ಗ್ರಾಮಗಳಿಗೆ ಕೊಳಚೆ ನೀರು ಪೂರೈಕೆ, ಮಂಗಳೂರಿನ ಫಲ್ಗುಣಿ ನದಿ ಸೇರುತ್ತಿದೆ ಕಲುಷಿತ ನೀರು

ಕರಾವಳಿ

ಮಂಗಳೂರಿನ ಪಚ್ಚನಾಡಿಯಲ್ಲಿ ಜಲತ್ಯಾಜ್ಯ ಘಟಕವಿದೆ. ಈ ಘಟಕಕ್ಕೆ ಮಂಗಳೂರು ನಗರದ ಕೊಳಚೆ ನೀರು ಬಂದು ಬೀಳುತ್ತದೆ. ಈ ನೀರನ್ನು ಶುದ್ದಿಕರಿಸಿ ಬಿಡಬೇಕಾದುದು ಪಾಲಿಕೆಯ ಕರ್ತವ್ಯ. ಆದ್ರೆ ಇಲ್ಲಿ ಈ ಕೊಳಚೆ ನೀರನ್ನು ಶುದ್ದಿಕರೀಸದೆ ನೇರವಾಗಿ ಹರಿಯುವ ನದಿಗೆ ಬಿಡಲಾಗುತ್ತಿದೆ.

11 ಗ್ರಾಮಗಳಿಗೆ ಕೊಳಚೆ ನೀರು ಪೂರೈಕೆ ಮಾಡಲಾಗುತ್ತಿದೆ. ಗುರುಪುರದ ಫಲ್ಗುಣಿ ನದಿ ಸೇರುತ್ತಿರುವ ಕಲುಷಿತ ನೀರು ಸರಿ-ಸುಮಾರು 11 ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ.ಇದರಿಂದ ಗ್ರಾಮಗಳಿಗೆ ಶುದ್ದ ನೀರು ಸಪ್ಲೈ ಆಗುವ ಬದಲು ವಿಷಪೂರಿತ ಕೊಳಚೆ ನೀರು ಸಾವಿರಾರು ಮನೆಗಳನ್ನು ಸೇರುತ್ತಿದೆ. ಒಂದು ಕಡೆ ಹರಿಯುತ್ತಿರುವ ಕಲುಷಿತ ನೀರಿನಲ್ಲಿ ಉಕ್ಕುತ್ತಿರುವ ನೊರೆ. ಇನ್ನೊಂದು ಕಡೆ ತೆರೆದ ತೋಡಿನಲ್ಲೆ ಹರಿದು ಕುಡಿಯುವ ನೀರಿನ ಡ್ಯಾಂಗೆ ಸೇರುತ್ತಿರುವ ವಿಷಕಾರಿ ನೀರು 11 ಗ್ರಾಮಗಳಿಗೆ ಕುಡಿಯಲು ಬಳಸುವ ಮರವೂರು ಅಣೆಕಟ್ಟಿಗೆ ಈ ತ್ಯಾಜ್ಯ ನೀರು ಸೇರುತ್ತಿದ್ದು ಮರವೂರು, ಮೂಡುಶೆಡ್ಡೆ, ಕಂದಾವರ, ಬಜಪೆ, ಪೆರ್ಮುದೆ, ಗುರುಪುರ, ಕೈಕಂಬ, ಸುಂಕದಕಟ್ಟೆ, ಕಳವಾರು, ವಾಮಂಜೂರು, ಕೆಂಜಾರು ಗ್ರಾಮದ ಗ್ರಾಮಸ್ಥರಿಗೆ ಇದೇ ಮಲೀನವಾದ ನೀರನ್ನು ಕುಡಿಯುವುದಕ್ಕೆ ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮಗಳಲ್ಲಿ ಸಾವಿರಾರು ಮನೆಗಳಿದ್ದು ಈ ಎಲ್ಲಾ ಮನೆಗಳಿಗೂ ಕುಡಿಯಲು ಯೋಗ್ಯವಲ್ಲದ ಈ ಕಲುಷಿತ ನೀರನ್ನು ಪೈಪ್ ಲೈನ್ ಮೂಲಕ ನೀಡುತ್ತಿದೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ.

ಪಚ್ಚನಾಡಿಯಲ್ಲಿರುವ ಈ ಘಟಕಕ್ಕೆ ಮಂಗಳೂರು ನಗರದ ಕೊಳಚೆ ನೀರು ಬಂದು ಬೀಳುತ್ತದೆ. ಈ ನೀರನ್ನು ಶುದ್ದಿಕರಿಸಿ ಬಿಡಬೇಕಾದುದು ಪಾಲಿಕೆಯ ಜವಾಬ್ದಾರಿ. ಆದ್ರೆ ಇಲ್ಲಿ ಈ ಕೊಳಚೆ ನೀರನ್ನು ಶುದ್ದಿಕರೀಸದೆ ನೇರವಾಗಿ ಹರಿಯುವ ನದಿ ನೀರಿಗೆ ಬಿಡಲಾಗುತ್ತಿದೆ.ಆದರೆ ಈವರೆಗೆ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ಮನಸ್ಸು ಮಾಡುತ್ತಿಲ್ಲ.