ಪೊಲೀಸರ ವಿರುದ್ದ ದೂರು ನೀಡಿದ ಕಾರಣ ಪದೇ,ಪದೇ ಪೋನ್ ಕಾಲ್,ನೋಟೀಸು ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ: ಕಬೀರ್ ಉಳ್ಳಾಲ್

ಕರಾವಳಿ

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಕೇಳಿಬಂದಿದ್ದು, ಈ ಸಂಬಂಧ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್ ಐ ಪ್ರದೀಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಮಂಗಳೂರು ಪೊಲೀಸ್ ಕಮಿಷನರ್ ಗೆ ನೋಟಿಸ್ ಜಾರಿಗೊಳಿಸಿದ್ದರು.

ಇನ್ಸ್ ಪೆಕ್ಟರ್, ಎಸ್ ಐ ವಿರುದ್ಧ ಹಣ ವಸೂಲಿ ಸೇರಿ ಹಲವು ಆರೋಪಗಳನ್ನು ಕಬೀರ್ ಮಾಡಿದ್ದರು. ಬ್ರೋಕರ್ ಮೂಲಕ ಹಣ ವಸೂಲಿ ಆರೋಪ, ಗಾಂಜಾ ಮಾಫಿಯಾ, ಮರಳು ಮಾಫಿಯಾಗಳಿಂದ ಹಣ ವಸೂಲಿ, ಹೋಟೆಲ್ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹಾಗೂ ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಾಂತರ ಸಂಪಾದನೆ ಮಾಡಿದ್ದಾರೆ. ಚಿನ್ನದ ಅಂಗಡಿ ಡರೋಡೆ ಕೇಸ್ ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ್ದಾರೆ ಎಂದು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದರು ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೂ ಆರೋಪ ಮಾಡಿದ್ದರು. ಕಮೀಷನರ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತರಿಗೆ ಕಬೀರ್ ಉಳ್ಳಾಲ್ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿ ಫೆಬ್ರವರಿ 14 ರೊಳಗೆ ಉತ್ತರಿಸುವಂತೆ ಕಮೀಷನರ್ ಗೆ ನೋಟಿಸ್ ನೀಡಿದ್ದರು.

ಇದೀಗ ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣ ಪದೇ ಪದೇ ನನಗೆ ಪೋನ್ ಕಾಲ್ ಮಾಡಿ, ಮನೆಯ ಹತ್ತಿರ ಪೊಲೀಸರನ್ನು ಕಳುಹಿಸಿ ನನ್ನ ಹೆಂಡತಿ ಮಕ್ಕಳನ್ನು ಭಯ ಪಡಿಸುತ್ತಿದ್ದಾರೆ.ನನ್ನನ್ನು ವಿಚಾರಣೆಗಾಗಿ ಕಛೇರಿಗೆ ಬರಬೇಕೇಂದು ಅಗಾಗ್ಗೆ ಪೋನ್ ಮಾಡಿ,ನೋಟೀಸು ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಕಬೀರ್ ಉಳ್ಳಾಲ್ ಅಳಲು ತೋಡಿಕೊಂಡಿದ್ದಾರೆ. ಇದರ ಹಿಂದೆ ಪೊಲೀಸ್ ಕಮಿಷನರ್ ಪಾತ್ರವಿರುವುದಾಗಿ ಲೋಕಾಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

‘ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸರ ಮಾನಸಿಕ ಕಿರುಕುಳಕ್ಕೆ ಬೇಸತ್ತಿದ್ದೇನೆ. ಇದಕ್ಕೆ ಕಾರಣ ಲೋಕಾಯುಕ್ತ ಇಲಾಖೆಯಲ್ಲಿ ಇರುವ ಅಧಿಕಾರಿಗಳೇ ಇರಬಹುದೇನೋ ಅನಿಸುತ್ತದೆ. ನಾನು ಲೋಕಾಯುಕ್ತಕ್ಕೆ ಪೊಲೀಸರ ವಿರುದ್ಧ ದೂರು ನೀಡಿದರೆ ದೂರಿನಲ್ಲಿ ಹೆಸರಿಸಿದ ಅಧಿಕಾರಿಗಳಿಂದಲೇ ತನಿಖೆ ನಡೆಸಲು ಆದೇಶಿಸುವುದಾದರೆ ನಾವು ದೂರು ನೀಡಿ ಮಾನಸಿಕ ಹಿಂಸೆ ಅನುಭವಿಸಬೇಕೆ.?ಲೋಕಾಯುಕ್ತದಿಂದ ಪೊಲೀಸ್ ಆಯುಕ್ತರಿಗೆ ನೋಟಿಸ್ ಕಳುಹಿಸಿದ್ದರಿಂದ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಬೆಂಗಳೂರು ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.