ಮತ್ತೊಂದು ಯಾತ್ರೆಗೆ ರಾಹುಲ್ ಗಾಂಧಿ ಸಜ್ಜು.! ಜೂನ್‌ ಬಳಿಕ ದಿನಾಂಕ ನಿರ್ಧಾರ

ರಾಷ್ಟ್ರೀಯ

ಗುಜರಾತ್‌ನ ಪೋರ್‌ ಬಂದರ್‌ನಿಂದ ಅಸ್ಸಾಂ ವರೆಗೆ ಎರಡನೇ ಹಂತದ ಜೋಡೋ ಯಾತ್ರೆ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುಜರಾತ್‌ನ ಪೋರ್‌ಬಂದರ್‌ನಿಂದ ಅಸ್ಸಾಂವರೆಗೆ ಎರಡನೇ ಹಂತದ ಜೋಡೋ ಯಾತ್ರೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮುಂದಾಗಿದ್ದಾರೆ.ಈ ತಿಂಗಳು ರಾಯಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಮಹಾತ್ಮಾ ಗಾಂಧೀಜಿ ಅವರ ಹುಟ್ಟೂರಾದ ಪೋರ್‌ ಬಂದರ್‌ನಿಂದ ಯಾತ್ರೆ ಆರಂಭಿಸಲು ಚಿಂತಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.ಎರಡನೇ ಹಂತದ ಯಾತ್ರೆಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್‌ ಜೋಡೋ ಯಾತ್ರೆಗೆ ನಾಗರಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.ಈ ಯಾತ್ರೆ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಾಗಿತ್ತು.ಈ ನಡುವೆ ದೇಶದ ಹಲವು ಭಾಗಗಳಲ್ಲಿ “ಹಾಥ್‌ ಸೆ ಹಾಥ್‌ ಜೋಡೋ’ ಯಾತ್ರೆಗೆ ಉತ್ತಮ ರೀತಿಯಲ್ಲಿ ಬೆಂಬಲ ವ್ಯಕ್ತವಾಗಿತ್ತು.

​ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ನಡೆಸಿದ 3500 ಕಿ.ಮೀ ಉದ್ದದ ದೈತ್ಯಾಕಾರದ ಭಾರತ್ ಜೋಡೋ ಯಾತ್ರೆ ಕಾಶ್ನೀರದ ಲಾಲ್ ಚೌಕಿನಲ್ಲಿ ಸಮಾಪನೆಗೊಂಡು, ಇದೀಗ ಗುಜರಾತ್‌ನಿಂದ ಪ್ರಾರಂಭವಾಗಿ ಅಸ್ಸಾಂನಲ್ಲಿ ಸಮಾಪಣೆಗೊಳ್ಳುವ “ಪಶ್ಚಿಮದಿಂದ ಪೂರ್ವಕ್ಕೆ” ಮತ್ತೊಂದು ಯಾತ್ರೆಗೆ ಚಾಲನೆ ನೀಡುವುದಾಗಿ ಕಾಂಗ್ರೇಸ್ ಪಕ್ಷ ಪ್ರಕಟಿಸಿದೆ. 2ನೇ ಘಟ್ಟದ ಈ ಯಾತ್ರೆಯನ್ನು ಪ್ರಕಟಿಸಿದ ನಂತರ ರಾಹುಲ್ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷ ಯಾವುದೇ ವಿಶ್ರಾಂತಿ ಇಲ್ಲದೆ ಹೋರಾಟ ನಡೆಸಲು ತಯಾರಾಗಿ ಹೋರಾಟಕ್ಕೆ ಚಾಲನೆ ನೀಡಲು ಅಣಿಯಾಗುತ್ತಿದೆ.ಈ ಯಾತ್ರೆಯೊಂದಿಗೆ ಜನಸಾಮಾನ್ಯರಿಗೆ ಕಂಟಕವಾಗಿರುವ ದಿನ ನಿತ್ಯದ ಬೆಲೆಯೇರಿಕೆಯ ವಿರುದ್ಧ ಹೋರಾಟ ನಡೆಸಲು ಜನ ಕೋಟಿಯನ್ನು ಸಂಗಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಛೇರಿಗೂ ಬೃಹತ್ ರ‍್ಯಾಲಿಯನ್ನು ನಡೆಸಲು ಕಾಂಗ್ರೇಸ್ ಪಕ್ಷ ಅಲೋಚಿಸುತ್ತಿದೆ. 2024ರ ಸಮಯಕ್ಕೆ ಹತ್ತು ವರ್ಷದ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತಿರುವ ನರೇಂದ್ರ ಮೋದಿಯವರ ಸರಕಾರವನ್ನು ಕೆಳಗಿಳಿಸಿ, ಬಿಜೆಪಿ ನೇತೃತ್ವದ ಸರಕಾರಕ್ಕೆ ನಾಂದಿ ಹಾಡಲು ಈ ಎರಡೂ ಯಾತ್ರೆಗಳು ಸಾಕ್ಷಿಯಾಗುವುದೆಂದು ಜನ ಕೋಟಿಯ ಅಭಿಪ್ರಾಯವಾಗಿದೆ.

​3500 ಕಿ.ಮೀಟರ್ ನಡೆದುಕೊಂಡು ಹೋಗಲು ರಾಹುಲ್ ಗಾಂಧಿಗೆ ಸಾಧ್ಯವಿಲ್ಲವೆಂದು ಹಾಸ್ಯ, ಪರಿಹಾಸ್ಯ ಮಾಡಿ, ಚುಚ್ಚು ಮಾತು,ಕೊಂಕು ನುಡಿಯಿಂದ ಬೊಗಳೆ ಬಿಟ್ಟವರ,ಪರಿಹಾಸ್ಯ ಮಾಡಿದವರ ಕಣ್ಣ ಮುಂದೆಯೇ ಇನ್ನೂ ಸಾವಿರಾರು ಕಿಲೋ ಮೀಟರ್ ದೂರದ “ಪಶ್ಚಿಮದಿಂದ ಪೂರ್ವಕ್ಕೆ” (ಗುಜರಾತಿನಿಂದ ಅಸ್ಸಾಂ ) ಇನ್ನೊಂದು ಯಾತ್ರೆಗೆ ರಾಹುಲ್ ಗಾಂಧಿ ಎಂಬ ಯುವನಾಯಕ ಅಣಿಯಾಗಿ ನೇತೃತ್ವ ನೀಡುತ್ತಿರುವುದನ್ನು ನೋಡಿ ಇದು 2ನೇ ಸ್ವಾತಂತ್ರ್ಯದ ಸಮರವೆಂದು ಈ ದೇಶದ ಜನತೆ,ಇಲ್ಲಿನ ಪ್ರಜೆಗಳು ಒಪ್ಪಿಕೊಂಡಂತಿದೆ.