉದ್ಯೋಗ ಅವಕಾಶಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ವಿವರಿಸಿದರು. ಒಂಬತ್ತು ವರ್ಷಗಳ ಹಿಂದಿನ ಈ […]

Continue Reading

ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಪಶ್ಚಿಮ ಬರ್ಧಮಾನ್ ಜಿಲ್ಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ವಿರುದ್ಧ ಬಾಂಗ್ಲಾದೇಶದ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ಬಂಗಾಳ ಮಹಿಳಾ ಆಯೋಗ ಸೋಮವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದೆ.ಪೊಲೀಸ್ ತನಿಖೆಯ ನಂತರ ಆರೋಪ ನಿಜವೆಂದು ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಿದೆ. ಸರ್ಕಾರಿ ಸ್ವಾಮ್ಯದ ಕಾಜಿ ನಜ್ರುಲ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಾಸಿಸುವ ದೂರುದಾರ ಯುವತಿ ಸೇರಿದಂತೆ ಸಂಬಂಧಿಸಿದ ಎಲ್ಲರೊಂದಿಗೆ ಮಾತನಾಡಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಅವರು ಪಿಟಿಐಗೆ ತಿಳಿಸಿದ್ದಾರೆ.ಆರೋಪಿಯು […]

Continue Reading

ಒಂದೇ ಕುಟುಂಬದ ನಾಲ್ವರು ಸೋದರ-ಸೋದರಿಯರು IAS-IPS ಅಧಿಕಾರಿಗಳು

ಈ ಸೂಪರ್ ಫ್ಯಾಮಿಲಿ ಇರುವುದು ಉತ್ತರ ಪ್ರದೇಶದಲ್ಲಿ. ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದು,ತಂದೆ-ತಾಯಿಗೆ ಹೆಮ್ಮೆ ತಂದಿದ್ದಾರೆ.ನಾಲ್ವರು ಒಡಹುಟ್ಟಿದ ಸಹೋದರ, ಸಹೋದರಿಯರು IAS,IPS ಆಗಿರುವ ಕುಟುಂಬ ಇದು. ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ವಾಸವಾಗಿರುವ ಅನಿಲ್ ಮಿಶ್ರಾರವರ ಕುಟುಂಬವಿದು. ಇದರ ಮುಖ್ಯಸ್ಥ ಅನಿಲ್ ಮಿಶ್ರಾ ಅವರು ತಮ್ಮ ಪತ್ನಿ,ಮಕ್ಕಳೊಂದಿಗೆ ಎರಡು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ ನಾಲ್ಕು ಮಕ್ಕಳು.ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು.ಯೋಗೇಶ್, ಮಾಧವಿ, ಚಾಮ ಮತ್ತು ಅನಿಲ್ ಮಿಶ್ರಾ. ನಾಲ್ವರು ಮಕ್ಕಳೂ […]

Continue Reading

ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಮುಖ ಆರೋಪಿ ಗೌತಮ್ ಶರ್ಮಾ ಮತ್ತು ಅಪರಾಧ ಮಾಡಿದ ವಾಹನದ ಚಾಲಕ ಮತ್ತು ಸಹ ಆರೋಪಿ ಸುದೀಪ್ ಚೆಟ್ರಿ ಅವರನ್ನು ಬಂಧಿಸಲಾಗಿದೆ.ನಂತರ ಮೂರನೇ ಆರೋಪಿ ಪ್ರಸೇನಜಿತ್ ಪಾಲ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯೊಬ್ಬನ ಮನೆಯಿಂದ 90 ಲಕ್ಷ ರೂ. ಹಣವನ್ನು ಸಹ ಪೊಲೀಸರು […]

Continue Reading

ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೋಯ್ ವಿರುದ್ಧ ಮಾನನಷ್ಟ ಮೊಕದ್ದಮೆ

ರಾಜ್ಯಸಭಾ ಸಂಸದ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರ ವಿರುದ್ಧ ಅಸ್ಸಾಂ ಲೋಕೋಪಯೋಗಿ ಇಲಾಖೆಯ ಅಧ್ಯಕ್ಷ ಅಭಿಜಿತ್‌ ಶರ್ಮಾ ಒಂದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆಂದು ವರದಿಯಾಗಿದೆ.ಗೊಗೋಯ್‌ ಅವರ ಆತ್ಮಕಥೆ “ಜಸ್ಟೀಸ್‌ ಫಾರ್‌ ದಿ ಜಡ್ಜ್’ ಪುಸ್ತಕ ಬಿಡು ಗಡೆಯಾಗಬೇಕಿತ್ತು. ಆದರೆ ಪುಸ್ತಕದಲ್ಲಿ ತಮ್ಮ ವಿರುದ್ಧ ಗೊಗೋಯ್‌ ಅವಮಾನಕರವಾದ ಬರಹವನ್ನು ಪ್ರಕಟಿಸಿದ್ದಾರೆ ಎಂದು ಅಭಿಜಿತ್‌ ಶರ್ಮಾ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ “ಜಸ್ಟಿಸ್ ಪಾರ್ ದಿ ಜಡ್ಜ್“ ಪುಸ್ತಕ ಬಿಡುಗಡೆಗೆ ತಡೆ ಕೋರಿ ಅರ್ಜಿ […]

Continue Reading